Asianet Suvarna News Asianet Suvarna News

ಭಾರತದಲ್ಲಿ ಹೆಚ್ಚುತ್ತಿದೆ ಹೃದಯಸ್ತಂಭನ, ಒತ್ತಡ ನಿರ್ವಹಣೆ ಅತೀ ಅಗತ್ಯವೆಂದ ತಜ್ಞರು

ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿದೆ. ಅದರಲ್ಲೂ ಸಡನ್ ಕಾರ್ಡಿಯಾಕ್ ಅರೆಸ್ಟ್(ಎಸ್‍ಸಿಎ) ಪ್ರಕರಣಗಳಿಂದ ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗ್ತಿದೆ. ಇಂಥಾ ಸಂದರ್ಭದಲ್ಲಿ ನುರಿತ ಹೃದ್ರೋಗತಜ್ಞರು(ಕಾರ್ಡಿಯಾಲಜಿಸ್ಟ್ಸ್) ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

Cardiac arrest Increasing In India, Stress Management Is Important Vin
Author
First Published Nov 5, 2022, 4:55 PM IST

ಬೆಂಗಳೂರು: ಭಾರತದಲ್ಲಿ, ವಿಶೇಷವಾಗಿ ಯುವ ವಯೋಗುಂಪಿನಲ್ಲಿ, ಹೃದಯಸ್ತಂಭನ ಪ್ರಕರಣಗಳಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ. ಅಂದಾಜುಗಳ ಪ್ರಕಾರ, ವಾರ್ಷಿಕವಾಗಿ, 7 ಲಕ್ಷ ಇದ್ದಕ್ಕಿದ್ದಂತೆ ಏರ್ಪಡುವ ಹೃದಯಸ್ತಂಭನದ ಮರಣಗಳನ್ನು ವರದಿ ಮಾಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ(WHO), ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಮೂಲಕ 86% ಸಿವಿಡಿ ಮರಣಗಳನ್ನು ತಪ್ಪಿಸಬಹುದಾಗಿತ್ತು. ಇಂತಹ ಸಂದರ್ಭದಲ್ಲಿ ಅನೇಕ ಜೀವನಶೈಲಿ ಅಭ್ಯಾಸಗಳನ್ನು ಈ ಅಸಮರ್ಪಕ ಹೃದ್ರೋಗ(ಕಾರ್ಡಿಯೋವಾಸ್ಕುಲರ್ ಡಿಸೀಸ್)ಗೆ ಸಂಪರ್ಕಿಸಲಾಗಿದೆ. 

ಹೃದಯಸ್ತಂಭನಕ್ಕೆ ಮುಖ್ಯ ಕಾರಣ ಅನಾರೋಗ್ಯಕರ ಜೀವನಶೈಲಿಯ ಆಯ್ಕೆ
ಮಣಿಪಾಲ್ ಹಾಸ್ಪಿಟಲ್ಸ್‍ನ ಸಮಾಲೋಚಕ ಇಂಟರ್‍ವೆನ್ಶನಲ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್‍ವೆನ್ಶನ್ ಸ್ಪೆಶಲಿಸ್ಟ್ ಡಾ. ಸೂರಜ್ ನರಸಿಂಹನ್ ಎ ಮಾತನಾಡಿ, 2030ರ ವೇಳೆಗೆ ವಿಶ್ವವ್ಯಾಪಿಯಾಗಿ ಭಾರತವು ಅತ್ಯಧಿಕ ಪ್ರಮಾಣದ ಹೃದ್ರೋಗ ಮರಣಗಳನ್ನು ಹೊಂದುತ್ತದೆ ಎಂದು ಹೇಳಲಾಗುತ್ತಿದೆ. ಈ ಏರಿಕೆಗೆ ಮುಖ್ಯ ಕಾರಣ ಅನಾರೋಗ್ಯಕರ ಜೀವನಶೈಲಿ (Lifestyle) ಆಯ್ಕೆಗಳು ಮತ್ತು ಹೆಚ್ಚಿದ ಒತ್ತಡ. ಈಗ ಜನರು, ಹೆಚು ಕ್ಯಾಲೊರಿ ಮತ್ತು ಸಕ್ಕರೆ (Sugar) ಇರುವ ಸಂಸ್ಕರಿತ ಆಹಾರಗಳನ್ನು ಸೇವಿಸುತ್ತಿದ್ದು ಇವು ಆರೋಗ್ಯಕ್ಕೆ ಬಾಧಕವಾಗಿವೆ. ಧೂಮಪಾನ (Smoking) ಮತ್ತು ಮದ್ಯಪಾನ (Alcohol) ಹೃದ್ರೋಗ ಏರ್ಪಡುವುದಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.

ಇ-ಸಿಗರೇಟ್ ಹೃದಯಕ್ಕೆ ಮಾರಕವಾಗಿದೆ! ಹುಷಾರ್

ಮಾತ್ರವಲ್ಲ, ಮನೆಯಿಂದ ಕೆಲಸ ಮಾಡುವುದು ಆರಾಮದಾಯಕವಾದರೂ, ಅನೇಕರಿಗೆ ಇದು ದಿನನಿತ್ಯದ ದೈಹಿಕ ಚಟುವಟಿಕೆ (Exercise)ಯನ್ನು ಕಡಿಮೆ ಮಾಡಿದೆ. ಆನರು ಇದರಿಂದ ಬಿಡುವು ಮಾಡಿಕೊಂಡು ತಮ್ಮ ಆಸಕ್ತಿಗೆ ತಕ್ಕಂತೆ ಓಟ, ಜಾಗಿಂಗ್ ಅಥವಾ ನಡಿಗೆ ಕೈಗೊಳ್ಳಬೇಕು. ಮಕ್ಕಳು ಹಾಗೂ ಯುವಜನರೂ ಕೂಡ ಪ್ರತಿನಿತ್ಯ ಕನಿಷ್ಟ 40 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ಅವರ ಹೃದಯದ ಆರೋಗ್ಯ (Heart health) ಹಾಗೂ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ' ಎಂದು ಹೇಳುತ್ತಾರೆ. 

50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಹೃದಯ ಸ್ತಂಭನ ಹೆಚ್ಚು
ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗಳ ಹಿರಿಯ ಸಲಹೆಗಾರರಾದ ಡಾ.ಗಿರೀಶ್ ಬಿ ನವಸುಂಡಿ ಮಾತನಾಡಿ, '2012 ರಲ್ಲಿ ರಾವ್ ಮತ್ತು ಇತರರು ನಡೆಸಿದ ಪ್ರಾಥಮಿಕ ಅಧ್ಯಯನವು ಭಾರತದಲ್ಲಿ SCD (Sudden Cardiac Death)ಯಿಂದ ಉಂಟಾಗುವ ಒಟ್ಟಾರೆ ಮರಣ ಪ್ರಮಾಣವು 10.3% (ಸುಮಾರು ವಾರ್ಷಿಕವಾಗಿ 7 ಲಕ್ಷ SCD ಪ್ರಕರಣಗಳು ಎಂದು ಅಂದಾಜಿಸಲಾಗಿದೆ)ರಷ್ಟಿದೆ.  21% ಸಾವುಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಸಂಭವಿಸಿವೆ ಎಂದು ತೋರಿಸಿದೆ.  ಪಶ್ಚಿಮಾರ್ಧ ಭೂಗೋಳದಲ್ಲಿ ವರದಿಯಾದ ಜನಸಂಖ್ಯೆಗೆ (Population) ಹೋಲಿಸಿದರೆ ಆ ಪ್ರಕರಣಗಳ ವಯಸ್ಸುಗಳಲ್ಲಿ 5-8 ವರ್ಷದಷ್ಟು ಇಳಿಕೆಯಾಗಿದೆ ಎಂದು ತೋರಿಸಿದೆ. ಅಪಾಯಕಾರಿ ಅಂಶಗಳಾದ - ಅಧಿಕ ರಕ್ತದೊತ್ತಡ, ಮಧುಮೇಹ (Diabetes) ಅಥವಾ ಧೂಮಪಾನ ಗಲ್ಲಿ ಕನಿಷ್ಠ ಒಂದನ್ನು 80.6% ಜನರಲ್ಲಿ ಗಮನಿಸಲಾಗಿದೆ' ಎಂದಿದ್ದಾರೆ

ಇದ್ದಕ್ಕಿದ್ದಂತೆ ಏರ್ಪಡುವ ಹೃದಯಸ್ತಂಭನ ಮತ್ತು ಹೃದಾಯಾಘಾತದ ನಡುವೆ ವ್ಯತ್ಯಾಸವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೃದಯಾಘಾತವು, ರೋಗಿಯ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೊರೊನರಿ ಧಮನಿಗಳು ಕಟ್ಟಿಕೊಂಡಾಗ ಏರ್ಪಡುತ್ತದೆ. ಆದರೆ ಹೃದಯಸ್ತಂಭನವು, ನಮ್ಮ ಹೃದಯದ  ವಿದ್ಯುತ್ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡದಿದ್ದಾಗ ಏರ್ಪಡುವ ಅಸಹಜ ಹೃದಯದ ಏಕತಾನತೆ(ರಿದಮ್)ಯಿಂದ ಉಂಟಾಗುತ್ತದೆ. ಆದರೆ, ಕೆಲವೊಮ್ಮೆ ತೀವ್ರತರವಾದ ಹೃದಯಾಘಾತವು ವಿದ್ಯುಚ್ಛಕ್ತಿಯಲ್ಲಿ ತೊಂದರೆ ಏರ್ಪಡಿಸಿ ಇದ್ದಕ್ಕಿದ್ದಂತೆ ಹೃದಯಸ್ತಂಭನಕ್ಕೆ ಕಾರಣವಾಗಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರು ಬಹುತೇಕವಾಗಿ ತಮ್ಮ 60ರ ವಯಸ್ಸಿನಲ್ಲಿದ್ದಾಗ ಹೃದಯಸ್ತಂಭನ ಅನುಭವಿಸಿದರೆ, ಭಾರತದಲ್ಲಿ ಹೃದಯಸ್ತಂಭನಗಳು ಏರ್ಪಡುವ ವರ್ಷವು 50ರ  ಆರಂಭಿಕ ವರ್ಷಗಳೆಂದು ವರದಿ ಮಾಡಲಾಗಿದೆ. ಹೃದಯಸ್ತಂಭನವನ್ನು ಗುರುತಿಸಿ, ಅದಕ್ಕೆ ಪ್ರತಿಕ್ರಿಯಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ಒದಗಿಸಿದರೆ, ಒಬ್ಬರ ಜೀವವನ್ನು ಉಳಿಸಬಹುದು. 

ಚಳಿಗಾಲದಲ್ಲಿ ಹಾರ್ಟ್‌ ಅಟ್ಯಾಕ್‌ ಛಾನ್ಸ್ ಹೆಚ್ಚಿರುತ್ತಾ ? ತಪ್ಪಿಸೋಕೆ ಏನ್ ಮಾಡ್ಬೇಕು

ಸಾಕಷ್ಟು ಪ್ರಮಾಣದ ಮಹಿಳೆಯರಿಗೂ ಕೂಡ ಹೃದಯಾಘಾತದ ಸಮಸ್ಯೆ
ಎಮ್.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್‌ನ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಮತ್ತು ಎಚ್‍ಒಡಿ ಡಾ. ಪ್ರಕಾಶ್ ವಿ ಎಸ್, '2019ನಿಂದ ಬಂದಿರುವ ಐಸಿಎಮ್‍ಆರ್ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಾರ್ಡಿಯೋವಾಸ್ಕುಲರ್ ಕಾಯಿಲೆಗಳಿಂದುಂಟಾದ ಮರಣ ಸಂದರ್ಭಗಳಿಗಾಗಿ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದು, ಪ್ರತಿ 100,000 ಜನರಲ್ಲಿ 250.94 ಮರಣಗಳು ಏರ್ಪಡುತ್ತಿವೆ. ಹೃದಯಾಘಾತಗಳು ಅಸಮಾನತೆಯಿಂದ ಪುರುಷರನ್ನು ಬಾಧಿಸುತ್ತಿದ್ದರೂ ಸಾಕಷ್ಟು ಪ್ರಮಾಣದ ಮಹಿಳೆಯರೂ ಕೂಡ ಹೃದಯಾಘಾತದ ಸಮಸ್ಯೆಯನ್ನು ಅನುಭವಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ' ಎಂದಿದ್ದಾರೆ. 

ಇದ್ದಕ್ಕಿದ್ದಂತೆ ಮರಣ ಏರ್ಪಡಿಸುವ ಕಾರ್ಡಿಯಾಕ್ ಅರೆಸ್ಟ್ ಅಪಾಯಕಾರಿಯಾದ ಏಕತಾನತೆ ಅಸಹಜತೆಗಳಿಂದ-ಅಂದರೆ ವೆಂಟ್ರಿಕ್ಯುಲರ್ ಟೇಕೀಕಾರ್ಡಿಯಾ ಮತ್ತು ವೆಂಟ್ರಿಕ್ಯುಲರ್ ಫಿಬ್ರಿಲೇಶನ್‍ನಿಂದ ಮುಖ್ಯವಾಗಿ ಏರ್ಪಡುತ್ತದೆ. ಇತ್ತೀಚಿನ ದಿನಗಳ30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರೂ ಸಿಟಿ ಆಂಜಿಯೋಗ್ರಫಿ ಅಥವಾ ಹೃದಯದ ಸ್ಕ್ಯಾನ್‍ಗೆ ಒಳಗಾಗಬೇಕು. ಇದು ಅತಿಸಣ್ಣ ಕೊರೊನರಿ ಆರ್ಟರಿ ಕಾಯಿಲೆಗಳನ್ನೂ ಪತ್ತೆಹಚ್ಚಿ ಭವಿಷ್ಯತ್ತಿನಲ್ಲಿ ಯಾವುದೇ ರೀತಿಯ ಹೃದಂಉದಯಸ್ತಂಭನ ರ್ಪಡುವುದನ್ನು ತಡೆಗಟ್ಟುತ್ತದೆ ಎಂದು ವಿವರಿಸಿದರು. 

ಹೃದಯಸ್ತಂಭನ ಏರ್ಪಟ್ಟ ಕೂಡಲೇ ತಕ್ಷಣದ ಮತ್ತು ಸೂಕ್ತವಾದ ವೈದ್ಯಕೀಯ ಆರೈಕೆ ಒದಗಿಸಿದರೆ ಜೀವ ಉಳಿಸುವುದು ಸಾಧ್ಯ. ಹೃದಯಕ್ಕೆ ಶಾಕ್ ನೀಡಲು ಡೀಫಿಬ್ರಿಲೇಟರ್ ಬಳಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್(ಸಿಪಿಆರ್) ಮಾಡುವುದು ಅಥವಾ ಹೃದಯಕ್ಕೆ ಸುಮ್ಮನೆ ಒತ್ತು ನೀಡುವುದರಿಂದಲೂ ವೈದ್ಯಕೀಯ ನೆರವು ಬರುವವರೆಗೂ ಜೀವ ಉಳಿಸುವ ಸಾಧ್ಯತೆಯನ್ನು ಸುಧಾರಿಸಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಬರಹ: ಡಾ.ಸೂರಜ್ ನರಸಿಂಹನ್‌, ಮಣಿಪಾಲ್ ಹಾಸ್ಪಿಟಲ್ಸ್‍ನ ಸಮಾಲೋಚಕ ಇಂಟರ್‍ವೆನ್ಶನಲ್ ಕಾರ್ಡಿಯಾಲಜಿಸ್ಟ್ ಮತ್ತು ಸ್ಟ್ರಕ್ಚರಲ್ ಇಂಟರ್‍ವೆನ್ಶನ್ ಸ್ಪೆಶಲಿಸ್ಟ್
ಡಾ.ಪ್ರಕಾಶ್‌ ವಿ.ಎಸ್, ಎಮ್.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್‌ನ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಮತ್ತು ಎಚ್‍ಒಡಿ
ಡಾ,ಗಿರೀಶ್ ಬಿ.ನವಸುಂಡಿ, ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗಳ ಹಿರಿಯ ಸಲಹೆಗಾರ

Follow Us:
Download App:
  • android
  • ios