ಇ-ಸಿಗರೇಟ್ ಹೃದಯಕ್ಕೆ ಮಾರಕವಾಗಿದೆ! ಹುಷಾರ್
ಸ್ಮೋಕ್ ಮಾಡೋದು ಆರೋಗ್ಯಕ್ಕೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದರಲ್ಲಾಗುವ ಅಪಾಯ ತಪ್ಪಿಸಲು ಹೆಚ್ಚಿನ ಜನ ಇ - ಸಿಗರೇಟ್ ಮೊರೆ ಹೋಗುತ್ತಾರೆ. ಇ-ಸಿಗರೇಟ್ ಸೇದೋದರಿಂದ ಆರೋಗ್ಯಕ್ಕೆ ಹಾನಿಯಾಗೋದಿಲ್ಲ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ಇ-ಸಿಗರೇಟುಗಳು ಸಾಮಾನ್ಯ ಸಿಗರೇಟುಗಳಂತೆ ಹೃದಯವನ್ನು ಹೆಚ್ಚಾಗಿಯೇ ಹಾನಿಗೊಳಿಸುತ್ತವೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸಿದೆ.
ಇಂದಿನ ಯುಗದಲ್ಲಿ, ಇ-ಸಿಗರೇಟ್ ( e cigarette) ಸೇದುವ ಹ್ಯಾಬಿಟ್ ವೇಗವಾಗಿ ಹೆಚ್ಚುತ್ತಿದೆ. ಹೆಚ್ಚಿನ ಸಂಖ್ಯೆಯ ಯುವಕರು ಇ-ಸಿಗರೇಟ್ ಸೇದೋದನ್ನು ಕಾಣಬಹುದು. ಸಾಮಾನ್ಯ ಸಿಗರೇಟುಗಳಿಗೆ ಹೋಲಿಸಿದರೆ ಇ-ಸಿಗರೇಟ್ ಅಪಾಯಕಾರಿಯಲ್ಲ ಎಂದು ಜನರು ಹೆಚ್ಚಾಗಿ ಭಾವಿಸುತ್ತಾರೆ. ಆದರೆ, ಇದು ಸಂಪೂರ್ಣವಾಗಿ ತಪ್ಪು.
ಇ-ಸಿಗರೇಟ್ ಹೃದಯಕ್ಕೆ ತುಂಬಾ ಅಪಾಯಕಾರಿ (effect on heart) ಎಂದು ಅಧ್ಯಯನಗಳು ತಿಳಿಸಿವೆ. ಇದನ್ನು ನಿಯಮಿತವಾಗಿ ಬಳಸುವ ಜನರ ಹೃದಯ ಮತ್ತು ರಕ್ತನಾಳದ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇತ್ತೀಚಿನ ಅಧ್ಯಯನವೊಂದರಲ್ಲಿ ಇದು ಬಹಿರಂಗವಾಗಿದೆ. ಸಾಮಾನ್ಯ ಸಿಗರೇಟುಗಳಂತೆ ಇ-ಸಿಗರೇಟ್ ಸಹ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗಿದೆ. ಇದನ್ನು ನಿರಂತರವಾಗಿ ಸೇದುತ್ತಿದ್ದರೆ ಮಾರಣಾಂತಿಕವೂ ಆಗಬಹುದು. ಆದುದರಿಂದ ನೀವು ಇ ಸಿಗರೇಟ್ ಬಗ್ಗೆ ತಿಳಿದುಕೊಳ್ಳಬೇಕಾದ್ದು ಮುಖ್ಯ
ಇ-ಸಿಗರೇಟ್ ಮತ್ತು ಸಾಮಾನ್ಯ ಸಿಗರೇಟುಗಳ ನಡುವಿನ ವ್ಯತ್ಯಾಸ
ವರದಿಯ ಪ್ರಕಾರ, ಸಾಮಾನ್ಯ ಸಿಗರೇಟ್ ತಂಬಾಕು ಮತ್ತು ನಿಕೋಟಿನ್ (nicotine) ಹೊಂದಿರುತ್ತೆ, ಆದರೆ ಇ-ಸಿಗರೇಟ್ ಕೇವಲ ನಿಕೋಟಿನ್ ಮಾತ್ರ ಹೊಂದಿರುತ್ತವೆ. ನಿಕೋಟಿನ್ ಸೇವನೆಯು ನಿಮ್ಮನ್ನು ಅದರ ವ್ಯಸನಿಯನ್ನಾಗಿ ಮಾಡುತ್ತೆ.
ಇ-ಸಿಗರೇಟ್ ಸಾಮಾನ್ಯ ಸಿಗರೇಟುಗಳಿಗಿಂತ ಕಡಿಮೆ ಹಾನಿಕಾರಕವಾಗಿವೆ, ಆದರೆ ಇದು ಹೃದಯ ಮತ್ತು ರಕ್ತನಾಳಗಳ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇ-ಸಿಗರೇಟಿನ ಹೊಗೆಯು ಇತರ ಧೂಮಪಾನ ವಸ್ತುಗಳಂತೆ ಅಪಾಯಕಾರಿ ಮತ್ತು ದೇಹವನ್ನು ತಲುಪುವ ಮೂಲಕ ಆಂತರಿಕ ಹಾನಿಯನ್ನುಂಟು (internal damage) ಮಾಡುತ್ತೆ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ನ (American Heart association) ಸೈಂಟಿಫಿಕ್ ಸೆಷನ್ನಲ್ಲಿ ಪ್ರಸ್ತುತಪಡಿಸಿದ ಒಂದು ಅಧ್ಯಯನವು ಇ-ಸಿಗರೇಟುಗಳನ್ನು ಸೇದಿದ 15 ನಿಮಿಷಗಳಲ್ಲಿ ಜನರ ಹೃದಯ ಬಡಿತವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತೆ ಎಂದು ಬಹಿರಂಗಪಡಿಸಿದೆ. ಇದು ದೇಹದ 'ಫೈಟ್ ಮತ್ತು ಫ್ಲೈಟ್' ಮೋಡನ್ನು ಆನ್ ಮಾಡುತ್ತೆ . ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತೆ
ಇ ಸಿಗರೇಟು ಸೇದೋದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತೆ ಮತ್ತು ಇದರಿಂದ ಹೃದಯ ಹೆಚ್ಚಿನ ಆಮ್ಲಜನಕವನ್ನು ಬಯಸುತ್ತೆ. ಇದು ಅಪಧಮನಿಯ ಗೋಡೆಗಳಿಗೆ ಹಾನಿಯುಂಟುಮಾಡುವ ಅಪಾಯವನ್ನು ಉಂಟುಮಾಡುತ್ತೆ. ಈ ಸ್ಟಡಿಯ ಪ್ರಕಾರ, ಇ-ಸಿಗರೇಟ್ ಅಥವಾ ಸಾಮಾನ್ಯ ಸಿಗರೇಟುಗಳನ್ನು ಸೇದಿದ ತಕ್ಷಣ ರಕ್ತದೊತ್ತಡ (blood pressure), ಹೃದಯ ಬಡಿತ ಮತ್ತು ರಕ್ತನಾಳಗಳ ಟೋನ್ ನಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತೆ. ಇ-ಸಿಗರೇಟಿನ ವ್ಯಸನದಿಂದಾಗಿ ಮೆದುಳಿಗೆ ಹಾನಿಯುಂಟಾಗೋ ಅಪಾಯವೂ ಇದೆ.
ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ
ಕಳೆದ ಕೆಲವು ವರ್ಷಗಳಲ್ಲಿ, ದೇಶ ಮತ್ತು ವಿಶ್ವದಲ್ಲಿ ಹೃದಯಾಘಾತದ (heart attack) ಪ್ರಕರಣಗಳಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ವಿಶೇಷವಾಗಿ ಯುವಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ಸ್ಮೋಕಿಂಗ್. ಸ್ಮೋಕಿಂಗ್ ನಿಂದಾಗಿ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ.
ಸ್ಮೋಕಿಂಗ್ ಅಭ್ಯಾಸವು ಯುವಕರನ್ನು ಹೃದಯಾಘಾತ ಮತ್ತು ಇತರ ಅಪಾಯಕಾರಿ ರೋಗಗಳಿಗೆ ಬಲಿಪಶುಗಳನ್ನಾಗಿ ಮಾಡುತ್ತಿದೆ. ತಜ್ಞರ ಪ್ರಕಾರ, ಹೃದಯವನ್ನು ಆರೋಗ್ಯಕರವಾಗಿಡಲು ಎಲ್ಲಾ ಜನರು ಧೂಮಪಾನದಿಂದ ದೂರವಿರಬೇಕು. ಇದಲ್ಲದೆ, ಆರೋಗ್ಯಕರ ಜೀವನಶೈಲಿಯನ್ನು (healthy lifestyle) ಅಳವಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಹೆಲ್ತ್ ಚೆಕ್ ಅಪ್ ಮಾಡಿಸಬೇಕು.