ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಿ ತಮ್ಮ ವೈಯುಕ್ತಿಕ ಸ್ವಾರ್ಥಕ್ಕಾಗಿ ರಾಜಕೀಯ ಮಾಡಲು ಮಾಜಿ ಸಂಸದ ಎಸ್.ಮುನಿಸ್ವಾಮಿ ಮುಂದಾಗಿದ್ದಾರೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಆರೋಪಿಸಿದ್ದಾರೆ.

ಚಿಂತಾಮಣಿ (ನ.20): ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಿ ತಮ್ಮ ವೈಯುಕ್ತಿಕ ಸ್ವಾರ್ಥಕ್ಕಾಗಿ ರಾಜಕೀಯ ಮಾಡಲು ಮಾಜಿ ಸಂಸದ ಎಸ್.ಮುನಿಸ್ವಾಮಿ ಮುಂದಾಗಿದ್ದಾರೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಆರೋಪಿಸಿದ್ದಾರೆ.

ನಗರದ ತಾ.ಪಂ. ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಅಧಿಕಾರವಿದ್ದಾಗ ಏನನ್ನು ಮಾಡದ ಮುನಿಸ್ವಾಮಿ, ಅನ್ಯೋನ್ಯವಾಗಿ ಜೀವನ ನಡೆಸುತ್ತಿರುವ ಸಮುದಾಯಗಳ ನಡುವೆ ಕಂದಕ ಸೃಷ್ಟಿಸಲು ಹೊರಟಿರುವುದು ಖಂಡನಿಯ ಎಂದರು.

ನಬಾರ್ಡ್‌ನಿಂದ ಕೃಷಿ ಕಡಿತ; ರೈತರ ಪರ ಎನ್ನುವ ಕುಮಾರಸ್ವಾಮಿ ಈಗ್ಯಾಕೆ ಬಾಯಿಬಿಡುತ್ತಿಲ್: ಚಲುವರಾಯಸ್ವಾಮಿ ಕಿಡಿ

ಭೂ ವಿವಾದ ಹೈಕೋರ್ಟ್‌ನಲ್ಲಿ

ಚಿಂತಾಮಣಿಯ ತಿಮ್ಮಸಂದ್ರ ಸರ್ವೆ ನಂ.೧೩/೧ ಮತ್ತು ೧೩/೩ರ ಜಮೀನುಗಳ ವಿಚಾರವು ಹಲವು ವರ್ಷಗಳಿಂದ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅಲ್ಲಿ ಏನು ತೀರ್ಪು ಬರುವುದು ಅದನ್ನು ಪರಸ್ಪರರು ಗೌರವಿಸಬೇಕಾಗಿದ್ದು, ಅವರಿಗೆ ಸಂಸದರ ಬಿ.ಫಾರಂ ಕೊಡಿಸಿದವರಾರು, ಅವರ ಗೆಲುವಿಗೆ ಕಾರಣರಾದರ‍್ಯಾರು ಅದೆಲ್ಲವನ್ನೂ ಮರೆತಿರುವ ಮುನಿಸ್ವಾಮಿ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾರೆಂದು ಜರೆದೆರು.

ನಬಾರ್ಡ್‌ನಿಂದಲೂ ಕರ್ನಾಟಕಕ್ಕೆ ಘೋರ ಅನ್ಯಾಯ: ಸಚಿವ ಡಿ.ಸುಧಾಕರ್‌

ಜಾತಿಗಳ ನಡುವೆ ವಿಷಬೀಜ

ವಕ್ಫ್ ವಿಚಾರವನ್ನು ವಿನಾಕಾರಣ ಬೃಹದಾಕಾರದಂತೆ ಮಾಡಲು ಹೊರಟಿರುವ ಬಿಜೆಪಿ ಮಹಾರಾಷ್ಟ್ರ, ಜಾರ್ಖಂಡ್ ಇನ್ನಿತರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಕೋಮು ಸೌರ್ಹದತೆ ಕದಡುವ ಖಾಯಕದಲ್ಲಿ ತೊಡಗಿದೆಯೆಂದು ಜರೆದರು.

ಬಿಪಿಎಲ್ ಅರ್ಹರಾದವರು ಸೂಕ್ತ ದಾಖಲೆಗಳನ್ನು ಆಹಾರ ಇಲಾಖೆಯಲ್ಲಿ ಸಲ್ಲಿಸುವ ಮೂಲಕ ಬಿಪಿಎಲ್ ಕಾರ್ಡು ಹೊಂದಲು ಅವಕಾಶ ಕಲ್ಪಿಸಲಾಗಿದೆ, ವಿರೋಧ ಪಕ್ಷಗಳು ವಿನಾಕಾರಣ ಸಣ್ಣ ವಿಚಾರವನ್ನು ಭೂತಕನ್ನಡಿಯಲ್ಲಿ ನೋಡುವ ಪ್ರವೃತ್ತಿಯನ್ನು ರೂಡಿಸಿಕೊಂಡಿರುವುದು ಅತಾಶೆಯ ಪ್ರತ್ಯೇಕವಾಗಿದೆ.