₹100 ಕೋಟಿ ಆಪರೇಷನ್ ಕಮಲ: ತೋಳ ಬಂತು ತೋಳ ಕಥೆ ಹೇಳಿದ್ರಾ ಶಾಸಕ ಗಣಿಗ ರವಿ!

ಕಾಂಗ್ರೆಸ್ ಶಾಸಕರಿಗೆ ಆಪರೇಷನ್ ಕಮಲಕ್ಕೆ ₹50 ಕೋಟಿ ಆಫರ್ ಬಂದಿದೆ ಎಂದು ಸಿಎಂ ಹೇಳಿದ್ದರು. ಆದರೆ, ಇದೀಗ ಇನ್ನೊಬ್ಬ ಕಾಂಗ್ರೆಸ್ ಶಾಸಕ ₹100 ಕೋಟಿ ಆಫರ್ ಬಂದಿದೆ ಎಂದು ಹೇಳಿದ್ದಾರೆ. ಈ ಆರೋಪಕ್ಕೆ ಸಾಕ್ಷಿಗಳನ್ನು ನೀಡುತ್ತಾರಾ ಎಂಬುದು ಕುತೂಹಲ.

First Published Nov 19, 2024, 1:26 PM IST | Last Updated Nov 19, 2024, 1:26 PM IST

ರಾಜ್ಯ ಸರ್ಕಾರದ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲ ಮಾಡಲು 50 ಕೊಟಿ ರೂ. ಆಫರ್ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಇದೇ ಕಾಂಗ್ರೆಸ್ ಶಾಸಕ ಆಪರೇಷನ್ ಕಮಲ ಮಾಡಲು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈ ಆಫರ್ ತನಗಲ್ಲ ಎಂದು ಬೇರೆ ಇಬ್ಬರು ಶಾಸಕರ ಹೆಸರನ್ನು ಹೇಳಿ ಗುಂಡು ಹಾರಿಸಿದ್ದಾರೆ. ಆದರೆ, ಇದಕ್ಕೆ ಸಾಕ್ಷಿ ಕೇಳಿದರೆ ಇಬ್ಬರೂ ತಬ್ಬಿಬ್ಬು ಆಗುತ್ತಿದ್ದಾರೆ.

ರಾಜ್ಯದಲ್ಲಿ 100 ಕೋಟಿಯ ಆಪರೇಷನ್ ಬಾಂಬ್'ಗೆ ಸಾಕ್ಷಿ ಇದೆ ಅಂತ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ. ಆ ಸಾಕ್ಷಿಗಳನ್ನು ರಾಜ್ಯದ ಜನರ ಮುಂದಿಡ್ತಾರಾ..? ಅಷ್ಟಕ್ಕೂ ಇಬ್ಬರು ಕಾಂಗ್ರೆಸ್ ಶಾಸಕರಿಗೆ 100 ಕೋಟಿಯ ಆಫರ್ ಬಂದಿದೆ ಅಂತ ಶಾಸಕ ಗಣಿಗ ರವಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ 50 ಕೋಟಿಯ ಆಪರೇಷನ್ ಬಾಂಬ್ ಸಿಡಿಸಿದ್ದರು. ಅದಕ್ಕೂ ಒಂದು ಹೆಜ್ಜೆ ಮುದೆ ಹೋಗಿರುವ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ 100 ಕೋಟಿಯ ಆಪರೇಷನ್ ಬಾಂಬ್ ಸ್ಫೋಟಿಸಿದ್ದಾರೆ. ಹಾಗಾದರೆ ಶಾಸಕ ಗಣಿಗ ರವಿ 100 ಕೋಟಿಯ ಆಪರೇಷನ್ ಆರೋಪಕ್ಕೆ ಸಾಕ್ಷಿಗಳನ್ನು ರಾಜ್ಯದ ಜನರ ಮುಂದಿಡುತ್ತಾರಾ ಇಲ್ಲವೋ ಕಾದು ನೊಡಬೇಕಿದೆ. ಅಷ್ಟಕ್ಕೂ ಶಾಸಕ ಗಣಿಗ ರವಿ ಹೇಳಿದ ಇಬ್ಬರು ಕಾಂಗ್ರೆಸ್ ಶಾಸಕರಿಗೆ 100 ಕೋಟಿಯ ಆಫರ್ ಬಂದಿದೆ ಬೇರೆ ಬೇರೆಯವರ ಹೆಸರು ಹೇಳಿದ್ದಾರೆ. ಆದರೆ, ಈ 100 ಕೋಟಿಯ ಆಪರೇಷನ್ ಆಫರ್ ಬಗ್ಗೆ ಆ ಶಾಸಕರು ಒಪ್ಪಿಕೊಂಡಿಲ್ಲ.

ಆಪರೇಷನ್ ಕಮಲ ಬಾಂಬ್ ಇಲ್ಲಿವರೆಗೆ ತೋಳ ಬಂತು ತೋಳ ಕಥೆಯಾಗ್ತಾನೇ ಬಂದಿದೆ. ಇದೂ ಕೂಡ ಅಂಥದ್ದೇ ಮತ್ತೊಂದು ಕಥೆಯಾಗಬಾರದು ಎಂದರೆ ಆರೋಪ ಮಾಡಿದವರು ಸಾಕ್ಷಿಗಳನ್ನು ರಾಜ್ಯದ ಜನರ ಮುಂದಿಡಬೇಕು.