ಒಂದೇ ಪ್ಲೇಟಲ್ಲಿ ಮೂರ್ನಾಲ್ಕು ಖಾದ್ಯ ನೋಡಿ ಕೋಪ ಬರ್ತಿದ್ಯಾ? ಇದು ಮಾನಸಿಕ ಖಾಯಿಲೆ?
ಅನ್ನದ ಜೊತೆ ಸಾಂಬಾರ್ ಹಾಕಿ ಅದ್ರ ಮೇಲೊಂದು ಹಪ್ಪಳವಿಟ್ಟು ಕೊಟ್ರೆ ಬಾಯಿ ಚಪ್ಪರಿಸಿಕೊಂಡು ತಿನ್ನೋರಿದ್ದಾರೆ. ಆದ್ರೆ ಅನ್ನ ಬೇರೆ, ಸಾಂಬಾರ್ ಬೇರೆ ಪ್ಲೇಟ್ ನಲ್ಲಿ ನೀಡಿದ್ರೆ ಚೆಂದ, ಎಲ್ಲ ಮಿಕ್ಸ್ ಆದ್ರೆ ಸಿಟ್ಟು ಬರುತ್ತೆ ಎನ್ನುವವರು ನೀವಾಗಿದ್ದರೆ ಎಚ್ಚರ..
ಆಹಾರದಲ್ಲಿ ನಾವು ಸಾಕಷ್ಟು ಆಯ್ಕೆಯನ್ನು ಹುಡುಕ್ತೆವೆ. ರುಚಿಯಾದ ಆಹಾರ ಸೇವನೆ ಮಾಡಲು ಇಷ್ಟಪಡ್ತೇವೆ. ಬರಿ ರುಚಿ ಆಹಾರ ತಯಾರಿಸಿದ್ರೆ ಸಾಲದು ಅದನ್ನು ಸರ್ವ್ ಮಾಡೋದು ಹೇಗೆ ಎಂಬುದು ಗೊತ್ತಿರಬೇಕು. ಹಾಗೆ ಆಹಾರ ಸೇವನೆ ಮಾಡುವ ಪ್ಲೇಟ್ ಕೂಡ ಮುಖ್ಯವಾಗುತ್ತದೆ. ಕೆಲವರು ಅನ್ನ, ಸಾಂಬಾರ್, ಪಲ್ಯ, ಮೊಸರು ಎಲ್ಲವನ್ನು ಮಿಕ್ಸ್ ಮಾಡಿ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಆಹಾರ ಸೇವನೆ ವಿಷ್ಯದಲ್ಲಿ ಹೆಚ್ಚು ಕಾಳಜಿವಹಿಸ್ತಾರೆ. ಅವರಿಗೆ ಪ್ಲೇಟ್ ನಲ್ಲಿರುವ ಆಹಾರ ಒಂದಕ್ಕೊಂದು ಟಚ್ ಆದ್ರೂ ಕಿರಿಕಿರಿಯಾಗುತ್ತದೆ. ಕೋಪ ನೆತ್ತಿಗೇರುತ್ತದೆ. ಅವರು ಇಂಥ ಪ್ಲೇಟ್ ಟಚ್ ಮಾಡಲೂ ಇಷ್ಟಪಡೋದಿಲ್ಲ. ನಿಮಗೂ ಇಂಥ ಸಮಸ್ಯೆಯಿದ್ರೆ ಎಚ್ಚರ. ಯಾಕೆಂದ್ರೆ ಇದು ನಿಮ್ಮ ಮಾನಸಿಕ ರೋಗವನ್ನು ತೋರಿಸುತ್ತೆ. ನಾವಿಂದು ಇದ್ರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.
ಕೆಲ ದಿನಗಳ ಹಿಂದೆ ಟ್ರೈನ್ (Train ) ನಲ್ಲಿ ಪ್ರಯಾಣ (Travel) ಬೆಳೆಸ್ತಿದ್ದ ವೇಳೆ ವ್ಯಕ್ತಿಯೊಬ್ಬ ಸಮೋಸಾ ಆರ್ಡರ್ ಮಾಡಿದ್ದ. ಸಮೋಸಾ ಬೇರೆ ಪ್ಲೇಟ್ ನಲ್ಲಿ ಹಾಗೂ ಚಟ್ನಿಯನ್ನು ಬೇರೆ ಪ್ಲೇಟ್ ನಲ್ಲಿ ತರುವಂತೆ ಹೇಳಿದ್ದ. ಸಮೋಸಾಕ್ಕೆ ಚಟ್ನಿ ಹಾಕಿಕೊಂಡು ತಿನ್ನುವ ಆಸೆಯಿದ್ರೂ ಅದನ್ನು ಪ್ರತ್ಯೇಕವಾಗಿ ಸೇವನೆ ಮಾಡುವ ಪ್ರಯತ್ನ ನಡೆಸಿದ್ದ. ಈತ ಮಾತ್ರವಲ್ಲ ನಮ್ಮಲ್ಲಿ ಅನೇಕರಿದ್ದಾರೆ. ಅವರಿಗೆ ಆಹಾರದ ಪ್ಲೇಟ್ ನಲ್ಲಿ ಎಲ್ಲವೂ ಬೇರೆ ಬೇರೆಯಾಗಿರಬೇಕು. ಇದನ್ನು ನಾವು ಸಾಮಾನ್ಯ ಭಾಷೆಯಲ್ಲಿ ಆಹಾರ ಪ್ರತ್ಯೇಕತಾವಾದ ಎನ್ನಬಹುದು. ಇದ್ರ ವೈಜ್ಞಾನಿಕ (Scientific) ಹೆಸರು ಬ್ರೂಮೋಟಾಕ್ಟಿಲೋಫೋಬಿಯಾ (Brumotactylophobia). ಆಹಾರ ಮುಟ್ಟಲು ಭಯ ಎಂಬುದನ್ನು ಇದು ಸೂಚಿಸುತ್ತದೆ. ಬ್ರೂಮೋಟಾಕ್ಟಿಲೋಫೋಬಿಯಾ ಎರಡು ಶಬ್ಧಗಳಿಂದಾಗಿದೆ. ಬ್ರೂನೋ ಎಂಬುದು ಗ್ರೀಕ್ ಭಾಷೆಯಿಂದ ಬಂದ ಪದವಾಗಿದೆ, ಇದನ್ನು ಬ್ರೋಮಾಟೊ ಎಂದೂ ಕರೆಯುತ್ತಾರೆ. ಇದನ್ನು ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಟ್ಯಾಕ್ಟಿಲೊ ಲ್ಯಾಟಿನ್ ಟ್ಯಾಕ್ಟಿಯಿಂದ ಬಂದಿದೆ, ಅಂದರೆ ಸ್ಪರ್ಶ. ವಿಜ್ಞಾನದ ಪ್ರಕಾರ ಇದು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಆಗಿದೆ. ಇದು ಕೆಲವರಲ್ಲಿ ಹೆಚ್ಚಿದ್ರೆ ಮತ್ತೆ ಕೆಲವರಲ್ಲಿ ಜಾಸ್ತಿಯಿರುತ್ತದೆ. ಇಂಥಹ ಜನರು ಸಾರ್ವಜನಿಕ ಪ್ರದೇಶದಲ್ಲಿ ಆಹಾರ ಸೇವನೆ ಮಾಡಲು ಮನಸ್ಸು ಮಾಡೋದಿಲ್ಲ. ಒಂದ್ವೇಳೆ ಅಲ್ಲಿ ಆಹಾರವನ್ನು ಮಿಕ್ಸ್ ಮಾಡಿ ಸೇವನೆ ಮಾಡಿದ್ರೆ ಅನಾರೋಗ್ಯಕ್ಕೆ ಒಳಗಾಗ್ತಾರೆ.
ಇದ್ರ ಬಗ್ಗೆ ಸಂಶೋಧನೆ ಹೇಳೋದೇನು?: 2016ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸೈಕಾಲಜಿ ವಿಭಾಗ ಇದ್ರ ಬಗ್ಗೆ ಮೊದಲ ಬಾರಿ ಅಧ್ಯಯನ ನಡೆಸಿತ್ತು. ಅಮೆರಿಕಾದಲ್ಲಿ ಬ್ರೂಮೋಟಾಕ್ಟಿಲೋಫೋಬಿಯಾದಿಂದ ಬಳಲುತ್ತಿರುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿತ್ತು. ಈ ಜನರು ಆಹಾರವನ್ನು ಬೇರ್ಪಡಿಸುವುದ್ರಲ್ಲಿಯೇ ತಮ್ಮ ಹೆಚ್ಚಿನ ಸಮಯ ಕಳೆಯುತ್ತಾರೆಂದು ವರದಿಯಲ್ಲಿ ಹೇಳಲಾಗಿತ್ತು. ಇದೊಂದೇ ಅಲ್ಲ, ಆಹಾರದಲ್ಲಿ ಅವರಿಗಿಷ್ಟವಾಗುವ ಖಾದ್ಯವನ್ನು ಊಟದ ಕೊನೆಯವರೆಗೆ ಪ್ಲೇಟ್ ನಲ್ಲಿ ಇಟ್ಟುಕೊಂಡು ಅದನ್ನು ಕೊನೆಯಲ್ಲಿ ಸೇವನೆ ಮಾಡುತ್ತಾರೆಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿತ್ತು. ಅಧ್ಯಯನದಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇಕಡಾ 7ರಷ್ಟು ಮಂದಿ ಆಹಾರ ಪ್ರತ್ಯೇಕತಾವಾದಿಗಳಾಗಿದ್ದರು. ಒಂದೇ ಪ್ಲೇಟ್ ನಲ್ಲಿ ಎಲ್ಲ ಆಹಾರ ನೋಡಿ ಅವರು ಬೆವತಿದ್ದರು ಎಂದು ವರದಿ ಹೇಳುತ್ತದೆ.
ಬೆಳಗ್ಗೆ ತಣ್ಣೀರಿನ ಸ್ನಾನದಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ ಇದೆ ನೋಡಿ
ಬ್ರೂಮೋಟಾಕ್ಟಿಲೋಫೋಬಿಯಾಕ್ಕೆ ಕಾರಣವೇನು ಎಂಬುದು ಸರಿಯಾಗಿ ಪತ್ತೆಯಾಗ್ಲಿಲ್ಲ. ಬಾಲ್ಯದಲ್ಲಿ ಆಹಾರ ತಿನ್ನುವ ಮತ್ತು ಕುಡಿಯುವ ಅಭ್ಯಾಸದ ಪರಿಣಾಮ ಇದು ಎಂದು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ, ಇದು ಒಸಿಡಿಗೆ ಸಹ ಸಂಪರ್ಕ ಹೊಂದಿದೆ. ಅನೇಕ ಬಾರಿ ಇದು ಕಲೆಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಲ್ಲಿ ಅಥವಾ ಪರಿಪೂರ್ಣತಾವಾದಿಗಳಲ್ಲಿಯೂ ಹೆಚ್ಚಾಗಿ ಕಂಡುಬರುತ್ತದೆ.
ಹಾರ್ಟ್ ಅಟ್ಯಾಕ್ ಆದಾಗ ನೋವಿನ ಅನುಭವ ಹೇಗಿರುತ್ತೆ? ಬದುಕುಳಿದವರು ಹೇಳಿದ್ದಿಷ್ಟು
ಒಸಿಡಿ ಅಂದ್ರೇನು? : ಒಸಿಡಿ ಎನ್ನುವುದು ಮಾನಸಿಕ ಖಾಯಿಲೆ. ವ್ಯಕ್ತಿ ಒಂದೇ ಕೆಲಸವನ್ನು ಪದೇ ಪದೇ ಮಾಡ್ತಾನೆ. ಪದೇ ಪದೇ ಪಾತ್ರೆ ತೊಳೆಯುವುದು, ಕೀ ಸರಿಯಾಗಿ ಹಾಕಿದ್ದೀನಾ ಎಂದು ಪದೇ ಪದೇ ಚೆಕ್ ಮಾಡುವುದು ಇವೆಲ್ಲವೂ ಇದ್ರಲ್ಲಿ ಸೇರಿದೆ. ಬ್ರೂಮೋಟಾಕ್ಟಿಲೋಫೋಬಿಯಾ ಕೂಡ ಒಸಿಡಿ ಅಡಿಯಲ್ಲಿ ಬರುತ್ತದೆ. ಪರಿಸ್ಥಿತಿ ಗಂಭೀರವಾದ್ರೆ ಇದು ದಾಂಪತ್ಯ ಬಿರುಕಿಗೂ ಕಾರಣವಾಗುತ್ತದೆ. ಪ್ಲೇಟ್ ನಲ್ಲಿ ಎಲ್ಲ ಆಹಾರವನ್ನು ಹಾಕಿದ್ದಾರೆ ಎನ್ನವು ಕಾರಣಕ್ಕೆ ಕೌಟುಂಬಿಕ ಹಿಂಸೆ ನಡೆಯುವುದಿದೆ. ಇವರಲ್ಲಿ ಸಂವೇದನಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವ ಆಹಾರ ಮೊದಲು ಸೇವನೆ ಮಾಡ್ಬೇಕು ಎಂಬ ಗೊಂದಲದಲ್ಲಿರ್ತಾರೆ.