ಸಂಗಾತಿ ನಿಮ್ಮನ್ನು ನೋಡಿ ನಗ್ತಿಲ್ಲವೆಂದ್ರೆ ಬೇಸರ ಬೇಡ : ಇದಕ್ಕೆ ಕಾರಣ Hormones
ಮುಖದಲ್ಲಿ ನಗುವಿದ್ರೆ ಚೆಂದ. ಹಾಗಂತ ಎಲ್ಲ ಸಂದರ್ಭದಲ್ಲಿ ನಗು ಬರೋದಿಲ್ಲ. ಸಂತೋಷ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಬಿದ್ದು ಬಿದ್ದು ನಗುವ ಜೋಕ್ ಹೇಳಿದ್ರೂ ಕೆಲವೊಮ್ಮೆ ನಗು ಬರೋದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ಎಲ್ಲರೂ ಒಂದೇ ರೀತಿ ಇರೋಕೆ ಸಾಧ್ಯವಿಲ್ಲ. ಪ್ರತಿಯೊಬ್ಬರ ಸ್ವಭಾವವೂ ಭಿನ್ನವಾಗಿರುತ್ತದೆ. ಸದಾ ನಮ್ಮ ಸುತ್ತ ನಗ್ತಾ, ನಗಿಸ್ತಾ ಇರುವ ವ್ಯಕ್ತಿಗಳಿದ್ದರೆ ಆ ಬದುಕು ಹಸನಾಗಿರುತ್ತದೆ. ಅನೇಕರು ಸಂಗಾತಿ ಮುಂದೆ ಸದಾ ನಗ್ತಾ ಸಂತೋಷವಾಗಿರುತ್ತದೆ. ಸಂಗಾತಿಯ ಮುಖ ನೋಡ್ತಿದ್ದಂತೆ ಇವರು ಮೊಗದಲ್ಲಿ ಮಿಂಚು ಮೂಡಿರುತ್ತದೆ. ಅವರಿಗೆ ಅರಿವಿಲ್ಲದೆ ನಗು ಬಂದಿರುತ್ತದೆ. ಸಂಗಾತಿಯನ್ನು ಪ್ರೀತಿಯ ಭಾವದಿಂದ ನೋಡ್ತಾರೆ. ಸಂಗಾತಿ ಹತ್ತಿರ ಬಂದಾಗ ಹಾಗೂ ಸಂಗಾತಿ ಪ್ರೀತಿಯ ಮಾತನಾಡಿದಾಗ ಅವರ ಸಂತೋಷ ಇಮ್ಮಡಿಗೊಳ್ಳುತ್ತದೆ. ಆದ್ರೆ ಮತ್ತೆ ಕೆಲವರಿಗೆ ನಗು ಬರೋದೇ ಅಪರೂಪ. ಸಂಗಾತಿ ಎಷ್ಟೇ ಪ್ರೀತಿ ಮಾಡ್ಲಿ, ಜೀವನ ಎಷ್ಟೇ ಸುಖಕರವಾಗಿರಲಿ, ಅವರು ಮಾತ್ರ ನಗೋದಿಲ್ಲ. ಅಷ್ಟೋ ದಿನಗಳ ನಂತ್ರ ಪ್ರೇಮಿಯ ಭೇಟಿಯಾದ್ರೂ ಅವರು ಸಾಮಾನ್ಯರಂತೆ ಇರ್ತಾರೆ. ಅವರ ಖುಷಿಯನ್ನು ನಗುವಿನ ಮೂಲಕ ವ್ಯಕ್ತಪಡಸುವುದಿಲ್ಲ. ಸದಾ ಗಂಟು ಮುಖ ಹಾಕಿಕೊಂಡು ಕೆಲಸ ಮಾಡ್ತಿರುತ್ತಾರೆ. ಅವರಿಗೆ ಸಂಗಾತಿ ಮೇಲೆ ಪ್ರೀತಿ ಇಲ್ಲ ಎಂದಲ್ಲ. ಆದ್ರೆ ಅವರಿಗೆ ಇದನ್ನು ನಗು, ಸಂತೋಷದ ಮೂಲಕ ವ್ಯಕ್ತಪಡಿಸಲು ಬರೋದಿಲ್ಲ. ಸಂಗಾತಿ ಅಥವಾ ಸ್ನೇಹಿತರ ಈ ಸ್ವಭಾವವನ್ನು ಮತ್ತೊಬ್ಬರು ಅರಿಯುವುದು ಕಷ್ಟ. ಅವರು ಸಂತೋಷವಾಗಿದ್ದಾರಾ ಇಲ್ಲವಾ ಎಂಬುದನ್ನು ತಿಳಿಯುವುದು ಕಷ್ಟವಾಗುತ್ತದೆ. ನಿಮ್ಮ ಸಂಗಾತಿ ನಿಮ್ಮ ಮುಂದೆ ನಗುವುದಿಲ್ಲವೆಂದಾದ್ರೆ ನಿಮಗೆ ಟೆನ್ಷನ್ ಆಗೋದು ಸಾಮಾನ್ಯ. ನನ್ನಿಂದ ತಪ್ಪು ನಡೆದಿದೆಯಾ ಎಂದು ನೀವು ಪ್ರಶ್ನೆ ಮಾಡಿಕೊಳ್ಳುವುದು ಕಾಮನ್. ಅದೇ ನಿಮ್ಮ ಸಂಗಾತಿ ಸದಾ ಹಸನ್ಮುಕಿಯಾಗಿದ್ದರೆ ಆಗ ನೀವೂ ಖುಷಿಯಾಗ್ತೀರಿ. ನಾವು ಸಂತೋಷವಾಗಿದ್ದೇವೆ ಎಂಬ ಭಾವನೆಗೆ ಬರ್ತೀರಿ.
ಸಂಗಾತಿ ನಗ್ತಿರಲಿ ಇಲ್ಲ ಸುಮ್ಮನಿರಲಿ ಈ ಎರಡಕ್ಕೂ ನೀವು ಕಾರಣರಲ್ಲ. ದೇಹದಲ್ಲಿ ಹಾರ್ಮೋನ್ ಬದಲಾವಣೆ ಇದಕ್ಕೆ ಕಾರಣ. ನಮ್ಮ ದೇಹದಲ್ಲಿ ಸಾಕಷ್ಟು ಹಾರ್ಮೋನುಗಳಿವೆ. ಅವು ಪ್ರತಿ ಕ್ಷಣ ಬದಲಾಗುತ್ತಿರುತ್ತವೆ. ನಮ್ಮ ದೇಹದಲ್ಲಿ ಕೆಲ ಹಾರ್ಮೋನುಗಳು ಸಂತೋಷವನ್ನು ನಿರ್ಧರಿಸುತ್ತವೆ. ಆ ಹಾರ್ಮೋನುಗಳ ಬಿಡುಗಡೆಯಲ್ಲಿ ಏರುಪೇರಾದ್ರೆ ನಮ್ಮ ಸಂತೋಷದಲ್ಲಿ ಏರುಪೇರಾಗುತ್ತದೆ. ದೇಹದಲ್ಲಿ ಯಾವ ಹಾರ್ಮೋನ್‌ಗಳು ನಿಮಗೆ ಸಂತೋಷವನ್ನು ನೀಡುತ್ತವೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ.
ಈ ಹಾರ್ಮೋನುಗಳು ಸಂತೋಷಕ್ಕೆ ಕಾರಣ :
ಸಿರೊಟೋನಿನ್: ದೇಹದಲ್ಲಿನ ಒಳ್ಳೆಯ ಅಥವಾ ಕೆಟ್ಟ ಮನಸ್ಥಿತಿಗೆ ಸಿರೊಟೋನಿನ್ ಹಾರ್ಮೋನುಗಳು ಕಾರಣವಾಗಿವೆ. ತಜ್ಞರ ಪ್ರಕಾರ, ಸಿರೊಟೋನಿನ್ ಬಿಡುಗಡೆಯಾದಾಗ ನಿಮ್ಮ ಮನಸ್ಥಿತಿ ತಾಜಾ ಮತ್ತು ಶಾಂತವಾಗಿರುತ್ತದೆ. ಸಿರೊಟೋನಿನ್ ಅನುಪಸ್ಥಿತಿಯಲ್ಲಿ, ಮೋಡ್ ಹಾಳಾಗುತ್ತದೆ. ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು, ನೀವು ಪ್ರತಿದಿನ ಯೋಗ ಮತ್ತು ಧ್ಯಾನದ ಸಹಾಯವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: ಶಕ್ತಿಯಿಲ್ಲದ ವ್ಯಕ್ತಿ ಮದುವೆಯಾಗಿ ಬಾಳು ಹಾಳ್ಮಾಡ್ಕೊಂಡ ಮಹಿಳೆ
ಆಕ್ಸಿಟೋಸಿನ್ : ಆಕ್ಸಿಟೋಸಿನ್ ದೇಹದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಕ್ಸಿಟೋಸಿನ್ ಗೆ ಮತ್ತೊಂದು ಹೆಸರು ಪ್ರೀತಿಯ ಹಾರ್ಮೋನ್. ಪ್ರೀತಿಯ ಹಾರ್ಮೋನ್ ಅನ್ನು ಹೆಚ್ಚಿಸಲು ಉತ್ತಮ ಭಾವನೆಗಳನ್ನು ಹೊಂದಿರುವುದು ಅವಶ್ಯಕ. ನಿಮ್ಮ ಸಂಗಾತಿ ಹತ್ತಿರವಿರುವಾಗ ಅಥವಾ ಪ್ರೀತಿಸುತ್ತಿರುವಾಗ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ನಿಮ್ಮ ಸಂಗಾತಿಯನ್ನು ನೋಡಿ ಸಂತೋಷವಾದ್ರೆ ನಿಮಗೆ ಆಕ್ಸಿಟೋಸಿನ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ ಎಂದರ್ಥ.
ಇದನ್ನೂ ಓದಿ: ಸಂಗಾತಿ ಬಗ್ಗೆ ವಿಪರೀತ ಡೌಟ್, ಇಂಥಾ ಭಾವನೆ ಹೋಗಲಾಡಿಸೋದು ಹೇಗೆ ?
ಡೋಪಮೈನ್ : ರಿವಾರ್ಡ್ ಕೆಮಿಕಲ್ ಡೋಪಮೈನ್ ನ ಮತ್ತೊಂದು ಹೆಸರು. ಯಾವುದೇ ವ್ಯಕ್ತಿ ಬಹುಮಾನ ಅಥವಾ ಪ್ರಶಸ್ತಿ ಪಡೆಯುವಾಗ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಯಾವುದೇ ವ್ಯಕ್ತಿಯು ತನ್ನ ಯಶಸ್ಸಿನ ಬಗ್ಗೆ ನಿಸ್ಸಂಶಯವಾಗಿ ಸಂತೋಷಪಡುತ್ತಾನೋ ಆ ಸಂತೋಷಕ್ಕೆ ಡೋಪಮೈನ್ ಕಾರಣವಾಗಿದೆ. ದೇಹದಲ್ಲಿ ಡೋಪಮೈನ್ ಹೆಚ್ಚಾಗಬೇಕೆಂದ್ರೆ ನೀವು ವಿವಿಧ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.