Brain Health: ಮಿದುಳು ಚುರುಕಾಗಿರಬೇಕೆಂದರೆ ಇವೆಲ್ಲ ಮಾಡ್ಬಾರ್ದು!
ಒತ್ತಡದ ಬದುಕಿನಲ್ಲಿ ಎಷ್ಟೋ ಬಾರಿ ಬೆಳಗ್ಗಿನ ತಿಂಡಿ ಸೇವಿಸಲು ಸಾಧ್ಯವಾಗುವುದಿಲ್ಲ. ಏನೂ ತಿನ್ನದೆ ಹಾಗೆಯೇ ಕಚೇರಿಗೆ ಧಾವಿಸುವುದು, ಮಧ್ಯಾಹ್ನದ ವೇಳೆಗೆ ಏನೋ ಸಿಕ್ಕಿದ್ದನ್ನು ತಿನ್ನುವುದು ಬಹುತೇಕ ಜನರ ಅಭ್ಯಾಸ. ಆದರೆ, ಹೀಗೆ ನಾವು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳುವ ಅದೆಷ್ಟೋ ಅಭ್ಯಾಸಗಳು ಮಿದುಳಿನ ಕಾರ್ಯಕ್ಷಮತೆಗೆ ಹಾನಿ ತರಬಲ್ಲವು.
ಅದೊಂದು ಚಳಿಗಾಲ (winter) ದ ರಾತ್ರಿ. ಎಲ್ಲಿಗೋ ಪ್ರವಾಸ ಹೋಗಿದ್ದ ಶರಣ್ ಊರಿಗೆ ಬಂದಿಳಿದಾಗ ಮಧ್ಯರಾತ್ರಿ. ಅದೇನಾಯಿತೋ, ಇದ್ದಕ್ಕಿದ್ದ ಹಾಗೆ ಇಡೀ ಮೈಯಲ್ಲಿ ಸೆಳೆತವುಂಟಾಗಿ ಬಿದ್ದುಬಿಟ್ಟ. ಜತೆಗಿದ್ದವರು ಆಸ್ಪತ್ರೆಗೆ ಸೇರಿಸಿದಾಗ ತಿಳಿದುಬಂದಿದ್ದು ಪಾರ್ಶ್ವವಾಯು (stroke) ವಾಗಿದೆ ಎಂದು. ಮಿದುಳಿ (brain) ನಲ್ಲಿ ರಕ್ತಸಂಚಾರಕ್ಕೆ ಧಕ್ಕೆಯಾಗಿ ಪಾರ್ಶ್ವವಾಯು ಉಂಟಾಗಿತ್ತು. ಮಾನವ ದೇಹ ಚೆನ್ನಾಗಿ ಕಾರ್ಯನಿರ್ವಹಿಸಲು ಮಿದುಳಿನ ಕಾರ್ಯನಿರತವಾಗಿರಲು ಮಿದುಳಿನ ಕ್ಷಮತೆ ಚೆನ್ನಾಗಿರಬೇಕು. ಕೆಲವೊಮ್ಮೆ ನಾವು ಅರಿತೋ ಅರಿಯದೆಯೋ ಕೆಲವೊಮ್ಮೆ ನಾವು ರೂಢಿಸಿಕೊಳ್ಳುವ ಜೀವನಶೈಲಿಯಿಂದ ಮಿದುಳಿಗೆ ಹಾನಿಯಾಗುತ್ತಿರುತ್ತದೆ. ನಿರಂತರವಾಗಿ ಹಾನಿ ಮುಂದುವರಿದಾಗ ಮಿದುಳಿನ ಸ್ಟ್ರೋಕ್ ಉಂಟಾಗಬಹುದು.
ಮಿದುಳು ಚೆನ್ನಾಗಿರಬೇಕೆಂದರೆ ಇವೆಲ್ಲ ಮಾಡಬಾರದು.
ಉಪಾಹಾರ (breakfast) ಸ್ಕಿಪ್
ಬೆಳಗ್ಗಿನ ಆಹಾರ ಬಿಡುವುದು ಯಾವುದೇ ಕಾರಣಕ್ಕೂ ಉತ್ತಮ ಅಭ್ಯಾಸವಲ್ಲ. ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮನೆ ಬಿಟ್ಟು ಕಚೇರಿಗೆ ತೆರಳಿ ಕೆಲಸದಲ್ಲಿ ನಿರತರಾಗುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೆಳಗ್ಗಿನ ಆಹಾರ ಮಿದುಳಿಗೆ ಅಗತ್ಯ. ಎಲ್ಲೋ ಒಂದೆರಡು ದಿನ ಹೀಗೆ ಮಾಡಿದರೆ ಪರವಾಗಿಲ್ಲ. ಆದರೆ, ವರ್ಷಾನುಗಟ್ಟಲೆ ನಿರಂತರವಾಗಿ ಮಾಡಿದರೆ ದೇಹದ ಮಾಂಸಖಂಡಗಳು ಹಾಗೂ ಮಿದುಳಿಗೆ ಬೇಕಾದ ಶಕ್ತಿ ದೊರಕುವುದಿಲ್ಲ. ಇವುಗಳ ಕ್ಷಮತೆ ನಿಧಾನವಾಗಿ ಕ್ಷೀಣಿಸುತ್ತದೆ. ಜತೆಗೆ, ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ (diabetes), ಬೊಜ್ಜು (obecity) ಮತ್ತು ಅಧಿಕ ಕೊಬ್ಬಿನ ಶೇಖರಣೆಯಂಥ ಸಮಸ್ಯೆಗಳು ಉಂಟಾಗುತ್ತವೆ. ಇವು ಸ್ಟ್ರೋಕ್ ತರಬಲ್ಲವು.
ಲೇಟ್ ನೈಟ್ ಸ್ಲೀಪ್ (Sleep)
“ಬೇಗ ಮಲಗು, ಬೇಗ ಏಳು’ ಎನ್ನುವುದು ಭಾರತೀಯ ಜೀವನ ಪದ್ಧತಿಯಾಗಿತ್ತು. ಆದರೆ, ಈಗ ಬದುಕು ಬದಲಾಗಿದೆ. ಆಧುನಿಕ ಜೀವನ ರಾತ್ರಿಯ ನಿದ್ರೆಯ ಸಮಯವನ್ನು ನಮ್ಮಿಂದ ಕಸಿದುಕೊಂಡಿದೆ. ಆದರೆ, ಬೆಳಗ್ಗೆ ಅನಿವಾರ್ಯವಾಗಿ ಬೇಗ ಕೆಲಸ ಆರಂಭಿಸಲೇಬೇಕಾಗುತ್ತದೆ. ಆಗ ದೇಹಕ್ಕೆ ನಿದ್ರೆ ಸಾಕಾಗುವುದಿಲ್ಲ. ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಸರಿಯಾಗಿ ನಿದ್ರೆಯಿಲ್ಲದಿರುವುದು ಹಾಗೂ ರಾತ್ರಿ ತಡವಾಗಿ ಮಲಗುವ ಅಭ್ಯಾಸದಿಂದ ಹೃದ್ರೋಗ, ಮಧುಮೇಹ, ಸ್ಟ್ರೋಕ್, ಬೊಜ್ಜು ಹೆಚ್ಚಾಗುತ್ತದೆ.
ವಯಾಗ್ರ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತಾ?
ಹೆಚ್ಚು ಸಕ್ಕರೆ- ಉಪ್ಪು ಸೇವನೆ
ನಮಗೆ ಹೆಚ್ಚು ಹಾನಿಯುಂಟು ಮಾಡುವ ಪದಾರ್ಥಗಳಲ್ಲಿ ಸಕ್ಕರೆಯೂ ಒಂದು. ನೀವು ಟೀ ಅಥವಾ ಕಾಫಿ ಕುಡಿಯುವವರಾಗಿದ್ದರೆ ದಿನವೂ ಎಷ್ಟು ಕಪ್ ಕುಡಿಯುತ್ತೀರಿ? ಅದರೊಂದಿಗೆ ಪ್ರತಿ ಒಂದು ಲೋಟಕ್ಕೆ ಒಂದು ಚಮಚ ಸಕ್ಕರೆಯನ್ನೂ ಸೇವನೆ ಮಾಡುತ್ತಿರುತ್ತೀರಿ. ಹೀಗೆ ಮಾಡಿದರೆ, ತಿಂಗಳಿಗೆ ಎಷ್ಟು ಸಕ್ಕರೆ ಸೇವಿಸುತ್ತೀರಿ ಎಂದು ಲೆಕ್ಕಾಚಾರ ಹಾಕಿ. ಸಕ್ಕರೆ ಸೇವಿಸಿದಾಗ ಮಿದುಳು ಒಮ್ಮೆಲೆ ಚುರುಕಾದಂತೆ ಕಂಡುಬಂದರೂ ಕ್ಷಮತೆ ಕ್ರಮೇಣ ಕುಸಿಯುತ್ತದೆ. ಹೃದ್ರೋಗ, ಮಧುಮೇಹ, ಬೊಜ್ಜು, ಯಕೃತ್ತಿನ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ.
ಅಪಾಯಕಾರಿ ಅಗತ್ಯಕ್ಕಿಂತ ಹೆಚ್ಚು ನಿದ್ರೆ
ನಿದ್ರೆ ಕಡಿಮೆಯಾಗುವುದು ಎಷ್ಟು ಹಾನಿಕರವೋ ಅಷ್ಟೇ ಪ್ರಮಾಣದ ಹಾನಿ ನಿದ್ರೆ ಹೆಚ್ಚಾದರೂ ಸಂಭವಿಸುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಉತ್ತಮ ಎನ್ನುತ್ತದೆ ನಮ್ಮ ಆಯುರ್ವೇದ. ಆದರೆ, ಆ ಸಮಯದಲ್ಲಿ ಎದ್ದು ಕೆಲಸ ನಿರ್ವಹಿಸಲು ನಮಗೆ ಖಂಡಿತ ಸಾಧ್ಯವಾಗುವುದಿಲ್ಲ. ಆದರೆ ಕನಿಷ್ಠ ಸೂರ್ಯೋದಯದ ಸಮಯಕ್ಕಾದರೂ ಏಳಬೇಕು. ಏಳುವುದು ತಡವಾದಂತೆ ಮಿದುಳು ಆಲಸಿಯಾಗುತ್ತದೆ. ಇದರಿಂದ ಮಿದುಳಿನ ಕಾರ್ಯಕ್ಷಮತೆ ಕುಂದುತ್ತದೆ.
ಸ್ಕ್ರೀನ್ ಮತ್ತು ಆಹಾರ
ಟಿವಿ, ಮೊಬೈಲ್, ಕಂಪ್ಯೂಟರ್ ಎದುರು ತಿಂಡಿ, ಊಟ ಮಾಡುವುದು ಇಂದಿನ ದಿನಗಳಲ್ಲಿ ಅತಿ ಸಾಮಾನ್ಯ. ಚಿಕ್ಕ ಮಗುವೂ ಮೊಬೈಲ್ ನೋಡದೆ ಊಟ ಬೇಡವೆಂದು ಹಠ ಮಾಡುತ್ತದೆ. ಆದರೆ, ಈ ಅಭ್ಯಾಸ ಮಿದುಳಿಗೆ ತೊಂದರೆ ಒಡ್ಡುತ್ತದೆ. ಈ ಸಮಯದಲ್ಲಿ ಮಿದುಳಿಗೆ ತಪ್ಪಾದ ಸಂದೇಶ ರವಾನೆಯಾಗುತ್ತದೆ. ಹೆಚ್ಚು ತಿನ್ನುವುದು ರೂಢಿಯಾಗುತ್ತದೆ. ಆಹಾರವನ್ನು ಆಸ್ವಾದಿಸದೆ ಸೇವನೆ ಮಾಡುವ ಪರಿಪಾಠ ಆರಂಭವಾಗುತ್ತದೆ. ಖುಷಿಯಿಂದ ಆಹಾರ ಸೇವಿಸಿದರೆ ಕರುಳು ಆರೋಗ್ಯಪೂರ್ಣವಾಗಿರುತ್ತದೆ. ಇಲ್ಲವಾದರೆ ಕರುಳು ಹಾನಿಗೊಳಗಾಗುತ್ತದೆ. ಈ ಅಭ್ಯಾಸ ಮಿದುಳಿನ ಸ್ಟ್ರೋಕ್ ತರಬಲ್ಲದು.
ಆರು ಗಂಟೆಗಿಂತ ಹೆಚ್ಚಿಗೆ ನಿದ್ರಿಸೋದು ಒಳ್ಳೇಯದಲ್ವಂತೆ
ಮೂತ್ರ ಬಂದಂತಾದರೂ ತಡೆಹಿಡಿದಿಟ್ಟುಕೊಳ್ಳುವ ಅಭ್ಯಾಸದಿಂದ ತೊಂದರೆ ತಪ್ಪಿದ್ದಲ್ಲ. ಇದರಿಂದಲೂ ಮಿದುಳಿಗೆ ಹಾನಿಯಾಗುತ್ತದೆ ಎನ್ನಲಾಗಿದೆ.