Viagra reduces Alzheimer's risk: ವಯಾಗ್ರದಿಂದ ಅಲ್ಝೈಮರ್ ಅಪಾಯ ಕಡಿಮೆ
ವಯಾಗ್ರದ (Viagra) ಪ್ರಯೋಜನಗಳ ಬಗ್ಗೆ ಅಮೆರಿಕದ ವಿಜ್ಞಾನಿಗಳು ಹೊಸ ಮಾಹಿತಿ ನೀಡಿದ್ದಾರೆ. ವಯಾಗ್ರವನ್ನು ತೆಗೆದುಕೊಳ್ಳುವುದರಿಂದ ನಪುಂಸಕತೆಗೆ ಪ್ರಯೋಜನವಾಗುವುದಲ್ಲದೆ, ಅಲ್ಝೈಮರ್ (Alzheimer ) ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಯು.ಎಸ್.ನ ಕ್ಲೀವ್ ಲ್ಯಾಂಡ್ ಕ್ಲಿನಿಕ್ ನ (USA cleave land clinic) ಸಂಶೋಧಕರು 7 ಮಿಲಿಯನ್ ಅಮೆರಿಕನ್ನರ ವೈದ್ಯಕೀಯ ದತ್ತಾಂಶವನ್ನು ಪರಿಶೀಲಿಸಿದರು ಮತ್ತು ಆರು ವರ್ಷಗಳವರೆಗೆ ಅವರನ್ನು ಪರೀಕ್ಷೆ ಮಾಡಿದರು. ವಯಾಗ್ರ ತೆಗೆದುಕೊಂಡ ಯುವಜನರು ಔಷಧವನ್ನು ಬಳಸದವರಿಗಿಂತ ಅಲ್ಝೈಮರ್ ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಶೇಕಡಾ 69 ರಷ್ಟು ಕಡಿಮೆ ಎಂದು ಫಲಿತಾಂಶಗಳು ತೋರಿಸಿವೆ.
ಇದು ಹೇಗೆ ಕೆಲಸ ಮಾಡುತ್ತದೆ?
ವಿಜ್ಞಾನಿಗಳ ಪ್ರಕಾರ, ನಪುಂಸಕತೆ ಮತ್ತು ಅಧಿಕ ರಕ್ತದೊತ್ತಡಕ್ಕೆ (blood pressure) ಚಿಕಿತ್ಸೆ ನೀಡಲು ಬಳಸುವ ಸಿಲ್ಡೆನಾಫಿಲ್ ಸಹ ಅಲ್ಝೈಮರ್ ವಿರುದ್ಧ ಪರಿಣಾಮಕಾರಿ. ಪ್ರಮುಖ ಸಂಶೋಧಕ ಡಾ. ಫಿಕ್ಸಿಯಾಂಗ್ ಚೆಂಗ್ ಅವರು ಔಷಧವು ಅಲ್ಝೈಮರ್ ಅನ್ನು ತಡೆಯಬಹುದು ಆದರೆ ಅದು ನಿಜವಾಗಿಯೂ ಅಲ್ಝೈಮರ್ ಅನ್ನು ಸರಿಪಡಿಸಬಹುದೇ ಎಂದು ಇನ್ನೂ ದೃಢಪಡಿಸಿಲ್ಲ ಎಂದು ಹೇಳಿದರು.
ವಯಾಗ್ರ ಇದು ಮೆದುಳಿನ ಜೀವಕೋಶದ (brain cel) ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನಲ್ಲಿ ಹಾನಿಕಾರಕ ಪ್ರೋಟೀನ್ಸ್ ರಚನೆಯನ್ನು ತಡೆಯುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬರುವ ವಿಭಿನ್ನ ಲ್ಯಾಬ್ ಯೋಜನೆಗಳು ತಿಳಿಸಿವೆ.
ಅಲ್ಝೈಮರ್ ಒಂದು ದೊಡ್ಡ ಸಮಸ್ಯೆಯಾಗುತ್ತಿದೆ
ಇಂದಿನ ಜಗತ್ತಿನಲ್ಲಿ ಅಲ್ಝೈಮರ್ ಒಂದು ದೊಡ್ಡ ಸಮಸ್ಯೆಯಾಗುತ್ತಿದೆ. ಯುಕೆಯಲ್ಲಿ ಅರ್ಧ ದಶಲಕ್ಷಕ್ಕೂ ಹೆಚ್ಚು ಜನರು ಅದರಿಂದ ಬಳಲುತ್ತಿದ್ದಾರೆ, ಇದು 2040 ರ ವೇಳೆಗೆ 1.6 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಯು.ಎಸ್.ನಲ್ಲಿ 6 ದಶಲಕ್ಷಕ್ಕೂ ಹೆಚ್ಚು ಜನರು ಅಲ್ಝೈಮರ್ ಹೊಂದಿದ್ದರೆ, ಮುಂದಿನ 20 ವರ್ಷಗಳಲ್ಲಿ ದರವು ದ್ವಿಗುಣವಾಗುವ ನಿರೀಕ್ಷೆಯಿದೆ. ಪ್ರಸ್ತುತ ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಆದರೆ ಕೆಲವು ಸುಧಾರಣೆಗೆ ಖಂಡಿತವಾಗಿಯೂ ಔಷಧಿಗಳಿವೆ. ಅವುಗಳ ಬಗ್ಗೆ ನೀವು ತಿಳಿದುಕೊಂಡಿರುವುದು ಉತ್ತಮ.
ಅಲ್ಝೈಮರ್ ನ (Alzheimer) ಕಾರಣಗಳು
ಕೆಲವು ಜನರಿಗೆ ಅಲ್ಝೈಮರ್ ಏಕೆ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಆನುವಂಶಿಕ ಕಾರಣಗಳು, ಧೂಮಪಾನ ಮತ್ತು ಅಧಿಕ ತೂಕವು (Over Weight) ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಅಲ್ಝೈಮರ್ ಕಾಯಿಲೆಯಲ್ಲಿ ರೋಗಿಗಳ ಮೆದುಳಿನಲ್ಲಿ ರಕ್ತ ಪರಿಚಲನೆಯೂ ಕಡಿಮೆಯಾಗುತ್ತದೆ, ಇದು ನರಕೋಶಗಳನ್ನು ಕೊಲ್ಲಬಹುದು.
ಸಿಲ್ಡೆನಾಫಿಲ್ ರಕ್ತನಾಳಗಳನ್ನು ವಿಸ್ತರಿಸುತ್ತದೆ ಮತ್ತು ಜನನಾಂಗಗಳಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಅಲ್ಝೈಮರ್ ಸಮಸ್ಯೆಗೆ ಕಾರಣವಾಗುವ ಅಂಶಗಳನ್ನು ಅವಾಯ್ಡ್ ಮಾಡಿ, ಉತ್ತಮ ಅರೋಗ್ಯ ಇರುವಂತೆ ನೋಡಿಕೊಳ್ಳಿ.