ಬ್ಯಾಡ್ ಕೊಲೆಸ್ಟ್ರಾಲ್ ಇದ್ರೆ ಡೇಂಜರ್, ನಿಮ್ಮ ರಕ್ತದಲ್ಲಿದು ಇದೆಯಾ ಚೆಕ್ ಮಾಡ್ಕೊಳ್ಳಿ!
ಬ್ಯಾಡ್ ಕೊಲೆಸ್ಟ್ರಾಲ್ ರಕ್ತದಲ್ಲಿದ್ದರೆ ತುಂಬ ಅಪಾಯ ಅಂತ ಡಾಕ್ಟರ್ ಹೇಳ್ತಾರೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ದೇಹದಲ್ಲಿ ಈ ಮಾರ್ಪಾಡು ಗೋಚರಿಸುತ್ತವೆ. ಈ ಥರ ಕಂಡ್ರೆ ಹುಷಾರಾಗಿರಿ.
ಖಾಸಗಿ ಕಂಪನಿಯಲ್ಲಿ ಸೀನಿಯರ್ ಹೆಚ್‌ಆರ್ ಆಗಿ ಕೆಲಸ ಮಾಡೋ ಸಂದೀಪ್ ಗೆ ಐವತ್ತರ ಹರೆಯ. ಎಕ್ಸರ್‌ಸೈಸ್, ಡಯೆಟ್‌ನಲ್ಲಿ ಎಲ್ಲ ಸ್ಟ್ರಿಕ್ಟ್ ಆಗಿರಬೇಕು ಅಂತ ಪ್ರತಿದಿನ ಅಂದುಕೊಳ್ಳೋದೇ ಆಯ್ತು. ಯಾವತ್ತೂ ಅದು ಮರುದಿನಕ್ಕೆ ಪೋಸ್ಟ್ ಪೋನ್ ಆಗುತ್ತೆ. ಆ ಒಳ್ಳೇದಿನ ಈವರೆಗೆ ಬಂದೇ ಇಲ್ಲ. ಇನ್ಮೇಲೆ ಬಂದರೂ ಪ್ರಯೋಜನ ಇಲ್ಲ. ಏಕೆಂದರೆ ಎಕ್ಸರ್‌ಸೈಸ್ ಮಾಡೋಕೆ ಆ ವ್ಯಕ್ತಿಯೇ ಇಲ್ಲ! ಹಾರ್ಟ್ ಅಟ್ಯಾಕ್ ನಿಂದ ಕಳೆದ ರಾತ್ರಿ ಇಹಲೋಹ ತ್ಯಜಿಸಿದ್ದಾರೆ.. ಈ ಕ್ಷಣಕ್ಕೆ ಇದು ನಗೆ ತರಿಸಬಹುದು, ಆದರೆ ನಮಗೆ ಅಥವಾ ನಮ್ಮ ಆತ್ಮೀಯರಿಗೆ ಹೀಗಾದರೆ ಹೇಗಿರುತ್ತೆ ಅಂತ ಸಣ್ಣ ಇಮ್ಯಾಜಿನೇಶನ್ ಮಾಡ್ಕೊಂಡರೂ ಆ ನಗೆ ಮಾಯವಾಗಿ ಸೀರಿಯಸ್ ನೆಸ್ ಬರುತ್ತೆ. ಆತಂಕ ಕಾಡುತ್ತೆ. ಯಾರಿಗೂ ಎಲ್ಲೋ ಏನೋ ಆಯ್ತು ಅನ್ನುವ ಕಾಡದ ಭಯ ನಮ್ಮವರಿಗೆ ನಮಗೆ ಆಗುತ್ತೆ ಅಂದಾಗ ಏಕಾಏಕಿ ಅಟ್ಯಾಕ್ ಮಾಡಿಬಿಡುತ್ತೆ.
ಇವರು ಅಂತಲ್ಲ, ಈ ಥರದ ಕೇಸಸ್‌ನ ನೀವು ನೋಡಿರಬಹುದು. ಆ ವ್ಯಕ್ತಿ ನಿನ್ನೆವರೆಗೂ ಚೆನ್ನಾಗಿಯೇ ಉದ್ದರು, ಏನಾಯ್ತೋ ಗೊತ್ತಿಲ್ಲ, ಸಡನ್ನಾಗಿ ಹಾರ್ಟ್ ಅಟಾಕ್ ಆಗಿ ಹೋಗಿಬಿಟ್ಟರು ಅಂತಲೋ, ನಮ್ಮ ಸಂಬಂಧಿಕರೊಬ್ಬರು ಹೆಲ್ದಿಯಾಗೇ ಇದ್ದರು. ಲೈಫಲ್ಲಿ ಇನ್ನೇನು ಸೆಟಲ್ ಆಗ್ತಾ ಇದ್ರು. ತುಂಬ ಒಳ್ಳೆ ಜನ. ರಾತ್ರಿ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದರಂತೆ, ಅಲ್ಲೇ ಹಾರ್ಟ್ ಅಟ್ಯಾಕ್ ಆಯ್ತಂತೆ, ಆಸ್ಪತ್ರೆಗೆ ಹೋಗೋ ಮೊದಲೇ ಜೀವ ಹೋಯ್ತು ಅಂತಲೋ ಮಾತಾಡೋದು ಕೇಳಿರಬಹುದು. ನಾವೇ ಇಂಥಾ ಮಾತು ಆಡಿರಬಹುದು. ಇತ್ತೀಚೆಗೆ ಇಂಥಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದ್ಕೆ ಕಾರಣ ನಮ್ಮ ಜೀವನ ಶೈಲಿ. ಶಿಸ್ತಿಲ್ಲದ ಲೈಫ್‌ಸ್ಟೈಲ್‌ನಿಂದಾಗಿ, ರಕ್ತದಲ್ಲಿ ಶೇಖರಣೆಗೊಳ್ಳುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ರಕ್ತದ ಒತ್ತಡ ಹಾಗೂ ಹೃದಯದ ಕಾಯಿಲೆಗೆ ಕಾರಣವಾಗಿ ಬಿಡುತ್ತದೆ. ಹೀಗಾಗಿ ಬಿಪಿ ಶುಗರ್ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಾಗ ಕೊಲೆಸ್ಟ್ರಾಲ್ ಪರೀಕ್ಷೆಯನ್ನು ಕೂಡ ಮಾಡಿ ಕೊಳ್ಳಬೇಕು.
Health Tips: ಕ್ಯಾನ್ಸರ್ ವಿರುದ್ಧ ಹೋರಾಡುವ ಈರುಳ್ಳಿ ಹೆಚ್ಚು ತಿಂದ್ರೂ ಅಪಾಯ!
ಬ್ಯಾಡ್ ಕೊಲೆಸ್ಟ್ರಾಲ್ ನಮ್ಮಲ್ಲಿದೆ ಅನ್ನೋದನ್ನು ಸೂಚಿಸೋ ಅನೇಕ ದೇಹ ಚಿಹ್ನೆಗಳಿವೆ. ಕಾಲಿನ ನರಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಸೇರಿ ಕೊಂಡಾಗ, ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ! ಇದರಿಂದಾಗಿ ಕಾಲುಗಳ ಸ್ನಾಯುಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸಿಗದೇ ಇರುವುದರಿಂದ, ಕಾಲುಗಳಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಕಾಲುಗಳನ್ನು ಎತ್ತಲು ಆಗದೇ ಇರುವುದು, ಸರಿಯಾಗಿ ನಡೆಯಲು ಆಗದೇ ಇರುವುದು, ಒಂದೆರಡು ಹೆಜ್ಜೆ ಹಾಕುವಾಗಲೇ ಕಾಲುಗಳ ಸ್ನಾಯುಗಳಲ್ಲಿ ಸೆಳೆತ ಕಂಡು ಬರುವುದು ಇತ್ಯಾದಿ ಲಕ್ಷಣ ಕಾಣಿಸಬಹುದು. ಇಂಥಾ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಈ ಸಮಸ್ಯೆ ಕಾಲಿನ ಇತರ ಅಂಗಗಳಾದ ತೊಡೆ, ಮೀನ ಖಂಡಗಳಲ್ಲಿಯೂ ಆವರಿಸಿ ಗಂಭೀರವಾಗುವ ಸಾಧ್ಯತೆ ಇದೆ. ಉಗುರುಗಳ ಬಣ್ಣ ಬದಲಾಗುವುದು, ದೇಹದ ಚರ್ಮ ಬಿಳಿಚಿಕೊಂಡು ತುರಿಕೆಯಂತಹ ಸಮಸ್ಯೆಗಳು ಕಂಡು ಬರುವುದು ಇತ್ಯಾದಿ ಲಕ್ಷಣಗಳೂ ಇವೆ.
ಚಳಿಗಾಲದಲ್ಲಿ ಪಾದಗಳು ತಣ್ಣಗಾಗುವಂತೆ, ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿರುವ ವ್ಯಕ್ತಿಯ ಪಾದಗಳು ಎಲ್ಲಾ ದಿನ ತಣ್ಣಗೇ ಇರುತ್ತವೆ. ರಕ್ತದಲ್ಲಿ ಕೊಲೆಸ್ಟ್ರಾಲ್(Cholesterrol) ಪ್ರಮಾಣ, ಹೆಚ್ಚಾಗುತ್ತಾ ಹೋದಂತೆ, ಕೈ ಹಾಗೂ ಕಾಲಿನ ಬೆರಳುಗಳಲ್ಲಿ ವಿಪರೀತ ನೋವು ಪ್ರಾರಂಭವಾಗುತ್ತದೆ.
ಕೈಕಾಲುಗಳ ಬೆರಳುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಇಲ್ಲಾಂದ್ರೆ ನೋವಿನ ಅನುಭವ(Experience) ಉಂಟಾಗುತ್ತದೆ. ಅವರಿಗೆ ಕೈಗಳ ಅಂಗೈ ಭಾಗದಲ್ಲಿ ಹಳದಿ ಬಣ್ಣದ ಲಕ್ಷಣಗಳು(Symptoms) ಕಂಡು ಬರುತ್ತದೆ. ಇನ್ನೂ ಕೆಲವರಲ್ಲಿ ಕಣ್ಣುಗಳ ಭಾಗದಲ್ಲಿಯೂ ಕೂಡ ಇಂತಹ ಸಮಸ್ಯೆಗಳು ಕಂಡು ಬರುತ್ತದೆ.
ಇದರಿಂದ ಹೃದಯಾಘಾತವೂ ಸಂಭವಿಸಬಹುದು. ಹೀಗಾಗಿ ರಕ್ತಪರೀಕ್ಷೆ ಮಾಡಿಸುವಾಗ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿ. ಜೀವನಶೈಲಿಯನ್ನ ಆರೋಗ್ಯಕರವಾಗಿಡಿ. ಆಗ ಬದುಕೂ(Life) ಚೆನ್ನಾಗಿರುತ್ತೆ.
ಕಿಡ್ನಿ ಸ್ಟೋನ್ ಗಿಂತ ಭೀಕರವಾಗಿರುತ್ತೆ ಪಿತ್ತಕೋಶದ ಕಲ್ಲು… ಮನೆಮದ್ದು ಇಲ್ಲಿವೆ