Chewing Gum ಬಳಕೆಯಾಗಿರುವ ಚೇವಿಂಗ್ ಗಮ್ ಮತ್ತೆ ಮರುಬಳಕೆ ಮಾಡಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ್ರೆ ಚೇವಿಂಗ್ ಗಮ್ ತಿನ್ನಲು ನೂರು ಬಾರಿ ಯೋಚಿಸಬೇಕಾಗುತ್ತದೆ. ಚೇವಿಂಗ್ ಗಮ್ ಅಗಿಯುವಾಗ ಮೊದಲು ಸ್ವೀಟ್‌ನೆಸ್ ಬರುತ್ತೆ. ನಂತರ ಅದು ಕೇವಲ ರಬ್ಬರ್ ಆಗುತ್ತದೆ.

ಕೆಲವರಿಗೆ ಚೇವಿಂಗ್ ಗಮ್ ತಿನ್ನೋ ಅಭ್ಯಾಸ ಇರುತ್ತದೆ. ಒಂದು ನಿಮಿಷವೂ ಇವರ ಬಾಯಿ ಖಾಲಿ ಇರಲ್ಲ. ಜೇಬಿನಲ್ಲಿ ಏಳೆಂದು ಚೇವಿಂಗ್ ಗಮ್ ಪ್ಯಾಕ್ (Chewing Gum) ಇಟ್ಟುಕೊಂಡಿರುತ್ತಾರೆ. ಕೆಲವರು ಟೈಮ್ ಪಾಸ್‌ಗಾಗಿ ಚೇವಿಂಗ್ ಗಮ್ ಅಗೆಯುತ್ತಿರುತ್ತಾರೆ. ಇನ್ನು ಒಂದಿಷ್ಟು ವರ್ಗದ ಜನತೆ ಅಪರೂಪಕ್ಕೆ ಎಂಬಂತೆ, ಮತ್ತೊಂದಿಷ್ಟು ಜನರು ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಚೇವಿಂಗ್ ಗಮ್ ಬಳಕೆ ಮಾಡುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಚೇವಿಂಗ್ ಗಮ್ ಸಿಗುತ್ತವೆ. ಅದರಲ್ಲಿಯೂ ಕ್ರೀಡಾಪಟುಗಳ ಚೇವಿಂಗ್ ಗಮ್ ಬಳಕೆ ಮಾಡೋದು ಹೆಚ್ಚು ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಚೇವಿಂಗ್ ಗಮ್ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ ಈ ವಿಡಿಯೋವನ್ನು ಒಮ್ಮೆ ನೋಡಿ.

ಬಳಕೆಯಾಗಿರುವ ಚೇವಿಂಗ್ ಗಮ್ ಮತ್ತೆ ಮರುಬಳಕೆ ಮಾಡಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನೋಡಿದ್ರೆ ಚೇವಿಂಗ್ ಗಮ್ ತಿನ್ನಲು ನೂರು ಬಾರಿ ಯೋಚಿಸಬೇಕಾಗುತ್ತದೆ. ಚೇವಿಂಗ್ ಗಮ್ ಅಗಿಯುವಾಗ ಮೊದಲು ಸ್ವೀಟ್‌ನೆಸ್ ಬರುತ್ತೆ. ನಂತರ ಅದು ಕೇವಲ ರಬ್ಬರ್ ಆಗುತ್ತದೆ. ತುಂಬಾ ಸಮಯದವರೆಗೆ ಜಗಿದ ಬಳಿಕ ಅದನ್ನು ಉಗುಳುತ್ತಾರೆ. ಈ ವಿಡಿಯೋದಲ್ಲಿ ಜನರು ಉಗುಳಿದ ಚೇವಿಂಗ್ ಗಮ್ ಬಳಸಿದ್ದಾನೆ. 

ವೈರಲ್ ವಿಡಿಯೋದಲ್ಲಿ ಏನಿದೆ? 

ವೈಲ್ಡ್ ಕ್ಲಿಪ್ (@bestwildclips) ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ವ್ಯಕ್ತಿಯೋರ್ವ ರಸ್ತೆಯಲ್ಲಿ ಜನರು ಉಗುಳಿರುವ ಚೇವಿಂಗ್ ಗಮ್ ಪ್ಯಾಕೇಟ್‌ನಲ್ಲಿ ಸಂಗ್ರಹಿಸುತ್ತಾರೆ. ನಂತರ ಎಲ್ಲಾ ಚೇವಿಂಗ್ ಒಂದೆಡೆ ಹಾಕಿ, ನೀರಿನಲ್ಲಿ ತೊಳೆದುಕೊಳ್ಳುತ್ತಾನೆ. ನಂತರ ಅದಕ್ಕೆ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಎಲ್ಲಾ ಚೇವಿಂಗ್ ಗಮ್ ಉಂಡೆಯನ್ನಾಗಿ ಮಾಡುತ್ತಾನೆ. ನಂತರ ಮಷಿನ್‌ಗೆ ಹಾಕಿ ಚಿಕ್ಕ ಚಿಕ್ಕ ಪೀಸ್ ಮಾಡುತ್ತಾನೆ. ಆ ಬಳಿಕ ರ್ಯಾಪರ್‌ನಲ್ಲಿ ಸುತ್ತಿ ಫ್ರಿಡ್ಜ್‌ನಲ್ಲಿ ಇರಿಸುತ್ತಾನೆ. 

ಉಜ್ಜಿ ಉಜ್ಜಿ ಸಾಕಾಗಿದ್ಯಾ? ಹೀಗೆ ಮಾಡಿದ್ರೆ ಟಾಯ್ಲೆಟ್ ಕಮೋಡ್ ಫಳ ಫಳ ಅಂತ ಹೊಳೆಯುತ್ತೆ!

ಈ ವಿಡಿಯೋವನ್ನು ಜೂನ್ 1ರಂದು ಅಪ್ಲೋಡ್ ಮಾಡಲಾಗಿದ್ದು, 60 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. 9.7 ಸಾವಿರ ರೀ ಟ್ವೀಟ್, 1.7 ಸಾವಿರ ಕಮೆಂಟ್ ಬಂದಿದೆ. ನೆಟ್ಟಿಗರು ಈ ವ್ಯಕ್ತಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ವಿಡಿಯೋ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ರೀತಿ ಮಾಡೋದು ದೊಡ್ಡ ಅಪರಾಧ ಅಂದ್ರೆ ಕೆಲವರು ತಮಾಷೆಗಾಗಿಯೂ ಈ ವಿಡಿಯೋ ಮಾಡಿರಬಹುದು ಎಂದು ಅಂದಾಜಿಸಿದ್ದಾರೆ. 

Scroll to load tweet…

ಚೇವಿಂಗ್ ಗಮ್ ಅಗೆಯೋದರಿಂದಿವೆ ಲಾಭಗಳು 

1.ಸುಮಾರು ಒಂದು ಗಂಟೆ ಚೇವಿಂಗ್ ಗಮ್ ಜಗಿದರೆ 11 ಕ್ಯಾಲೋರಿ ಬರ್ನ್ ಆಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಒಂದು ವೇಳೆ ಅತಿಯಾದ ನಿದ್ದೆ ಬರುತ್ತಿದ್ರೆ ಚೇವಿಂಗ್ ಗಮ್ ಅಗೆಯಲು ಸಲಹೆ ನೀಡಲಾಗುತ್ತದೆ. 

2.ಚೇವಿಂಗ್ ಗಮ್ ಅಗೆಯೋದರಿಂದ ಬಾಯಿಯಲ್ಲಿ ಹೆಚ್ಚು ಲಾಲಾರಸ ಉತ್ಪಾದನೆಯಾಗುತ್ತದೆ. ಇದರಿಂದ ದುರ್ವಾಸನೆಯಂತಹ ಸಮಸ್ಯೆಗಳು ದೂರವಾಗುತ್ತವೆ. ಬಾಯಿಯ ಸವಡುಗಳು ಆರೋಗ್ಯವಾಗಿರುತ್ತವೆ. 

ನೀರು, ಹಾಲು ಬೇಕಾಬಿಟ್ಟಿ ಕುಡಿಬೇಡಿ, ಮೂಳೆಗಳನ್ನೇ ಹಾಳು ಮಾಡುತ್ತೆ ಹುಷಾರ್!

3.ಅತಿಯಾದ ಲಾಲಾರಸ ಉತ್ಪಾದನೆ ಹಲ್ಲು ಮತ್ತು ಬಾಯಿಗೆ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೆಚ್ಚು ಮಾಡುತ್ತದೆ. ಲಾಲಾರಸದಲ್ಲಿ ಕೆಲವು ಜೀವಸತ್ವಗಳು ಕರಗುತ್ತವೆ. ಲಾಲಾರಸದಲ್ಲಿ ಜೀವಸತ್ವಗಳು ಕರೋಗದರಿಂದ ಅದು ಬೇಗ ಕರುಳಿನ ವ್ಯವಸ್ಥೆಯನ್ನು ತಲುಪುತ್ತವೆ.