ನೀರು, ಹಾಲು ಬೇಕಾಬಿಟ್ಟಿ ಕುಡಿಬೇಡಿ, ಮೂಳೆಗಳನ್ನೇ ಹಾಳು ಮಾಡುತ್ತೆ ಹುಷಾರ್!
ಸುಡು ಬಿಸಿಲಿನ ವಿರುದ್ಧ ಹೋರಾಡಲು ನೀವು ನೀರನ್ನು ಕುಡಿಯುವುದೇನೋ ಸರಿ, ಆದರೆ ಅದನ್ನು ಮಾಡುವ ಸರಿಯಾದ ಮಾರ್ಗ ತಿಳಿಯಿರಿ. ನೀರು ಮತ್ತು ಹಾಲನ್ನು ತಪ್ಪು ರೀತಿಯಲ್ಲಿ ಕುಡಿಯುವುದು ದೇಹಕ್ಕೆ ಹಾನಿಕಾರಕ. ಇದು ನಿಮ್ಮ ಮೂಳೆಗಳನ್ನು ಹಾನಿಗೊಳಿಸಬಹುದು.
ಬಿಸಿಲು ಹೆಚ್ಚುತ್ತಿರುವಾಗ, ದೇಹದಲ್ಲಿ ಶಾಖ ಹೆಚ್ಚುತ್ತದೆ, ಇದರಿಂದ ಡಿಹೈಡ್ರೇಶನ್ (Dehydration) ಆಗೋದು ಸಾಮಾನ್ಯ. ಇದನ್ನು ತಪ್ಪಿಸಲು ಹೆಚ್ಚು ನೀರು ಕುಡಿಯ ಬೇಕು. ಆದರೆ ಇದನ್ನು ಮಾಡುವಾಗ ಒಬ್ಬರು ಸಾಕಷ್ಟು ಜಾಗರೂಕರಾಗಿರಬೇಕು. ನೀರನ್ನು ತಪ್ಪಾದ ರೀತಿಯಲ್ಲಿ ಕುಡಿಯುವುದರಿಂದ ಹಾನಿಯಾಗುತ್ತದೆ. ಇದು ನಿಮ್ಮ ಮೂಳೆಗಳು ವಕ್ರವಾಗಲು ಕಾರಣವಾಗುತ್ತದೆ. ಆದರೆ ಇದರ ಬಗ್ಗೆ ನಿಮಗೆ ತಿಳಿದಿರೋದಿಲ್ಲ. ಐಸಿಎಂಆರ್ (ICMR) ಭಾರತೀಯರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ, ನೀರನ್ನು ಯಾವ ರೀತಿ ಕುಡಿಯಬೇಕು ಅನ್ನೋದನ್ನು ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮೇ 7 ರಂದು ಭಾರತೀಯರಿಗೆ ಆರೋಗ್ಯಕರ ಆಹಾರಕ್ಕೆ ಸಂಬಂಧಿಸಿದ 17 ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಉತ್ತಮ ಪಾನೀಯಗಳ ಬಗ್ಗೆಯೂ ಹೇಳುತ್ತದೆ. ಅಲ್ಲದೆ, ನೀರು ಮತ್ತು ಹಾಲು ಕುಡಿಯಲು ಸರಿಯಾದ ಮಾರ್ಗವನ್ನು ಸಹ ಸೂಚಿಸಿದೆ.
ನೀರು ಕುಡಿಯಲು ಸರಿಯಾದ ವಿಧಾನ
ಐಸಿಎಂಆರ್ ಪ್ರಕಾರ, ಆರೋಗ್ಯವಂತ ವ್ಯಕ್ತಿಯು (healthy person) ದಿನಕ್ಕೆ ಸುಮಾರು 8 ಲೀಟರ್ ನೀರು ತೆಗೆದುಕೊಳ್ಳಬೇಕು. ಆದರೆ ದೀರ್ಘಕಾಲದವರೆಗೆ ಅತಿಯಾದ ಫ್ಲೋರೋಸಿಸ್ ನೀರನ್ನು ಕುಡಿಯುವುದರಿಂದ ಮೂಳೆ ಕಾಯಿಲೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ, ಕನಿಷ್ಠ 10-15 ನಿಮಿಷಗಳ ಕಾಲ ನೀರನ್ನು ಕುದಿಸಿ , ಆರಿಸಿ ಕುಡಿಯಿರಿ.
ಹಾಲು ಕುಡಿಯಲು ಸರಿಯಾದ ವಿಧಾನ
ಐಸಿಎಂಆರ್ ಪ್ರಕಾರ, ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಹಾಲು ಕುಡಿಯಬೇಕು. ಇದರಲ್ಲಿ ಕ್ಯಾಲ್ಸಿಯಂ (Calcium) ಇರುತ್ತದೆ. ಇದರ ಮ್ಯಾಕ್ರೋ ಮತ್ತು ಸೂಕ್ಷ್ಮ ಪೋಷಕಾಂಶಗಳು ಸುಲಭವಾಗಿ ಜೀರ್ಣವಾಗುತ್ತವೆ (digestion) ಮತ್ತು ಇದು ಮನುಷ್ಯನ ಬೆಳವಣಿಗೆಗೆ ಮುಖ್ಯ. ಆದರೆ ನೀವು ಪ್ಯಾಶ್ಚರೀಕರಿಸಿದ ಅಥವಾ ಕುದಿಸಿದ ಹಾಲನ್ನು ಕುಡಿಯಬೇಕು ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಅಪಾಯ ತಪ್ಪಿಸಬಹುದು.
ಕಬ್ಬಿನ ರಸವನ್ನು ಮಿತಿಯಲ್ಲಿ ಕುಡಿಯಿರಿ
ಶಾಖದಿಂದ, ಜನರು ಕಬ್ಬಿನ ಜ್ಯೂಸ್ (Sugarcane juice) ಕುಡಿಯುತ್ತಾರೆ. ಇದು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತದೆ, ಹಾಗಾಗಿ ಇದು ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅದನ್ನು ಮಿತಿಯಲ್ಲಿ ಕುಡಿಯಿರಿ. ಅಲ್ಲದೆ, ಫ್ರೆಶ್ ಹಣ್ಣುಗಳ ಜ್ಯೂಸ್ ಕೂಡ ನಿಯಮಿತವಾಗಿ ಕುಡಿಯುವುದು ಉತ್ತಮ, ಇದರಲ್ಲಿ ಹೆಚ್ಚುವರಿ ಸಕ್ಕರೆ ಕಂಡು ಬರುವುದಿಲ್ಲ. ಪ್ಯಾಕ್ ಮಾಡಿದ ಜ್ಯೂಸ್ ಯಾವತ್ತೂ ಕುಡಿಯಬೇಡಿ. ಅಲ್ಲದೇ ಹೆಚ್ಚಾಗಿ ಹಣ್ಣುಗಳನ್ನೇ ತಿನ್ನಲು ಪ್ರಯತ್ನಿಸಿ.
ಅತಿ ಚಹಾ ಮತ್ತು ಕಾಫಿ ಅಪಾಯ
ಚಹಾ ಮತ್ತು ಕಾಫಿಯನ್ನು (Tea and Coffee) ಕಡಿಮೆ ಕುಡಿಯಬೇಕು. ಇದರಲ್ಲಿ ಕೆಫೀನ್ ಇದ್ದು, ಇದು ಅತಿಯಾದ ಕೆಟ್ಟ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮತ್ತು ಹೃದ್ರೋಗಗಳ ಅಪಾಯ ಹೆಚ್ಚಿಸುತ್ತದೆ. ಅವುಗಳ ಟ್ಯಾನಿನ್ ದೇಹಕ್ಕೆ ಕಬ್ಬಿಣ ಸಿಗದಂತೆ ತಡೆಯುತ್ತವೆ. ಆದಾಗ್ಯೂ, ಅವುಗಳ ಸಮತೋಲಿತ ಸೇವನೆಯು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ, ಚಹಾ ಮತ್ತು ಕಾಫಿಗೆ ಹಾಲನ್ನು ಸೇರಿಸದೇ ಕುಡಿದರೆ ಉತ್ತಮ.
ಈ ವಸ್ತುವ ಮುಟ್ಟಬೇಡಿ
ಶಾಖದಿಂದ ಚೇತರಿಸಿಕೊಳ್ಳಲು ತಂಪು ಪಾನೀಯಗಳು ಅಥವಾ ಆಲ್ಕೊಹಾಲ್ (Alcohol) ಯುಕ್ತ ಪಾನೀಯಗಳನ್ನು ಸೇವಿಸಬಾರದು. ತಂಪು ಪಾನೀಯಗಳು ಫಾಸ್ಪರಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಮೂಳೆಗಳು ಮತ್ತು ಹಲ್ಲುಗಳ ದಂತ ಕವಚವನ್ನು ಹಾನಿಗೊಳಿಸುತ್ತದೆ. ಅತಿಯಾದ ಆಲ್ಕೊಹಾಲ್ ಯುಕ್ತ ಡ್ರಿಂಕ್ಸ್ ಬೊಜ್ಜಿಗೆ ಕಾರಣವಾಗುತ್ತವೆ. ಅಧಿಕ ರಕ್ತದೊತ್ತಡ (High Blood Pressure) ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.
ಬೇಸಿಗೆಯಲ್ಲಿ ಕುಡಿಯಲು 12 ಅತ್ಯುತ್ತಮ ಪಾನೀಯಗಳು
ನೀರು (Water)
ಹಾಲು (milk)
ಎಳನೀರು (Tender Coconut)
ಮೊಸರು, ಮಜ್ಜಿಗೆ (Curd, Butter Milk)
ತಾಜಾ ನಿಂಬೆರಸ (Lemon Juice)
ನಿಂಬೆರಸದಲ್ಲಿ ನೆನೆಸಿದ ಚಿಯಾ ಸೀಡ್ಸ್
ತಾಜಾ ಕಿತ್ತಳೆ ಜ್ಯೂಸ್ (Fresh Orange Juice)
ತಾಜಾ ಕಲ್ಲಂಗಡಿ ಜ್ಯೂಸ್ (Water Melon Juice)
ತಾಜಾ ಮಾವಿನ ಹಣ್ಣಿನ ಜ್ಯೂಸ್ (Fresh Mango Juice)
ತಾಜಾ ಅನಾನಸ್ ಜ್ಯೂಸ್ (Fresh Pineapple Juice)
ತಾಜಾ ದಾಳಿಂಬೆ ಜ್ಯೂಸ್
ತಾಜಾ ಸೇಬಿನ ಜ್ಯೂಸ್