Asianet Suvarna News Asianet Suvarna News

ತಲೆಸ್ನಾನ ಆದ ಕೂಡ್ಲೇ ಸಿಕ್ಕಾಪಟ್ಟೆ ತಲೆನೋವಾ ? ಕಾರಣವೇನು ತಿಳ್ಕೊಳ್ಳಿ

ಒತ್ತಡ, ಅನಿಯಮಿತ ಆಹಾರ ಪದ್ಧತಿ, ನಿದ್ರೆಯ ಕೊರತೆ ಹೀಗೆ ವಿವಿಧ ಕಾರಣಗಳಿಗಾಗಿ ತಲೆನೋವು ಸಂಭವಿಸಬಹುದು. ಆದರೆ ತಲೆಸ್ನಾನದ ನಂತರ ನೀವು ಎಂದಾದರೂ ತಲೆನೋವು ಅನುಭವಿಸಿದ್ದೀರಾ ? ಹಾಗಿದ್ರೆ ಅದಕ್ಕೇನು ಕಾರಣ, ಅದನ್ನು ಕಡಿಮೆ ಮಾಡ್ಕೊಳ್ಳೋದು ಹೇಗೆ ನಾವ್ ಹೇಳ್ತೀವಿ. 

Can Washing Your Hair Lead To A Headache, An Expert Weighs In Vin
Author
First Published Nov 6, 2022, 9:30 AM IST

ಇತ್ತೀಚಿನ ದಿನಗಳಲ್ಲಿ, ಒತ್ತಡ ಮತ್ತು ಉದ್ವೇಗದಿಂದಾಗಿ ತಲೆನೋವು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವು ಜನರಿಗೆ ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ತಲೆನೋವು ಉಂಟಾಗುತ್ತೆ. ಒತ್ತಡ, ಹದಗೆಟ್ಡ ವಾತಾವರಣ, ಆಹಾರ, ಕರ್ಕಶ ಶಬ್ದ ಹೀಗೆ ಹಲವು ವಿಚಾರಗಳು ತಲೆನೋವಿಗೆ ಕಾರಣವಾಗಬಹುದು. ಆದ್ರೆ ತಲೆಸ್ನಾನ ಮಾಡೋದ್ರಿಂದಲೂ ತಲೆನೋವು ಆಗ್ತಿರೋ ಅನುಭವ ನಿಮಗೆ ಯಾವತ್ತಾದ್ರೂ ಆಗಿದೆಯಾ ? ಕೂದಲಿನ ಸ್ವಚ್ಛತೆ (Clean) ಕಾಪಾಡಲು ನಿಯಮಿತವಾಗಿ ತಲೆ ಸ್ನಾನ ಮಾಡುವುದು ಮುಖ್ಯ. ಆದರೆ ಹೀಗೆ ತಲೆಸ್ನಾನ ಮಾಡುವುದರಿಂದಲೂ ಕೆಲವೊಬ್ಬರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ತಲೆಯ ಯಾವುದೇ ಪ್ರದೇಶದಲ್ಲಿ, ವಿಶೇಷವಾಗಿ ಕಿವಿಯ (Ear) ಹಿಂದೆ ಈ ನೋವನ್ನು ಅನುಭವಿಸಬಹುದು. ಇದು ಸಾಕಷ್ಟು ಅಸಾಮಾನ್ಯವಾಗಿದೆ ಆದರೆ ಅತ್ಯಂತ ಅಹಿತಕರವಾಗಿರುತ್ತದೆ.
 
ಕೂದಲನ್ನು ತೊಳೆಯುವುದು ಏಕೆ ತಲೆನೋವು ಉಂಟು ಮಾಡುತ್ತದೆ ?
ಕೂದಲನ್ನು ತೊಳೆಯುವುದರಿಂದ ಕಿವಿಯ ಹಿಂದೆ ನೋವು (Pain) ಉಂಟಾಗಬಹುದು. ಅದು ಮುಂದುವರಿದರೆ  ಹೆಚ್ಚು ಗಂಭೀರವಾದ ಯಾವುದೋ ಕಾಯಿಲೆಯ ಸಂಕೇತವಾಗಿರಬಹುದು. ಕೂದಲು ತೊಳೆಯುವುದು ಮೈಗ್ರೇನ್ ಅನ್ನು ಪ್ರಚೋದಿಸುವ ಒಂದು ಸಾಮಾನ್ಯ ಕಾರಣವಾಗಿದೆ, ವಿಶೇಷವಾಗಿ ಮಹಿಳೆಯರಲ್ಲಿ (Woman). ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ತಡೆಗಟ್ಟಲು ನೀವು ಏನು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು, ಮುಂಬೈನ ವೊಕಾರ್ಡ್ ಹಾಸ್ಪಿಟಲ್ಸ್ ಮೀರಾ ರೋಡ್‌ನಲ್ಲಿ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ನ್ಯೂರಾಲಜಿಸ್ಟ್ ಮತ್ತು ಪಾರ್ಶ್ವವಾಯು ತಜ್ಞ ಡಾ.ಪವನ್ ಪೈ ಮಾಹಿತಿ ನೀಡಿದ್ದಾರೆ.

ತಲೆ ನೋವಿದ್ಯಾ? ಏನೇನೋ ಔಷಧಿ ಮಾಡೋ ಮುನ್ನು ಈ ಮನೆ ಮದ್ದು ಟ್ರೈ ಮಾಡಿ

ಕೂದಲನ್ನು ತೊಳೆಯುವುದು ತಲೆನೋವು ಉಂಟುಮಾಡಬಹುದು. ಹೇರ್ ವಾಶ್ ಮೈಗ್ರೇನ್‌ಗಳು ಅಥವಾ ತಲೆ ಸ್ನಾನದ ನಂತರ ಪ್ರಾರಂಭವಾಗುವ ತಲೆನೋವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹೆಚ್ಚಿನ ಜನರು ಈ ರೀತಿಯ ತಲೆನೋವನ್ನು ಎದುರಿಸುತ್ತಾರೆ. ಉದ್ದನೆಯ ಕೂದಲನ್ನು ವಾರಕ್ಕೆ ಮೂರು ಬಾರಿ ತೊಳೆಯಲಾಗುತ್ತದೆ ಮತ್ತು ಒದ್ದೆಯಾದ ಜಡೆ ನೋವು ಮತ್ತು ಅಂತಿಮವಾಗಿ ಮೈಗ್ರೇನ್‌ಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ. ನಿರ್ಧಿಷ್ಟ ಅಧ್ಯಯನದಲ್ಲಿ ಭಾಗವಹಿಸಿದ 1500 ಭಾರತೀಯ ರೋಗಿಗಳಲ್ಲಿ 94 ಶೇಕಡಾ ಜನರಲ್ಲಿ ಇದು ಕಂಡುಬಂದಿದೆ. ಹೆಚ್ಚಿನ ಮಹಿಳೆಯರು ತಮ್ಮ ಕೂದಲನ್ನು ತೊಳೆದ ನಂತರ ತಲೆನೋವು ಅನುಭವಿಸುತ್ತಾರೆ ಎಂಬುದು ವರದಿಯಿಂದ ತಿಳಿದುಬಂದಿದೆ. 

ತಲೆನೋವಿನ ತೀವ್ರತೆಯು ವ್ಯಾಪಕವಾಗಿ ಬದಲಾಗುತ್ತದೆ. ನಿರಂತರ ಮೈಗ್ರೇನ್‌ನಿಂದಾಗಿ ಕೂದಲನ್ನು ಸ್ಪರ್ಶಿಸಲು ಸಹ ಒಬ್ಬರು ಗಾಬರಿಯಾಗಬಹುದು ಅಥವಾ ಭಯಪಡಬಹುದು. ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಒದ್ದೆಯಾಗಿರಿಸುವುದರಿಂದ (Wet) ತಲೆನೋವನ್ನು ಉಂಟುಮಾಡಬಹುದು. ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. 

Home Remedies: ಬೆಳಿಗ್ಗೆ ಕಾಡುವ ತಲೆನೋವನ್ನು ಹೀಗೆ ಗಾಯಬ್ ಮಾಡಿ

ಮೈಗ್ರೇನ್ ತಲೆನೋವು ನಿರ್ವಹಿಸಲು ಸಲಹೆಗಳು
-ಕೂದಲನ್ನು ಆಗಾಗ ತೊಳೆಯಬೇಡಿ.
-ಕೂದಲನ್ನು ತೊಳೆದ ನಂತರ ನೀವು ಮೈಗ್ರೇನ್ ಹೊಂದಿದ್ದರೆ, ನಂತರ ನಿಮ್ಮ ಔಷಧಿಗಳನ್ನು ಸಮಯಕ್ಕೆ ತೆಗೆದುಕೊಳ್ಳಿ.
-ತೊಳೆಯುವಾಗ ತಲೆಯನ್ನು ತುಂಬಾ ಗಟ್ಟಿಯಾಗಿ ಒತ್ತಬೇಡಿ.
-ಮೈಗ್ರೇನ್ ಅನ್ನು ನಿವಾರಿಸಲು ಕೋಲ್ಡ್ ಕಂಪ್ರೆಸ್ ಅನ್ನು ಆರಿಸಿಕೊಳ್ಳಿ.
-ತಲೆನೋವು ತಪ್ಪಿಸಲು ಸಾಕಷ್ಟು ನೀರು ಕುಡಿಯಲು ಪ್ರಯತ್ನಿಸಿ.
-ತಲೆನೋವು ಇದ್ದಾಗ ಕೆಫೀನ್ ಅನ್ನು ತಪ್ಪಿಸಿ.
-ಮೈಗ್ರೇನ್ ತಪ್ಪಿಸಲು ನಿಯಮಿತವಾಗಿ ವ್ಯಾಯಾಮ ಮಾಡಿ.
-ಒತ್ತಡಕ್ಕೆ ಒಳಗಾಗಬೇಡಿ ಮತ್ತು ತಲೆನೋವಿನ ನಂತರ ನಿಮ್ಮ ಶಾಂತತೆಯನ್ನು ಕಾಪಾಡಿಕೊಳ್ಳಿ
-ತಲೆನೋವಿನ ನಂತರ ನಿಮ್ಮನ್ನು ತೀವ್ರ ಬೆಳಕಿಗೆ ಒಡ್ಡಿಕೊಳ್ಳಬೇಡಿ.
-ರಕ್ತ ಪರಿಚಲನೆ ಸುಧಾರಿಸಲು ಮತ್ತು ಒತ್ತಡವನ್ನು ನಿವಾರಿಸಲು ಉಸಿರಾಟದ ವ್ಯಾಯಾಮ ಮಾಡಲು ಮರೆಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

Follow Us:
Download App:
  • android
  • ios