Asianet Suvarna News Asianet Suvarna News

ದುರಹಂಕಾರಿ ಆಗಿದ್ದೆ, ಆಡಿಯನ್ಸ್‌ ಮಾತು ಕೇಳದೆ ತಪ್ಪು ಮಾಡಿದೆ: ವರುಣ್ ಧವನ್ ಬೇಸರ

10 ವರ್ಷ ಸಿನಿ ಜರ್ನಿ ಪೂರೈಸಿದ ವರುಣ್ ಧವನ್. ಭೇದಿಯ ಚಿತ್ರೀಕರಣದಲ್ಲಿ ಒಂದು ದಿನವೂ ನಕ್ಕಿಲ್ಲ...
 

Varun Dhawan completes 10 years of cini journey says i was arrogant vcs
Author
First Published Oct 20, 2022, 4:39 PM IST

ಬಾಲಿವುಡ್‌ ಚಿತ್ರರಂಗದಲ್ಲಿ ಕಾಲೇಜ್‌ ಹುಡುಗರಿಗೆ ಸಖತ್ ಇಷ್ಟವಾದಂತ ಕಥೆ ಸ್ಟುಡೆಂಟ್ ಆಫ್‌ ದಿ ಇಯರ್. 60 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆದಂತ ಈ ಚಿತ್ರದ ಮೂಲಕ ಆಲಿಯಾ ಭಟ್, ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಿ-ಟೌನ್‌ಗೆ ಎಂಟ್ರಿ ಕೊಟ್ಟರು. ಇಂದಿನ ಸಿನಿಮಾ ಬಿಡುಗಡೆಯಾಗಿ 10 ವರ್ಷ ಪೂರೈಸಿದೆ ಅಂದ್ರೆ ಈ ಮೂವರು ಸಿನಿ ಜರ್ನಿ ಆರಂಭಿಸಿ 10 ವರ್ಷಗಳು ಕಳೆದಿದೆ. ಈ ಜರ್ನಿಯಲ್ಲಿ ವರುಣ್ ಏನೆಲ್ಲಾ ಬದಲಾವಣೆ ಮಾಡಿಕೊಂಡಿದ್ದಾರೆ ಹೇಗೆದೆ ಜರ್ನಿ ಎಂದು ಮಾತನಾಡಿದ್ದಾರೆ. 

'ಜರ್ನಿ ಆರಂಭಿಸಿದ ದಿನದಿಂದಲ್ಲೂ ನಾನು ವೀಕ್ಷಕರು ಹೇಳುವ ಮಾತುಗಳಿಗೆ ಕಿವಿ ಕೊಡುತ್ತಿದ್ದೆ. ನಾನೇನು ಎಲ್ಲಾ ಸಿನಿಮಾಗಳಲ್ಲೂ ಸೂಪರ್ ಡೂಪರ್ ಆಗಿ ಕೆಲಸ ಮಾಡಿಲ್ಲ ಆದರೆ ಪ್ರತಿ ಸಿನಿಮಾ ಮೂಲಕ ಬೆಳೆಯುವುದಕ್ಕೆ ಪ್ರಯತ್ನ ಮಾಡುತ್ತಿರುವೆ. ಒಂದು ಸಮಯ ಇತ್ತು ಆಗ ನಾನು ತುಂಬಾನೇ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದೆ. ಜೀವನದಲ್ಲಿ ಎಲ್ಲವೂ ಸರಿಯಾಗಿ ಯಾಕೆ ನಾನು ಚಿಂತೆ ಮಾಡಬೇಕು? ಜನರು ಹೇಳುವ ಮಾತುಗಳನ್ನು ನಾನು ಯಾಕೆ ಕೇಳಬೇಕು? ಎಂದು. ಆದರೀಗ ಒಮ್ಮೆ ಯೋಚನೆ ಮಾಡಿದ್ದರೆ ನಾನು ಬದಲಾಗಿರುವೆ ಜೀವನದಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಗಳು ಎದುರಿದೆ. ಈಗ ನಾನು ಸಕ್ಸಸ್‌ ಎಂಜಾಯ್ ಮಾಡಬೇಕು. JugJugg Jeeyo ತಂದಂತೆ ಭೇದಿಯಾ ಯಶಸ್ಸು ತರುತ್ತದೆ. ಜನರ ಮಾತುಗಳನ್ನು ಈಗ ಕೇಳುತ್ತಿರುವೆ..ಅಮರ್ ನಿರ್ದೇಶನ ಹಾಗೂ ದಿನೇಶ್ ನಿರ್ಮಾಣ ಮಾಡಿದ್ದಾರೆ ಅಂದ್ಮೇಲೆ ಸಿನಿಮಾ ಹಿಟ್' ಎಂದು ವರುಣ್ ಧವನ್ ಹೇಳಿದ್ದಾರೆ.

Varun Dhawan completes 10 years of cini journey says i was arrogant vcs

ಭೇದಿಯಾ ಸಿನಿಮಾ:

'ಇಂಡಿಯಾ ಸಿನಿಮಾಗಳೇ ಹಾಗೆ ನಾವು ಎಲ್ಲದಕ್ಕೂ ರೆಡಿಯಾಗಿರುತ್ತೀವಿ ಆದರೆ ಯಾವುದೇ ಕಡಿಮೆಗೂ ಕಾಂಪ್ರಮೈಸ್ ಆಗುವುದಿಲ್ಲ. ಈಗ ಹಿಂದಿ ತಿರುಗಿ ಸಿನಿಮಾ ಮೇಕಿಂಗ್ ನೆನಪಿಸಿಕೊಂಡೆ ಕ್ರಿಂಜಿ ವಿಎಫ್‌ಎಕ್ಸ್‌ ಮೇಕಿಂಗ್ ಇದೆ. ಆದರೆ ಸಿನಿಮಾಗಳಲ್ಲಿ ವಿಎಫ್‌ಎಸ್‌ ಬಳಸುತ್ತಿರುವುದು ನಾನೊಬ್ಬನೆ ಅಲ್ಲ. ಬದಲಾವಣೆ ತರುವ ಯಾವುದೇ ನಿರ್ದೇಶಕರಾಗಿ ನಿರ್ಮಾಪಕರಾಗಿ ಅವರ ಜೊತೆ ನಾನು ಸಂತೋಷದಿಂದ ಕೆಲಸ ಮಾಡುವೆ. ಈ ಸಿನಿಮಾ ಒಪ್ಪಿಕೊಂಡಾಗ ಅಮರ್ ನನಗೆ ಒಂದು ವಿಚಾರ ಹೇಳಿದ್ದರು ಈ ಸಿನಿಮಾದಲ್ಲಿ ನೀನು ಯಾವುದೇ ಕಾರಣಕ್ಕೂ ಕಾಮಿಡಿ ಮಾಡುವಂತಿಲ್ಲ ಮಾಡಿದರೆ ಜನರು ನಿನ್ನನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ನನ್ನ ಅಭಿನಯ ಚೆನ್ನಾಗಿದ್ದರೆ ಅದಕ್ಕೆ ಅಮರ್ ಕಾರಣ ಜನರು ನಿರೀಕ್ಷೆ ಮುಟ್ಟಿರುವೆ ಅಂದುಕೊಳ್ಳುತ್ತೀನಿ' ಎಂದಿದ್ದಾರೆ ವರುಣ್.

ಭೇದಿಯಾ ಸಿನಿಮಾ ನೋಡಲು ಹಾಲಿವುಡ್‌ ರೇಂಜ್‌ಗಿದೆ ಇದು ಹಾಲಿವುಡ್ ರಿಮೇಕ್ ಎಂದು ಅನೇಕರು ಕಾಮೆಂಟ್ ಮಾಡಿದ್ದರು ಆದರೆ ನಿರ್ದೇಶಕರ ಅಮರ್ ಇದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಇದು ಯಾವ ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ಮಾಡಿರುವುದಲ್ಲ ಪ್ರಾಣಿಗಳ ಬಗ್ಗೆ ಸಿನಿಮಾ ಮಾಡಬೇಕು ಅನ್ನೋ ಐಡಿಯಾ ಇಟ್ಟಿಕೊಂಡು ಕಥೆ ಕೆಟ್ಟಿ ಆನಂತರ ಬೆಳೆಸಿರುವ ಕಥೆ ಇದು. ಸಿಂಪಲ್ ಕಥೆಗೆ ನಾವು ಇಂಟರ್ನ್ಯಾಷನಲ್ ಸ್ಯಾಂಡರ್ಡ್‌ ಕೊಡುತ್ತಿದ್ದೀವಿ' ಎಂದು ಅಮರ್ ಹೇಳಿದ್ದರು.

ತಂದೆಯಿಂದ ಚಿತ್ರಹಿಂಸೆ ಅನುಭವಿಸುತ್ತಿರುವ ತಾಯಿ-ಮಗಳ ಸಹಾಯಕ್ಕೆ ನಿಂತ ವರುಣ್; ಅಭಿಮಾನಿಗಳ ಮೆಚ್ಚುಗೆ

ವರುಣ್ ಧವನ್ ಶಾಕಿಂಗ್ ಹೇಳಿಕೆ:

ವೃತ್ತಿ ಜೀವನದಲ್ಲಿ ನನಗೆ ತೃಪ್ತಿ ಸಿಕ್ಕಿಲ್ಲ ನನಗೆ ಬೇಕಿರುವ ಪಾತ್ರಗಳು ಸಿಕ್ಕರೆ ಮಾತ್ರೆ ಖುಷಿಯಾಗುತ್ತದೆ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರಗಳು ಬೇಕು.ಕೊರೋನಾ ಪ್ಯಾಂಡಮಿಕ್ ನನ್ನ ಜೀವನ ಬದಲಾಯಿಸಿದೆ. ಈಗ ಹೊಸ ಸಿನಿ ಜನಿ ಜೀವನ ಆರಂಭಿಸುತ್ತಿರುವ. ಏನನ್ನೂ ಒಳೆ ರೀತಿಯಲ್ಲಿ ನಾನು ನೋಡುತ್ತಿಲ್ಲ.'ಸಿನಿ ಜರ್ನಿ ಆರಂಭಿಸಿ 8 ವರ್ಷಗಳು ಆಗಿದೆ ಆದರೆ ಈಗಲ್ಲೂ ನನ್ನ ಕೆಲಸ ಮತ್ತು ಫ್ಯೂಚರ್ ನೆನಪಿಸಿಕೊಂಡರೆ ಭಯ ಆಗುತ್ತದೆ. ಕೆಲಸದಲ್ಲಿ ತಮಾಷೆ ಇದೆ ಆದರೂ ಭಯ.ಸಮಾಜ ನಟರನ್ನು ನೋಡುವ ದೃಷ್ಟಿ ಬೇರೆ. ಸಿನಿಮಾ ಓಡಿಲ್ಲ ಕಲೆಕ್ಷನ್ ಆಗಿಲ್ಲ ಅಂದರೆ ಸೋತ ಹಾಗೆ. ಇದರಿಂದ ನನ್ನ ಬೇರೆ ಪ್ರಾಜೆಕ್ಟ್‌ಗಳಿಗೆ ಸಮಸ್ಯೆ ಆಗಿದೆ.'ಜನರು ಏನೇ ಹೇಳಲ್ಲಿ ನಾನು ಒಳ್ಳೆ ಸಿನಿಮಾಗಳನ್ನು ಮಾಡುವೆ ಒಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವೆ ನನ್ನಿಂದ ಯಾರಿಗೂ ನಷ್ಟ ಆಗಬಾರದು. ಹೊಸ ವಿಚಾರಗಳನ್ನು ಕಲಿಯುವ ಮನಸ್ಸು ಮಾಡಿದ್ದೀನಿ'

Follow Us:
Download App:
  • android
  • ios