ಡಿಪ್ರೆಶನ್‌ನಿಂದ ಬಳಲುತ್ತಿದ್ದ ಮಹಿಳೆ ಮೆದುಳಿನಲ್ಲಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ

ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ವಿಚಿತ್ರವೊಂದು ನಡೆದಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಖಿನ್ನತೆ ಹಾಗೂ ನೆನಪಿನ ಶಕ್ತಿ ಕಳೆದುಕೊಂಡು ಸಮಸ್ಯೆಯಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಯ ಮಿದುಳಿನಲ್ಲಿ 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳವೊಂದು ಕಾಣಿಸಿಕೊಂಡಿದೆ

A Australia woman suffering from depression had an 8 cm long live worm in her brain akb

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ವೈದ್ಯಕೀಯ ವಿಚಿತ್ರವೊಂದು ನಡೆದಿದ್ದು, ವೈದ್ಯರೇ ಶಾಕ್ ಆಗಿದ್ದಾರೆ. ಖಿನ್ನತೆ ಹಾಗೂ ನೆನಪಿನ ಶಕ್ತಿ ಕಳೆದುಕೊಂಡು ಸಮಸ್ಯೆಯಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಯ ಮಿದುಳಿನಲ್ಲಿ 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳವೊಂದು ಕಾಣಿಸಿಕೊಂಡಿದೆ, ಇಂತಹ ಪ್ರಕರಣ ವಿಶ್ವದ ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ. 

ಆಸ್ಟ್ರೇಲಿಯಾದ (Australia) ಕ್ಯಾನ್‌ಬೆರಾದಲ್ಲಿ ಈ ವೈದ್ಯಕೀಯ ಲೋಕ (medical history)ಅಚ್ಚರಿ ಪಡುವ ಘಟನೆ ನಡೆದಿದೆ. ನರಶಸ್ತ್ರಚಿಕಿತ್ಸಕರೊಬ್ಬರು ರೋಗಿಯ ಮಿದುಳಿನಲ್ಲಿ ಹೊರಳಾಡುತ್ತಿದ್ದ 8 ಸೆಂಟಿ ಮೀಟರ್ ಉದ್ದದ ಪರಾವಲಂಬಿ ದುಂಡು ಹುಳವನ್ನು ಹೊರ ತೆಗೆದಿದ್ದಾರೆ. ಇದು ಜೀವಂತವಾಗಿದ್ದಿದ್ದು ಮಾತ್ರವಲ್ಲ ಹೊರಳಾಡುತ್ತಿತ್ತು ಕೂಡ ಎಂದು ದಿ ಗಾರ್ಡಿಯನ್ ಅಂಗ್ಲ ಮಾಧ್ಯಮ ವರದಿ ಮಾಡಿದೆ. 

ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಂಜಾಪುಂಡರ ಕಾಟ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿಗಳು

ಒಣ ಕಫ, ಜ್ವರ, ರಾತ್ರಿ ಬೆವರುವುದು ಮುಂತಾದ ಸಮಸ್ಯೆಗಳಿಂದಾಗಿ ಮೂರು ವಾರಗಳ ಕಾಲ ಹೊಟ್ಟೆ ನೋವು ಹಾಗೂ ಅತಿಸಾರ ಮತ್ತು ಜ್ವರದಿಂದ ಬಳಲುತ್ತಿದ್ದ ಅಗ್ನೇಯ ಸೌತ್ ವೇಲ್ಸ್‌ನ (New South Wales)ನಿವಾಸಿಯಾಗಿದ್ದ 64 ವರ್ಷ ಮಹಿಳೆಯೊಬ್ಬರು ಕಳೆದ 2021ರ  ಜನವರಿ ಕೊನೆ ವಾರದಲ್ಲಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. 

2022 ರ ಹೊತ್ತಿಗೆ ಮಹಿಳೆಯ ರೋಗಲಕ್ಷಣಗಳು ಬದಲಾಗಿ ಮರೆವು ಮತ್ತು ಖಿನ್ನತೆ ಮಹಿಳೆಯನ್ನು ಅವರಿಸಿಕೊಂಡಿದ್ದವು. ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಹೀಗಾಗಿ  ಕ್ಯಾನ್‌ಬೆರಾದಲ್ಲಿರುವ ಆಸ್ಪತ್ರೆಗೆ ಆಕೆಯನ್ನು ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಆಕೆಗೆ ಮೆದುಳಿನ ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. ಈ ವೇಳೆ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕೆಲವು ಅಸಹಜ ಬೆಳವಣಿಗೆ ಇದೆ ಎಂಬುದನ್ನು ವೈದ್ಯರು ಪತ್ತೆ ಮಾಡಿದ್ದರು. 

ಬೀದಿಯಲ್ಲಿರುವ ದನಗಳ ಹಿಡಿದು ಮಾರಾಟ, ಕೇರಳ ಮೆಡಿಕಲ್ ಕಾಲೇಜು ಸಿಬ್ಬಂದಿ ಬಂಧನ!

ಆಸ್ಟ್ರೇಲಿಯಾದಲ್ಲಿ ವೈದ್ಯೆಯಾಗಿರುವ ಭಾರತೀಯ ಮೂಲದ ಡಾ ಹರಿಪ್ರಿಯಾ ಬಂಡಿ (Dr. Hari Priya Bandi) ಅವರು ಈ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಮಹಿಳೆಯ ಮಿದುಳಿನಲ್ಲಿ ಈ ವಿಚಿತ್ರ ನೋಡಿದ ಅವರು ಕೂಡಲೇ ಕ್ಯಾನ್‌ಬೆರಾ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವೈದ್ಯ ಡಾ. ಸಂಜಯ ಸೇನಾ ನಾಯಕ (Dr. Sanjaya Senanayake) ಅವರಿಗೆ ತುರ್ತು ಕರೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ನರಶಸ್ತ್ರಚಿಕಿತ್ಸಕ ಡಾ. ಸೇನಾ ನಾಯಕ  ಸುಳಿದಾಡುವ ಹುಳವನ್ನು ತಾನು ನೋಡಬಹುದು ಎಂದು ಭಾವಿಸಿಯೇ ಇರಲಿಲ್ಲ ಎಂದು  ಹೇಳಿಕೊಂಡಿದ್ದಾರೆ. 

ಏಕೆಂದರೆ  ಮೆದುಳಿನಲ್ಲಿ ಈ ರೀತಿಯದೊಂದು ಹುಳುಗಳಾಗುವ ಘಟನೆ ನಡೆಯುತ್ತದೆ ಎಂಬ ಬಗ್ಗೆ ಯಾವುದೇ ಮೆಡಿಕಲ್ ಪಠ್ಯಪುಸ್ತಕಗಳಲ್ಲಾಗಲಿ ಕೇಸ್ ಸ್ಟಡಿಗಳಲ್ಲಾಗಲಿ ಅವರು ನೋಡಿರಲಿಲ್ಲ, ನರಶಸ್ತ್ರಜ್ಞರು (Neurosurgeons) ದಿನವೂ ಹಲವು ರೀತಿಯ ಮಿದುಳಿನ ಸೋಂಕಿನ ಪ್ರಕರಣಗಳನ್ನು ನೋಡುತ್ತಿರುತ್ತಾರೆ. ಆದರೆ ಇದು ಮಾತ್ರ ಅಧ್ಯಯನ ಮಾಡಬೇಕಾದಂತಹ ಹೊಸ ಕೇಸ್‌, ಯಾರೊಬ್ಬರೂ ಮಿದುಳಿನಲ್ಲಿ ಹುಳ ಸೇರಬಹುದು ಎಂದು ಊಹೆಯನ್ನು ಮಾಡಿರದ ಪ್ರಕರಣವಿದು ಎಂದು ಅವರು ಹೇಳಿದ್ದಾರೆ. 

ಒಫಿಡಾಸ್ಕರಿಸ್ ರಾಬರ್ಟ್ಸಿ ನೆಮಟೋಡ್ ಎಂಬ ಜಾತಿಗೆ ಸೇರಿದ ಮೂರನೇ ಹಂತದ ಲಾರ್ವಾ ಇದಾಗಿದ್ದು,  ಈ ಪ್ರಕರಣ ವೈದ್ಯಕೀಯ ಇತಿಹಾಸದಲ್ಲಿ ಹೊಸ ಕೇಸ್ ಆಗಿದೆ. ಈ ಘಟನೆಯನ್ನು ಎಮರ್ಜಿಂಗ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ ನಲ್ಲಿ ದಾಖಲಿಸಲಾಗಿದೆ.  ಸಾಮಾನ್ಯವಾಗಿ, ಈ ಪರಾವಲಂಬಿ ದುಂಡುಹುಳುಗಳು ನ್ಯೂ ಸೌತ್ ವೇಲ್ಸ್‌ನಲ್ಲಿ ಕಾಣ ಸಿಗುವ  ಹೆಬ್ಬಾವುಗಳ ಜಠರ ಕರುಳಿನ ವ್ಯವಸ್ಥೆಗಳಲ್ಲಿ ಕಾಣಸಿಗುತ್ತವೆಯಂತೆ. ಕ್ಯಾನ್‌ಬೆರಾ ಸಣ್ಣ ನಗರವಾಗಿರುವುದರಿಂದ ನಾವು ಈ ಜೀವಂತವಿದ್ದ ಹುಳುವನ್ನು ನೇರವಾಗಿ CSIRO ವಿಜ್ಞಾನಿಗಳ ಪ್ರಯೋಗಾಲಯಕ್ಕೆ ಕಳುಹಿಸಿ ಕೊಟ್ಟೆವು, ಅವರು ಪರಾವಲಂಬಿ ಹುಳುಗಳ ಅಧ್ಯಯನದಲ್ಲಿ ಪರಿಣತಿ ಹೊಂದಿದ್ದಾರೆ ಎಂದು ವೈದ್ಯ ಸೇನಾ ನಾಯಕೆ ಹೇಳಿದ್ದಾರೆ. 

Latest Videos
Follow Us:
Download App:
  • android
  • ios