Asianet Suvarna News Asianet Suvarna News

ಬೀದಿಯಲ್ಲಿರುವ ದನಗಳ ಹಿಡಿದು ಮಾರಾಟ, ಕೇರಳ ಮೆಡಿಕಲ್ ಕಾಲೇಜು ಸಿಬ್ಬಂದಿ ಬಂಧನ!

ಕಾಲೇಜು ಕ್ಯಾಂಪಸ್ ಸುತ್ತ ಮುತ್ತ ಬರುವ ದನಗಳನ್ನು ಹಿಡಿದು ವ್ಯಾಪಾರಿಗಳಿಗೆ ಮಾರಾಟ ಮಾಡುವುದೇ ಈತನ ಖಯಾಲಿಯಾಗಿತ್ತು. ಇಷ್ಟೇ ಅಲ್ಲ ಬೀದಿಯಲ್ಲಿ ದನ ಕಂಡರೆ ಸಾಕು ಮರುಕ್ಷಣದಲ್ಲೇ ಕದ್ದು ಮಾರಾಟ ಮಾಡುತ್ತಿದ್ದ ಮೆಡಿಕಲ್ ಕಾಲೇಜು ಸಿಬ್ಬಂದಿಯೇ ಇದೀಗ ಅರೆಸ್ಟ್ ಆಗಿದ್ದಾನೆ
 

Kerala Medical college staff arrested for selling stary cow on campus premises ckm
Author
First Published Aug 16, 2023, 3:53 PM IST

ಕೊಚ್ಚಿ(ಆ.16) ದನಗಳನ್ನು ಕದ್ದು ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಕೆರಳದಲ್ಲಿ ಮೆಡಿಕಲ್ ಕಾಲೇಜು ಸಿಬ್ಬಂದಿ ಬೀದಿಯಲ್ಲಿನ ದನಗಳನ್ನು ಹಿಡಿದು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ವ್ಯವಸ್ಥಿತವಾಗಿ ಜಾಲವೊಂದು ಈ ದಂಧೆ ಹಿಂದೆ ಕಾರ್ಯನಿರ್ವಹಿಸುತ್ತಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೇರಳ ಮೆಡಿಕಲ್ ಕಾಲೇಜು ಸುತ್ತ ಮುತ್ತ ಇರುವ ದನಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ ಮೆಡಿಕಲ್ ಕಾಲೇಜು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಎರ್ನಾಕುಲಂ ಸರ್ಕಾರಿ ಮೆಡಿಕಲ್ ಕಾಲೇಜಿನ ಡ್ರೈವರ್ ಬಿಜು ಮ್ಯಾಥ್ಯೂ ಬಂಧಿತ ಆರೋಪಿ.  ಎರ್ನಾಕುಲಂ ಮೆಡಿಕಲ್ ಕಾಲೇಜು ಕ್ಯಾಂಪಸ್ ಸುತ್ತ ಮತ್ತ ಇರುವ ಹಲವರು ತಮ್ಮ ಹಸುಗಳು ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ದೂರಿನ ಸಂಖ್ಯೆ ಹೆಚ್ಚಾಗುತ್ತಲೇ ಹೋಗಿದೆ. ಒಂದೇ ವಲಯದಿಂದ ಇಷ್ಟೊಂದು ಹಸುಗಳು ಕಾಣೆಯಾಗುತ್ತಿರುವುದೇಕೆ ಎಂದು ಅನುಮಾನಗೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಪುನರ್‌ ಪರಿಶೀಲಿಸಿ: ಉಜ್ಜಯನಿ ಜಗದ್ಗುರು

ದೂರಿನ ಆಧಾರದಲ್ಲಿ ಪೊಲೀಸರು ಸಿಸಿಟಿವಿ ಸೇರಿದಂತೆ ಇತರ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಸಿಸಿಟಿವಿಯಲ್ಲಿ ಕೆಲ ವ್ಯಕ್ತಿಗಳು ದನಗಳಿಗೆ ನೀರು, ಹುಲ್ಲು ಸೇರಿದಂತೆ ಇತರ ಆಹಾರಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಮೆಡಿಕಲ್ ಕಾಲೇಜಿನ ಚಾಲಕನ ಮೇಲೆ ಅನುಮಾನ ಹೆಚ್ಚಾಗಿದೆ. 

ನೇರವಾಗಿ ಮೆಡಿಕಲ್ ಕಾಲೇಜು ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಂಪಸ್ ಸುತ್ತ ಮುತ್ತ ಇರುವ ಹಸುಗಳಿಗೆ ನೀರು ಹಾಗೂ ಆಹಾರ ನೀಡಿ ಅವುಗಳನ್ನು ಹಿಡಿದು ವ್ಯಾಪಾರಿಗಳಿಗೆ ನೀಡುತ್ತಿದ್ದ. ಈ ಕುರಿತು ದನಗಳ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದ.ಪೊಲೀಸರು ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ . ಇದು ಕಾಲೇಜು ಸಿಬ್ಬಂದಿ ಏಕಾಂಗಿ ನಡೆಸುತ್ತಿದ್ದ ಕಳ್ಳತನವಲ್ಲ. ಇದರ ಹಿಂದೆ ಅತೀ ದೊಡ್ಡ ಜಾಲ ನಿರ್ವಹಿಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ ಹಲವು ಪ್ರದೇಶದಲ್ಲಿ ಇಂತದ್ದೇ ಜಾಲ ಕಾರ್ಯನಿರ್ವಹಿಸುತ್ತಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುತ್ತಾ ಕೇಂದ್ರ?ಸಂಸತ್ತಿನಲ್ಲಿ ಉತ್ತರ ನೀಡಿದ ಬಿಜೆಪಿ ಸಚಿವ!

ಮೆಡಿಕಲ್ ಕಾಲೇಜಿನ ಆವರಣದಲ್ಲಿ ಹುಲ್ಲಿನ ಮೈದಾನವಿದೆ. ಈ ಮೈದಾನದಲ್ಲಿ ಹಲವು ಹಸುಗಳು ಮೇವಿಗಾಗಿ ಆಗಮಿಸುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಬಿಜು ಮ್ಯಾಥ್ಯೂ ಇತರ ಕೆಲವರ ನೆರವಿನಿಂದ ಹಸುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ. ವ್ಯಾಪಾರಿಗಳು ಇದನ್ನು ಮಾಂಸಕ್ಕಾಗಿ ಬಳಕೆ ಮಾಡುತ್ತಿದ್ದರು. ಮೆಡಿಕಲ್ ಕಾಲೇಜು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಿಜು ಮ್ಯಾಥ್ಯೂ ಇದೇ ವ್ಯವಹಾರದಲ್ಲಿ ತೊಡಗಿ ಇತ್ತೀಚೆಗೆ ಹೊಸ ವಾಹನಗಳನ್ನು ಖರೀದಿಸಿದ್ದಾನೆ. ಇದೀಗ ಈತನ ವ್ಯವಾಹರ ಕೇವಲ ದನ ಕಳ್ಳತನಕ್ಕೆ ಮಾತ್ರ ಸೀಮಿತವಾದಂತಿಲ್ಲ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios