Asianet Suvarna News Asianet Suvarna News

FAT ಬ್ಯಾಂಕ್ ಅಕೌಂಟ್, SKINNY ಬಾಡಿ ಬೇಕು ಹೊಸ ವರ್ಷದಲ್ಲಿ, ಉಲ್ಟಾ ಆಗೋದು ಬೇಡ...

'Dear Santa all I want is a FAT bank account and a SKINNY body. Please don't mix it up againt like last year...' ಎಂಬೊಂದು ಸ್ಟೇಟಸ್ ಹೆಂಗಳೆಯರ ಗ್ರೂಪ್‌ಗಳಲ್ಲಿ ಈಗಾಗಲೇ ಶೇರ್ ಆಗುತ್ತಿದೆ. ಬಳುಕುವ ಬಳ್ಳಿಯಂತಾಗಬೇಕೆಂಬುಬುದು 40ರ ಆಸುಪಾಸಿನಲ್ಲಿರೋ ಹೆಣ್ಣು ಮಕ್ಕಳ ಡ್ರೀಮ್. ಹೊಸ ವರ್ಷಕ್ಕಾದರೂ ಫಿಸಕ್ ಚೆಂದಗಾಣಿಸಲು ಇಲ್ಲಿವೆ ಟಿಪ್ಸ್...

8 simple tips to be fit in coming year 2020
Author
Bengaluru, First Published Dec 14, 2019, 2:40 PM IST

ಮತ್ತೊಂದು ಹೊಸ ವರ್ಷ ಆಗಮನಕ್ಕೆ ಸಜ್ಜಾಗಿ ನಿಂತಿದೆ. 2020ಕ್ಕೆ ಕೈಗೊಳ್ಳಬೇಕಾದ ರೆಸಲ್ಯೂಷನ್ ಬಗ್ಗೆ ನೀವು ಈಗಾಗಲೇ ಸಾಕಷ್ಟು ಯೋಚನೆಯಲ್ಲಿ ಮುಳುಗಿರಬಹುದು. ಒಂದು ವೇಳೆ ಈ ಬಾರಿಯ ನಿಮ್ಮ ರೆಸಲ್ಯೂಷನ್ ಉತ್ತಮ ಆರೋಗ್ಯ ಮತ್ತು ಫಿಟ್‍ನೆಸ್‍ಗೆ ಸಂಬಂಧಿಸಿದ್ದೇ ಆಗಿದ್ದರೆ, ಅದಕ್ಕೆ ಪ್ಲ್ಯಾನಿಂಗ್ ಹೇಗಿರಬೇಕು?ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ? ಇಲ್ಲಿದೆ 8 ಸರಳ ಟಿಪ್ಸ್‍ಗಳು.

1.ನಡಿಗೆಗೆ ಇರಲಿ ಮೊದಲ ಆದ್ಯತೆ: ದೇಹಕ್ಕೆ ನಡಿಗೆಗಿಂತ ಅತ್ಯುತ್ತಮ ಹಾಗೂ ಸರಳ ವ್ಯಾಯಾಮ ಬೇರೊಂದಿಲ್ಲ. ಹಿಂದೆಲ್ಲ ಈಗಿನಂತೆ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ನಮ್ಮ ಹಿರಿಯರು ಮೈಲುಗಟ್ಟಲೆ ದೂರವನ್ನು ನಡೆದೇ ಕ್ರಮಿಸುತ್ತಿದ್ದರು. ಅವರ ಆರೋಗ್ಯಯುತ ಜೀವನಕ್ಕೆ ನಡಿಗೆಯೂ ಒಂದು ಕಾರಣವಾಗಿತ್ತು. ಆದರೆ, ಇಂದು ಕಣ್ಣಳತೆ ದೂರ ಕ್ರಮಿಸಲು ನಮಗೆ ಬೈಕೋ, ಕಾರೋ ಬೇಕು. ಪರಿಣಾಮ ದೇಹಕ್ಕೆ ಸುಖವೇನು ಸಿಗುತ್ತಿದೆ, ಆದರೆ ವ್ಯಾಯಾಮ? ಆದಕಾರಣ ನಿಮ್ಮ ಹೊಸ ವರ್ಷದ ಫಿಟ್‍ನೆಸ್ ರೆಸಲ್ಯೂಷನ್‍ನಲ್ಲಿ ನಡಿಗೆಗೆ ಮೊದಲ ಆದ್ಯತೆ ನೀಡಿ. ಆಫೀಸ್ ಮನೆಯಿಂದ ನಡೆದು ಕ್ರಮಿಸುವಷ್ಟು ದೂರದಲ್ಲಿದ್ದರೆ ಕಾಲುಗಳಿಗೆ ಕೆಲಸ ನೀಡಿ. ತರಕಾರಿ, ದಿನಸಿ ಸಾಮಗ್ರಿಗಳನ್ನು ತರಲು ಕಾರ್, ಬೈಕ್ ಬಳಸದೆ ನಡೆದೇ ಸಾಗಿ. ಮಾಲ್ ಅಥವಾ ಬಹುಮಹಡಿ ಸಂಕೀರ್ಣಗಳಿಗೆ ತೆರಳಿದಾಗ ಲಿಫ್ಟ್ ಅಥವಾ ಎಲವೇಟರ್ ಬದಲು ಮೆಟ್ಟಿಲುಗಳನ್ನೇ ಬಳಸಿ.

ಕೊಹ್ಲಿ ಫಿಟ್‌ನೆಸ್‌ಗೆ ಕಾರ್ತಿಕೆ ಹೆಂಡ್ತಿ ದೀಪಿಕಾ ಸ್ಫೂರ್ತಿಯಂತೆ

2.ದೇಹ ದಂಡನೆಗೆ ಕಳ್ಳತನ ಬೇಡ: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು ಎಂದು ನೀವು ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಆದರೆ, ಒಂದು ವಾರ ಕಳೆಯುತ್ತಿದ್ದಂತೆ ನಿಮ್ಮ ವ್ಯಾಯಾಮದ ಅವಧಿ ತಗ್ಗುತ್ತ ಬಂದು ಕೆಲವೇ ದಿನಗಳಲ್ಲಿ ನಿಂತು ಬಿಡುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು ಎಂದ ಮಾತ್ರಕ್ಕೆ ಅದು ಒಂದೇ ಬಾರಿಗೆ ಆಗಬೇಕೆಂದೇನೂ ಇಲ್ಲ. ಆದಕಾರಣ 30 ನಿಮಿಷಗಳ ವ್ಯಾಯಾಮವನ್ನು 10 ನಿಮಿಷಗಳ ಮೂರು ಭಾಗಗಳನ್ನಾಗಿ ವಿಂಗಡಿಸಿ. ಬೆಳಗ್ಗೆ ಎದ್ದ ತಕ್ಷಣ 10 ನಿಮಿಷ ಮಾಡಿ. ಆಫೀಸ್‍ನಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸಾಧ್ಯವಾದರೆ 10 ನಿಮಿಷ ವ್ಯಾಯಾಮ ಮಾಡಿ. ಸಂಜೆ ಮನೆಗೆ ಬಂದ ಬಳಿಕ ಉಳಿದ 10 ನಿಮಿಷದ ವ್ಯಾಯಾಮ ಮಾಡಿ ಮುಗಿಸಿ. ಟಿವಿ ವೀಕ್ಷಿಸುತ್ತಿರುವಾಗ ಕಮರ್ಷಿಯಲ್ ಬ್ರೇಕ್ ನಡುವೆ, ಅಡುಗೆ ಮಾಡುತ್ತಿರುವಾಗ ಸಣ್ಣ ಗ್ಯಾಪ್‍ನಲ್ಲಿ ಕೂಡ ಚಿಕ್ಕಪುಟ್ಟ ವ್ಯಾಯಾಮಗಳನ್ನು ಮಾಡಬಹುದು. ವ್ಯಾಯಾಮ ಮಾಡಲು ಸಮಯವಿಲ್ಲ ಎನ್ನುವ ಬದಲು ಸಿಕ್ಕ ಸಮಯವನ್ನೇ ಬಳಸಿಕೊಳ್ಳಿ.

3. ವೈದ್ಯರನ್ನು ಭೇಟಿಯಾಗಿ: ನೀವೆಷ್ಟೇ ಆರೋಗ್ಯವಂತರಾಗಿದ್ದರೂ ವರ್ಷಕ್ಕೊಮ್ಮೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಚಿಕ್ಕಪುಟ್ಟ ನೋವುಗಳು, ಆರೋಗ್ಯ ಸಮಸ್ಯೆಗಳೇ ಮುಂದೆ ದೊಡ್ಡ ಕಾಯಿಲೆಗೆ ಕಾರಣವಾಗಬಹುದು. ಆದಕಾರಣ ವರ್ಷವಿಡೀ ನೀವು ಆರೋಗ್ಯದಿಂದ ಇರಬೇಕೆಂದರೆ ವೈದ್ಯರನ್ನು ಭೇಟಿಯಾಗಿ ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಆ ಕುರಿತ ಅನುಮಾನಗಳಿಗೆ ಪರಿಹಾರ ಪಡೆಯುವುದು ಉತ್ತಮ. 

4.ನೀರು ಕುಡಿಯಲು ಮರೆಯಬೇಡಿ: ಎಷ್ಟೋ ಸಾಧ್ಯವೋ ಅಷ್ಟು ನೀರು ಕುಡಿಯುವ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ. ಸಂಸ್ಕರಿಸಿದ ತಂಪು ಪಾನೀಯಗಳನ್ನು ತ್ಯಜಿಸಿ. ಒಂದು ಬಾಟಲ್ ತಂಪುಪಾನೀಯದಲ್ಲಿ ಸುಮಾರು 150 ಕ್ಯಾಲೋರಿಯಿರುತ್ತದೆ. ಅದೇ ನೀರಿನಲ್ಲಿರುವ ಕ್ಯಾಲೋರಿ ಶೂನ್ಯ. 

8 simple tips to be fit in coming year 2020

5. ವ್ಯಾಯಾಮಗಳಲ್ಲಿ ವಿಭಿನ್ನತೆ ಇರಲಿ:  2019ರಲ್ಲಿ ನೀವು ಬರೀ ಜಾಗಿಂಗ್‍ವೊಂದನ್ನೇ ಮಾಡಿದ್ದೀರಿ ಎಂದಾದರೆ 2020ರಲ್ಲಿ ವೇಯಿಟ್ ಲಿಫ್ಟಿಂಗ್, ಸ್ವಿಮ್ಮಿಂಗ್, ಮಾರ್ಷಿಯಲ್ ಆಟ್ರ್ಸ್, ಯೋಗ ಮುಂತಾದ ಹೊಸ ಪ್ರಕಾರಗಳನ್ನು ಕಲಿಯಲು ಪ್ರಯತ್ನಿಸಿ. ಒಂದೇ ವಿಧದ ವ್ಯಾಯಾಮದಿಂದ ಬೋರ್ ಆಗುವುದನ್ನು ತಡೆಯಲು ಈ ರೀತಿ ವಿಭಿನ್ನ ಚಟುವಟಿಕೆ ಕೈಗೊಳ್ಳುವುದು ಉತ್ತಮ.

ಝೀರೋ ಸೈಜ್ ಕರೀನಾಳ ಫಿಟ್‌ನೆಸ್ ಸೀಕ್ರೇಟ್ ಬಯಲು

6. ನೀವೇ ಕುಕ್ ಆಗಿ: ಇಲ್ಲಿಯ ತನಕ ಹೋಟೆಲ್ ಆಹಾರವನ್ನು ಆಶ್ರಯಿಸಿದ್ದರೆ, ಅದಕ್ಕೆ ವಿರಾಮ ನೀಡಿ, ಮನೆಯಲ್ಲಿ ನೀವೇ ಅಡುಗೆ ಮಾಡಲು ಪ್ರಾರಂಭಿಸಿ. ಇದರಿಂದ ಶುದ್ಧ ಪೌಷ್ಟಿಕಾಂಶಯುಕ್ತ ಆಹಾರ ಸವಿಯಲು ಸಾಧ್ಯವಾಗುತ್ತದೆ. ಜತೆಗೆ ಸಕ್ಕರೆ, ಉಪ್ಪಿನ ಬಳಕೆ ಮೇಲೆ ನಿಯಂತ್ರಣ ಸಾಧಿಸಬಹುದು. 

7.ಮದ್ಯ ಹಾಗೂ ಡ್ರಗ್ಸ್‍ಗೆ ಗುಡ್‍ಬೈ ಹೇಳಿ: ಒಂದು ವೇಳೆ ನೀವು ಮದ್ಯ ಅಥವಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರೆ ಹೊಸ ವರ್ಷದಿಂದ ಅದಕ್ಕೆ ವಿದಾಯ ಹೇಳಿ. ಒಮ್ಮೆಗೆ ಬಿಡುವುದು ಕಷ್ಟವಾಗಬಹುದು. ಆದರೆ, ಹಂತ ಹಂತವಾಗಿ ಪ್ರಯತ್ನಿಸಿದರೆ 2020 ನಿಮ್ಮ ಪಾಲಿಗೆ ಮದ್ಯ, ಡ್ರಗ್ಸ್ ಮುಕ್ತ ವರ್ಷವಾಗಬಹುದು.

8. ಮಾನಸಿಕ ಆರೋಗ್ಯದ ಕಾಳಜಿಯೂ ಇರಲಿ: ಮಾನಸಿಕ ಆರೋಗ್ಯ ಕೂಡ ಫಿಟ್‍ನೆಸ್ ಭಾಗವೇ ಆಗಿದೆ. ಹೀಗಾಗಿ ಮಾಸಿಕ ಸದೃಢತೆಯ ಕಡೆಗೂ ಗಮನ ನೀಡುವುದು ಅಗತ್ಯ. ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ಆತ್ಮೀಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ. ಯೋಗ ಹಾಗೂ ಧ್ಯಾನದ ಮೂಲಕ ಮನಸ್ಸಿನ ಒತ್ತಡ ತಗ್ಗಿಸಲು ಪ್ರಯತ್ನಿಸಿ.

ಸುಮ್ ಸುಮ್ಮನೆ ವರ್ಕೌಔಟ್ ಮಾಡೋ ಬದಲು ಹೀಗ್ ಮಾಡಿ

Follow Us:
Download App:
  • android
  • ios