ಸ್ಟಾರ್ ನಟನಟಿಯರನ್ನು ನೋಡುವಾಗಲೆಲ್ಲ ಹೇಗಪ್ಪಾ ಇವರು ಇಷ್ಟೊಂದು ಫಿಟ್ ಆಗಿ ಟೋನ್ಡ್ ದೇಹ ಹೊಂದಿ ಬೊಜ್ಜೆಂಬ ಜಾತಿಯೇ ದೇಹದಲ್ಲಿಲ್ಲದೆ ಇದ್ದಾರೆ, ಇವರೇನು ತಿಂತಾರೆ ಎನಿಸದಿರದು. ನಾವು ಡಯಟ್ ಮಾಡಿ ವರ್ಕೌಟ್ ಮಾಡಿದರೂ ಹೀಗಾಗುವುದಿಲ್ಲ ಏಕೆ ಎಂಬ ಡೌಟ್ ಕಾಡಬಹುದು.

ಕನ್ನಡದ ಜೀರೋ ಸೈಜ್ ನಟಿ ಆಶಾ ಭಟ್ ಫಿಟ್ ನೆಸ್ ಸೀಕ್ರೆಟ್!

ಹೌದು, ಅವರಿಗೆ ಪ್ರತ್ಯೇಕವಾಗಿ ಅತ್ಯುತ್ತಮ ಡಯಟಿಶಿಯನ್‌ಗಳು, ಟ್ರೇನರ್‌ಗಳು ಇರುತ್ತಾರೆ. ಅವರನ್ನೆಲ್ಲ ಇಟ್ಟುಕೊಳ್ಳಲು ನಮ್ಮಿಂದಾಗದಿರಬಹುದು. ಆದರೆ, ಕನಿಷ್ಠ ಪಕ್ಷ ಅವರು ಈ ಸೆಲೆಬ್ರಿಟಿಗಳಿಗೆ ಹೇಳಿದ ಡಯಟ್ಟನ್ನು ಫಾಲೋ ಮಾಡಬಹುದಲ್ಲವೇ?  ಇಲ್ಲಿದೆ ನೋಡಿ ಬಾಲಿವುಡ್‌ನ ಫಿಟ್ ನಟಿ ಕರೀನಾ ಕಪೂರ್‌ಗೆ ಆಕೆಯ ಡಯಟಿಶಿಯನ್ ರುಜುತಾ ದಿವೇಕರ್ ಕೊಟ್ಟ

ಡಯಟ್ ಪ್ಲ್ಯಾನ್ 

ಹೊಸ ಚಿತ್ರ ಗುಡ್ ನ್ಯೂಸ್‌ಗಾಗಿ ಆಕೆ ಕೇವಲ ಕಷ್ಟ ಪಟ್ಟು ವರ್ಕೌಟ್ ಮಾಡಲಿಲ್ಲ, ಜೊತೆಗೆ ಸ್ಟ್ರಿಕ್ಟ್ ಆಗಿ 8 ಮೀಲ್ ಡಯಟ್ ಪ್ಲ್ಯಾನ್ ಅನುಸರಿಸಿದ್ದಾಳೆ. ಏನಿದು 8 ಮೀಲ್ ಡಯಟ್? ಈ ಬಗ್ಗೆ ರುಜುತಾ ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮೀಲ್ 1 : ಬೆಳಗ್ಗೆ ಎದ್ದ ಕೂಡಲೇ ನೀರಿನಲ್ಲಿ ನೆನೆಸಿಟ್ಟ ದ್ರಾಕ್ಷಿ ಜೊತೆಗೆ ಕೇಸರಿ. 

ಮೀಲ್ 2 : ತಿಂಡಿಗೆ ಪರಾಟಾ ಹಾಗೂ ಚಟ್ನಿ.

ಮೀಲ್ 3 : 11 ಗಂಟೆ ಹೊತ್ತಿಗೆ ಎಳನೀರಿಗೆ ಕಾಮಕಸ್ತೂರಿ ಬೀಜಗಳನ್ನು ಹಾಕಿ ಕುಡಿಯುವುದು

ಮೀಲ್ 4 : 1 ಗಂಟೆ ಹೊತ್ತಿಗೆ ಊಟಕ್ಕೆ ಮೊಸರನ್ನ ಹಾಗೂ ಹಪ್ಪಳ

ಮೀಲ್ 5: 3 ಗಂಟೆ ಹೊತ್ತಿಗೆ ಸ್ವಲ್ಪ ವಾಲ್‌ನಟ್ ಹಾಗೂ ಚೀಸ್ ಸೇವನೆ

ಮೀಲ್ 6 : ಸಂಜೆಗೆ 1 ಗ್ಲಾಸ್ ಬಾಳೆಹಣ್ಣಿನ ಮಿಲ್ಕ್‌ಶೇಕ್

ಮೀಲ್ 7 : ರಾತ್ರಿಯ ಊಟಕ್ಕೆ ಕಿಚಡಿ ಹಾಗೂ ಮೊಸರು ಅಥವಾ ವೆಜ್ ಪಲಾವ್

ಮೀಲ್ 8 : ಮಲಗುವ ಸಮಯಕ್ಕೆ ಹಾಲು ಅಥವಾ ಬಾಳೆಹಣ್ಣಿನ ಮಿಲ್ಕ್‌ಶೇಕ್

ತೆಳ್ಳಗಾದ್ಲು ತೆಲಗು ನಟಿ, ಅಪ್‌ಸೆಟ್‌ ಆಗೋದ್ರು ಫ್ಯಾನ್ಸ್!

ಇಷ್ಟಕ್ಕೂ ಕರೀನಾ ವಾರಕ್ಕೆ ಕೇವಲ ನಾಲ್ಕರಿಂದ ಐದು ಗಂಟೆ ವರ್ಕೌಟ್ ಮಾಡುತ್ತಿದ್ದಳಷ್ಟೇ. ಈ ಮೇಲಿನ ಡಯಟ್ ಆಕೆಗೆ ಕೆಲಸ ಮಾಡಲು ಹಾಗೂ ಮನೆ ನಡೆಸಲು ಬೇಕಾದ ಎನರ್ಜಿ ನೀಡುತ್ತಿತ್ತು. ಇನ್ನು, ಸಾಂಪ್ರದಾಯಿಕವಾದ, ಸ್ಥಳೀಯವಾದ ಹಾಗೂ ಆಯಾ ಕಾಲದಲ್ಲಿ ಬೆಳೆವಂಥ ಆಹಾರಗಳನ್ನೇ ಸೇವಿಸುವುದು ಡಯಟ್‌ನ ಅತ್ಯುತ್ತಮ ಮಾರ್ಗ ಎನ್ನುತ್ತಾರೆ ರುಜುತಾ. 

ಮಿತವಾಗಿರುವುದೇ ಮುಖ್ಯ

ಕರೀನಾಳ ಡಯಟ್ ಪ್ಲ್ಯಾನ್ ನೋಡಿದಾಗ ಆಹಾರ ಕ್ರಮ ಸರಿಯಾಗಿದ್ದರೆ ದೇಹವನ್ನು ಬದಲಾಯಿಸೋಕೆ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಹರಿಸುವ ಅಗತ್ಯವಿಲ್ಲ ಎಂಬುದು ಅರ್ಥವಾಗುತ್ತದೆ. ಎಲ್ಲವೂ ಹಿತಮಿತವಾಗಿದ್ದರಷ್ಟೇ ಅತ್ಯುತ್ತಮ ಫಲಿತಾಂಶ ಕಾಣಲು ಸಾಧ್ಯ. ಸರಿಯಾದ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸುತ್ತಾ, ಸ್ವಲ್ಪ ದೈಹಿಕ ಶ್ರಮವೂ ಇದ್ದಲ್ಲಿ ಅದೇ ಸರಿಯಾದ ಡಯಟ್ ಪ್ಲ್ಯಾನ್ ಎನ್ನುತ್ತಾರೆ ರುಜುತಾ. ಆಕೆಯ ಡಯಟ್‌ನಲ್ಲಿದ್ದ ಆಹಾರದ ಕೆಲ ಲಾಭಗಳನ್ನು ನೋಡೋಣ. 

ತೂಕ ಇಳಿಸೋಕೆ ತುಪ್ಪದ ಕಾಫಿ ಕುಡಿತಾಳೆ ಈ ನಟಿ!

ಸರಿಯಾದ ಆಹಾರ ಆಯ್ಕೆ

11 ಗಂಟೆ ಹೊತ್ತಿಗೆ ಕರೀನಾ ಎಳನೀರಿಗೆ ಕಾಮಕಸ್ತೂರಿ ಬೀಜ ಹಾಕಿಕೊಂಡು ಸೇವಿಸುತ್ತಿದ್ದಲು ಎಂಬುದು ತಿಳಿಯಿತು. ಇದು ಹೆಚ್ಚು ಸಮಯ ಬೇಡದೆ ದೇಹಕ್ಕೆ ಕಳೆದುಕೊಂಡ ಮಿನರಲ್ಸ್ ಹಾಗೂ ವಿಟಮಿನ್ಸ್ ಒದಗಿಸುತ್ತದೆ. ಅಂದರೆ ಬ್ಯುಸಿ ಶೆಡ್ಯೂಲ್ ಇರುವವರಿಗೆ ಇದು ಸೂಕ್ತ ಆಹಾರ. ಇನ್ನು ಚೀಸ್ ಕೂಡಾ ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂನ್ನು ಹೇರಳವಾಗಿ ಹೊಂದಿದೆ. ಬಾಳೆಹಣ್ಣು ಅತ್ಯುತ್ತಮ ವರ್ಕೌಟ್ ಫುಡ್ ಎನಿಸಿಕೊಂಡಿದೆ. ಇದು ಮಸಲ್ ಬಿಲ್ಡ್ ಮಾಡಲು ಹಾಗೂ ದೇಹವನ್ನು ಟೋನ್ ಮಾಡಲು ಸಹಾಯಕ. 

ಡ್ರೈ ಫ್ರೂಟ್ಸ್

ಡ್ರೈಫ್ರೂಟ್ಸ್‌ನಲ್ಲಿ ನ್ಯೂ್ಟ್ರಿಯೆಂಟ್ಸ್ ಅಧಿಕವಾಗಿರುತ್ತವೆ ಹಾಗೂ ಇದು ತೂಕ ಇಳಿಕೆಗೆ ಕೂಡಾ ಸಹಕಾರಿ ಎಂಬುದು ನಮಗೆಲ್ಲ ಗೊತ್ತಿದೆ. ಒಣದ್ರಾಕ್ಷಿಯಲ್ಲಿರುವ ಕೆಮಿಕಲ್‌ಗಳು ನಿಮ್ಮ ಆಹಾರದ ಬಯಕೆಯನ್ನು ತಟಸ್ಥಗೊಳಿಸಬಲ್ಲವು. ಇದು ನಿಮ್ಮ ಉಸಿರಾಟವನ್ನು ಕೂಡಾ ನಿಧಾನಗತಿಗೆ ತರುತ್ತದೆ. ಇದರಲ್ಲಿರುವ ಗಾಬಾ ನ್ಯೂರೋಟ್ರಾನ್ಸ್‌ಮಿಟರ್ಸ್ ನಿಮ್ಮ ಹಸಿವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆ ನಿಧಾನಗೊಳಿಸಿ, ಒತ್ತಡ ಮಟ್ಟ  ನಿಯಂತ್ರಿಸುತ್ತದೆ. 

ಕಿಯಾರಾ ಅದ್ವಾನಿ ಫಿಟ್ ನೆಸ್ ಸೀಕ್ರೆಟ್

ಕಂಫರ್ಟ್ ಫುಡ್ 

ಎಲ್ಲರಿಗೂ ಕೆಲವೊಂದು ಇಷ್ಟದ ಆಹಾರಗಳಿರುತ್ತವೆ. ಅವನ್ನು ಬಿಟ್ಟು ಸಾಧಿಸಬೇಕಾದುದು ಏನೂ ಇಲ್ಲ. ಕಂಫರ್ಟ್ ಆಹಾರಗಳು ಯಾವಾಗಲೂ ನಮ್ಮ ದೇಹದ ಮೇಲೆ ಚೆನ್ನಾಗಿ ಕೆಲಸ ಮಾಡುತ್ತವೆ. ಕರೀನಾಗೆ ಕಿಚಡಿ ಹಾಗೂ ದಹಿ ಇಷ್ಟ. ಅಥವಾ ರೈಸ್ ಮತ್ತು ದಾಲ್ ಇಷ್ಟ. ಈ ಬಗ್ಗೆ ಆಕೆ ಆಗಾಗ ಹೇಳುತ್ತಲೇ ಇರುತ್ತಾಳೆ. ಇಂಥ ದೇಸಿ ಆಹಾರಗಳು ಡಯಟ್‌ನಲ್ಲಿರುವುದರಿಂದ ಅತಿಯಾದ ಕ್ಯಾಲೋರಿಯೂ ಆ್ಯಡ್ ಆಗದೆ, ದೇಹಕ್ಕೆ ಬೇಕಾದ ಶಕ್ತಿ ಹಾಗೂ ಪೋಷಕಸತ್ವಗಳು ದೊರೆಯುತ್ತವೆ.