ಚೆನ್ನೈ(ಡಿ.09): ವಿರಾಟ್‌ ಕೊಹ್ಲಿ ಫಿಟ್ನೆಸ್‌ ಕಡೆ ಅತಿ​ಹೆಚ್ಚು ಗಮನ ನೀಡಲು ದಿನೇಶ್ ಕಾರ್ತಿಕ್ ಪತ್ನಿ, ಭಾರ​ತದ ತಾರಾ ಸ್ಕ್ವಾಶ್ ಆಟ​ಗಾ​ರ್ತಿ ದೀಪಿಕಾ ಪಲ್ಲಿ​ಕಲ್‌ ಸ್ಫೂರ್ತಿ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಫಿಟ್ನೆಸ್‌ ತರ​ಬೇ​ತು​ದಾರ ಶಂಕರ್‌ ಬಸು ಹೇಳಿ​ದ್ದಾರೆ. 

ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!

ಐಪಿ​ಎಲ್‌ನಲ್ಲಿ ಆರ್‌ಸಿಬಿ ತಂಡದ ಫಿಟ್ನೆಸ್‌ ತರ​ಬೇ​ತು​ದಾ​ರ​ರಾಗಿ ಕಾರ್ಯ​ನಿ​ರ್ವ​ಹಿ​ಸುವ ಬಸು, ಇಲ್ಲಿ ನಡೆದ ಖಾಸಗಿ ಕಾರ್ಯ​ಕ್ರಮದಲ್ಲಿ ಮಾತ​ನಾ​ಡಿ ಕುತೂ​ಹ​ಲ​ಕಾರಿ ಅಂಶವನ್ನು ಬಿಚ್ಚಿ​ಟ್ಟರು. ‘ನಾ​ನು ಆರ್‌ಸಿಬಿ ಸೇರಿದ ಆರಂಭ​ದಲ್ಲಿ ಕೇವಲ ಐಪಿ​ಎಲ್‌ ಸಮ​ಯ​ದಲ್ಲಿ ಮಾತ್ರ ಕೊಹ್ಲಿ ಜತೆ ಕೆಲಸ ಮಾಡು​ತ್ತಿದ್ದೆ. ಒಮ್ಮೆ ಅವರು ದೀಪಿಕಾ ಫಿಟ್ನೆಸ್‌ ಅಭ್ಯಾಸ ನಡೆ​ಸು​ವು​ದನ್ನು ನೋಡಿ ಅಚ್ಚ​ರಿ​ಪ​ಟ್ಟರು. ನಾನು ಸಹ ಅವ​ರಂತೆ ಫಿಟ್‌ ಆಗ​ಬೇಕು ಎಂದು ಅಭ್ಯಾಸ ಆರಂಭಿ​ಸಿ​ದ​ರು’ ಎಂದು ಶಂಕರ್‌ ಹೇಳಿದ್ದಾರೆ.

ಸಹ ಆಟಗಾರ ನನ್ನ ತಂಗಿ ಜೊತೆ ಮಲಗಿದ್ದಾನೆ; ಹೀಗಾಗಿ 1 ಚೇಂಜ್ ಎಂದ ಡುಪ್ಲೆಸಿಸ್!

2014ರಲ್ಲಿ ದೀಪಿಕಾ ಫಿಟ್ನೆಸ್ ಅಭ್ಯಾಸವನ್ನು ಕಂಡ ಕೊಹ್ಲಿ, ನಾನೇಕೆ ಹೀಗೆ ಪ್ರಯತ್ನಿಸಬಾರದು ಎಂದು ತೀರ್ಮಾನಿದ್ದರಂತೆ. ಫಿಟ್ನೆಸ್ ವಿಚಾರದಲ್ಲಿ ರಾಜಿಯಾಗದ ವಿರಾಟ್ ಕೊಹ್ಲಿ, ಇದೀಗ ಜಗತ್ತಿನ ಸದೃಢ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ವಿರಾಟ್ ಟೀಂ ಇಂಡಿಯಾ ನಾಯಕನಾದ ಬಳಿಕವಂತೂ ಫಿಟ್ನೆಸ್ ಪರೀಕ್ಷೆಯಾದ ಯೋ ಯೋ ಟೆಸ್ಟ್’ಗೆ ಮತ್ತಷ್ಟು ಒತ್ತು ನೀಡಿದ್ದಾರೆ. ಹೀಗಾಗಿ ಭಾರತ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಬೇಕಾದರೇ ಯೋ ಯೋ ಪರೀಕ್ಷೆ ಉತ್ತೀರ್ಣರಾಗುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ.

ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!