ಜೆನ್ ಜೀ ಯುಗದ ಹುಡ್ಗೀರು ಮದುವೆ ಬೇಡ ಎನ್ನಲು 5 ಕಾರಣ ಇಲ್ಲಿವೆ!
ಇತ್ತೀಚಿನ ದಿನಗಳಲ್ಲಿ ಜನರೇಷನ್ ಜೀ ಯುಗದ ಹಲವು ಹುಡುಗಿಯರು ಮದುವೆ ಆಗೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ವೃತ್ತಿ, ಸ್ವಾವಲಂಬನೆ, ಸರಿಯಾದ ಜೀವನ ಸಂಗಾತಿಯ ಹುಡುಕಾಟ, ವಿಫಲ ಮದುವೆಗಳ ಭಯ ಹೀಗೆ ಹಲವು ಕಾರಣಗಳಿವೆ. ಅದರಲ್ಲಿಯೂ 5 ಪ್ರಮುಖ ಕಾರಣಗಳು ಹೀಗಿವೆ ನೋಡಿ..

ಇತ್ತೀಚಿನ ಜನರೇಷನ್ ಜೀ ಯುಗದ ಹುಡುಗಿಯರು ಎಲ್ಲದರಲ್ಲೂ ಸ್ವಾವಲಂಬನೆ, ಸಮಾನತೆ ಹಾಗೂ ಸಬಲೀಕರಣ ಪಡೆದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ಈ ಹಿನ್ನೆಲೆಯಲ್ಲಿ ವೃತ್ತಿ ಮತ್ತು ಸ್ವಾವಲಂಬನೆಗೆ ಹೆಚ್ಚು ಮಹತ್ವ ಕೊಡ್ತಾರೆ. ಮದುವೆ ಆದ್ಮೇಲೆ ಕುಟುಂಬ ಮತ್ತು ವೃತ್ತಿ ಎರಡನ್ನೂ ನಿಭಾಯಿಸೋದು ಕಷ್ಟವೆಂದು ಭಾವಿಸಿದ್ದಾರೆ. ಆದ್ದರಿಂದ ಮದುವೆ ಬಗ್ಗೆ ಯೋಚಿಸೋಕೆ ಹಿಂಜರಿಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮದುವೆಯಾಗಿ ಒಟ್ಟಿಗೆ ಸುಖ ಸಂಸಾರ ಮಾಡಿಕೊಂಡಿರುವ ಜೋಡಿಗಳನ್ನು ನೋಡುವುದೇ ಅಪರೂಪವಾಗಿದೆ. ಆದ್ದರಿಂದ ಸುತ್ತಮುತ್ತ ವಿಫಲ ಮದುವೆಗಳನ್ನ ನೋಡಿ ಭಯ ತಾವು ಮದುವೆ ಮಾಡಿಕೊಳ್ಳಲು ಭಯ ಪಡುತ್ತಿದ್ದಾರೆ. ಇನ್ನು ಬೇಗ ಮದುವೆ ಆಗಿ ಸಮಸ್ಯೆಗೆ ಸಿಲುಕಿಕೊಳ್ಳೋದು ಬೇಡ ಎಂತಲೂ ಮದುವೆ ವಿಳಂಬ ಮಾಡುತ್ತಾರೆ.
ಹುಡುಗನ ಆಯ್ಕೆ ವಿಚಾರದಲ್ಲಿ ಹುಡುಗಿಯರು ಭಾರೀ ಚೂಸಿ ಆಗಿದ್ದಾರೆ. ಮನಸ್ಸಿಗೆ ಹೊಂದುವ ಗಂಡ ಸಿಗದಿದ್ದರೆ ಒಬ್ಬಂಟಿಯಾಗಿಯೇ ಇರೋದು ಒಳ್ಳೇದು ಅಂತ ಹುಡುಗಿಯರು ಭಾವಿಸುತ್ತಾರೆ.
ಮದುವೆಗೆ ಮಾನಸಿಕವಾಗಿ ಸಿದ್ಧರಿಲ್ಲದ ಹುಡುಗಿಯರು ಮದುವೆಯಿಂದ ದೂರ ಉಳಿಯುತ್ತಾರೆ. ಇನ್ನು ಮದುವೆಯಾದ ನಂತರ ತಮ್ಮ ಸೌಂದರ್ಯಕಾಳಜಿ, ಮಕ್ಕಳ ಪಾಲನೆ ಭಯವೂ ಕಾಡುತ್ತದೆ. ಇನ್ನು ಅವಿಭಕ್ತ ಕುಟುಂಬದಲ್ಲಿ ವಾಸ ಮಾಡುವುದಕ್ಕೂ ಹಿಂದೇಟು ಹಾಕುತ್ತಾರೆ.
ವೃತ್ತಿ ಮತ್ತು ಜೀವನದ ಸ್ವಾವಲಂಬನೆ ಬಯಸುವ ಯುವತಿಯರು ಮದುವೆಯಾದ ನಂತರ ಸ್ವಾತಂತ್ರ್ಯ ಹೋಗುತ್ತದೆ ಎಂದು ಮದುವೆಯಿಂದ ದೂರ ಉಳಿಯುತ್ತಾರೆ.