ವರನ "ಚೋಲಿ ಕೆ ಪೀಚೆ" ಹಾಡಿಗೆ ನೃತ್ಯ ವಧುವಿನ ತಂದೆಗೆ ಅವಮಾನಕರ ಎನಿಸಿ, ಮದುವೆ ರದ್ದಾಯಿತು. ವರನ ಸ್ನೇಹಿತರ ಒತ್ತಾಯದ ಮೇರೆಗೆ ನಡೆದ ಈ ಘಟನೆ, ವಧುವಿನ ಕುಟುಂಬದ ನಂಬಿಕೆಗೆ ವಿರುದ್ಧ ಎಂದು ತಂದೆ ಭಾವಿಸಿದರು. ವರನ ಕಡೆಯವರ ಮನವಿಗೂ ಮಣಿಯದೆ, ಮಗಳ ಬೇಡಿಕೊಳ್ಳುವಿಕೆಯನ್ನೂ ತಿರಸ್ಕರಿಸಿ ತಂದೆ ಮದುವೆಯನ್ನು ನಿಲ್ಲಿಸಿದರು.
ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗುತ್ತದೆ ಎನ್ನುವ ಮಾತಿದೆ. ಅದನ್ನೀಗ ಸ್ವಲ್ಪ ಚೇಂಜ್ ಮಾಡಿ, ಮದ್ವೆ ಸ್ವರ್ಗದಲ್ಲಿ ಆಗೋದು, ಡಿವೋರ್ಸ್ ಭೂಮಿಯ ಮೇಲೆ ಆಗೋದು ಎಂದು ಹೇಳ್ತಾರೆ. ಆದರೆ ಇಲ್ಲಿ ಪಾಪ ಮದ್ವೆಗೂ ಮುನ್ನವೇ ವರ ಮಾಡಿದ ಡಾನ್ಸ್ನಿಂದಾಗಿ ಮದ್ವೆನೇ ಕ್ಯಾನ್ಸಲ್ ಆಗೋಗಿದೆ. ಮದ್ವೆ ಆಗ್ತಿರೋ ಖುಷಿಗೆ ಕುಣಿದು ಕುಪ್ಪಳಿದ ವರ ಆಯ್ಕೆ ಮಾಡಿಕೊಂಡಿದ್ದ ಹಾಡು, ಅವನ ಮದುವೆಗೆ ಕುತ್ತು ತಂದಿದೆ. ಅವನು ಈ ಹಾಡಿಗೆ ಡಾನ್ಸ್ ಮಾಡಿದ್ದನ್ನು ನೋಡಿ ವಧುವಿನ ಅಪ್ಪನಿಗೆ ಸಿಟ್ಟು ಬಂದು, ಮದುಮಗ ಎಷ್ಟು ಹೇಳಿದರೂ ಕೇಳದೇ ಅಲ್ಲಿಂದ ಮಗಳನ್ನು ಕರೆದುಕೊಂಡು ಹೋಗಿದ್ದಾನೆ.
ಅಷ್ಟಕ್ಕೂ ಆಗಿದ್ದೇನೆಂದರೆ, ವರನ ಸ್ನೇಹಿತರು ಕೊನೆಗೂ ತಮ್ಮ ಫ್ರೆಂಡ್ ಮದ್ವೆ ಆಗ್ತಾ ಇದ್ದಾನೆ ಎನ್ನೋ ಕಾರಣಕ್ಕೆ ಡಾನ್ಸ್ ಮಾಡುವಂತೆ ಹೇಳಿದ್ದಾರೆ. ವರ ಡಾನ್ಸ್ ಮಾಡಿದ್ದರಲ್ಲಿ ತಪ್ಪೇನಿಲ್ಲ. ಆದರ ಅವನು, ಆಯ್ಕೆ ಮಾಡಿಕೊಂಡಿದ್ದ ಹಾಡು, ಚೋಲಿ ಕೆ ಪೀಚೆ ಕ್ಯಾ ಹೈ ಹಾಡು. ಇದರ ಅರ್ಥ ಬ್ಲೌಸ್ ಹಿಂದೆ ಏನಿದೆ ಎನ್ನುವುದು. ಮಾಧುರಿ ದೀಕ್ಷಿತ ಅಭಿನಯದ ಖಳನಾಯಕ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಅದರಲ್ಲಿಯೂ ಚೋಲಿ ಕೇ ಪೀಚೆ ಕ್ಯಾ ಹೈ ಹಾಡು ಸಕತ್ ಟ್ರೆಂಡಿಂಗ್ನಲ್ಲಿ ಇತ್ತು, ಬ್ಲೌಸ್ ಹಿಂದೆ ಹೃದಯ ಇದೆ ಎನ್ನುವುದು ಮುಂದಿನ ಲೈನ್ ಅರ್ಥ. ಆದರೆ ಇದು ಡಬಲ್ ಮೀನಿಂಗ್ ಆಗಿರುವುದರಿಂದ ಮೊದಲ ಲೈನ್ ಕೇಳಿಯೇ ಮದುಮಗಳ ಅಪ್ಪ ಮದುವೆ ಕ್ಯಾನ್ಸಲ್ ಮಾಡಿ ಮಗಳನ್ನು ಕರೆದುಕೊಂಡು ಹೋಗಿಯೇ ಬಿಟ್ಟಿದ್ದಾನೆ!
ಗೆಳತಿಯನ್ನೇ ಮದ್ವೆಯಾದ ಖ್ಯಾತ ನಟಿ: ಇವರಿಬ್ಬರ ಇಂಟರೆಸ್ಟಿಂಗ್ ಲವ್ ಸ್ಟೋರಿ ಇಲ್ಲಿದೆ...
ಪರಿಪರಿಯಾಗಿ ಮದುಮಗ ಕೇಳಿಕೊಂಡರೂ ವಧುವಿನ ಅಪ್ಪ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅಷ್ಟಕ್ಕೂ ಆಗಿದ್ದೇನೆಂದರೆ, ಮದುವೆ ಗಂಡಿನ ಮೆರವಣಿಗೆಯ ಮೂಲಕ ಮದುವೆಯಾಗುವ ಸ್ಥಳಕ್ಕೆ ಬಂದನು. ಆಗ ಆತನ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅದೇ ಸಮಯದಲ್ಲಿ ಈ ಹಾಡನ್ನು ಹಾಕಿದ್ದಾರೆ. ಪಾಪ ಅದರ ಅರ್ಥ ಈ ವರನಿಗೆ ಗೊತ್ತಾಯ್ತೋ ಇಲ್ಲವೋ, ಅಥ್ವಾ ಗೊತ್ತಿದ್ದರೂ ಹಾಡು ತಾನೇ ಎಂದು ಸ್ಟೆಪ್ ಹಾಕಿದ್ದಾನೆ. ಸ್ನೇಹಿತರ ಒತ್ತಾಯಕ್ಕೆ ಮಣಿದ ವರ ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸಿದರು. ಕೆಲವು ಅತಿಥಿಗಳು ಕೂಡ ಚಪ್ಪಾಳೆ, ಕೇಕೆಯೊಂದಿಗೆ ವರನಿಗೆ ಉತ್ತೇಜನ ಕೊಟ್ಟರು. ಆದರೆ ವರನ ನಡವಳಿಕೆ ಹುಡುಗಿಯ ತಂದೆಗೆ ಇಷ್ಟವಾಗದ ಕಾರಣ ಮದುವೆ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಹುಡುಗನದ್ದು ಅತರೇಕದ ಪ್ರದರ್ಶನ ಎಂದು ಕೋಪಗೊಂಡ ವಧುವಿನ ತಂದೆ ತಕ್ಷಣ ಸಮಾರಂಭವನ್ನು ನಿಲ್ಲಿಸಿದ್ದು ಮದುವೆಯನ್ನು ರದ್ದು ಮಾಡಿದರು. ವರ ನಡೆದುಕೊಂಡ ರೀತಿಯು ಹುಡುಗಿಯ ಕುಟುಂಬದ ನಂಬಿಕೆಗಳನ್ನು ಅವಮಾನಿಸುತ್ತದೆ ಎಂದು ಹೇಳಿದ್ದು ಮದುವೆ ರದ್ದು ಮಾಡಿದ್ದಾರೆ. ವರನ ಕಡೆಯರು ಒಂದು ಕಡೆ ಗೋಗರೆದರೆ, ಮದುಮಗಳು ಕೂಡ ಮದುವೆ ನಿಲ್ಲಿಸದಂತೆ ಪರಿಪರಿ ಅಪ್ಪನನ್ನು ಬೇಡಿಕೊಂಡಿದ್ದಾಳೆ. ಆದರೆ ಅಪ್ಪ ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮದುವೆ ಮುರಿದುಬಿದ್ದ ನಂತರವೂ ಹುಡುಗಿಯ ತಂದೆಯ ಕೋಪ ಕಡಿಮೆಯಾಗಿರಲಿಲ್ಲ. ತಮ್ಮ ಮಗಳು ಮತ್ತು ವರನ ಕಡೆಯವರ ಕುಟುಂಬದ ನಡುವೆ ಯಾವುದೇ ಸಂಪರ್ಕ ಇರಬಾರದು ಎಂದು ತಾಕೀತು ಕೂಡ ಮಾಡಿದ್ದಾನೆ.
ಶಿವಣ್ಣನ ಮದ್ವೆ ದಿನ ರಾಜ್ಕುಮಾರ್ ಹೋಟೆಲ್ನಲ್ಲಿ ಊಟ ಮಾಡಿದ್ರಂತೆ! ಘಟನೆ ವಿವರಿಸಿದ ಸುಧಾರಾಣಿ


