Migraine in Pregnancy: ಗರ್ಭಿಣಿಯರಿಗೆ ಮೈಗ್ರೇನ್ ಏಕೆ ಕಾಡುತ್ತೆ?
ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು (harmone changes) ಉಂಟಾಗುತ್ತವೆ, ಇದರಿಂದಾಗಿ ಅವರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಂತಿ, ತಲೆಸುತ್ತುವಿಕೆ ಮೊದಲಾದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಒಂದು ತಲೆ ನೋವು ಕೂಡ ಆಗಿದೆ.
ಮೈಗ್ರೇನ್
ಗರ್ಭಾವಸ್ಥೆಯಲ್ಲಿ, ಮಹಿಳೆಯರಿಗೆ ಹೆಚ್ಚಾಗಿ ಮೈಗ್ರೇನ್ ಸಮಸ್ಯೆಗಳು (migraine problem) ಕಂಡುಬರುತ್ತವೆ, ಇದು ಸಾಮಾನ್ಯ. ಆದರೆ ಈ ಸಮಸ್ಯೆ ಯಾಕೆ ಮತ್ತು ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವಾಗೋದಿಲ್ಲ. ಆದಾಗ್ಯೂ ಗರ್ಭಾವಸ್ಥೆಯಲ್ಲಿ, ಕೆಲವು ಸಂದರ್ಭಗಳಲ್ಲಿ ತಲೆನೋವು (Headache) ಹೆಚ್ಚು ಅಪಾಯಕಾರಿಯಾಗಬಹುದು.
ಕಾರಣ
ಗರ್ಭಧಾರಣೆಯಲ್ಲಿ ಮೈಗ್ರೇನ್ ನೋವಿಗೆ ಅನೇಕ ಕಾರಣಗಳಿರಬಹುದು. ಇದಕ್ಕೆ ದೊಡ್ಡ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ (Hormonal Imbalance). ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಹಲವು ಬದಲಾವಣೆಗಳಾಗುವುದರಿಂದ ಹಾರ್ಮೋನ್ ಬದಲಾವಣೆ ಸಾಮಾನ್ಯ.
ತೂಕ
ಗರ್ಭಿಣಿಯಾದಾಗ ಮಹಿಳೆಯರಲ್ಲಿ ಮುಖ್ಯವಾಗಿ ತೂಕ ಹೆಚ್ಚಾಗುತ್ತದೆ (Weight Gain). ಇದು ತಾಯಿ ಮತ್ತು ಮಗುವಿನ ಆರೋಗ್ಯಕರ ಬೆಳವಣಿಗೆ (Health Growth) ಬದಲಾವಣೆಯಾಗಿದೆ. ಈ ರೀತಿಯಲ್ಲಿ ತೂಕದಲ್ಲಿ ಅಸಮತೋಲನವು (Imbalance)ಮೈಗ್ರೇನ್ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು.
ಆಹಾರ ಮತ್ತು ಪಾನೀಯ
ಗರ್ಭಿಣಿಯರು (pregnant women) ಈ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಆಹಾರ ಸೇವಿಸಿದಲ್ಲಿ ದೇಹದಲ್ಲಿ ಅಸಮತೋಲನ ಉಂಟಾಗುತ್ತದೆ. ಅಸಮತೋಲಿತ ಆಹಾರ (Balanced Food) ಮತ್ತು ಕಳಪೆ ಪೌಷ್ಟಿಕಾಂಶದಿಂದಾಗಿ, ತಲೆನೋವು ಸಮಸ್ಯೆಗಳೂ ಉಂಟಾಗಬಹುದು.
ದೈಹಿಕ ಚಟುವಟಿಕೆ (Physical Activity)
ಗರ್ಭಾವಸ್ಥೆಯಲ್ಲಿ, ಮಹಿಳೆಯರು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತಾರೆ. ಈ ಸಮಯದಲ್ಲಿ ಹೆಚ್ಚು ಆಯಾಸ, ಶ್ರಮ ಪಡಬಾರದು ಎನ್ನುವ ಕಾರಣದಿಂದಾಗಿ ದೈಹಿಕ ಚಟುವಟಿಕೆಗಳನ್ನು ಕಡೆಗಣಿಸುತ್ತಾರೆ. ಇದು ಮೈಗ್ರೇನ್ ಸಮಸ್ಯೆಗೂ ಕಾರಣವಾಗಬಹುದು.
ರಕ್ತದೊತ್ತಡ (Blood Pressure)
ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ (Blood Pressure) ಅಸಮತೋಲನಗೊಂಡ ಮಹಿಳೆಯರಿಗೆ ಈ ಸಮಸ್ಯೆಯೂ ಇರಬಹುದು. ಗರ್ಭಿಣಿ ಮಹಿಳೆಯರಿಗೆ ಈ ಸಮಯದಲ್ಲಿ ದೇಹದಲ್ಲಿ ಬದಲಾವಣೆ, ತೂಕ ಹೆಚ್ಚಳ, ಒತ್ತಡ (Stress), ಟೆನ್ಶನ್ (Tension) ಮೊದಲಾದ ಕಾರಣಗಳಿಂದಾಗಿ ರಕ್ತದೊತ್ತಡ ಸಮಸ್ಯೆ ಕಾಡುತ್ತದೆ.
ನಿದ್ರೆ
ಆಗಾಗ್ಗೆ ಗರ್ಭಿಣಿ ಮಹಿಳೆಯರಿಗೆ ಒತ್ತಡ ಅಥವಾ ಆತಂಕದಿಂದಾಗಿ ನಿದ್ರೆ ಬರುವುದಿಲ್ಲ, ನಿದ್ರೆ ಕಡಿಮೆಯಾದಂತೆ ಮಹಿಳೆಯರಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ. ಇದು ತಲೆನೋವು ಸಮಸ್ಯೆಗೂ ಕಾರಣವಾಗಬಹುದು. ಆದುದರಿಂದ ಗರ್ಭವಾಸ್ಥೆಯಲ್ಲಿ ಸರಿಯಾಗಿ ನಿದ್ರೆ ಮಾಡುವುದು ಮುಖ್ಯವಾಗಿದೆ.