ಮಗುವಿಗೆ ಫಿಂಗರ್ ಫೀಡಿಂಗ್ ಮಾಡೋದು ಉತ್ತಮವೇ?
ಮಗುವು ಚಿಕ್ಕವನಾಗಿದ್ದಾಗ ಮತ್ತು ತನ್ನಷ್ಟಕ್ಕೆ ತಾನೇ ತಿನ್ನಲು ಸಾಧ್ಯವಾಗದಿದ್ದಾಗ, ನಾವು ಆಗಾಗ್ಗೆ ಮಗುವಿಗೆ ಹಾಲುಣಿಸಲು ಫಿಂಗರ್ ಫೀಡಿಂಗ್ ಮಾಡುತ್ತೇವೆ. ಸಾಮಾನ್ಯವಾಗಿ, ಸ್ತನ್ಯಪಾನವು ಮಗುವಿನ ಪೋಷಣೆಗೆ ಅತ್ಯುತ್ತಮ ಮೂಲ, ಆದರೆ ಅನೇಕ ಬಾರಿ ತಾಯಿ ಅಥವಾ ಮಗುಗೆ ಬ್ರೆಸ್ಟ್ ಫೀಡಿಂಗ್ ಮಾಡಲು ಕಷ್ಟವಾಗಬಹುದು. ಹಾಗಾಗಿ, ಮಗುವನ್ನು ಪೋಷಿಸಲು ಇತರ ಮಾರ್ಗ ಕಂಡಕೊಳ್ಳಬೇಕಾಗಬಹುದು.

ಮಗುವಿಗೆ ಸ್ವತಃ ಹಾಲು ಕುಡಿಯಲು ಸಾಧ್ಯವಾಗದಿದ್ದಾಗ, ಫಿಂಗರ್ ಫೀಡಿಂಗ್ (Finger feeding)ಸಹಾಯದಿಂದ ಹಾಲನ್ನು ನೀಡಲಾಗುತ್ತೆ .ಕೆಲವೊಮ್ಮೆ ಮಗುವಿಗೆ ಸ್ತನದಿಂದ ಹಾಲು ಕುಡಿಯಲು ಸಾಧ್ಯವಾಗೋದಿಲ್ಲ, ತಾಯಿ ಮಗುವಿಗೆ ಎದೆಹಾಲು ಉಣಿಸಲು ಸಾಧ್ಯವಾಗೋದಿಲ್ಲ.
ಕೆಲವೊಮ್ಮೆ ಮಗುವಿಗೆ ಸ್ತನದಿಂದ(Breast feeding) ಹಾಲು ಎಳೆಯಲು ಕಷ್ಟವಾಗುತ್ತೆ, ಆಗ ಮಗುವಿಗೆ ಫಿಂಗರ್ ಫೀಡಿಂಗ್ ಮೂಲಕ ಹಾಲನ್ನು ನೀಡಲಾಗುತ್ತೆ. ಆದರೆ ಮಗುವಿಗೆ ಹಾಲುಣಿಸುವ ಈ ವಿಧಾನವು ಎಷ್ಟು ಸುರಕ್ಷಿತ ಮತ್ತು ಅದು ಹಾನಿಯನ್ನುಂಟುಮಾಡಬಹುದೇ ಎಂದು ನಿಮಗೆ ತಿಳಿದಿದೆಯೇ?
ಫಿಂಗರ್ ಫೀಡಿಂಗ್ ನ ಬೆನಿಫಿಟ್ಸ್
ಫಿಂಗರ್ ಫೀಡಿಂಗ್ ಮಗುವಿಗೆ ಮೊಲೆತೊಟ್ಟು ಎಳೆಯಲು ಪ್ರೇರೇಪಿಸುತ್ತೆ. ಇದರ ಸಹಾಯದಿಂದ, ಮಗು ನಂತರ ಮೊಲೆತೊಟ್ಟು ಅಥವಾ ಸ್ತನದಿಂದ ಹಾಲು ಕುಡಿಯಲು ಸಾಧ್ಯವಾಗುತ್ತೆ. ಇದು ಬ್ರೆಸ್ಟ್ ಫೀಡಿಂಗ್ ಸುಲಭವಾಗಿಸುವ ವಿಧಾನವಾಗಿದೆ.
ಹಾಲುಣಿಸುವ ಈ ವಿಧಾನದಲ್ಲಿ, ಮಗುವಿನ ಸಕ್ಕಿನ್ಗ್ ರಿಫ್ಲೆಕ್ಸ್ ಉತ್ತಮವಾಗುತ್ತೆ. ಕೆಲವು ಪ್ರಿ ಟರ್ಮ್(Pre term) ಮಕ್ಕಳ ಸ್ತನ್ಯಪಾನಕ್ಕೆ ಸಕ್ಕಿಂಗ್ ರಿಫ್ಲೆಕ್ಸ್ ಒಳ್ಳೆಯದಲ್ಲ, ಅವರಿಗೆ ಫಿಂಗರ್ ಫೀಡಿಂಗ್ ಸಹಾಯ ಮಾಡುತ್ತೆ. ಇದು ತಾಯಿ ಮತ್ತು ಮಗುವಿಗೆ ಸ್ಕಿನ್ ಟು ಸ್ಕಿನ್ ಸಂಪರ್ಕ ಮಾಡಲು ಸಹಾಯ ಮಾಡುತ್ತೆ.
ಫಿಂಗರ್ ಫೀಡಿಂಗ್ ಮಾಡೋದು ಹೇಗೆ?
ಫಿಂಗರ್ ಫೀಡಿಂಗ್ ಮಾಡೋ ಮೊದಲು, ನೀವು ಡಾಕ್ಟರ್(Doctor) ಅಥವಾ ಸರ್ಟಿಫೈಡ್ ಲಕ್ಟ್ಯಾಷನ್ ಕನ್ಸಲ್ಟೆಂಟ್ ಜೊತೆ ಮಾತನಾಡಬೇಕು. ಇದಕ್ಕಾಗಿ, ಅಢೆಸಿವ್ ವೈದ್ಯಕೀಯ ಟೇಪ್, ಇನ್ಫ್ಯಾಂಟ್ ಫಿಟ್ಟಿಂಗ್ ಸಿರಿಂಜ್, ಇನ್ಫ್ಯಾಂಟ್ ಫೀಡಿಂಗ್ ಟ್ಯೂಬ್ ಮತ್ತು ಫೀಡಿಂಗ್ ಟ್ಯೂಬ್ ಕನೆಕ್ಟರ್ ಅಗತ್ಯವಿರುತ್ತೆ. ಮಗುವಿಗೆ ಫಿಂಗರ್ ಫೀಡಿಂಗ್ ಹೇಗೆ ಮಾಡಿಸೋದು ಎಂದು ವೈದ್ಯರು ನಿಮಗೆ ತಿಳಿಸುತ್ತಾರೆ.
ಫಿಂಗರ್ ಫೀಡಿಂಗ್ ನ ಕೆಲವು ಅನಾನುಕೂಲತೆಗಳು ಸಹ ಇವೆ
ಫಿಂಗರ್ ಫೀಡಿಂಗ್ ನಲ್ಲಿ ತೆಳುವಾದ-ಸಿ ಟ್ಯೂಬ್ ಬಳಸಲಾಗುತ್ತೆ. ಮಗುವಿಗೆ ಹಾಲುಣಿಸಿದಾಗಲೆಲ್ಲಾ ಈ ಟ್ಯೂಬ್ ಸ್ವಚ್ಛಗೊಳಿಸೋದು ಸ್ವಲ್ಪ ಕಷ್ಟ. ನೀವು ಟ್ಯೂಬ್ ಸ್ವಚ್ಛಗೊಳಿಸದಿದ್ದರೆ, ಅದರಲ್ಲಿ ಬ್ಯಾಕ್ಟೀರಿಯಾ(Bacteria) ಬೆಳೆಯಬಹುದು, ಇದು ಮಗುವಿಗೆ ಸೋಂಕು ತಗುಲಲು ಕಾರಣವಾಗಬಹುದು.
ತಪ್ಪು ಸಿರಿಂಜ್, ಟ್ಯೂಬ್ ಮತ್ತು ಕನೆಕ್ಟರ್ ಕಾಂಬಿನೇಶನಿಂದಾಗಿ, ಮಗು ಕಡಿಮೆ ಅಥವಾ ಹೆಚ್ಚು ಹಾಲನ್ನು ಪಡೆಯಬಹುದು. ಮಗು(Baby) ಸರಿಯಾಗಿ ಹಾಲು ಕುಡಿಯುತ್ತದೆಯೇ? ಇಲ್ಲವೇ ಎಂಬುದನ್ನು ನೀವು ಪರೀಕ್ಷೆ ಮಾಡಬೇಕು.
ಮಗುವಿಗೆ ಎದೆಹಾಲುಣಿಸಲು ಸಾಧ್ಯವಾಗದಿದ್ದರೆ, ಈ ರೀತಿಯಾಗಿ ಹಾಲನ್ನು ನೀಡಲಾಗುತ್ತೆ . ಮಗು ಹಾಲು ಕುಡಿಯಲು ಕಲಿತಾಗ ಅಥವಾ ತಾಯಿ ಎದೆಹಾಲು ಯಾವಾಗ ಉಣಿಸಬಹುದು, ಆಗ ನೀವು ಮಗುವಿನ ಫಿಂಗರ್ ಫೀಡಿಂಗ್ ತಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.