ಒಂದು ವರ್ಷದ ಮಗುವಿಗೆ ಶಿಸ್ತನ್ನು ಕಲಿಸೋದು ಹೇಗೆ?
ಒಂದು ವರ್ಷದ ಮಗುವಿಗೆ ತನ್ನ ಭಾವನೆಗಳನ್ನು ನಿಯಂತ್ರಿಸಲು ಅಥವಾ ಸರಿಯಾದ ರೀತಿಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ ಇರೋದಿಲ್ಲ. ಮಗು ರೂಲ್ಸ್ ಅರ್ಥಮಾಡಿಕೊಂಡರೂ, ಅವುಗಳನ್ನು ಫಾಲೋ ಮಾಡುವಷ್ಟು ಸಮರ್ಥನಾಗಿದ್ದರೂ, ಅದನ್ನ ಅಳವಡೀಸೋವಷ್ಟು ಸಮರ್ಥನಾಗಿರೋದಿಲ್ಲ. ಹಾಗಾಗಿ ಮಕ್ಕಳು ಆಗಾಗ್ಗೆ ತಮ್ಮನ್ನು ತಾವು ಹರ್ಟ್ ಮಾಡಿಕೊಳ್ಳುತ್ತಾರೆ.
ಮಗುವಿನ(Child) ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ, ಪೋಷಕರು ತಮ್ಮ ಒಂದು ವರ್ಷದ ಮಗುವನ್ನು ಹೇಗೆ ಶಿಸ್ತುಬದ್ಧಗೊಳಿಸಬಹುದು ಎಂದು ತಿಳಿದಿರಬೇಕು. ಸಕಾರಾತ್ಮಕ ಶಿಸ್ತು ಮಗುವನ್ನು ದೃಢವಾದ, ಸಹಾನುಭೂತಿಯುಳ್ಳ ವ್ಯಕ್ತಿಯನ್ನಾಗಿಸುತ್ತೆ ಮತ್ತು ಇದು ಪೋಷಕರು ಮತ್ತು ಮಗುವಿನ ನಡುವೆ ಗೌರವ ಮತ್ತು ವಿಶ್ವಾಸ ಹೆಚ್ಚಿಸುತ್ತೆ.
ಮಗುವಿಗೆ ಶಿಸ್ತು(Discipline) ಕಲಿಸಲು ಯಾವ ವಯಸ್ಸು ಸೂಕ್ತ
ಹೆಚ್ಚಿನ ಮಕ್ಕಳು 6 ಮತ್ತು 11 ತಿಂಗಳ ವಯಸ್ಸಿನಲ್ಲಿ 'ಇಲ್ಲ' ಎಂಬ ಪದವನ್ನು ಅರ್ಥಮಾಡಿಕೊಳ್ಳುತ್ತಾರೆ. ಹಾಗಾಗಿ ಈ ವಯಸ್ಸಿನಲ್ಲಿ, ಅವರು ಸರಿ ಮತ್ತು ತಪ್ಪು ಅಥವಾ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತೆ, ಅವರು ಬೌದ್ಧಿಕವಾಗಿ ಅಭಿವೃದ್ಧಿ ಹೊಂದಿರೋದಿಲ್ಲ. ಆದ್ದರಿಂದ, ಮಕ್ಕಳು ಸರಿಯಾದ ನಡವಳಿಕೆಗಾಗಿ ತಮ್ಮ ಹೆತ್ತವರನ್ನು ಅವಲಂಬಿಸಿರುತ್ತಾರೆ.
ಪೋಷಕರು ತಮ್ಮ ಮಗುವಿನ ವಯಸ್ಸಿಗೆ ಅನುಗುಣವಾಗಿ ಕೆಲವು ಬೌಂಡರಿ(Boundary) ಕಾಪಾಡಿಕೊಳ್ಳಬೇಕು ಮತ್ತು ತಮ್ಮನ್ನು ತಾವು ನಿಯಂತ್ರಿಸಲು ಮತ್ತು ಜವಾಬ್ದಾರಿಯುತವಾಗಿ ವರ್ತಿಸಲು ಮಗುವಿಗೆ ಮಾರ್ಗದರ್ಶನ ಮಾಡುತ್ತಲೇ ಇರಬೇಕು. ನೀವು 6 ತಿಂಗಳ ಮಗುವನ್ನು ಡಿಸೈಪ್ಲಿನ್ ಮಾಡಲು ಪ್ರಾರಂಭಿಸಬಹುದು, ಆದರೆ ಇಲ್ಲಿ ಶಿಸ್ತು ಎಂದರೆ ಮಗುವಿಗೆ ಸುರಕ್ಷಿತವಾಗಿರಲು ಕಲಿಸೋದು ಮತ್ತು ಈ ವಯಸ್ಸಿನಲ್ಲಿ ಅವನ ನಡವಳಿಕೆ ಸುಧಾರಿಸುತ್ತೆ.
ಸುರಕ್ಷಿತ(Secure) ಪರಿಸರ
ಅಂಬೆಗಾಲಿಡುವ ಮಕ್ಕಳು ಸ್ಪರ್ಶಿಸಲು, ಸ್ಮೆಲ್, ಟೇಸ್ಟ್ ನೋಡಲು ಮತ್ತು ರೋಲ್ ಮಾಡಲು ಕಲಿಯುತ್ತಾರೆ, ಅವರು ಆಗಾಗ್ಗೆ ಉತ್ಸಾಹದಿಂದ ಏನನ್ನಾದರೂ ಮಾಡುತ್ತಾರೆ, ಅದು ಅವರಿಗೆ ಹರ್ಟ್ ಮಾಡುತ್ತೆ. ಆದ್ದರಿಂದ ನಿಮ್ಮ ಮನೆಯನ್ನು ಚೈಲ್ಡ್ ಫ್ರೆಂಡ್ಲಿ ಮಾಡಿ ಮತ್ತು ಮಗುವಿಗೆ ಹಾನಿಕಾರಕವಾದ ಎಲ್ಲವನ್ನೂ ದೂರವಿಡಿ.
ಕೆಲವು ಬೌಂಡರಿ ಕಾಪಾಡಿಕೊಳ್ಳಿ
ಒಂದು ವರ್ಷದ ಮಗು ಉದ್ದೇಶಪೂರ್ವಕವಾಗಿ ಯಾರನ್ನೂ ನಿಂದಿಸಲು ಸಾಧ್ಯವಿಲ್ಲ. ಅದು ತಮ್ಮ ಜಗತ್ತನ್ನು ತಿಳಿಯಲು ಮಾತ್ರ ತನ್ನ ಬೌಂಡರಿಯಿಂದ ಹೊರಬರುತ್ತೆ. ಆದ್ದರಿಂದ, ಏನಾದರೂ ತಪ್ಪಾದರೆ(Fault) ಮಗುವನ್ನು ಶಿಕ್ಷಿಸೋದು ಸರಿಯಲ್ಲ. ಬದಲಾಗಿ, ನೀವು ಕೆಲವು ಸ್ಪಷ್ಟ ಲಿಮಿಟ್ಸ್ ಸೃಷ್ಟಿಸಿ. ಆ ಕೆಲಸ ಮತ್ತೆ ಮತ್ತೆ ಮಾಡೋದು ಬೇಡ ಎಂದು ಮಗುವಿಗೆ ನೆನಪಿಸಿ.
ದಿನಚರಿಯನ್ನು ರಚಿಸಿ
ನಿಗದಿತ ದಿನಚರಿಯಲ್ಲಿ, ಮಗುವು ಸುರಕ್ಷಿತವಾಗಿದೆ ಎಂದು ಭಾವಿಸುತ್ತೆ. ಅದು ಏನು ಮಾಡಬೇಕೆಂದು ಸಹ ಅರ್ಥಮಾಡಿಕೊಳ್ಳುತ್ತೆ. ಮಗುವಿನ ಆಹಾರ(Food) ಸೇವನೆಯಿಂದ ಹಿಡಿದು ದಿನಚರಿಗೆ ಅನುಗುಣವಾಗಿ ಮಲಗುವ ಸಮಯವನ್ನು ಇರಿಸಿಕೊಳ್ಳಿ.
ರೋಲ್ ಮಾಡೆಲ್(Role model) ಆಗಿ
ಮಕ್ಕಳು ತಮ್ಮ ಸುತ್ತಲಿನ ಜನರನ್ನು ಕಾಪಿ ಮಾಡುತ್ತೆ. ನಿಮ್ಮ ಮಗುವನ್ನು ನೀವು ಏನು ಮಾಡಲು ಬಯಸುತ್ತೀರಾ ಅದನ್ನು ಮೊದಲು ನೀವು ಮಾಡಲು ಪ್ರಯತ್ನಿಸಿ. ನಿಮ್ಮ ಮಗು ಅಳುವುದನ್ನು ನೀವು ಬಯಸದಿದ್ದರೆ, ಅದನ್ನು ನೀವೇ ಮಾಡುವುದನ್ನು ತಪ್ಪಿಸಿ.
ಮತ್ತೆ ಮತ್ತೆ ಬೇಡ ಎಂದು ಹೇಳುವುದನ್ನು ತಪ್ಪಿಸಿ
ಮಗು ಸಹ 'ಇಲ್ಲ'(No) ಎಂಬುದನ್ನು ಅರ್ಥಮಾಡಿಕೊಳ್ಳುತ್ತೆ ಆದರೆ ನೀವು ಈ ಪದ ಹೆಚ್ಚು ಬಳಸಬೇಕಾಗಿಲ್ಲ. ಮಗುವು ಬಿಸಿ ಮಡಕೆ ಟಚ್ ಮಾಡೋವಾಗ ಅಥವಾ ಓವೆನ್ ಬಾಗಿಲನ್ನು ತೆರೆಯಲು ಹೊರಟಾಗ no ಎಂದು ಹೇಳೋದು ಅವಶ್ಯಕ.