ಚಳಿಗಾಲದಲ್ಲಿ ಯೋನಿ ಸಮಸ್ಯೆಗೇನು ಸುಲಭದ ಪರಿಹಾರ!
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶೀತದಿಂದಾಗಿ ಯೋನಿ ಪಿಎಚ್ ಹದಗೆಡಲು ಪ್ರಾರಂಭಿಸಿದ್ಯಾ? ಹೌದು ಎಂದಾದಲ್ಲಿ... ನೀವು ವಿಂಟರ್ ವಜೈನಾ ಸಮಸ್ಯೆಗೆ ಗುರಿಯಾಗಿರಬಹುದು. ಏನಿದು ಸಮಸ್ಯೆ? ಯಾಕೆ ಈ ಸಮಸ್ಯೆ ಕಾಡುತ್ತೆ? ಇದನ್ನು ನಿವಾರಿಸೋದು ಹೇಗೆ ತಿಳಿಯೋಣ.
ಚಳಿಗಾಲ ನಮ್ಮ ಚರ್ಮದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತೆ. ಕೆಲವೊಮ್ಮೆ ಅದು ತನ್ನಷ್ಟಕ್ಕೆ ತಾನೇ ಒಣಗುತ್ತೆ, ಕೆಲವೊಮ್ಮೆ ತುಂಬಾ ಎಣ್ಣೆಯುಕ್ತವಾಗಿರುತ್ತೆ. ಈ ಕಾರಣದಿಂದಾಗಿ, ಚರ್ಮವು ತುಂಬಾ ಶುಷ್ಕ ಮತ್ತು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತೆ ಮತ್ತು ಸರಿಯಾದ ಹೈಡ್ರೇಶನ್ ಹೊರತಾಗಿಯೂ, ಅದನ್ನು ತೊಡೆದು ಹಾಕೋದು ತುಂಬಾ ಕಷ್ಟ. ಆದರೆ ಹವಾಮಾನದಲ್ಲಿ ಹೆಚ್ಚುತ್ತಿರುವ ಶೀತ ನಮ್ಮನ್ನು ಕಾಡೋದು ಮಾತ್ರವಲ್ಲದೆ, ಯೋನಿ (Vagina) ಒಣಗುವಂತೆ ಮಾಡುತ್ತೆ ಎಂದು ನಿಮಗೆ ತಿಳಿದಿದ್ಯಾ?
ಹೌದು. ಇದು ನಿಜ. ಚಳಿಗಾಲದಲ್ಲಿ ಯೋನಿ ಒಣಗೋದರಿಂದ ನೀವು ತೊಂದರೆಗೀಡಾಗಿದ್ದೀರಾ? ಈ ದಿನಗಳಲ್ಲಿ ಅದು ತುಂಬಾ ಒಣಗುತ್ತಿದ್ಯಾ? ಹೌದು ಎಂದಾದಲ್ಲಿ... ಇದು ನಿಮಗೆ ಮಾತ್ರ ಸಂಭವಿಸೋದಿಲ್ಲ, ಅನೇಕ ಮಹಿಳೆಯರು ಚಳಿಗಾಲದ ದಿನಗಳಲ್ಲಿ ಈ ಸಮಸ್ಯೆಯನ್ನು ಹೊಂದಿರುತ್ತಾರೆ - ಇದನ್ನು Winter vagina ಎಂದು ಕರೆಯಲಾಗುತ್ತೆ. ಯೋನಿಯ ಶುಷ್ಕತೆಯು ಸೋಂಕು (Infection) ಅಥವಾ ಹವಾಮಾನದಲ್ಲಿನ ಬದಲಾವಣೆ ಎರಡರಿಂದಲೂ ಉಂಟಾಗಬಹುದು. ಈ ಸಮಸ್ಯೆ ಬಗ್ಗೆ ತಿಳಿಯೋಣ.
Winter vagina ಎಂದರೇನು?
Winter vagina ಶೀತ ತಿಂಗಳಲ್ಲಿ ಯೋನಿ ಶುಷ್ಕತೆ ಉಂಟಾಗಲು ಪ್ರಾರಂಭಿಸಿದಾಗ ಸಂಭವಿಸುತ್ತೆ. ಯೋನಿಯಲ್ಲಿ ಸ್ವಲ್ಪ ಶುಷ್ಕ ಮತ್ತು ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ, ಅದು ತಾಪಮಾನದಲ್ಲಿನ ಕುಸಿತದಿಂದಾಗಿ ಇರಬಹುದು. ಈ ಕಾರಣದಿಂದಾಗಿ, ನಿಮ್ಮ ಲೈಂಗಿಕ ಜೀವನದಲ್ಲಿ (Sex life) ಸ್ವಲ್ಪ ಅಡಚಣೆ ಉಂಟಾಗಬಹುದು, ಯಾಕಂದ್ರೆ ಸ್ಮೂತ್ ನೆಸ್ ಕಡಿಮೆಯಾಗಲು ಪ್ರಾರಂಭಿಸುತ್ತೆ.
Winter vagina ಸಮಸ್ಯೆಗೆ ಕಾರಣ ಏನು?
ಬಿಗಿಯಾದ ಬಟ್ಟೆ(Tight dress)
ಇಂಟಿಮೇಟ್ ಏರಿಯಾ ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಆದ್ದರಿಂದ, ಚಳಿಗಾಲದ ಕಾರಣದಿಂದಾಗಿ ನೀವು ಥರ್ಮಲ್ ಅಥವಾ ಹೆಚ್ಚು ಬಿಗಿಯಾಗಿರುವ ಬಟ್ಟೆ ಧರಿಸಲು ಪ್ರಾರಂಭಿಸಿದಾಗ, ಯೋನಿಗೆ ಉಸಿರಾಡಲು ಸ್ಥಳ ಸಿಗೋದಿಲ್ಲ. ತೇವಾಂಶವು ದಪ್ಪ ಬಟ್ಟೆಯಲ್ಲಿ ಲಾಕ್ ಆಗುತ್ತೆ, ಇದರಿಂದಾಗಿ ಯೋನಿ ಡ್ರೈ ಆಗುತ್ತೆ ಮತ್ತು ಇಂಫೆಕ್ಷನ್ ಹೆಚ್ಚಾಗಬಹುದು, ಇದರಿಂದಾಗಿ ಕಿರಿಕಿರಿ ಉಂಟಾಗುತ್ತೆ.
ಹೈಡ್ರೇಶನ್ (Hydration) ಕೊರತೆ
ನಾವೆಲ್ಲರೂ ಚಳಿಗಾಲದಲ್ಲಿ ಕುಡಿಯುವ ನೀರಿನ ಪ್ರಮಾಣ ಕಡಿಮೆ ಮಾಡುತ್ತೇವೆ, ಇದರಿಂದಾಗಿ ಚರ್ಮದಲ್ಲಿ ತೇವಾಂಶದ ಕೊರತೆ ಉಂಟಾಗುತ್ತೆ. ಈ ಕಾರಣದಿಂದಾಗಿ, ಚರ್ಮದಲ್ಲಿ ಶುಷ್ಕತೆ ಹೆಚ್ಚಾಗುತ್ತೆ ಮತ್ತು ಯೋನಿ ಪ್ರದೇಶವು ಸಹ ಒಣಗಲು ಪ್ರಾರಂಭಿಸುತ್ತೆ. ಹಾಗಾಗಿ ತಜ್ಞರು ಎಣ್ಣೆಯ ಸಹಾಯದಿಂದ ಯೋನಿ ಪ್ರದೇಶವನ್ನು ಮಾಯಿಶ್ಚರೈಸ್ ಮಾಡಲು ಶಿಫಾರಸು ಮಾಡುತ್ತಾರೆ.
ದೀರ್ಘಕಾಲದವರೆಗೆ ಬಿಸಿ ನೀರಿನಿಂದ(Hot water) ಸ್ನಾನ ಮಾಡೋದರಿಂದ, ಹೀಟರ್ ಬಳಿ ಯಾವಾಗಲೂ ಕುಳಿತುಕೊಳ್ಳೋದರಿಂದ, ಯೋನಿಯ ಸೂಕ್ಷ್ಮಜೀವಿಯನ್ನು ಸಹ ತೊಂದರೆಗೊಳಿಸಬಹುದು. ಹಾಗಾಗಿ ಸಾಕಷ್ಟು ಜಾಗೃತರಾಗಿರಬೇಕು. ತುಂಬಾ ಹೊತ್ತಿನವರೆಗೆ ಬಿಸಿ ನೀರಿನ ಸ್ನಾನ ಮಾಡೋದನ್ನು ಅವಾಯ್ಡ್ ಮಾಡಿ.
ಚಳಿಗಾಲದಲ್ಲಿ ಯೋನಿಯನ್ನು ಶುಷ್ಕತೆಯಿಂದ ಹೇಗೆ ರಕ್ಷಿಸಬಹುದು?
ಸರಿಯಾದ ಡಯಟ್ (Diet) ಮುಖ್ಯ
ಯೋನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ತೆಗೆದುಕೊಳ್ಳೋದು ಬಹಳ ಮುಖ್ಯ. ಸಿಹಿ, ಸಂಸ್ಕರಿಸಿದ ಮತ್ತು ಜಂಕ್ ಫುಡ್ ಸೇವಿಸೋದರಿಂದ ಯೋನಿ ಪಿಎಚ್ ಮತ್ತು ಹಾರ್ಮೋನ್ ಸಮತೋಲನ ಎರಡನ್ನೂ ಅಸ್ತವ್ಯಸ್ತಗೊಳಿಸಬಹುದು. ಇದು ಶುಷ್ಕತೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಆದ್ದರಿಂದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
ಗಾಳಿಯಾಡುವ ಬಟ್ಟೆ ಧರಿಸದಿರೋದು
ಹೌದು, ಇದು ಶೀತವಾಗಿದೆ, ಆದರೆ ಅತಿ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಯೋನಿಗೆ ಸಾಧ್ಯವಾದಷ್ಟು ಉಸಿರಾಡಲು ಸ್ಥಳಾವಕಾಶ ಪಡೆಯಬೇಕು, ಇದರಿಂದ ಆರೋಗ್ಯಕರ ಪಿಎಚ್ ಕಾಪಾಡಿಕೊಳ್ಳಬಹುದು. ಹೊರಗೆ ತುಂಬಾ ತಂಪಾಗಿದ್ದರೆ ಬೆಚ್ಚಗಿನ ಪ್ಯಾಂಟ್ (Pant) ಧರಿಸಿ, ಆದರೆ ಅದು ಬಿಗಿಯಾಗಿರಬಾರದು. ಅಲ್ಲದೆ, ಮನೆಯಲ್ಲಿ ಹತ್ತಿಯ ಒಳ ಉಡುಪುಗಳನ್ನು ಧರಿಸಿ.
ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ
ಯೋನಿ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಿ. ಇಂಟಿಮೇಟ್ ಏರಿಯಾದ ಪಿಎಚ್ ಮಟ್ಟ ಕಾಪಾಡಿಕೊಳ್ಳೋದು ಕಷ್ಟ, ಆದ್ದರಿಂದ ಶುಷ್ಕತೆ ಕಾರಣದಿಂದಾಗಿ ಮಾಯಿಶ್ಚರೈಸರ್ ಬದಲಿಗೆ ತೆಂಗಿನ ಎಣ್ಣೆಯನ್ನು(Coconut oil) ಬಳಸೋದು ಉತ್ತಮ. ನಿಮ್ಮ ಯೋನಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿದ ಉತ್ಪನ್ನಗಳ ಮೇಲೆ ಗಮನ ಕೊಡಿ.