ಶಾಸ್ತ್ರಗಳಲ್ಲಿ 7 ತಿಂಗಳ ಬಳಿಕ ಗರ್ಭಿಣಿ ನದಿ ಬಳಿ ಹೋಗಬಾರದು ಅಂತಾರೆ.. ವಿಜ್ಞಾನ ಏನ್ ಹೇಳುತ್ತೆ?
ಗರ್ಭಧಾರಣೆಗೆ ಸಂಬಂಧಿಸಿದ ಅನೇಕ ನಂಬಿಕೆಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ, ಇವುಗಳಲ್ಲಿ ಗರ್ಭಿಣಿ ಮಹಿಳೆ 7 ತಿಂಗಳ ನಂತ್ರ ನದಿ ತೀರದ ಬಳಿ ಹೋಗಬಾರದು ಎನ್ನಲಾಗುತ್ತೆ. ವೈಜ್ಞಾನಿಕ ಪ್ರಕಾರ ಇದು ಎಷ್ಟು ಸತ್ಯ ಅನ್ನೋದನ್ನು ನೋಡೋಣ.

ಗರ್ಭಾವಸ್ಥೆಯ (pregnancy) ಸಮಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಅದಕ್ಕಾಗಿಯೇ ಮನೆಯ ಹಿರಿಯರು ಮತ್ತು ಅಜ್ಜಿಯರು ಗರ್ಭಿಣಿ ಮಹಿಳೆಗೆ ವಿವಿಧ ರೀತಿಯ ಸಲಹೆಗಳನ್ನು ನೀಡುತ್ತಾರೆ, ಇದರಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿರುತ್ತಾರೆ. ಈ ಅವಧಿಯಲ್ಲಿ, ಗರ್ಭಿಣಿಯರು ರಾತ್ರಿಯಲ್ಲಿ ಹೊರಗೆ ಹೋಗುವುದನ್ನು, ನಿರ್ಜನ ಸ್ಥಳಗಳಲ್ಲಿ ಒಂಟಿಯಾಗಿ ತಿರುಗಾಡುವುದನ್ನು ಮತ್ತು ಕತ್ತಲೆ ಇರುವ ರಸ್ತೆಗಳಲ್ಲಿ ಹೋಗುವುದನ್ನು ನಿಷೇಧಿಸಲಾಗಿದೆ.
ಇಷ್ಟೇ ಅಲ್ಲ, 7 ನೇ ತಿಂಗಳ ನಂತರ ಗರ್ಭಿಣಿ (7 month pregnancy)ಮಹಿಳೆ ನದಿಯ ಬಳಿ ಹೋಗಬಾರದು ಅಥವಾ ನದಿಯನ್ನು ದಾಟಬಾರದು, ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಎಂದು ಸಹ ಹಿರಿಯರು ಹೇಳುತ್ತಾರೆ. ಶಾಸ್ತ್ರದಲ್ಲಿ ತಿಳಿಸಿದ ಈ ವಿಚಾರ ತಪ್ಪು ಕಲ್ಪನೆಯೋ ಅಥವಾ ಸತ್ಯವೋ ಎಂದು ನೋಡೋಣ.
ವೈದ್ಯರು ಹೇಳುವ ಪ್ರಕಾರ ಇದೊಂದು ಮೂಢ ನಂಬಿಕೆಯಾಗಿದೆ. ಗರ್ಭಿಣಿ ಮಹಿಳೆಯರು ನದಿಯ ಬಳಿ ಹೋಗೋದ್ರಿಂದ ಏನೂ ತೊಂದರೆ ಇಲ್ಲ. ಆದರೆ ಪುರಾಣಗಳಲ್ಲಿನ ಮಾಹಿತಿಯ ಪ್ರಕಾರ ನದಿಯ ಬಳಿ ಕೆಲವು ಅತೃಪ್ತ ಆತ್ಮಗಳು ಇರುತ್ತವಂತೆ, ಅವು ಹುಟ್ಟಲಿರುವ ಮಗುವಿಗೆ ತೊಂದರೆಯನ್ನುಂಟು ಮಾಡಲಿದೆ ಎನ್ನಲಾಗುವುದು.
ನದಿಗಳಿಂದ ಸೋಂಕು ಹೆಚ್ಚಾಗಬಹುದು
ನದಿಗಳ ಬಳಿ ಹೋಗಬಾರದು ಅನ್ನೋದಕ್ಕೆ ಕಾರಣ, ನದಿಗಳು, ಕೊಳಗಳು ಮತ್ತು ಬಾವಿಗಳಲ್ಲಿ ಇರುವ ಬ್ಯಾಕ್ಟೀರಿಯಾಗಳಿಂದ ಸೋಂಕಿನ (bacteria infection) ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. ಅಂತಹ ನಂಬಿಕೆಗಳಿಂದಾಗಿ, ಮಹಿಳೆಯರು ಜಾಗರೂಕರಾಗಿರಬೇಕು ಈ ರೀತಿಯಾಗಿ ಹಿರಿಯರು ಹೇಳಿರಬಹುದು.
ಈಜು ಪ್ರಯೋಜನಕಾರಿ.
ವೈದ್ಯಕೀಯ ದೃಷ್ಟಿಕೋನದ ಪ್ರಕಾರ, ಗರ್ಭಾವಸ್ಥೆಯಲ್ಲಿ ಈಜುವುದು ಪ್ರಯೋಜನಕಾರಿ. ಇದು ದಂಪತಿಗಳ ಒತ್ತಡವನ್ನು ನಿವಾರಿಸುವುದಲ್ಲದೆ, ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.
ವೈದ್ಯರ ಸಲಹೆ
ಗರ್ಭಿಣಿಯರು ತಮಗಾಗಿ ಸುರಕ್ಷಿತ ವಾತಾವರಣವನ್ನು ಆರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನೀವು ಈಜುವುದಾದರೆ, ಕೊಳವನ್ನು ಸ್ವಚ್ಛವಾಗಿಡಿ. ಯಾವುದೇ ಅಪಾಯಗಳನ್ನು ಕಡಿಮೆ ಮಾಡಲು ವೇಗವಾಗಿ ಹರಿಯುವ ಅಥವಾ ಕಲುಷಿತ ನೀರಿನಲ್ಲಿ ಆಡುವುದು, ಸ್ವಿಮ್ ಮಾಡುವುದು ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.