Women Health: ಡೆಲಿವರಿಯ ಬಳಿಕ ಯೋನಿಯಲ್ಲಿ ಡ್ರೈನೆಸ್ ಹೆಚ್ಚಾಗಿದೆಯೇ?
ಹೆರಿಗೆಯ ನಂತರ ತಮ್ಮ ವಜೈನಾದಲ್ಲಿ ಡ್ರೈನೆಸ್ (vaginal dryness) ಉಂಟಾಗುತ್ತೆ ಎಂದು ಮಹಿಳೆಯರು ಆಗಾಗ್ಗೆ ದೂರುತ್ತಾರೆ, ಇದರಿಂದಾಗಿ ತುಂಬಾನೆ ಇರಿಟೇಶನ್ ಮತ್ತು ಸರಿಯಾಗಿ ಸೆಕ್ಸ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಪ್ರಸವದ ನಂತರ ವಜೈನಾದಲ್ಲಿ ಡ್ರೈ ನೆಸ್ ಒಂದು ಸಾಮಾನ್ಯ ಸಮಸ್ಯೆಯಾಗಿದೆ, ಸಾಮಾನ್ಯವಾಗಿ ಹೆಚ್ಚಿನ ಜನರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಗರ್ಭಧಾರಣೆ ಮಾತ್ರವಲ್ಲ, ಹೆರಿಗೆಯ ನಂತರವೂ (after delivery) ದೇಹದೊಳಗೆ ಅನೇಕ ಬದಲಾವಣೆಗಳಾಗುತ್ತವೆ. ಸಾಮಾನ್ಯವಾಗಿ ಕೆಲವು ಮಹಿಳೆಯರು ಹೆರಿಗೆಯ ನಂತರ ಯೋನಿಯಲ್ಲಿ ಶುಷ್ಕತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಮಹಿಳೆಯರು ಆ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ, ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ.
ಯೋನಿಯಲ್ಲಿ ತೇವಾಂಶದ ಕೊರತೆ ಮತ್ತು ಶುಷ್ಕತೆಯ ಕಾರಣದಿಂದಾಗಿ, ಸೆಕ್ಸ್ ಸಮಯದಲ್ಲಿ ಸಂತೋಷ ಕೂಡ ಸಿಗೋದಿಲ್ಲ. ನಿಮಗೆ ಈಗಷ್ಟೇ ಡೆಲಿವರಿ ಆಗಿದ್ದರೆ ಮತ್ತು ಯೋನಿಯಲ್ಲಿ ನೀವು ಶುಷ್ಕತೆಯನ್ನು ಅನುಭವಿಸುತ್ತಿದ್ದರೆ, ನೀವು ಮೊದಲು ಅದರ ಕಾರಣದ ಬಗ್ಗೆ ಮತ್ತು ನಂತರ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳಬೇಕು.
ವಜೈನಾದಲ್ಲಿ ಡ್ರೈನೆಸ್ ಯಾಕೆ ಉಂಟಾಗುತ್ತೆ?:
ಪ್ರಸವಾನಂತರದ ಥೈರಾಯ್ಡ್ (thyroid) ಹೆರಿಗೆಯ ನಂತರ ಯೋನಿ ಡ್ರೈನೆಸ್‌ಗೆ ಕಾರಣವಾಗಬಹುದು. ಥೈರಾಯ್ಡ್ ಗ್ರಂಥಿಯು ಉರಿಯೂತಕ್ಕೆ ಒಳಗಾದಾಗ, ಅದು ಹೆಚ್ಚು ಕಡಿಮೆ ಥೈರಾಯ್ಡ್ ಹಾರ್ಮೋನುಗಳನ್ನು ತಯಾರಿಸಲು ಪ್ರಾರಂಭಿಸುತ್ತದೆ, ಇದು ವಜೈನಾದಲ್ಲಿ ಡ್ರೈನೆಸ್ ಗೆ ಕಾರಣವಾಗಬಹುದು ಏಕೆಂದರೆ ಇದು ದೇಹದಾದ್ಯಂತ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ.
ಪ್ರಸವದ ನಂತರ, ಯೋನಿಯಲ್ಲಿನ ಶುಷ್ಕತೆಯು ಶೀತ, ಖಿನ್ನತೆ (depression), ಒಣ ಚರ್ಮ, ಕಿರಿಕಿರಿ, ನಿದ್ರೆಯಲ್ಲಿ ತೊಂದರೆ, ತೂಕ ಹೆಚ್ಚಳ ಮತ್ತು ನಡುಕಗಳಂತಹ ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ. ಗರ್ಭಧಾರಣೆಯ ನಂತರ ಅನೇಕ ಮಹಿಳೆಯರಿಗೆ ಈ ರೀತಿಯ ಸಮಸ್ಯೆ ಇರುತ್ತದೆ, ಆದರೆ ಅದನ್ನು ಹೇಗೆ ಪರಿಹರಿಸೋದು ಅನ್ನೋದು ಮಾತ್ರ ತಿಳಿದಿಲ್ಲ. ನಿಮಗಾಗಿ ಇಲ್ಲಿದೆ ಟಿಪ್ಸ್.
ಈ ಸಮಸ್ಯೆ ಎಷ್ಟು ಸಾಮಾನ್ಯವಾಗಿದೆ?:
ಸುಮಾರು 10% ಮಹಿಳೆಯರು ಪ್ರಸವಾನಂತರ ಥೈರಾಯ್ಡಿಟಿಸ್ ಸಮಸ್ಯೆ ಹೊಂದಿದ್ದಾರೆ. ಇದು ಯೋನಿಯಲ್ಲಿ ಶುಷ್ಕತೆಯನ್ನು (vaginal dryness) ಉಂಟುಮಾಡುತ್ತದೆ. ಆದರೆ ಇದಕ್ಕೆ ಭಯ ಪಡಬೇಕಾಗಿಲ್ಲ, ಯಾಕೆಂದರೆ ಥೈರಾಯ್ಡ್ ಅನ್ನು 12 ರಿಂದ 18 ತಿಂಗಳುಗಳಲ್ಲಿ ಗುಣಪಡಿಸಲಾಗುತ್ತದೆ.
ಯೋನಿಯ ಮೇಲೆ ಹೆರಿಗೆಯ ಪರಿಣಾಮ:
ಪ್ರಸವದ ನಂತರ, ಯೋನಿಯ ಅಂಗಾಂಶಗಳು ಕುಗ್ಗಬಹುದು, ಇದು ಅವುಗಳ ನಮ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಅವುಗಳ ಹಾನಿಯ ಅಪಾಯವನ್ನು ಹೆಚ್ಚಿಸುತ್ತದೆ. ಯೋನಿ ನಾಳಗಳಲ್ಲಿ ಸಮಸ್ಯೆಗಳು ಸಹ ಇರಬಹುದು, ಇದು ಕಿರಿಕಿರಿಗೆ ಕಾರಣವಾಗಬಹುದು.
ಹೆರಿಗೆಯ ನಂತರ ಯೋನಿಯಲ್ಲಿ ಉಂಟಾಗುವ ಬದಲಾವಣೆಗಳಿಂದಾಗಿ, ಲೈಂಗಿಕತೆಯನ್ನು ಹೊಂದುವುದು ಕಷ್ಟವಾಗಬಹುದು. ನಿಮ್ಮ ದೇಹದಲ್ಲಿ ಈಸ್ಟ್ರೋಜೆನ್ ಮಟ್ಟವು ಸಾಮಾನ್ಯವಾದಾಗ, ಈ ರೋಗಲಕ್ಷಣವೂ ದೂರವಾಗಬಹುದು.
ಈ ಸಮಸ್ಯೆಗೆ ಪರಿಹಾರವೇನು?:
ಪ್ರಸವಾನಂತರದ ಯೋನಿ ಶುಷ್ಕತೆಯನ್ನು, ಕೆಲವು ವಿಧಾನಗಳ ಸಹಾಯದಿಂದ ಬಗೆಹರಿಸಬಹುದು. ಆ ಮೂಲಕ ನೀವು ಲೈಂಗಿಕ ಜೀವನವನ್ನು ಎಂಜಾಯ್ ಮಾಡಬಹುದು. ವಜೈನಾದಲ್ಲಿ ಡ್ರೈನೆಸ್ ಉಂಟಾದರೆ ಪರ್ಸನಲ್ ಹೈಜಿನ್ ಸ್ಪ್ರೇಗಳನ್ನು (personal hygine spray) ಬಳಸಬೇಡಿ. ಅಷ್ಟೇ ಅಲ್ಲದೇ ಈ ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ನೀವು ಮಾತನಾಡಬಹುದು.
ಇದನ್ನು ಬಳಸಿ:
ಲೈಂಗಿಕ ಸಮಯದಲ್ಲಿ ನೀವು ಲೂಬ್ರಿಕಂಟ್ (lubricants) ಬಳಸಬಹುದು. ಪ್ರತಿ ಕೆಲವು ದಿನಗಳಿಗೊಮ್ಮೆ ವಜೈನಲ್ ಮಾಯಿಶ್ಚರೈಸರ್ ಹಚ್ಚುತ್ತಿರಿ. ವೈದ್ಯರ ಸಲಹೆಯ ಮೇರೆಗೆ ನೀವು ಈಸ್ಟ್ರೊಜೆನ್ ವಜೈನಲ್ ಕ್ರೀಮ್ ಹಚ್ಚಬಹುದು. ಇಲ್ಲವಾದರೆ ಡ್ರೈನೆಸ್ ಹೆಚ್ಚುತ್ತೆ.
ತುಂಬಾ ನೀರು ಕುಡಿಯಿರಿ:
ದೇಹವನ್ನು ಹೈಡ್ರೇಟ್ (hydrate) ಆಗಿಡುವುದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತೆ. ಯೋನಿಯ ಜೊತೆಗೆ, ದೇಹದ ಉಳಿದ ಭಾಗ ಅಥವಾ ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯಿರಿ. ದಿನಕ್ಕೆ ಎಂಟು ಗ್ಲಾಸ್ ನೀರು ಕುಡಿಯಲು ಮರೆಯಬೇಡಿ.