ವಾರಕ್ಕೆ 3 ಬಾರಿ ಈ ಫೇಸ್‌ಪ್ಯಾಕ್ ಹಾಕಿದ್ರೆ ನೀವೇ ಸೆಂಟರ್ ಆಫ್ ಅಟ್ರ್ಯಾಕ್ಷನ್!
ಮಹಿಳೆಯರು ವಾರಕ್ಕೆ ಮೂರು ಬಾರಿ ಈ ಫೇಸ್ ಪ್ಯಾಕ್ ಹಾಕಿದ್ರೆ ಮುಖದ ಕಾಂತಿ ಹೆಚ್ಚಳವಾಗುತ್ತದೆ ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ.

ನಮ್ಮ ಹಿರಿಯರು ಅರಿಶಿನ, ಚಂದನ ಉಪಯೋಗಿಸ್ತಿದ್ರು. ದೇವರಿಗೆ, ಶುಭ ಕಾರ್ಯಗಳಿಗೆ, ಮಕ್ಕಳಿಗೆಲ್ಲ ಹಚ್ಚ್ತಿದ್ರು. ಇದು ಸುಮ್ನೆ ಸಂಪ್ರದಾಯ ಅಷ್ಟೇ ಅಲ್ಲ, ಇಮ್ಯೂನಿಟಿ, ತ್ವಚೆಗೆ ಒಳ್ಳೇದು ಅಂತ ಗೊತ್ತಿತ್ತು.
ಅರಿಶಿನ ಚಂದನ ತ್ವಚೆಗೆ ಹೊಳಪು ಕೊಡುತ್ತೆ. ಸುಕ್ಕುಗಳನ್ನೂ ಕಡಿಮೆ ಮಾಡುತ್ತದೆ ಎಂದು ಬ್ಯೂಟಿಷಿಯನ್ ಹೇಳುತ್ತಾರೆ.
ಅರಿಶಿನದಲ್ಲಿರೋ ಮೂಲವಸ್ತುಗಳು ಕೀಟಾಣುಗಳ ವಿರುದ್ಧ ಹೋರಾಡುತ್ತೆ. ಚಂದನ ತ್ವಚೆ ರಂಧ್ರಗಳನ್ನ ಶುದ್ಧಿ ಮಾಡುತ್ತೆ. ಹೀಗಾಗಿ ಮೊಡವೆ, ಕಪ್ಪು ಚುಕ್ಕೆಗಳು ಕಡಿಮೆಯಾಗುತ್ತೆ.
ಸೂರ್ಯನ ಬೆಳಕು, ಮಾಲಿನ್ಯದಿಂದ ತ್ವಚೆ ಬಣ್ಣ ಹಾಳಾಗುತ್ತೆ. ಅರಿಶಿನ-ಚಂದನ ಹಚ್ಚಿದ್ರೆ ಸರಿಯಾಗುತ್ತೆ.
ಚಂದನ ತ್ವಚೆಯನ್ನ ಮೃದುವಾಗಿಸುತ್ತೆ. ಅರಿಶಿನ ಜೊತೆ ಸೇರಿಸಿ ಹಚ್ಚಿದ್ರೆ ಒಣ ತ್ವಚೆ ಸಮಸ್ಯೆ ದೂರವಾಗುತ್ತೆ.
ಚಂದನದ ಪರಿಮಳ ಮನಸ್ಸಿಗೆ ನೆಮ್ಮದಿ ಕೊಡುತ್ತೆ. ಅರಿಶಿನ-ಚಂದನ ಹಚ್ಚಿದ್ರೆ ಒತ್ತಡ ಕಡಿಮೆಯಾಗಿ ಚೆನ್ನಾಗಿ ನಿದ್ದೆ ಬರುತ್ತೆ.
ಅರಿಶಿನ, ಚಂದನ ಪುಡಿ, ಗುಲಾಬಿ ನೀರು/ಹಾಲು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. 15-20 ನಿಮಿಷ ಹಚ್ಚಿ ತೊಳೆಯಿರಿ.
ಶುದ್ಧ ಚಂದನ ಪುಡಿ ಉಪಯೋಗಿಸಿ. ಮೊದಲ ಸಲ ಹಚ್ಚೋ ಮುನ್ನ ಕೈ ಮೇಲೆ ಟೆಸ್ಟ್ ಮಾಡಿ. ಕಸ್ತೂರಿ ಅರಿಶಿನ ಉಪಯೋಗಿಸಿ.