ಕಲಾವಿದರ ವೈಯಕ್ತಿಕ ವಿಚಾರ, ಸೌಂದರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗಿರುತ್ತದೆ. ಕೆಲ ನಟರ ಹೊಳೆಯುವ ಸ್ಕಿನ್ ಗುಟ್ಟೇನು ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಅಭಿಮಾನಿ ಕೇಳಿದ ಪ್ರಶ್ನೆಗೆ ಮಾಧವನ್ ಹೇಳಿದ ಉತ್ತರ ಏನು ಗೊತ್ತಾ?  

ಈಗಿನ ದಿನಗಳಲ್ಲೂ ನಮ್ಮಲ್ಲಿ ಅನೇಕರು ಬಣ್ಣಕ್ಕೆ ಮಹತ್ವ ನೀಡ್ತಾರೆ. ಬೆಳ್ಳಗಿದ್ದರೆ ಚೆಂದ, ಆಕರ್ಷಕ ಎಂದು ನಂಬುವ ಅನೇಕರನ್ನು ನಾವು ನೋಡ್ಬಹುದು. ತಮ್ಮ ಚರ್ಮದ ಬಣ್ಣವನ್ನು ಬದಲಿಸಿಕೊಳ್ಳಲು ನಾನಾ ಪ್ರಯೋಗಗಳನ್ನು ಮಾಡುವ ಜನರಿದ್ದಾರೆ. ಬೆಳ್ಳಗೆ, ತೆಳ್ಳಗಿದ್ರೆ ಹೆಚ್ಚಿನ ಅವಕಾಶಗಳು ಸಿಗುತ್ವೆ ಎಂದು ಸಿನಿಮಾ ಕ್ಷೇತ್ರಗಳಲ್ಲಿರುವ ಜನರು ಕೂಡ ನಂಬುತ್ತಾರೆ.

ಕಪ್ಪು (Black) ಅಂದ್ರೆ ಅಸಡ್ಡೆ ತೋರಿಸುವ ಜನರ ಭಾವನೆಗಳನ್ನು ಹಣ ಮಾಡಲು ಅನೇಕ ಕಂಪನಿಗಳು ಬಳಸಿಕೊಳ್ತಿವೆ. ಈ ಕ್ರೀಮ್ ಹಚ್ಚಿದ್ರೆ ಕೆಲವೇ ದಿನಗಳಲ್ಲಿ ನೀವು ಬೆಳ್ಳಗಾಗ್ತೀರಾ ಎಂಬ ಜಾಹೀರಾತುಗಳನ್ನು ನಾವು ನಿತ್ಯ ನೋಡ್ತಿರುತ್ತವೆ. ಮಾರುಕಟ್ಟೆಗೆ ಅನೇಕ ಕಂಪನಿಗಳು ಲಗ್ಗೆಯಿಟ್ಟಿದ್ದು, ಚರ್ಮವನ್ನು ಬೆಳ್ಳಗೆ ಮಾಡುವ ಭರವಸೆ ನೀಡಿ, ಲಾಭ ಗಳಿಸ್ತಿದೆ. ಬಾಲಿವುಡ್ (Bollywood), ಸ್ಯಾಂಡಲ್ವುಡ್ ಸೇರಿ ಚಿತ್ರರಂಗದ ಕಲಾವಿದರು, ಸೆಲೆಬ್ರಿಟಿಗಳು ಕೂಡ ಕಂಪನಿಗಳ ಜೊತೆ ಕೈ ಜೋಡಿಸಿರೋದನ್ನು ನೀವು ನೋಡ್ಬಹುದು. ಸಿನಿಮಾ ಮೂಲಕ ಹಣ ಮಾಡುವುದಲ್ಲದೆ ಜಾಹೀರಾತುಗಳನ್ನು ನೀಡ್ತಾರೆ. ಈ ಉತ್ಪನ್ನವನ್ನು ತಾನೂ ಬಳಸ್ತಿದ್ದೇನೆ ಎಂದು ಜನರನ್ನು ನಂಬಿಸುತ್ತಾರೆ. ಹಾಗಂತ ಎಲ್ಲ ಕಲಾವಿದರು ಹೀಗಿಲ್ಲ. ಕೆಲವರು ತಮ್ಮ ನಿಜ ಬಣ್ಣವನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಬಣ್ಣ, ಅಲಂಕಾರಕ್ಕಿಂತ ನಟನೆ, ಪ್ರಾಮಾಣಿಕತೆ ಮುಖ್ಯವೆಂದುಕೊಂಡಿದ್ದಾರೆ. ಇದಕ್ಕೆ ನಟ ಮಾಧವನ್ ಕೂಡ ಹೊರತಾಗಿಲ್ಲ.

ದೀಪಿಕಾ-ಕತ್ರಿನಾ, ಈಗ ಪ್ರಿಯಾಂಕಾ: ಸೌಂದರ್ಯ ವರ್ಧಕಗಳ ಉದ್ದಮೆಯಲ್ಲಿ ಬಾಲಿವುಡ್‌ ನಟಿಯರು!

ಕೆಲ ದಿನಗಳ ಹಿಂದಷ್ಟೆ 53ನೇ ವಯಸ್ಸಿಗೆ ಕಾಲಿಟ್ಟಿರುವ ಮಾಧವನ್ (Madhavan) ಈಗ್ಲೂ ಯುವಜನರನ್ನು ಸೆಳೆಯುತ್ತಾರೆ. ತಮ್ಮ ನಟನೆ ಜೊತೆ ವ್ಯಕ್ತಿತ್ವದಿಂದ ಅವರು ಅನೇಕ ಮನಸ್ಸು ಗೆದ್ದಿದ್ದಾರೆ. ಮಾಧವನ್ ಕೂಡ ಬೆಳ್ಳಗಿನ ಚರ್ಮ ಹೊಂದಿಲ್ಲವಾದ್ರೂ ಆಕರ್ಷಕ ಮೈಬಣ್ಣವನ್ನು ಹೊಂದಿದ್ದಾರೆ. 

ಕೆಲ ದಿನಗಳ ಹಿಂದೆ ಮಾಧವನ್ ತಮ್ಮ ಹಳೆ ಫೋಟೋ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ನೋಡಿದ ಅಭಿಮಾನಿಯೊಬ್ಬರು ಮಾಧವನ್ ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಮಾಧವನ್ ಪ್ರಾಮಾಣಿಕವಾಗಿ ಉತ್ತರ ನೀಡಿದ್ದಾರೆ. ಹಳೆ ಫೋಟೋಕ್ಕಿಂತ ಈಗ ಮಾಧವನ್ ಹೆಚ್ಚು ಬೆಳ್ಳಗೆ ಕಾಣ್ತಿದ್ದಾರೆ ಎಂಬುದು ಅಭಿಮಾನಿ ಅಭಿಪ್ರಾಯ. ಪ್ರಾಮಾಣಿಕವಾಗಿ ನಿಮ್ಮ ಹಳೆ ಫೋಟೋ ಪೋಸ್ಟ್ ಮಾಡಿರೋದನ್ನು ನಾನು ಮೆಚ್ಚುತ್ತೇನೆ. ಇದೇ ಸಂದರ್ಭದಲ್ಲಿ ನಿಮಗೊಂದು ಪ್ರಶ್ನೆ ಕೇಳ್ತೇನೆ, ಇಷ್ಟು ವರ್ಷಗಳ ಕಾಲ ನಿಮ್ಮ ಚರ್ಮ ಇಷ್ಟು ಲೈಟ್ ಆಗಿರಲು ಹೇಗೆ ಸಾಧ್ಯ? ನಿಮ್ಮ ಸೌಂದರ್ಯದ ಗುಟ್ಟೇನು? ನೀವು ಯಾವ ಉತ್ಪನ್ನ ಬಳಕೆ ಮಾಡ್ತೀರಿ ಎಂದು ಅಭಿಮಾನಿ ತನ್ನ ಸಹಜ ಕುತೂಹಲವನ್ನು ವ್ಯಕ್ತಪಡಿಸಿದ್ದಾನೆ.

68 ವಯಸ್ಸಾದ್ರೂ ಬತ್ತದ ರೇಖಾ ಬ್ಯೂಟಿ: ಗಂಡ- ಅತ್ತೆ ಕಾಟ ಇಲ್ದಿದ್ರೆ ಹೀಗೆ ಕಾಣೋದು ಅಂದ್ರು ಫ್ಯಾನ್ಸ್​!

ಅಭಿಮಾನಿ ಕೇಳಿದ ಪ್ರಶ್ನೆಗೆ ಮಾಧವನ್ ಪ್ರಾಮಾಣಿಕ ಉತ್ತರ ನೀಡಲು ಮುಂದಾಗಿದ್ದಾರೆ. ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ ಮಾಧವನ್, ನಾನು ಏನಾಗಿದ್ದೇನೋ ಅದು ನಾನಾಗಬಾರದಿತ್ತು ಎಂದು ನಾನು ಎಂದಿಗೂ ಭಾವಿಸಲಿಲ್ಲ. ನಾನು ಏನಾಗಿದ್ದೇನೋ ಅದನ್ನು ತೋರಿಸಲು ನಾನು ವಿಷಾದಿಸಲಿಲ್ಲ. ನೀವೂ ಅದನ್ನು ಮಾಡಬಾರದು. ಕೇವಲ ನೋಡಿ, ನೈರ್ಮಲ್ಯವಾಗಿರಿ. ನಾನು ಗಾಲ್ಫ್ ಆಡಿದಾಗ ನಾನು ಸುಲಭವಾಗಿ ಟ್ಯಾನ್ ಆಗುತ್ತೇನೆ ಅಷ್ಟೆ ಎಂದು ಮಾಧವನ್ ಅಧ್ಬುತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧವನ್ ಪ್ರತಿಕ್ರಿಯೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 

ಸದ್ಯ ಮಾಧವನ್ ಪುತ್ರ ಸುದ್ದಿಯಲ್ಲಿದ್ದಾರೆ. ವೇದಾಂತ್ ಡ್ರೈವಿಂಗ್ ವಿಡಿಯೋ ವೈರಲ್ ಆಗಿದೆ. ಕಾರ್ ಲೈಸೆನ್ಸ್ ಪಡೆಯಲು ವೇದಾಂತ್ ಡ್ರೈವಿಂಗ್ ಕಲಿಯುತ್ತಿರುದ್ದು, ವೇದಾಂತ್ ಕುಳಿತಿರುವ ಕಾರ್ ಸುದ್ದಿಯಲ್ಲಿದೆ ಅಂದ್ರೆ ತಪ್ಪಾಗಲಾರದು. ಯಾಕೆಂದ್ರೆ ವೇದಾಂತ್ ಕಾರ್ ಕಲಿತಿರೋದು ಅಂತಿಂತ ಕಾರ್ ನಲ್ಲಿ ಅಲ್ಲ ವಿಶ್ವದ ದುಬಾರಿ ಕಾರ್ ಗಳಲ್ಲಿ ಒಂದಾದ ಪೋರ್ಷೆ ಕಾರಿನಲ್ಲಿ. ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Scroll to load tweet…