ಮುಂದಿನ 6 ತಿಂಗಳವರೆಗೆ ಈ ಕೆಲಸ ಬಿಡದೇ ಮಾಡಿ…2024ರೊಳಗೆ ಯಶಸ್ಸು ನಿಮ್ಮನ್ನರಸಿ ಬರುತ್ತೆ!
ಹೊಸ ವರ್ಷ ಪ್ರಾರಂಭವಾಗಿದೆ ಮತ್ತು ಇದು ಹೊಸ ಭರವಸೆಗಳೊಂದಿಗೆ ಬಂದಿದೆ. ಮೊದಲ ದಿನವೇ ನಿಮಗಾಗಿ ಗುರಿಗಳನ್ನು ನಿಗದಿಪಡಿಸಿ, ಇದು ನಿಮ್ಮ ವೃತ್ತಿಜೀವನ ಮತ್ತು ಜೀವನದಲ್ಲಿ ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ. ಇದರೊಂದಿಗೆ, ನಿಮ್ಮ ಜೀವನಶೈಲಿಗೆ ಕೆಲವು ವಿಷಯಗಳನ್ನು ಸೇರಿಸಿ, ಇದು ನಿಮ್ಮ ಗುರಿಯನ್ನು ತಲುಪಲು ಮತ್ತು ಜೀವನದಲ್ಲಿ ಶಿಸ್ತನ್ನು ರೂಪಿಸಲು ಸಹಾಯ ಮಾಡುತ್ತದೆ.

ಹೊಸ ವರ್ಷ (New Year)ಎಂದರೆ ವರ್ಷದ ಸಂಖ್ಯೆಯನ್ನು ಬದಲಾಯಿಸುವುದು ಮಾತ್ರವಲ್ಲ. ಬದಲಾಗಿ, ಇದು ಹೊಸ ಆರಂಭವನ್ನು ತರುತ್ತದೆ. ಇದು ಪ್ರತಿಯೊಬ್ಬರಿಗೂ ಜೀವನದಲ್ಲಿ ಉತ್ತಮವಾಗಿರಲು ಅವಕಾಶವನ್ನು ನೀಡುತ್ತದೆ. ಬೇಕಾಗಿರುವುದು ನಿಮಗಾಗಿ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅದನ್ನು ಪ್ರಾಮಾಣಿಕವಾಗಿ ಅನುಸರಿಸುವುದು. ಇದನ್ನು ಸಾಧ್ಯವಾಗಿಸಲು ಕೆಲವು ಅಭ್ಯಾಸಗಳು ತುಂಬಾನೆ ಅಗತ್ಯವಾಗಿದೆ.
ಇಲ್ಲಿ ಕೆಲವು ಅಭ್ಯಾಸಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಅವು ಹೊಸ ವರ್ಷದಲ್ಲಿ ಹೊಸತನ ತುಂಬಲು ಸಹಾಯ ಮಾಡುತ್ತದೆ. ಮುಂದಿನ 6 ತಿಂಗಳವರೆಗೆ ನೀವು ಅವುಗಳನ್ನು ಜೀವನಶೈಲಿಯ ಒಂದು ಭಾಗವನ್ನಾಗಿ ಮಾಡಿದರೆ, ನೀವು ಯಶಸ್ಸಿನ ಮೆಟ್ಟಿಲೇರೋದು ಖಚಿತ.
ಬೇಗನೆ ಎದ್ದು, ಟಾಸ್ಕ್ ಲಿಸ್ಟ್ ಮಾಡಿ ಮತ್ತು ಅದನ್ನು ಅನುಸರಿಸಿ
ಬೆಳಿಗ್ಗೆ ಬೇಗನೆ ಎದ್ದೇಳುವ (Wakeup early) ಅಭ್ಯಾಸ ಮಾಡಿಕೊಳ್ಳಿ. ನೀವು ಎದ್ದ ನಂತರ ನಿಮ್ಮ ದಿನವನ್ನು ಪ್ಲ್ಯಾನ್ ಮಾಡಿ. ದಿನವಿಡೀ ಇದನ್ನು ಅನುಸರಿಸಿ ಮತ್ತು ಯಾವುದೇ ಕಾರ್ಯವನ್ನು ತಪ್ಪಿಸಿಕೊಳ್ಳದಿರಲು ಪ್ರಯತ್ನಿಸಿ. ಇದನ್ನು ಮಾಡೋದರಿಂದ, ನಿಮ್ಮ ಇಡೀ ದಿನವನ್ನು ವ್ಯವಸ್ಥಿತವಾಗಿಡಲು ನಿಮಗೆ ಸಾಧ್ಯವಾಗುತ್ತದೆ. ಇದು ಉತ್ತಮ ಕೆಲಸ-ಜೀವನ ಬ್ಯಾಲೆನ್ಸ್ ಕಾಪಾಡಲು ನಿಮಗೆ ಸಹಾಯ ಮಾಡುತ್ತದೆ.
ನಕಾರಾತ್ಮಕ ಆಲೋಚನೆಗಳು, ಅಭ್ಯಾಸಗಳಿರುವ ಜನರನ್ನು ದೂರವಿಡುವುದು (stay away from negativity)
ನಿಮಗೆ ಕೆಟ್ಟ ಭಾವನೆಯನ್ನು ಉಂಟುಮಾಡುವ ಅಥವಾ ನಿಮಗೆ ನಕಾರಾತ್ಮಕ ಶಕ್ತಿಯನ್ನು ನೀಡುವ ಯಾವುದೇ ವಸ್ತು ಅಥವಾ ವ್ಯಕ್ತಿಯನ್ನು ದೂರ ಇರಿಸಿ. ಯಾರಾದರೂ ನಿಮಗೆ ಕೆಟ್ಟದ್ದನ್ನು ಮಾಡಲು ಬಯಸಿದರೂ, ಅವರನ್ನು ಗೆರೆ ದಾಟಲು ಬಿಡಬೇಡಿ. ಅವು ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಸೆಳೆದರೆ, ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಲು ನಿಮಗೆ ಶಕ್ತಿ ಇರುವುದಿಲ್ಲ.
ಆರೋಗ್ಯಕರ ಆಹಾರ ಸೇವಿಸಿ (healthy food)
ನಾವು ಸೇವಿಸುವ ಆಹಾರವು ನಮ್ಮ ಮನಸ್ಥಿತಿ, ಮನಸ್ಸು ಮತ್ತು ದೇಹದ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ವಿಜ್ಞಾನವು ತಿಳಿಸಿದೆ. ಆದ್ದರಿಂದ ಆರೋಗ್ಯಕರವಾಗಿ ತಿನ್ನಿ ಮತ್ತು ಈ ವರ್ಷ ಆರೋಗ್ಯವಾಗಿರಿ. ಆಗ ಮಾತ್ರ ನೀವು ಮುಂದೆ ಸಾಗಲು ಶಕ್ತಿಯನ್ನು ಪಡೆಯುತ್ತೀರಿ.
ಸೈಡ್ ಚಟುವಟಿಕೆಯನ್ನು ಪ್ರಾರಂಭಿಸಿ
ನಿಮ್ಮ ಮೇಲಿರುವ ಸಂದೇಹವನ್ನು ಬಿಟ್ಟು ನಿಮಗೆ ಬೇಕೆನಿಸಿದ ಚಟುವಟಿಕೆ ಪ್ರಾರಂಭಿಸಿ. ಪ್ರತಿದಿನ ಕನಿಷ್ಠ 30 ನಿಮಿಷಗಳನ್ನು ಅದಕ್ಕಾಗಿ ಮೀಸಲಿಡಿ. ಕ್ರಮೇಣ ಅದು ದೊಡ್ಡದಾಗುತ್ತಾ, ನಿಮ್ಮ ಏಳಿಗೆಗೆ ಸಹಾಯ ಮಾಡುತ್ತದೆ.
ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ಧ್ಯಾನ ಮಾಡಿ
ಪ್ರತಿದಿನ 15 ನಿಮಿಷಗಳ ಕಾಲ ಕುಳಿತು ಸ್ವಯಂ ಯೋಚಿಸಿ. ಈ ಸಮಯದಲ್ಲಿ ಸಂಪೂರ್ಣ ಏಕಾಂತದಲ್ಲಿ ಕುಳಿತುಕೊಳ್ಳಿ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ. ಧ್ಯಾನವು (meditation) ಈ ಕೆಲಸವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಮುಂದಿನ ದಿನಕ್ಕಾಗಿ ಪ್ಲ್ಯಾನ್ ಮಾಡೋದು (to do list)
ನಿಮ್ಮ ಇಡೀ ದಿನವನ್ನು ವಿಶ್ಲೇಷಿಸಿ ಮತ್ತು ಅದಕ್ಕೆ ಅನುಗುಣವಾಗಿ ಮರುದಿನವನ್ನು ಯೋಜಿಸಿ. ಇದು ನಿಮಗೆ ಒಂದು ಹೆಜ್ಜೆ ಮುಂದೆ ಇಡಲು ಮತ್ತು ನಿಮ್ಮ ಗುರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ.
ಮಲಗುವ ಮೊದಲು ಹೀಗೆ ಮಾಡಿ
ಮಲಗುವ ಮೊದಲು 5 ನಿಮಿಷಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಗುರಿಯ ಬಗ್ಗೆ ಐದು ಸಕಾರಾತ್ಮಕ ವಿಷಯಗಳನ್ನು ಯೋಚಿಸಿ. ನೀವು ಆ ಗುರಿಯನ್ನು ಸಾಧಿಸಿದ್ದೀರಿ ಎಂದು ಭಾವಿಸಿ. ನಂತರ ಈ ಭಾವನೆಯನ್ನು ಇಡೀ ದೇಹದೊಂದಿಗೆ ಅನುಭವಿಸಿ. ಈ ಸಕಾರಾತ್ಮಕ ಶಕ್ತಿಯು ನಿಮಗೆ ಹಿಮ್ಮಸ್ಸು ಕೊಡೋದಂತೂ ಸುಳ್ಳಲ್ಲ.
ಸಕಾರಾತ್ಮಕವಾಗಿ ಮಾತನಾಡುವುದು (posyive talk)
ನೀವು ಏನೇ ಪಡೆದರೂ ಅಥವಾ ಪಡೆಯದಿದ್ದರೂ, ದಿನದ ಕೊನೆಯಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮರೆಯದಿರಿ. ಯಾವಾಗಲೂ ನಿಮ್ಮ ಬಗ್ಗೆ ಮತ್ತು ನಿಮ್ಮ ಜೀವನದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿ. ಈ ವಿಷಯಗಳು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಲು ನಿಮಗೆ ಸಹಾಯ ಮಾಡುತ್ತದೆ, ಇದು ಗುರಿಯನ್ನು ಸಾಧಿಸಲು ಬಹಳ ಮುಖ್ಯ.
ವಾರದಲ್ಲಿ 6 ದಿನ ವ್ಯಾಯಾಮ ಮಾಡಿ
ಯಾವುದೇ ರೀತಿಯ ವ್ಯಾಯಾಮವು (exercise) ನಿಮಗೆ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ಅಂದರೆ ಅದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಇದು ಮಾತ್ರವಲ್ಲ, ಇದು ನಿಮಗೆ ಉತ್ತಮ ಭಾವನೆಯನ್ನು ನೀಡುವ ಹಾರ್ಮೋನುಗಳನ್ನು ಸಹ ಬಿಡುಗಡೆ ಮಾಡುತ್ತದೆ. ಅವು ಮನಸ್ಸನ್ನು ತೀಕ್ಷ್ಣಗೊಳಿಸುತ್ತವೆ.
ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಉತ್ತಮ ಪುಸ್ತಕವನ್ನು ಓದಿ.
ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಉತ್ತಮ ಪುಸ್ತಕವನ್ನು ಓದಿ. ಇದು ನಿಮ್ಮ ಜ್ಞಾನವನ್ನು ಸುಧಾರಿಸಲು ಮಾತ್ರವಲ್ಲದೆ ನಿಮ್ಮ ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ನೀವು ಮುಂದೆ ಸಾಗಲು ಸಹಾಯ ಮಾಡುವ ಪುಸ್ತಕಗಳನ್ನು ನೀವು ಓದಿದರೆ, ಅದು ಇನ್ನೂ ಉತ್ತಮ.