ಡೋರ್ ಮ್ಯಾಟ್ ಪದೇ ಪದೇ ಒದ್ದೆ ಆಗ್ತಿದ್ದರೆ, ಜಾರುತ್ತಾ ಇದ್ರೆ ಈ ಟೆಕ್ನಿಕ್ಸ್ ಹೆಲ್ಪ್ ಮಾಡುತ್ತೆ!
ಡೋರ್‌ಮ್ಯಾಟ್ ಜಾರಬಾರದೆಂದರೆ ಈ ಐದು ಸುಲಭ ಮಾರ್ಗಗಳು ನಿಮಗೆ ಖಂಡಿತ ಸಹಾಯ ಮಾಡಬಲ್ಲದು.

ಒದ್ದೆಯಾಗಿರುವುದರಿಂದ ಜಾರುತ್ತೆ
ಮಳೆಗಾಲದಲ್ಲಿ ಡೋರ್‌ಮ್ಯಾಟ್ ಎಷ್ಟು ಮುಖ್ಯವೋ, ಅದು ಅಷ್ಟೇ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದು ಪಾದಗಳನ್ನು ಒರೆಸಲು ಉಪಯುಕ್ತವಾಗಿದೆ. ಆದರೆ ಒದ್ದೆಯಾಗಿರುವುದರಿಂದ ಜಾರುತ್ತದೆ. ಆದ್ದರಿಂದ ಡೋರ್‌ಮ್ಯಾಟ್ ಜಾರಬಾರದೆಂದರೆ ಈ ಐದು ಸುಲಭ ಮಾರ್ಗಗಳು ನಿಮಗೆ ಖಂಡಿತ ಸಹಾಯ ಮಾಡಬಲ್ಲದು.
ಸರಿಯಾಗಿ ಹೊಂದಿಸಿ
ಮಳೆಗಾಲದಲ್ಲಿ ಮನೆಯ ಹೊರಗೆ ಇಡುವ ಡೋರ್‌ಮ್ಯಾಟ್ ಏನೆಲ್ಲಾ ಸಮಸ್ಯೆಯುಂಟು ಮಾಡಬಹುದು ಎಂಬುದು ಅನುಭವಿಸಿದವರಿಗೆ ಗೊತ್ತು. ಕ್ರಮೇಣ ನೀರು ಸೇರಿಕೊಂಡು ಅದು ಒದ್ದೆಯಾಗುವುದರಿಂದ ನಾವು ಜಾರಿಬೀಳಲು ಪ್ರಾರಂಭಿಸುತ್ತೇವೆ. ಇದು ಬೀಳುವ ಅಪಾಯವನ್ನೇ ಹೆಚ್ಚು ಮಾಡುವುದರಿಂದ ಡೋರ್‌ಮ್ಯಾಟ್ ಅನ್ನು ಸರಿಯಾಗಿ ಇಟ್ಟುಕೊಳ್ಳುವುದು ಅಥವಾ ಹೊಂದಿಸುವುದು ಮುಖ್ಯ.
slip resistant mats ಅಥವಾ ಪ್ಯಾಡ್
ಡೋರ್‌ಮ್ಯಾಟ್ ಜಾರದ ಹಾಗೆ ಇಡಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಮಾರುಕಟ್ಟೆಯಲ್ಲಿ ಸ್ಲಿಪ್ ರೆಸಿಸ್ಟೆಂಟ್ ಮ್ಯಾಟ್ ಅಥವಾ ಪ್ಯಾಡ್ ಸುಲಭವಾಗಿ ಲಭ್ಯವಿದ್ದು, ಇವುಗಳನ್ನು ಕಾರ್ಪೆಟ್‌ಗಳು ಅಥವಾ ಡೋರ್‌ಮ್ಯಾಟ್‌ಗಳ ಕೆಳಗೆ ಇಡಲು ವಿಶೇಷವಾಗಿ ತಯಾರಿಸಲಾಗುತ್ತದೆ. ಡೋರ್‌ಮ್ಯಾಟ್‌ನ ಗಾತ್ರಕ್ಕೆ ಅನುಗುಣವಾಗಿ ಅದನ್ನು ಕತ್ತರಿಸಿ ಕೆಳಗೆ ಇರಿಸಿ.
ಡಬಲ್ ಸೈಡೆಡ್ ಟೇಪ್
ಇದು ತಾತ್ಕಾಲಿಕ. ಆದರೆ ಒಳ್ಳೆಯ ಕ್ವಾಲಿಟಿ ಇರುವ ಡಬಲ್ ಸೈಡೆಡ್ ಟೇಪ್ ತೆಗೆದುಕೊಂಡು, ಅದರ ಕೆಲವು ತುಂಡುಗಳನ್ನು ಡೋರ್‌ಮ್ಯಾಟ್‌ನ ನಾಲ್ಕು ಮೂಲೆಗಳಲ್ಲಿ, ಮಧ್ಯದಲ್ಲಿ ಮತ್ತು ಕೆಳಭಾಗದಲ್ಲಿ ಅಂಟಿಸಿ. ಈಗ ಡೋರ್‌ಮ್ಯಾಟ್ ಅನ್ನು ನೆಲಕ್ಕೆ ಅಂಟಿಸಿ.
ಹೆವಿ ಇರೊದನ್ನ ಸೆಲೆಕ್ಟ್ ಮಾಡಿ
ಡೋರ್‌ಮ್ಯಾಟ್ ತೂಕವಿದ್ದಷ್ಟು ಜಾರುವುದನ್ನು ತಪ್ಪಿಸಬಹುದು. ಆದ್ದರಿಂದ ಸ್ವಲ್ಪ ಭಾರವಾಗಿರುವ ಮತ್ತು ಕೆಳಭಾಗವು ರಬ್ಬರ್ ಅಥವಾ ಯಾವುದೇ ಜಾರದ ವಸ್ತುವಿನಿಂದ ಮಾಡಲ್ಪಟ್ಟಿರುವ ಡೋರ್‌ಮ್ಯಾಟ್ ಅನ್ನು ಆರಿಸಿ. ತೆಂಗಿನ ನಾರುಗಳಿಂದ ಮಾಡಿದ ದಪ್ಪ ಡೋರ್‌ಮ್ಯಾಟ್‌ಗಳು ಉತ್ತಮ ಆಯ್ಕೆಯಾಗಿದೆ.
ಯೋಗ ಮ್ಯಾಟ್ ಅಥವಾ ದಪ್ಪ ರಬ್ಬರ್ ಶೀಟ್
ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಬಳಸಿಕೊಂಡು ನೀವು ಡೋರ್‌ಮ್ಯಾಟ್ ಅನ್ನು ಜಾರದ ಹಾಗೆ ನೋಡಿಕೊಳ್ಳಬಹುದು. ನಿಮ್ಮ ಬಳಿ ಹಳೆಯ ರಬ್ಬರ್ ಮ್ಯಾಟ್, ಯೋಗ ಮ್ಯಾಟ್ ಅಥವಾ ದಪ್ಪ ರಬ್ಬರ್ ಶೀಟ್ ಇದ್ದರೆ, ಅದನ್ನು ನಿಮ್ಮ ಡೋರ್‌ಮ್ಯಾಟ್‌ನ ಗಾತ್ರಕ್ಕೆ ಕತ್ತರಿಸಿ. ನಿಮ್ಮ ಡೋರ್‌ಮ್ಯಾಟ್‌ನ ಕೆಳಗೆ ಇರಿಸಿ.
ಸಿಲಿಕೋನ್ ಕೋಲ್ಕ್ ಅಥವಾ ಬಿಸಿ ಅಂಟು
ಇದು ಡೋರ್‌ಮ್ಯಾಟ್ ಅನ್ನು ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಇರಿಸುವ ಮತ್ತೊಂದು ವಿಧಾನ. ಆದರೆ ನೀವು ಅದನ್ನು ತೆಗೆದುಹಾಕುವಾಗ ಸ್ವಲ್ಪ ಕೆಲಸ ಜಾಸ್ತಿಯಾಗುತ್ತದೆ. ಡೋರ್‌ಮ್ಯಾಟ್‌ನ ಕೆಳಭಾಗಕ್ಕೆ ಸಿಲಿಕೋನ್ ಕೋಲ್ಕ್ ಅಥವಾ ಬಿಸಿ ಅಂಟು ತೆಳುವಾದ ಪಟ್ಟಿಯನ್ನು ಹಚ್ಚಿ ಒಣಗಲು ಬಿಡಿ. ಇದು ಡೋರ್‌ಮ್ಯಾಟ್ ಜಾರುವುದನ್ನು ತಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.