ಡಯಟ್ಟೂ ಬೇಡ, ವ್ಯಾಯಾಮವೂ ಬೇಡ, ಹೆರಿಗೆ ನಂತರ ಹೀಗೆ ತೂಕ ಇಳಿಸಿ
ಗರ್ಭಾವಸ್ಥೆಯಲ್ಲಿ, ಆರೋಗ್ಯಕರ ಗರ್ಭಧಾರಣೆ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಸಾಕಷ್ಟು ಆರೋಗ್ಯಕರ ಆಹಾರ ತಿನ್ನಬೇಕು. ಈ ಸಮಯದಲ್ಲಿ, ಗರ್ಭಿಣಿ ಮಹಿಳೆಯರು ತೂಕದ ಬಗ್ಗೆ ಚಿಂತಿಸದೆ ತಮ್ಮ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ್ದು ಸತ್ಯ. ಆದ್ರೆ, ಗರ್ಭಧಾರಣೆ ಮತ್ತು ಹೆರಿಗೆಯ ಒಂಬತ್ತು ತಿಂಗಳು ಕಳೆದ ನಂತರ, ಮಹಿಳೆಯರು ಹೆಚ್ಚಾಗಿ ತಮ್ಮ ಹೆಚ್ಚಿದ ತೂಕದ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾರೆ. ಹಾಗಾಗಿ, ಹೆರಿಗೆ ನಂತರ, ದೇಹವು ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಬೇಕಾಗಿರುವುದರಿಂದ ತೂಕ ಇಳಿಸಿಕೊಳ್ಳಲು ಏನು ಮಾಡೋದು ಅನ್ನೋ ಯೊಚನೆಯಲ್ಲಿದ್ದರೆ ಮುಂದೆ ಓದಿ….
ತಾಯಿಯಾದ ನಂತರ ದೇಹದಿಂದ ಸ್ವಲ್ಪ ಪ್ರಮಾಣದ ಕೊಬ್ಬನ್ನು ಇಳಿಸಲು ಎಕ್ಸರ್ ಸೈಜ್(Exercise) ಒಂದೇ ದಾರಿ ಅಲ್ಲ, ಅದಕ್ಕೆ ಸಹಾಯ ಮಾಡುವ ಕೆಲವು ತಿಂಡಿ ಮತ್ತು ಆಹಾರಗಳಿವೆ. ಬೆಳಗಿನ ಉಪಾಹಾರವು ದಿನವಿಡೀ ನೀವು ಆರೋಗ್ಯವಾಗಿರುವಂತೆ ನೋಡಿಕೊಳ್ಳುವ ಪ್ರಮುಖ ಆಹಾರ. ಈ ಸಮಯದಲ್ಲಿ ಕೆಲವು ತಿಂಡಿಗಳನ್ನು ತಿನ್ನೋ ಮೂಲಕ ಸ್ವಲ್ಪ ತೂಕ ಇಳಿಸಬಹುದು.
ಪ್ರಸವದ ನಂತರ ತೂಕ ಕಳೆದುಕೊಳ್ಳಲು ನೀವು ಬ್ರೇಕ್ ಫಾಸ್ಟ್ (Breakfast) ಸಹಾಯ ಪಡೆಯಬಹುದು. ಏನು ಬ್ರೇಕ್ ಫಾಸ್ಟ್ ಸೇವಿಸೋದು ಎಂದು ಯೋಚ್ನೆ ಮಾಡ್ತಿದ್ದೀರಾ? ಬನ್ನಿ ಹೆರಿಗೆಯ ನಂತರ ತೂಕ ಇಳಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಪಾಕವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ. ಹೆರಿಗೆಯ ನಂತರ ನೀವು ಸಹ ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಈ ಬ್ರೇಕ್ಫಾಸ್ಟ್ ಟಿಪ್ಸ್ ಟ್ರೈ ಮಾಡಿ.
ಮೊಳಕೆ ಕಾಳು(Sprouts)
ಅವು ಪ್ರೋಟೀನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಮೊಳಕೆ ಕಾಳುಗಳನ್ನು ತಿನ್ನುವಾಗ ದೇಹವು ಹೆಚ್ಚು ಕ್ಯಾಲೊರಿ ಬರ್ನ್ ಮಾಡುತ್ತೆ. ನೀವು ಸಲಾಡ್ ಅಥವಾ ಬೇರೆ ರೂಪದಲ್ಲಿ ಮೊಳಕೆ ಕಾಳುಗಳನ್ನು ತಿನ್ನಬಹುದು. ತೂಕ ಇಳಿಸಿಕೊಳ್ಳಲು ಇದು ಅತ್ಯುತ್ತಮ ಉಪಾಹಾರವಾಗಿದೆ.
ಪನೀರ್ (Paneer)
ಪನೀರ್ ವೆಜಿಟೇರಿಯನ್ ಜನರಿಗೆ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ರ ಮೂಲವಾಗಿದೆ. ಇದು ಹೊಟ್ಟೆಯನ್ನು ದೀರ್ಘ ಕಾಲದವರೆಗೆ ತುಂಬಿರುವಂತೆ ಮಾಡುತ್ತೆ ಮತ್ತು ಹಸಿವನ್ನು ಕಡಿಮೆ ಮಾಡುತ್ತೆ. ಸ್ತನ್ಯಪಾನದ ಸಮಯದಲ್ಲಿಯೂ ಪನೀರ್ ಶಕ್ತಿಯನ್ನು ನೀಡುತ್ತೆ. ನೀವು ಪನೀರ್ ಸ್ಯಾಂಡ್ ವಿಚ್ ತಯಾರಿಸಿ ತಿನ್ನಬಹುದು ಮತ್ತು ಅದಕ್ಕೆ ಆರೋಗ್ಯಕರವಾದ ವೆಜಿಟೇಬಲ್ಸ್ ಸೇರಿಸಬಹುದು ಮತ್ತು ಅದರ ರುಚಿ ಮತ್ತು ಪೋಷಣೆಯನ್ನು ಹೆಚ್ಚಿಸಬಹುದು.
ರಾಗಿ (Raagi)
ರಾಗಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಜೀವಸತ್ವಗಳನ್ನು ಹೊಂದಿರುತ್ತೆ, ಇದು ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ, ಇದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತೆ. ರಾಗಿಯಲ್ಲಿ ನಾರಿನಂಶ, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ಗಳಿವೆ. ನೀವು ಬೆಳಗಿನ ಉಪಾಹಾರದಲ್ಲಿ ರಾಗಿ ಉತ್ತಪ್ಪನ್ ತಯಾರಿಸಿ ತಿನ್ನಬಹುದು.
ಬಾಳೆಹಣ್ಣು (Banana)
ಬಾಳೆಹಣ್ಣು ಕ್ಯಾಲ್ಸಿಯಂ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಎಕ್ಸರ್ಸೈಜ್‌ಗೆ ಮೊದಲು ಬಾಳೆಹಣ್ಣನ್ನು ತಿನ್ನುವ ಮೂಲಕ ನೀವು ಶಕ್ತಿಯನ್ನು ಪಡೆಯಬಹುದು. ಬಾಳೆಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಮ್ ಸಮೃದ್ಧವಾಗಿದೆ. ಇದು ಮಕ್ಕಳಿಗೆ ಎದೆಹಾಲಿನ ಪೋಷಣೆಯನ್ನು ಸಹ ಒದಗಿಸುತ್ತೆ. ಬೆಳಗ್ಗಿನ ಬ್ರೇಕ್ಫಾಸ್ಟ್ ಗೆ ನೀವು ಮಿಲ್ಕಿ ಶೇಕ್ ಮಾಡಿ ಕುಡಿಯಬಹುದು.
ಓಟ್ಸ್ (Oats)
ಓಟ್ಸ್ ನಲ್ಲಿ ನಾರಿನಂಶವು ಸಮೃದ್ಧವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿರಿಸುತ್ತೆ. ಜಠರವು ಸ್ವಚ್ಛವಾಗಿದ್ದಾಗ, ತಿನ್ನುವ ಮೂಲಕ ಜೀರ್ಣಾಂಗ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತೆ. ಆದ್ದರಿಂದ ಓಟ್ಸ್ ಉಪಾಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ.