Tips and tricks: ಬಟ್ಟೆಯ ಮೇಲಿನ ಕಠಿಣ ಕಲೆ ತೆಗೆಯಲು ಆಗ್ತಿಲ್ವಾ ...ಈ ರೀತಿ ಟ್ರೈ ಮಾಡಿ ನೋಡಿ
ಇದರಲ್ಲಿ ತೊಳೆಯುವುದರಿಂದ ಎಣ್ಣೆ, ಮೇಕಪ್, ಬೆವರು ಮತ್ತು ಗ್ರೀಸ್ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಕೊಳಕು ಸಹ ಬೇಗನೆ ಕರಗುತ್ತದೆ ಮತ್ತು ಬಟ್ಟೆಗಳು ಸ್ವಚ್ಛವಾಗುತ್ತವೆ.

ಎಂಥಹ ಬಟ್ಟೆಗಳನ್ನ ತೊಳೆಯಬೇಕು?
ಸಾಮಾನ್ಯವಾಗಿ ಕೊಳಕು ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಹಾನಿಯನ್ನುಂಟುಮಾಡಬಹುದು. ಹಾಗಾಗಿ ಇಲ್ಲಿ ಯಾವ ಸಮಯದಲ್ಲಿ, ಎಂಥಹ ಬಟ್ಟೆಗಳನ್ನ, ಬಿಸಿ ನೀರಿನಲ್ಲಿ ಹೇಗೆ ತೊಳೆಯಬೇಕು ಎಂದು ಕೊಡಲಾಗಿದೆ. ಅದಕ್ಕೂ ಮುನ್ನ ಬಿಸಿ ನೀರಿನಲ್ಲಿ ಬಟ್ಟೆ ಒಗೆಯುವುದರಿಂದಾಗುವ ಅನುಕೂಲಗಳು-ಅನಾನುಕೂಲಗಳನ್ನು ನೋಡೋಣ ಬನ್ನಿ...
ಅನುಕೂಲಗಳು
*ಬಿಸಿ ನೀರಿನಲ್ಲಿ ತೊಳೆಯುವುದರಿಂದ ಬಟ್ಟೆಗಳ ಮೇಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಸೂಕ್ಷ್ಮಜೀವಿಗಳು ಸಾಯುತ್ತವೆ. ಅದಕ್ಕಾಗಿಯೇ ಬೆಡ್‌ಶೀಟ್‌ಗಳು, ಟವೆಲ್‌ಗಳು ಮತ್ತು ಮಕ್ಕಳ ಬಟ್ಟೆಗಳನ್ನು ತೊಳೆಯಲು ಬಿಸಿನೀರು ವಿಶೇಷವಾಗಿ ಒಳ್ಳೆಯದು.
*ಬಿಸಿ ನೀರಿನಲ್ಲಿ ಎಣ್ಣೆ, ಮೇಕಪ್, ಬೆವರು ಮತ್ತು ಗ್ರೀಸ್ ಕಲೆಗಳನ್ನು ಸುಲಭವಾಗಿ ತೆಗೆಯಬಹುದು. ಕೊಳಕು ಸಹ ಬೇಗನೆ ಕರಗುತ್ತದೆ ಮತ್ತು ಬಟ್ಟೆಗಳು ಸ್ವಚ್ಛವಾಗುತ್ತವೆ.
*ಡಿಟರ್ಜೆಂಟ್ ಬಿಸಿ ನೀರಿನಲ್ಲಿ ಚೆನ್ನಾಗಿ ಕರಗುವುದರಿಂದ ಹೆಚ್ಚು ಕ್ಲೀನ್ ಆಗಲು ಅನುಕೂಲವಾಗುತ್ತದೆ.
ಅನಾನುಕೂಲಗಳು
*ಬಟ್ಟೆಗಳು ಬೇಗನೆ ಹಾಳಾಗುತ್ತವೆ.
*ಬಿಸಿನೀರು ಬಟ್ಟೆಯ ನಾರುಗಳನ್ನು (ವಿಶೇಷವಾಗಿ ಹತ್ತಿ ಮತ್ತು ನೈಲಾನ್‌ನಂತಹ ಸೂಕ್ಷ್ಮ ಬಟ್ಟೆಗಳು) ದುರ್ಬಲಗೊಳಿಸಬಹುದು.
*ಬಣ್ಣಗಳು ಮಸುಕಾಗಬಹುದು ಮತ್ತು ಬಟ್ಟೆ ಕುಗ್ಗಬಹುದು.
*ಕರೆಂಟ್ ಬಿಲ್ ಹೆಚ್ಚಾಗುತ್ತದೆ.
*ಬಿಸಿನೀರು ಬಳಸುವಾಗ ಹೆಚ್ಚಿನ ವಿದ್ಯುತ್ ಅಥವಾ ಗ್ಯಾಸ್ ಬೇಕಾಗುತ್ತದೆ. ಇದರಿಂದಾಗಿ ನಿಮ್ಮ ಬಿಲ್ ಆಟೊಮ್ಯಾಟಿಕ್ ಆಗಿ ಹೆಚ್ಚಾಗುತ್ತದೆ.
*ಸೂಕ್ಷ್ಮವಾದ ಬಟ್ಟೆಗಳಿಗೆ ಹಾನಿಕಾರಕ.
*ರೇಷ್ಮೆ, ಉಣ್ಣೆ ಅಥವಾ ಸಿಂಥೆಟಿಕ್ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯುವುದರಿಂದ ಅವುಗಳ ವಿನ್ಯಾಸ ಹಾಳಾಗಬಹುದು.
ಯಾವಾಗ ತೊಳೆಯಬೇಕು?
*ಟವೆಲ್‌ಗಳು, ಬೆಡ್‌ಶೀಟ್‌ಗಳು ಮತ್ತು ವ್ಯಾಯಾಮ ಬಟ್ಟೆಗಳಲ್ಲಿರುವ ಸೋಂಕನ್ನು ತಪ್ಪಿಸಲು ಬಿಸಿನೀರು ಉತ್ತಮ.
*ಎಣ್ಣೆಯುಕ್ತ ಅಥವಾ ಜಿಡ್ಡಿನ ಕಲೆಗಳಿರುವ ಬಟ್ಟೆಗಳಿಗೆ ಬೆಚ್ಚಗಿನ ನೀರು ಉಪಯೋಗಿಸುವುದರಿಂದ ಚೆನ್ನಾಗಿ ಕ್ಲೀನ್ ಆಗುತ್ತದೆ.
*ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳಲ್ಲಿನ ಕಲೆಗಳನ್ನು ಬಿಸಿನೀರು ಸುಲಭವಾಗಿ ತೆಗೆದುಹಾಕುತ್ತದೆ.
ಯಾವಾಗ ಉತ್ತಮ?
*ಬಣ್ಣದ ಬಟ್ಟೆಗಳು ಮತ್ತು ರೇಷ್ಮೆ, ಉಣ್ಣೆ, ಪಾಲಿಯೆಸ್ಟರ್‌ನಂತಹ ಸೂಕ್ಷ್ಮ ಬಟ್ಟೆ ತೊಳೆಯುವಾಗ
*ಬಟ್ಟೆಗಳ ಮೇಲೆ ಅಂಥ ಯಾವುದೇ ದೊಡ್ಡ ಕಲೆಗಳಿಲ್ಲದಿದ್ದರೆ.
*ವಿದ್ಯುತ್ ಉಳಿಸಲು
ಹಾಗಾದ್ರೆ ಯಾವುದು ಬೆಸ್ಟ್?
ಬಿಸಿನೀರು ಬಟ್ಟೆಗಳನ್ನು ಕೊಳಕು ಮತ್ತು ಬ್ಯಾಕ್ಟೀರಿಯಾಗಳಿಂದ ಉತ್ತಮವಾಗಿ ರಕ್ಷಿಸುತ್ತದೆ. ಆದರೆ ಸೂಕ್ಷ್ಮವಾದ ಬಟ್ಟೆಗಳಿಗೆ ತಣ್ಣನೆಯ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಅಂದಹಾಗೆ ಬಟ್ಟೆ ಲೇಬಲ್‌ನಲ್ಲಿ ತೊಳೆಯುವ ಸೂಚನೆಗಳನ್ನು ಪರೀಕ್ಷಿಸಲು ಮರೆಯದಿರಿ.