ಮಕ್ಕಳನ್ನು ಫೋನ್‌ನಿಂದ ದೂರವಿಡಲು ಈ ಟಿಪ್ಸ್ ಟ್ರೈ ಮಾಡಿ!
ಸ್ಮಾರ್ಟ್ ಫೋನ್ ನಿಮ್ಮ ಮುಗ್ಧ ಮಗುವಿನ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳನ್ನು ಮೊಬೈಲ್ ಫೋನ್‌ಗಳಿಂದ ದೂರವಿರಿಸೋದು ಕಷ್ಟದ ಕೆಲಸ. ಆದರೆ ಮೊಬೈಲ್ ಫೋನ್ ಗಳಿಂದ ಅಂತರ ಕಾಯ್ದುಕೊಳ್ಳದಿದ್ದರೆ, ಆಹಾರದ ಕೊರತೆ ಜೊತೆಗೆ ಇತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇಲ್ಲಿ ಹೇಳಿರುವ ಟಿಪ್ಸ್ ಮೊಬೈಲ್ ಫೋನ್ ಅನ್ನು ಅಂಬೆಗಾಲಿಡುವ ಮಗುವಿನಿಂದ ದೂರವಿರಿಸಬಹುದು. ಅಷ್ಟೇ ಅಲ್ಲ ಚೀನಿ ದಂಪತಿ ಮಾಡಿದ ಹಾಗೆ ಮಕ್ಕಳಿಗೆ ರಾತ್ರಿಯೂ ನಿದ್ರೆ ಮಾಡದೇ ಫೋನ್ ನೋಡುವಂತೆ ಮಾಡಿ, ಮೊಬೈಲ್ ಚಟ ಬಿಡಿಸಲು ಯತ್ನಿಸಬಹುದು.

ನಿಮ್ಮ ಮಗುವನ್ನು ಮೊಬೈಲ್ ಫೋನ್ (Mobile phone)ಗಳಿಗೆ ವ್ಯಸನಿಯನ್ನಾಗಿ ಮಾಡಲು ನೀವೇ ಜವಾಬ್ದಾರರಾಗಿದ್ದೀರಿ, ಯಾಕಂದ್ರೆ ಆಗಾಗ್ಗೆ ನೀವು ಕೆಲಸದಲ್ಲಿ ಬ್ಯುಸಿ ಆಗಿದ್ದರೆ ಮತ್ತು ಮಗು ಮನೆಯಲ್ಲಿ ಸದ್ದು ಮಾಡುತ್ತಿದ್ದರೆ, ಶಾಂತಗೊಳಿಸಲು ಅವನಿಗೆ ಮೊಬೈಲ್ ಫೋನ್ ನೀಡುತ್ತೀರಿ. ಮಗುವಿನ ಮೊಬೈಲ್ ಚಟವನ್ನು ನೀವು ಹೇಗೆ ಕಡಿಮೆ ಮಾಡಬಹುದು ಅಥವಾ ತೆಗೆದುಹಾಕಬಹುದು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಮಗು ಹುಟ್ಟಿದಾಗಲೇ ಮೊಬೈಲ್ ಫೋನ್ ತೋರಿಸಲಾಗುತ್ತೆ. ಈಗಿನ ಪೋಷಕರು ಹೆಚ್ಚಾಗಿ ಇದನ್ನೇ ಮಾಡ್ತಾರೆ. ಫೋನ್‌ನಿಂದ ಫೋಟೋಗಳನ್ನು ತೆಗೆದುಕೊಳ್ಳುವುದರಿಂದ ಹಿಡಿದು ಪ್ರತಿಯೊಂದಕ್ಕೂ ಫೋನ್ ಬೇಕೇಬೇಕು. ಹಾಗಾಗಿ ಮಗು ಬೆಳೆಯುವ ಹೊತ್ತಿಗೆ, ಈ ಗೆಜೆಟ್‌ಗೆ ಒಗ್ಗಿಕೊಂಡಿರುತ್ತೆ. ನಿಮ್ಮ ಮಗು ಫೋನಿನಲ್ಲಿ ಹಾಡು ನೋಡದೆ ತಿನ್ನಲು ನಿರಾಕರಿಸುತ್ತೆ. ಇದು ಅಂಬೆಗಾಲಿಡುವ ಮಕ್ಕಳಲ್ಲಿ ಮೊಬೈಲ್ ವ್ಯಸನವಾಗಿದೆ.
ಸ್ಮಾರ್ಟ್ ಫೋನ್ ಮಕ್ಕಳಿಗೆ ಏಕೆ ಒಳ್ಳೆಯದಲ್ಲ?
ನೀವು ವಾಸಿಸುತ್ತಿರುವ ಡಿಜಿಟಲ್ ಏಜ್ ಪರಿಗಣಿಸಿ, ಗ್ಯಾಜೆಟ್ ನಿಂದ(Gadget) ಮಗುವನ್ನು ಬೇರ್ಪಡಿಸೋದು ಕೆಲವೊಮ್ಮೆ ಕಷ್ಟ. ಆದರೂ, ಮಗುವಿನ ಸ್ಮಾರ್ಟ್ ಫೋನ್ ಬೇಡಿಕೆಗಳಿಗೆ ಮಣಿಯುವ ಮೊದಲು, ನೀವು ತಿಳಿದುಕೊಳ್ಳಬೇಕಾದ ಮೂರು ಪ್ರಮುಖ ಸಂಗತಿಗಳು ಇಲ್ಲಿವೆ.
ಸ್ಮಾರ್ಟ್ ಫೋನ್ ಮಗುವಿನ ಮೆದುಳಿನ ಬೆಳವಣಿಗೆಯ(Brain development) ಮೇಲೆ ಪರಿಣಾಮ ಬೀರುತ್ತೆ. ಸ್ಮಾರ್ಟ್ ಫೋನ್ ಮೆದುಳಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ. ಅಲ್ಲದೇ ಇತರೆ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಸ್ಮಾರ್ಟ್ ಫೋನ್ ಅತಿ ಬಳಕೆ ಅರಿವಿನ ವಿಳಂಬಕ್ಕೆ ಕಾರಣವಾಗುತ್ತೆ.
ಬೊಜ್ಜು: (obesity)
ಮಗು ಮೊಬೈಲ್‌ನಲ್ಲಿ ಆಟಗಳನ್ನು ಆಡುತ್ತಿರುವಾಗ, ಅವನು ಹೊರಗಿನ ಆಟಗಳಲ್ಲಿ ತೊಡಗೋದಿಲ್ಲ, ಇದರ ಪರಿಣಾಮವಾಗಿ ದೈಹಿಕ ವ್ಯಾಯಾಮದ ಕೊರತೆ ಮತ್ತು ಮಗುವಿನ ಚಟುವಟಿಕೆ ಕಡಿಮೆಯಾಗುತ್ತೆ. ಇದು ಸ್ಥೂಲಕಾಯಕ್ಕೆ ಕಾರಣವಾಗುತ್ತೆ. ಇದರಿಂದ ಬಾಲ್ಯದಲ್ಲಿಯೇ ಮಗುವಿಗೆ ಹಲವಾರು ಸಮಸ್ಯೆಗಳು ಕಾಡುತ್ತವೆ.
ಸಾಮಾಜಿಕ ಅಭಿವೃದ್ಧಿಯಲ್ಲಿ ವಿಳಂಬ:
ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ (Tablet) ಆಡುವುದು ಸಹ ಸೋಶಿಯಲ್ ಡೆವಲಪ್‌ಮೆಂಟ್ (Social Development) ವಿಳಂಬಗೊಳಿಸುತ್ತೆ, ಏಕೆಂದರೆ ಮಗು ಯಾವಾಗಲೂ ಗ್ಯಾಜೆಟ್‌ಗಳಲ್ಲಿ ನಿರತವಾಗಿರುತ್ತೆ. ಹೆಚ್ಚು ಮಾತನಾಡೋದಿಲ್ಲ. ಹೊರಗಡೆ ಯಾರ ಜೊತೆಗೂ ಬೆರೆಯೋದಿಲ್ಲ. ಆದುದರಿಂದ ಮಗು ಅಂತರ್ಮುಖಿಯಾಗಿಯೇ ಬೆಳೆಯುತ್ತದೆ.
ನೀವು ಪ್ರಯತ್ನಿಸಬಹುದಾದ ಕೆಲವು ಸಲಹೆಗಳು(Tips)ಇಲ್ಲಿವೆ-
ಮಗುವಿನ ಮುಂದೆ ನೀವು ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸಿ:
ಮಗುವಿಗೆ ಫೋನ್ ಮತ್ತು ಇತರ ಗ್ಯಾಜೆಟ್ ಗಳನ್ನು ಪರಿಚಯಿಸಲು ಪೋಷಕರು ಜವಾಬ್ದಾರರಾಗಿರುತ್ತಾರೆ, ಆದ್ದರಿಂದ ಮಗುವಿನ ಗಮನ ಸೆಳೆಯಲು ಫೋನ್ ಸ್ಪರ್ಶಿಸಲು ಬಿಡಬೇಡಿ. ಅವರನ್ನು ಇತರ ವಿಷಯಗಳಲ್ಲಿ ವ್ಯಸನರನ್ನಾಗಿ ಮಾಡಲು ಪ್ರಯತ್ನಿಸಿ.
ವೀಡಿಯೊ (Video) ಬದಲಿಗೆ ಆಡಿಯೊ ಪ್ಲೇ ಮಾಡಿ:
ವೀಡಿಯೊ ತೋರಿಸುವ ಬದಲು ನೀವು ಆಡಿಯೋ ಸಿಡಿಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಪ್ಲೇ ಮಾಡಬಹುದು. ಈ ರೀತಿಯಾಗಿ ಮಾಡಿದ್ರೆ ಮಗು ಪ್ರಕಾಶಮಾನವಾದ ಬಣ್ಣಗಳಿಂದ ವಿಚಲಿತನಾಗೋದಿಲ್ಲ. ಮತ್ತು ಅವರು ಆಡಿಯೊ ಸಾಂಗ್ಸ್ ಸಹ ಆನಂದಿಸುತ್ತಾರೆ ಯಾಕಂದ್ರೆ ಅವರು ಏನು ಮಾಡಲು ಬಯಸುತ್ತಾರೋ ಅದನ್ನು ಮಾಡುತ್ತಲೇ ಇರುತ್ತಾರೆ. ಎರಡನೆಯ ಮಾರ್ಗವೆಂದರೆ ತಾಯಿ ಅಥವಾ ತಂದೆ ಮಗುವಿಗೆ ಕಥೆ, ಹಾಡು ಹೇಳುವುದು.
ಮಗುವಿಗೆ ಹೆಚ್ಚಿನ ಸಮಯ ನೀಡಿ:
ಪೋಷಕರು(Parents) ಮೊಬೈಲ್ ಬದಲಿಗೆ ಮಗುವಿಗೆ ಸಾಕಷ್ಟು ಸಮಯ ನೀಡಬೇಕು. ಮೊಬೈಲ್ ಫೋನ್ ನೊಂದಿಗೆ ಆಟವಾಡುವ ಬದಲು, ಮಕ್ಕಳೊಂದಿಗೆ ಆಟವಾಡಬೇಕು, ಅವರೊಂದಿಗೆ ಮಾತನಾಡಬೇಕು, ಅವರನ್ನು ನೇಚರ್ ವಾಕ್ ಗೆ ಕರೆದೊಯ್ಯಬೇಕು. ಪರಿಸರವನ್ನು ಅನ್ವೇಷಿಸಬೇಕು. ಸ್ಟ್ರಾಂಗ್ ಪೋಷಕರು-ಮಗುವಿನ ಸಂಬಂಧವನ್ನು ನಿರ್ಮಿಸಲು ಇದು ಅತ್ಯುತ್ತಮ ಸಮಯವಾಗಿರುತ್ತೆ.
ಉತ್ತಮ ರೋಲ್ ಮಾಡೆಲ್ (Role model) ಆಗಿ:
ಮಗು ನೀವು ಏನು ಮಾಡುತ್ತೀರೋ ಅದನ್ನು ನೋಡಿ ಕಲಿಯುತ್ತೆ ಎಂಬುದನ್ನು ನೆನಪಿಡಿ, ಆದ್ದರಿಂದ ನೀವು ಅವರಿಗೆ ಹೇಳುತ್ತಿರುವುದನ್ನು ನೀವು ಅಭ್ಯಾಸ ಮಾಡುತ್ತಿದ್ದರೆ, ಮಗು ಅದನ್ನು ವೇಗವಾಗಿ ಅರ್ಥಮಾಡಿಕೊಳ್ಳುವ ಸಾಧ್ಯತೆ ಹೆಚ್ಚು, ಹಾಗಾಗಿ ಮೊದಲು ನೀವು ಮೊಬೈಲ್ ಫೋನ್ ವ್ಯಸನಿಯಾಗಬೇಡಿ!