Asianet Suvarna News Asianet Suvarna News

Weekend Tips: ಗೆಜೆಟ್ ಬದಿಗಿಟ್ಟು ವೀಕೆಂಡ್ ಹೀಗೆ ಎಂಜಾಯ್ ಮಾಡಿ

Best ways to spend time on weekends: ವಾರಾಂತ್ಯ ಬಂತು ಅಂದ್ರೆ ಜನರು ಸೋಮಾರಿಯಾಗ್ತಾರೆ. ಸೂರ್ಯ ನೆತ್ತಿ ಮೇಲೆ ಬಂದ್ರೂ ಏಳದ ಜನರು ನಂತ್ರ ಇಡೀ ದಿನ ಮೊಬೈಲ್  ಹಿಡಿದು ಕುಳಿತಿರ್ತಾರೆ. ವಾರಕ್ಕೊಮ್ಮೆ ಸಿಗುವ ರಜೆ ಕೂಡ ಮೊಬೈಲ್ ನಲ್ಲಿ ಕಳೆದ್ರೆ ಏನು ಮಜಾ ಹೇಳಿ. ಸ್ವಲ್ಪ ಮೊಬೈಲ್ ಬಿಟ್ಟು ಹೊರ ಪ್ರಪಂಚ ನೋಡಿ.   

How To Spend Weekend Without Gadget
Author
First Published Nov 26, 2022, 11:26 AM IST

ಬೆಳಿಗ್ಗೆ ಆಹಾರವಿಲ್ಲದೆ ಇರ್ತಾರೆ, ರಾತ್ರಿ ಊಟವಿಲ್ಲದೆ ಇರ್ತಾರೆ, ನೀರಿಲ್ಲದೆ ಕೂಡ ಒಂದು ದಿನ ಇರ್ತಾರೇನೋ ಆದ್ರೆ ಮೊಬೈಲ್ ಇಲ್ಲದೆ ಒಂದು ಗಂಟೆ ಇರೋದು ಕಷ್ಟ. ಈಗಿನ ಜನರು ಮೊಬೈಲ್ ಗೆ ದಾಸರಾಗಿದ್ದಾರೆ ಅಂದ್ರೆ ತಪ್ಪಾಗೋದಿಲ್ಲ. ಸ್ವಲ್ಪ ಸಮಯ ಮೊಬೈಲ್ ದೂರವಿದ್ರೆ ಅಥವಾ ಸಾಮಾಜಿಕ ಜಾಲತಾಣ ನೋಡ್ದೆ ಇದ್ರೆ ಹುಚ್ಚರಂತೆ ವರ್ತಿಸಲು ಶುರು ಮಾಡ್ತಾರೆ. ಸಾಮಾಜಿಕ ಜಾಲತಾಣ ಹಾಗೂ ಗೇಮ್ಸ್ ಜನರ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರ್ತಿದೆ. ಅದನ್ನು ಬಿಟ್ಟಿರದ ಸ್ಥಿತಿ ನಿರ್ಮಾಣವಾಗಿದೆ. 

ಹಿಂದೆಲ್ಲ ವೀಕೆಂಡ್ (Weekend) ಬಂತು ಅಂದ್ರೆ ಮನೆಯವರೆಲ್ಲ ಒಟ್ಟಿಗೆ ಕುಳಿತು ಮಾತನಾಡ್ತಿದ್ದರು. ಕುಳಿತು ಆಟ (Game) ವಾಡ್ತಿದ್ದರು. ಒಟ್ಟಿಗೆ ಊಟ (Lunch) ಮಾಡಿ ಸಂಜೆ ಎಲ್ಲರೂ ಸುತ್ತಾಡಲು ಹೋಗ್ತಿದ್ದರು. ಆದ್ರೆ ಈ ಎಲ್ಲ ಸಂತೋಷವನ್ನು ಮೊಬೈಲ್ (Mobile ) ಹಾಗೂ ಲ್ಯಾಪ್ ಟಾಪ್ (Laptop) ನಂತಹ ಗೆಜೆಟ್ ಕಿತ್ತುಕೊಂಡಿದೆ. ವಾರಪೂರ್ತಿ ಕೆಲಸ ಎನ್ನುವ ಜನರು ವಾರಾಂತ್ಯದಲ್ಲಿ ನೋಡಲು ಒಂದಿಷ್ಟು ಸಿರೀಸ್, ಸಿನಿಮಾ (Movie) ಹಾಗೂ ಗೇಮ್ ಗಳನ್ನು ಸೇವ್ ಮಾಡಿರ್ತಾರೆ. ಶನಿವಾರ, ಭಾನುವಾರ ಬರ್ತಿದ್ದಂತೆ ಸಿನಿಮಾ, ಸಿರೀಸ್ ವೀಕ್ಷಣೆಯಲ್ಲಿ ಜನರು ಮಗ್ನರಾಗ್ತಾರೆ. 

ವಾರದಲ್ಲಿ ಒಮ್ಮೆ ಮನೆಯಲ್ಲಿದ್ರೂ ಇಡೀ ದಿನ ಗ್ಯಾಜೆಟ್ ಬಳಸುವ ಜನರು ತಮಗೆ ಅರಿವಿಲ್ಲದೆ ಸಾಕಷ್ಟು ಸಂತೋಷ ಕಳೆದುಕೊಂಡಿದ್ದಾರೆ. ಆರೋಗ್ಯ ಹಾಳು ಮಾಡಿಕೊಳ್ತಿದ್ದಾರೆ. ಗ್ಯಾಜೆಟ್ ಇಲ್ಲದೆ ನೀವು ವಾರಾಂತ್ಯವನ್ನು ಕಳೆಯಲು ಸಾಕಷ್ಟು ದಾರಿಯಿದೆ.

 ಇದನ್ನೂ ಓದಿ: ದಿನವೂ ಲಿಪ್‌ಸ್ಟಿಕ್ ಹಚ್ಚೋದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏನಾಗುತ್ತೆ?

1. ಕುಟುಂಬದ ಜೊತೆ ಸಮಯ ಕಳೆಯಿರಿ : ಕುಟುಂಬದ ಜೊತೆ ಕಳೆಯಲು ಜನರಿಗೆ ಸಮಯ ಸಿಗ್ತಿಲ್ಲ. ವಾರದ ದಿನಗಳಲ್ಲಿ ಬೆಳಿಗ್ಗೆ ಎದ್ದು ಕಚೇರಿಗೆ ಹೋಗುವ ಜನರು ತಡರಾತ್ರಿ ಮನೆಗೆ ಬರ್ತಾರೆ. ವಾರಾಂತ್ಯ ನಿಮಗಾಗಿಯೇ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಟುಂಬದವರ ಜೊತೆ ನೀವು ಕಾಲ ಕಳೆಯಬೇಕು. ನಿಮ್ಮ ಮೊಬೈಲ್ ಬದಿಗಿಟ್ಟು ಅವರ ಜೊತೆ ಮಾತನಾಡಬೇಕು. ಇದು ನಿಮ್ಮ ಉದ್ವೇಗ, ಒತ್ತಡವನ್ನು ಕಡಿಮೆ ಮಾಡಲು ದೊಡ್ಡ ಮಟ್ಟಿಗೆ ನೆರವಾಗುತ್ತದೆ. ನೀವು ಬಯಸಿದ್ರೆ ಊಟಕ್ಕೆ ಹೊರಗೆ ಹೋಗಬಹುದು. ಪಾಲಕರ ಜೊತೆ ಶಾಪಿಂಗ್ ಮಾಡ್ಬಹುದು.

2. ಹೊಸತನಕ್ಕೆ ಆದ್ಯತೆ ನೀಡಿ : ಮನುಷ್ಯ ಸಾಯುವವರೆಗೂ ಕಲಿಕೆ ಅನಿವಾರ್ಯ, ಅವಶ್ಯಕ. ಕುಟುಂಬಸ್ಥರು ಜೊತೆಗಿಲ್ಲ ಎನ್ನುವವರು ಈ ಸಮಯವನ್ನು ಕಲಿಕೆಗೆ ನೀಡಬಹುದು. ನಿಮಗೆ ಆಸಕ್ತಿಯಿರುವ ವಿಷ್ಯವನ್ನು ನೀವು ಕಲಿಯಬಹುದು. ಅದಕ್ಕೆಂದು ಸಾಕಷ್ಟು ಕೋರ್ಸ್ ಲಭ್ಯವಿದೆ. ನಿಮ್ಮ ಹವ್ಯಾಸಕ್ಕೆ ಆದ್ಯತೆ ನೀಡಿ. ಅಡುಗೆ, ಚಿತ್ರಕಲೆ, ತೋಟಗಾರಿಕೆ, ನೃತ್ಯ ಹೀಗೆ ನಿಮಗಿಷ್ಟದ ಕೋರ್ಸ್ ಮಾಡಬಹುದು. ಈಗಾಗಲೇ ಮಾಡಿದ್ದರೆ ಅದಕ್ಕೆ ಇನ್ನಷ್ಟು ಹೊಳಪು ನೀಡಲು ನೀವು ಪ್ರಯತ್ನಿಸಬಹುದು.

3. ಹೊಸ ಸ್ಥಳಗಳ ಅನ್ವೇಷಣೆ : ದೇಶ ಸುತ್ತಿ ನೋಡು ಎಂದು ದೊಡ್ಡವರು ಹೇಳಿದ್ದಾರೆ. ನಮ್ಮ ಪಕ್ಕದಲ್ಲಿರುವ ಸುಂದರ ಊರನ್ನೇ ನಾವು ನೋಡಿರೋದಿಲ್ಲ. ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣವಿದೆ. ವಾರಾಂತ್ಯದಲ್ಲಿ ನೋಡಬಹುದಾದ ಸ್ಥಳಗಳು ಅನೇಕ. ಅವುಗಳಿಗೆ ನೀವು ಭೇಟಿ ನೀಡಬಹುದು. ಕುಟುಂಬಸ್ಥರ ಜೊತೆ ಅಥವಾ ಸ್ನೇಹಿತರ ಜೊತೆ ನೀವು ಪ್ಲಾನ್ ಮಾಡಬಹುದು. ಪ್ರವಾಸಿ ತಾಣಕ್ಕೆ ಹೋಗಲು ಸಾಧ್ಯವಿಲ್ಲ ಎನ್ನುವವು ಶಾಪಿಂಗ್ ಮಾಲ್ ಗಳು, ಮಾರುಕಟ್ಟೆ, ಹೊಟೇಲ್, ಪಾರ್ಕ್ ಹೀಗೆ ನಿಮಗಿಷ್ಟದ ಪ್ರದೇಶಕ್ಕೆ ಹೋಗಬಹುದು.

ಇದನ್ನೂ ಓದಿ: ಕ್ಯಾನ್ಸರ್‌ಗೆ ಕಾರಣವಾಗುತ್ತೆ ಸ್ಯಾನಿಟರಿ ಪ್ಯಾಡ್‌; ಬದಲಿಗೆ ಬೇರೇನು ಬಳಸ್ಬೋದು ?

4.  ಕ್ರೀಡೆ : ಕ್ರೀಡೆಯಲ್ಲಿ ಆಸಕ್ತಿಯಿದೆ ಎನ್ನುವವರು ವೀಕೆಂಡ್ ನಲ್ಲಿ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಬಾಲ್ ಸೇರಿದಂತೆ ನಿಮ್ಮಿಷ್ಟದ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು. ಇದ್ರಿಂದ ನೀವು ಫ್ರೆಶ್ ಆಗುವ ಜೊತೆಗೆ ಒತ್ತಡದಿಂದ ಮುಕ್ತರಾಗ್ತಿರಿ. 

Follow Us:
Download App:
  • android
  • ios