- Home
- Life
- Women
- ಡ್ರೈ ಕ್ಲೀನಿಂಗ್, ದುಬಾರಿ ಕೆಮಿಕಲ್ ಬೇಕಿಲ್ಲ: ಬೆಲೆ ಎಷ್ಟೇ ಇರಲಿ, ರೇಷ್ಮೆ ಸೀರೆ ಅಂದ ಕಡಿಮೆಯಾಗದಂತೆ ಮಾಡೋ ಟಿಪ್ಸ್ ಇಲ್ಲಿದೆ!
ಡ್ರೈ ಕ್ಲೀನಿಂಗ್, ದುಬಾರಿ ಕೆಮಿಕಲ್ ಬೇಕಿಲ್ಲ: ಬೆಲೆ ಎಷ್ಟೇ ಇರಲಿ, ರೇಷ್ಮೆ ಸೀರೆ ಅಂದ ಕಡಿಮೆಯಾಗದಂತೆ ಮಾಡೋ ಟಿಪ್ಸ್ ಇಲ್ಲಿದೆ!
ದುಬಾರಿ ರೇಷ್ಮೆ ಸೀರೆ ಖರೀದಿಸಿ ಕೆಲವೇ ದಿನಗಳಲ್ಲಿ ಬಣ್ಣ ಮಸುಕಾಗ್ತಿದೆಯಾ? ಹಾಗಿದ್ರೆ ನೀವು ಈ ತಪ್ಪುಗಳನ್ನೇ ಮಾಡ್ತಿರಬಹುದು. ಸಿಲ್ಕ್ ಸೀರೆ ವರ್ಷಗಳ ಕಾಲ ಹೊಸದಂತೆ ಮಿನುಗಲು ಟಿಪ್ಸ್ ಇಲ್ಲಿದೆ.

1. ರೇಷ್ಮೆ ಸೀರೆ ತೊಳೆಯುವ ಸರಿಯಾದ ವಿಧಾನ
ರೇಷ್ಮೆ ಸೀರೆಗಳನ್ನು ಯಾವಾಗಲೂ ತಣ್ಣೀರಿನಲ್ಲಿ ಅಥವಾ ಸಾಮಾನ್ಯ ನೀರಿನಲ್ಲಿ ಮಾತ್ರ ತೊಳೆಯಬೇಕು. ಬಿಸಿ ನೀರು ಬಳಸಿದರೆ ಬಟ್ಟೆಯ ನಾರು ಹಾಳಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಹಾರ್ಡ್ ಡಿಟರ್ಜೆಂಟ್ ಅಥವಾ ಬ್ಲೀಚಿಂಗ್ ಪೌಡರ್ ಬಳಸಬಾರದು. ಮೃದುವಾದ ಲಿಕ್ವಿಡ್ ಸೋಪ್ ಅಥವಾ ಸಿಲ್ಕ್ ಫ್ಯಾಬ್ರಿಕ್ ಕ್ಲೀನರ್ ಬಳಸುವುದು ಉತ್ತಮ. ಸೀರೆಯನ್ನು ಬಲವಾಗಿ ಒರೆಸುವುದು ತಪ್ಪು. ಕೈಯಿಂದ ನಿಧಾನವಾಗಿ ತೊಳೆಯಬೇಕು.

2. ನೆರಳಿನಲ್ಲಿ ಒಣಗಿಸುವುದು ಏಕೆ ಮುಖ್ಯ?
ಬಹಳಷ್ಟು ಜನರು ಸಿಲ್ಕ್ ಸೀರೆಗಳನ್ನು ನೇರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಆದರೆ ಇದು ದೊಡ್ಡ ತಪ್ಪು ಎಂದು ತಜ್ಞರು ಹೇಳುತ್ತಾರೆ. ಸೂರ್ಯನ ತೀವ್ರ ಕಿರಣಗಳಿಂದ ಸೀರೆ ಬಣ್ಣ ಮಸುಕಾಗಬಹುದು. ಆದ್ದರಿಂದ ಯಾವಾಗಲೂ ನೆರಳಿನಲ್ಲಿ ಗಾಳಿ ಬೀಸುವ ಜಾಗದಲ್ಲಿ ಒಣಗಿಸುವುದು ಉತ್ತಮ.
3. ಸೀರೆ ಸಂಗ್ರಹಿಸುವಾಗ ಈ ತಪ್ಪು ಮಾಡ್ಬೇಡಿ
ರೇಷ್ಮೆ ಸೀರೆಗಳನ್ನು ವರ್ಷಗಳ ಕಾಲ ಒಂದೇ ರೀತಿ ಮಡಚಿಟ್ಟು ಬಿಡಬಾರದು. ಹೀಗೆ ಮಾಡಿದರೆ ಮಡಚಿದ ಜಾಗದಲ್ಲಿ ಬಟ್ಟೆ ದುರ್ಬಲವಾಗಬಹುದು. 2-3 ವರ್ಷಕ್ಕೊಮ್ಮೆ ಮಡಚುವ ದಿಕ್ಕು ಬದಲಾಯಿಸುವುದು ಉತ್ತಮ. ಜೊತೆಗೆ ಪ್ಲಾಸ್ಟಿಕ್ ಕವರ್‌ನಲ್ಲಿ ಇಡುವುದಕ್ಕಿಂತ ಹತ್ತಿ ಬಟ್ಟೆಯಲ್ಲಿ ಸುತ್ತಿ ಇಟ್ಟರೆ ಗಾಳಿ ಸರಿಯಾಗಿ ಹರಿದು ಸೀರೆ ಸುರಕ್ಷಿತವಾಗಿರುತ್ತದೆ.
4. ಇಸ್ತ್ರಿ ಮಾಡುವಾಗ ಜಾಗ್ರತೆ ಅಗತ್ಯ
ಸಿಲ್ಕ್ ಸೀರೆ ಮೇಲೆ ನೇರವಾಗಿ ಬಿಸಿ ಇಸ್ತ್ರಿ ಇಡಬಾರದು. ಮೊದಲು ಹತ್ತಿಯ ತೆಳುವಾದ ಬಟ್ಟೆ ಹಾಕಿ ನಂತರ ಇಸ್ತ್ರಿ ಮಾಡಿದರೆ ಸೀರೆ ಹಾಳಾಗುವುದಿಲ್ಲ. ಕಡಿಮೆ ಉಷ್ಣಾಂಶದಲ್ಲಿ ಮಾತ್ರ ಇಸ್ತ್ರಿ ಮಾಡುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.