ಆಲಿಯಾ ಸ್ಟೈಲ್ ಫಾಲೋ ಮಾಡ್ಬೇಕಾ? ಇಲ್ಲಿವೆ ಸಣ್ಣ ಮುಖಕ್ಕೆ ಸೂಟ್ ಆಗುವ 6 ಇಯರಿಂಗ್ಸ್
ಬಾಲಿವುಡ್ ನಟಿ ಆಲಿಯಾ ಭಟ್ ಅವರ ಫ್ಯಾಷನ್ ಸೆನ್ಸ್ ಸಖತ್ ಆಗಿದೆ. ಅದರಲ್ಲೂ ಅವರು ಧರಿಸುವ ಇಯರಿಂಗ್ಸ್ ಸಣ್ಣ ಮುಖದವರಿಗೆ ಫ್ಯಾಷನ್ ಟ್ರೆಂಡ್ ಸೆಟ್ ಮಾಡುತ್ತದೆ. ಇಲ್ಲಿ ಅಂತಹ 6 ಡಿಸೈನ್‌ಗಳಿವೆ.
fashion May 16 2026
Author: Govindaraj S Image Credits:instagram
Kannada
ಡೈಮಂಡ್ ಕಟ್ ಡ್ಯಾಂಗ್ಲರ್ ಇಯರಿಂಗ್ಸ್
ಆಲಿಯಾ ಭಟ್ ಅವರ ಸಣ್ಣ ಮುಖಕ್ಕೆ ಡೈಮಂಡ್ ಇಯರಿಂಗ್ಸ್ ಸಖತ್ ಗಾರ್ಜಿಯಸ್ ಲುಕ್ ನೀಡಿದೆ. ಪ್ಲೇನ್ ಡೈಮಂಡ್ ಜೊತೆಗೆ ಕೆಳಗೆ ರೌಂಡ್ ಶೇಪ್ ಡೈಮಂಡ್ ನೇತಾಡುತ್ತಿದೆ.
Image credits: instagram
Kannada
ಬಟರ್‌ಫ್ಲೈ ಆಕ್ಸಿಡೈಸ್ಡ್ ಇಯರಿಂಗ್ಸ್
ಸಣ್ಣ ಮುಖದವರಿಗೆ ಡೈಲಿ ವೇರ್ ಅಥವಾ ಪಾರ್ಟಿಗಳಿಗೆ ಹೋಗಲು ಈ ಸ್ಮಾಲ್ ಇಯರಿಂಗ್ಸ್ ಬೆಸ್ಟ್. ಆಲಿಯಾ ಗೌನ್ ಜೊತೆ ಬಟರ್‌ಫ್ಲೈ ಕಟ್ ಇಯರಿಂಗ್ಸ್ ಧರಿಸಿದ್ದು, ಅದರಲ್ಲಿ ಸಣ್ಣ ಸಣ್ಣ ಡೈಮಂಡ್‌ಗಳನ್ನು ಅಳವಡಿಸಲಾಗಿದೆ.
Image credits: instagram
Kannada
ಟ್ವಿಸ್ಟೆಡ್ ಸ್ಟಡ್
ಗೋಲ್ಡ್‌ನಲ್ಲಿ ಟ್ವಿಸ್ಟೆಡ್ ಸ್ಟಡ್‌ಗಳು ಕೂಡಾ ತುಂಬಾ ಸುಂದರವಾಗಿ ಕಾಣಿಸುತ್ತವೆ. ಆಫೀಸ್‌ಗೆ ಹೋಗೋ ಹುಡುಗಿಯರು ಈ ತರಹದ ಇಯರಿಂಗ್ಸ್ ಅನ್ನು ರೆಗ್ಯುಲರ್ ಆಗಿ ಬಳಸಬಹುದು.
Image credits: tanishq.co.in
Kannada
ಫ್ಲೋರಲ್ ಕ್ರಿಸ್ಟಲ್ ಇಯರಿಂಗ್ಸ್
ನೀವು ಸೀ ಗ್ರೀನ್ ಸೀರೆ, ಸೂಟ್ ಅಥವಾ ವೆಸ್ಟರ್ನ್ ಡ್ರೆಸ್ ಧರಿಸುತ್ತಿದ್ದರೆ, ಯೋಚನೆ ಮಾಡದೆ ಈ ಪ್ಯಾಟರ್ನ್‌ನ ಇಯರಿಂಗ್ಸ್ ಟ್ರೈ ಮಾಡಿ. ಕ್ರಿಸ್ಟಲ್ ಸೀ ಗ್ರೀನ್ ಫ್ಲೋರಲ್ ಸ್ಟಡ್‌ಗಳು ನಿಮಗೆ 100 ರೂಪಾಯಿ ಒಳಗೆ ಸಿಗುತ್ತವೆ
Image credits: Instagram
Kannada
ಹೂಪ್ ಇಯರಿಂಗ್ಸ್
ಡೈಲಿ ವೇರ್‌ಗೆ ನೀವು ಗೋಲ್ಡ್ ಅಥವಾ ಸಿಲ್ವರ್‌ನಲ್ಲಿ ಸಣ್ಣ ಸೈಜ್‌ನ ಹೂಪ್ ಇಯರಿಂಗ್ಸ್ ಆಯ್ಕೆ ಮಾಡಬಹುದು. ಸಣ್ಣ ಮುಖದವರಿಗೆ ಪ್ಲೇನ್ ಹೂಪ್ಸ್ ತುಂಬಾ ಸುಂದರವಾಗಿ ಕಾಣಿಸುತ್ತವೆ.
Image credits: Pinterest
Kannada
ಹಾರ್ಟ್ ಶೇಪ್ ಹೂಪ್
ಪ್ಲೇನ್ ಹೂಪ್ಸ್ ಜೊತೆ ಸಣ್ಣ ಹಾರ್ಟ್ ಶೇಪ್ ತುಂಬಾ ಅಸ್ಥೆಟಿಕ್ ಲುಕ್ ಕೊಡುತ್ತದೆ. ಸಣ್ಣ ಪುಟ್ಟ ಪಾರ್ಟಿ ಅಥವಾ ಔಟಿಂಗ್‌ಗೆ ಇದು ಬೆಸ್ಟ್ ಇಯರಿಂಗ್ಸ್ ಡಿಸೈನ್ ಆಗಿದೆ.