ಶ್... ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸೀಕ್ರೆಟ್ಸ್ ಇವು!
ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಸ್ವತಃ ಮಹಿಳೆಯರಿಗೆ ತಿಳಿದಿಲ್ಲ, ಅನ್ನೋದು ನಿಮಗೆ ತಿಳಿದಿದೆಯೇ? ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ಇಂಟ್ರೆಸ್ಟಿಂಗ್ ವಿಷ್ಯಗಳ ಬಗ್ಗೆ ತಿಳಿಯೋಣ.
ಮಹಿಳೆಯರ ದೇಹದ ಅತ್ಯಂತ ವಿಶಿಷ್ಟ ಸಂಗತಿಯೆಂದರೆ ಅವರಿಗೆ ಜಗತ್ತಿಗೆ ಹೊಸ ಜೀವನವನ್ನು ತರುವ ಶಕ್ತಿ ಇದೆ. ಆದರೆ ಮಹಿಳೆಯರ ದೇಹದ (secrets of women body) ಬಗ್ಗೆ ಕೆಲವು ವಿಶಿಷ್ಟ ಸಂಗತಿಗಳನ್ನು ಹೇಳಲು ನಿಮ್ಮನ್ನು ಕೇಳಿದರೆ, ಹೇಳಬಲ್ಲಿರಾ? ಇಲ್ಲಿದೆ ನೋಡಿ ಕೆಲವೊಂದು ಆಸಕ್ತಿಕರ ವಿಷಯಗಳು.
ಮಹಿಳೆಯರು ಕಡಿಮೆ ಬೆವರುತ್ತಾರೆ (less sweating)
ವಯಸ್ಕ ಪುರುಷನ ದೇಹದಲ್ಲಿ 65% ನೀರು ಇರುತ್ತದೆ ಮತ್ತು ಮಹಿಳೆಯರ ವಿಷಯದಲ್ಲಿ ಇದು ಕೇವಲ 55% ಆಗಿದೆ. ರಕ್ತದ ನಿಯಂತ್ರಣದಿಂದ ಹಿಡಿದು, ಮೂತ್ರ, ಪಾದಗಳು, ಬೆನ್ನುಹುರಿಯಿಂದ ಲಾಲಾರಸದವರೆಗೆ, ಇದು ಕಾರಣವಾಗಿದೆ. ಕಡಿಮೆ ನೀರಿನ ಅಂಗಾಂಶದಿಂದಾಗಿ, ಅವರು ಪುರುಷರಿಗಿಂತ ಕಡಿಮೆ ಬೆವರುತ್ತಾರೆ.
ಮಹಿಳೆಯರು ಸರಾಸರಿ 1.8 ಕೆಜಿ ಲಿಪ್ ಸ್ಟಿಕ್ ಸೇವಿಸುತ್ತಾರೆ
ಲಿಪ್ ಸ್ಟಿಕ್ ತಿನ್ನೋದು ಅಂದ್ರೆ ನೇರವಾಗಿ ಅದನ್ನ ಬಾಯಿಗೆ ಹಾಕಿ ಅಗಿಯೋದು ಎಂದು ಅರ್ಥ ಅಲ್ಲ. ಲಿಪ್ ಸ್ಟಿಕ್ (lipstick)ಅನ್ನು ನಮ್ಮ ಚರ್ಮ ಹೀರಿಕೊಳ್ಳುತ್ತದೆ. ನೀವು ಏನನ್ನೂ ತಿನ್ನದಿದ್ದರೂ ಅಥವಾ ಕುಡಿಯದಿದ್ದರೂ ಸಹ, ಲಿಪ್ ಸ್ಟಿಕ್ ಹಚ್ಚಿದ ಕೆಲವು ಗಂಟೆಗಳ ನಂತರ ಅದು ಡಲ್ ಆಗುತ್ತದೆ. ಅಂದ್ರೆ ಇದು ನಿಮ್ಮ ದೇಹವನ್ನು ಸೇರಿದೆ ಎಂದು ಅರ್ಥ.
ಮಹಿಳೆಯರ ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರುತ್ತದೆ (strong immune system)
ಮಹಿಳೆಯರ ದೇಹದ ಹಾರ್ಮೋನ್ ಈಸ್ಟ್ರೊಜೆನ್ ಈ ಕೆಲಸಕ್ಕೆ ಸಹಾಯ ಮಾಡುತ್ತದೆ. ಅಂದಹಾಗೆ, ಮಹಿಳೆಯರು ಮಕ್ಕಳನ್ನು ಹೊಂದಬೇಕು ಮತ್ತು ಆ ಸಮಯದಲ್ಲಿ ದೇಹವು ಸಾಕಷ್ಟು ಪ್ರಕ್ರಿಯೆಗಳ ಮೂಲಕ ಹೋಗುತ್ತದೆ. ಮಹಿಳೆಯರ ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳಲು ಇದು ಕಾರಣವಾಗಿದೆ.
ಮಹಿಳೆಯರು ಹೆಚ್ಚು ಆಲ್ಕೋಹಾಲ್ ಕುಡಿಯಲು ಸಾಧ್ಯವಾಗಲ್ಲ (less alcohol)
ಮಹಿಳೆಯರ ದೇಹದಲ್ಲಿನ ನೀರಿನ ಅಂಗಾಂಶ ಪುರುಷರಿಗಿಂತ ಕಡಿಮೆ ಇರುತ್ತದೆ. ಅದಕ್ಕಾಗಿಯೇ ಅವರು ಹೆಚ್ಚು ಆಲ್ಕೋಹಾಲ್ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವರು ಪುರುಷರಿಗೆ ಹೋಲಿಕೆ ಮಾಡಿದ್ರೆ, ಕಡಿಮೆ ಕುಡಿದ ಕೂಡಲೇ ಕಿಕ್ ಏರುತ್ತೆ.
ಮಹಿಳೆಯರ ಗರ್ಭಾಶಯದ ಗಾತ್ರವು (size of uterus) ಹೆಚ್ಚುತ್ತಾ ಹೋಗುತ್ತೆ
ಮಹಿಳೆಯ ಗರ್ಭಾಶಯದ ಗಾತ್ರವು ಆರಂಭಿಕ ಹಂತಗಳಲ್ಲಿ ನಿಂಬೆಹಣ್ಣಿನ ಗಾತ್ರದಲ್ಲಿದ್ದರೆ, ಗರ್ಭಧಾರಣೆಯ ಒಂಬತ್ತು ತಿಂಗಳಲ್ಲಿ, ಇದು ಕಲ್ಲಂಗಡಿ ಗಾತ್ರಕ್ಕೆ ಬರುತ್ತೆ. ಈ ಸಮಯದಲ್ಲಿ, ಅವರ ಮೂತ್ರಕೋಶದ ನಿಯಂತ್ರಣವೂ ಕಡಿಮೆಯಾಗುತ್ತದೆ.
ಮಹಿಳೆಯರ ದೇಹವು ಹೆಚ್ಚು ಫ್ಲೆಕ್ಸಿಬಲ್ ಆಗಿರುತ್ತೆ (flexible body)
ಮಹಿಳೆಯರ ಬೆನ್ನುಹುರಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಏಕೆಂದರೆ ಅದು ಮಗುವಿನ ಜನನಕ್ಕೆ ಸಿದ್ಧವಾಗಿರಬೇಕು. ಎರಡನೆಯದಾಗಿ, ಮಹಿಳೆಯರ ದೇಹದಲ್ಲಿ ಹೆಚ್ಚು ಎಲಾಸ್ಟಿನ್ ಇರುತ್ತದೆ. ಈ ಪ್ರೋಟೀನ್ ಕಾರಣದಿಂದಾಗಿ, ದೇಹ ಫ್ಲೆಕ್ಸಿಬಲ್ ಆಗಿರುತ್ತೆ.
ಸ್ಟಾಮಿನಾ ಹೆಚ್ಚಿರುತ್ತೆ (more stamina)
ಪುರುಷರಿಗಿಂತ ಮಹಿಳೆಯರು 75% ಉತ್ತಮ ವ್ಯಾಯಾಮ ಮಾಡಬಹುದು ಎಂದು ಅಧ್ಯಯನಗಳು ನಂಬುತ್ತವೆ. ಅವರ ಚಯಾಪಚಯ ಮತ್ತು ಹೊಂದಿಕೊಳ್ಳುವ ಸ್ನಾಯುಗಳು ಇದನ್ನು ಮಾಡಲು ಅನುವು ಮಾಡಿಕೊಡುತ್ತವೆ. ಅಂದರೆ ಮಹಿಳೆಯರು ಹೆಚ್ಚು ಸ್ಟಾಮಿನಾ ಹೊಂದಿರುತ್ತಾರೆ.
ನಿಮ್ಮ ದೇಹವು ಎಷ್ಟು ಅದ್ಭುತವಾಗಿದೆ ಎಂದು ಈಗ ನಿಮಗೆ ತಿಳಿಯಿತು ಅಲ್ವಾ?. ಅವಳು ಹೆಂಗಸು ತಾನೆ? ಅಥವಾ ನಾನು ಹುಡುಗಿ ನನ್ನಿಂದ ಅದು ಸಾಧ್ಯಾನೆ ಇಲ್ಲ ಎಂದು ಯಾವತ್ತೂ ಯೋಚನೆ ಮಾಡ್ಲೇ ಬೇಡಿ. ದೇಹದ ಬಗ್ಗೆ ಸಕಾರಾತ್ಮಕ ಯೋಚನೆ ಬೆಳೆಸಲು ಇದನ್ನು ನೆನಪಿಡಿ.