ಇಬ್ಬರು ಗರ್ಭಿಣಿಯರು ಏಕಕಾಲದಲ್ಲಿ ಒಂದೇ ಹೊಸ್ತಿಲು ದಾಟಬಾರದು ಏಕೆ?
Pregnant: ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರು ಒಂದೇ ಹೊಸ್ತಿಲು ದಾಟಬಾರದು ಎಂಬ ನಂಬಿಕೆ ಇದೆ. ಈ ಮಾತು ಎಷ್ಟು ಸತ್ಯ ಎಂಬುದನ್ನು ನೋಡೋಣ ಬನ್ನಿ.

ಗ್ರಾಮೀಣ ಭಾಗದಲ್ಲಿ ಕೆಲವು ಆಚರಣೆಗಳು ಕಾಲ ಕಾಲದಿಂದಲೂ ಪಾಲನೆ ಮಾಡಿಕೊಂಡು ಬರಲಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ರತ್ನಪಕ್ಷಿ ನೋಡಬೇಕು, ಮಾರ್ಗ ಮಧ್ಯೆ ನರಿ ಕಾಣಿಸಿದ್ರೆ ಶುಭ ಸೂಚನೆ, ಕಾಗೆ ಕೂಗಿದ್ರೆ ಅತಿಥಿಗಳು ಬರುತ್ತಾರೆ ಸೇರಿದಂತೆ ಹಲವು ಮಾತುಗಳನ್ನು ಕೇಳಿರುತ್ತವೆ. ಅದರಲ್ಲಿಯೂ ಗರ್ಭಿಣಿಯರ ವಿಷಯದಲ್ಲಿ ಈ ತರಹದ ಮಾತುಗಳು ಹೆಚ್ಚಾಗಿರುತ್ತವೆ.
ಗರ್ಭಿಣಿಯರು ಆ ಕೆಲಸ ಮಾಡಬಾರದು? ಆ ಆಹಾರ ತಿನ್ನಬಾರದು? ಈ ರೀತಿಯಾಗಿ ಕುಳಿತುಕೊಳ್ಳಬಾರದು ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಿರುತ್ತಾರೆ. ಯಾಕೆ ಹೀಗೆ ಅಂತ ಕೇಳಿದ್ರೆ ಕೆಲವರು ಸ್ಪಷ್ಟವಾದ ಉತ್ತರ ನೀಡಿದ್ರೆ, ಬಹುತೇಕರು ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇವೆ. ಮುಂದೆಯೂ ಪಾಲಿಸಿಕೊಂಡು ಹೋಗಬೇಕು ಎಂದು ಕಿರಿಯರಿಗೆ ಹಿರಿಯರು ಸಲಹೆ ನೀಡುತ್ತಿರುತ್ತಾರೆ.
ಇಬ್ಬರು ಗರ್ಭಿಣಿಯರು ಏಕಕಾಲದಲ್ಲಿ ಒಂದೇ ಹೊಸ್ತಿಲು ದಾಟಬಾರದು ಇಂತಹ ಮಾತುಗಳಲ್ಲಿ ಒಂದಾಗಿದೆ. ಕೆಲವು ಮನೆಗಳಲ್ಲಿ ಇಬ್ಬರು ಗರ್ಭಿಣಿಯರಿದ್ರೆ, ಅವರಿಬ್ಬರು ಏಕಕಾಲದಲ್ಲಿ ಹೊಸ್ತಿಲು ದಾಟದಂತೆ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಈ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗುತ್ತದೆ.
ಏಕಕಾಲದಲ್ಲಿ ಇಬ್ಬರು ಗರ್ಭಿಣಿಯರು ಹೊಸ್ತಿಲು ದಾಟಿದ್ರೆ, ಇಬ್ಬರಲ್ಲಿ ಒಬ್ಬರಿಗೆ ಗರ್ಭಪಾತವಾಗುತ್ತೆ ಎಂಬ ಮಾತಿದೆ. ಈ ಮಾತನ್ನು ಎಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತೆ ಅಂದ್ರೆ ಮನೆಯಲ್ಲಿ ಇಬ್ಬರು ಗರ್ಭಿಣಿಯರಿದ್ರೆ ಒಬ್ಬರಿಗೆ ಬೇರೆ ಮನೆಯನ್ನ ಮಾಡಲಾಗುತ್ತದೆ. ಇಂದಿನ ಜನರು ಈ ಮಾತು ಸುಳ್ಳು ಎಂದು ಹೇಳುತ್ತಾರೆ. ಹಾಗಾದರೆ ಯಾಕೆ ಈ ಮಾತು ಚಾಲ್ತಿಗೆ ಬಂತು ಎಂದು ನೋಡೋಣ ಬನ್ನಿ.
ಇದು ಸತ್ಯನಾ?
ಈ ಹಿಂದೆ ಮನೆಯ ಹೊಸ್ತಿಲು 2 ರಿಂದ 3 ಅಡಿ ಎತ್ತರ ಹೊಂದಿರುತ್ತಿದ್ದವು. ಹಾಗೆಯೇ ಬಾಗಿಲು ಕಡಿಮ ಅಗಲ ಮತ್ತು ಎತ್ತರವನ್ನು ಹೊಂದಿರುತ್ತಿದ್ದವು. ಒಮ್ಮೆಗೆ ಒಬ್ಬರೇ ಬಾಗಿಲಿನಿಂದ ಒಳಗೆ ಬರುವಷ್ಟು ಜಾಗವಿರುತ್ತಿತ್ತು. ಹಾಗಾಗಿ ಹಿರಿಯರು ಗರ್ಭಿಣಿಯರಿಗೆ ಒಬ್ಬರೇ ಹೊಸ್ತಿಲು ದಾಟುವಂತೆ ಸಲಹೆ ನೀಡುತ್ತಿದ್ದರಂತೆ. ಈ ಕಾರಣದಿಂದಾಗಿ ಇಬ್ಬರು ಗರ್ಭಿಣಿಯರು ಏಕಕಾಲದಲ್ಲಿ ಒಂದೇ ಹೊಸ್ತಿಲು ದಾಟಬಾರದು ಎಂಬ ಮಾತಿದೆ ಎಂದು ಹೇಳಲಾಗುತ್ತದೆ.