ನಮಗೂ ಗರ್ಭಪಾತ ಆಗಿತ್ತು, ಆ ನೋವು ಗೊತ್ತಿದೆ ಎಂದ ನಟಿಯರಿವರು!
ಸಂಭಾವನಾ ಸೇಠ್ ಇತ್ತೀಚೆಗೆ ತಮ್ಮ ಗರ್ಭಪಾತದ ಬಗ್ಗೆ ಬಹಿರಂಗಪಡಿಸಿದರು ಮತ್ತು 10 ದಿನಗಳವರೆಗೆ ತಮ್ಮ ಗರ್ಭದಲ್ಲಿ ಮೃತ ಮಗು ಇತ್ತು ಎಂದು ಹೇಳಿದರು. ಅವರಂತೆ ಹಲವು ನಟಿಯರು ಈ ನೋವು ಅನುಭವಿಸಿದ್ದಾರೆ. ಅವರು ಯಾರು ಯಾರು?

ಶಿಲ್ಪಾ ಶೆಟ್ಟಿ
ಬಾಲಿವುಡ್ ಶಿಲ್ಪಾ ಶೆಟ್ಟಿ ಅವರು ಗರ್ಭಪಾತವನ್ನು ಅನುಭವಿಸಿದ್ದಾರೆ ಎಂದು ಹೇಳಿದ್ದರು. ಇದರಿಂದಾಗಿ ಅವರು ಎಂದಿಗೂ ತಾಯಿ ಆಗಲು ಸಾಧ್ಯವಿರಲಿಲ್ಲ. ಇಷ್ಟು ಫಿಟ್ ಆಗಿದ್ದರೂ ಕೂಡ ಅವರು ಗರ್ಭಪಾತ ಎದುರಿಸಬೇಕಾಗಿ ಬಂತು. ಇದಕ್ಕಾಗಿಯೇ ಅವರು ಸರೋಗಸಿ ಮೂಲಕ ಸಮೀಷಾ ಎನ್ನುವ ಮಗಳನ್ನು ಪಡೆದರು.
ಕಾಜೋಲ್
ಬಾಲಿವುಡ್ ಕಾಜೋಲ್ ಅವರಿಗೆ ನ್ಯಾಸ, ಯುಗ್ ಎಂಬ ಮಕ್ಕಳಿದ್ದಾರೆ. ಆದರೆ ಅವರು ಆರಂಭದಲ್ಲಿ ಒಂದಲ್ಲ ಎರಡೆರಡು ಬಾರಿ ಗರ್ಭಪಾತದ ನೋವು ಅನುಭವಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದರು.
ರಾಣಿ ಮುಖರ್ಜಿ
ಖ್ಯಾತ ರಾಣಿ ಮುಖರ್ಜಿ ಅವರು ಸಿನಿಮಾದಲ್ಲಿ ನಗಿಸುತ್ತಾರೆ, ಅಳುತ್ತಾರೆ. ಇವರು ನಿಜ ಜೀವನದಲ್ಲಿ ಕೂಡ ಗರ್ಭಪಾತದ ನೋವು ಅನುಭವಿಸಿದ್ದಾರೆ. ಅವರು ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿದ್ದರು.
ಗೌರಿ ಖಾನ್
ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರಿಗೂ ಗರ್ಭಪಾತ ಆಗಿದೆ. ಇವರಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಎಂಬ ಮಕ್ಕಳಿದ್ದಾರೆ. ಆಮೇಲೆ ಸರೋಗಸಿ ಮೂಲಕ ಅಬ್ರಹಾಂ ಎಂಬ ಮಗನನ್ನು ಪಡೆದಿದ್ದರು.
ಮೀರಾ ರಜಪೂತ್
ಈ ಪಟ್ಟಿಯಲ್ಲಿ ನಟ ಶಾಹೀರ್ ಖಾನ್ ಪತ್ನಿ ಮೀರಾ ರಜಪೂತ್ ಹೆಸರು ಕೂಡ ಸೇರಿದೆ. ಅವರು 4 ತಿಂಗಳ ಗರ್ಭಿಣಿಯಾಗಿದ್ದಾಗ ಗರ್ಭಪಾತವಾಗಿದೆ ಎಂದು ಹೇಳಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಕಿರಣ್ ರಾವ್
ಆಮಿರ್ ಖಾನ್ ಅವರ ಎರಡನೇ ಪತ್ನಿ ಕಿರಣ್ ರಾವ್ ಅವರಿಗೂ ಗರ್ಭಪಾತವಾಗಿದೆ. ಇದರ ನಂತರ ಅವರು ತಾಯಿ ಆಗಲು ಸಾಧ್ಯವಾಗಲಿಲ್ಲ, ನಂತರ ಅವರು ಸರೋಗಸಿ ಮೂಲಕ ಆಜಾದ್ ಎಂಬ ಮಗನನ್ನು ಪಡೆದರು.
ಸಂಭಾವನಾ ಸೇಠ್
ಸಂಭಾವನಾ ಸೇಠ್ ಒಮ್ಮೆ ಅಲ್ಲ ಹಲವು ಬಾರಿ ತಮ್ಮ ಗರ್ಭದಲ್ಲಿ ಮಗು ಸತ್ತಿದೆ, ಈ ಬಗ್ಗೆ 10 ದಿನಗಳ ನಂತರ ತಿಳಿದುಬಂದಿದೆ ಎಂದು ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.