ಜಾಬ್ ಸಿಗದೆ ಪೇಪರ್ ರೀಸೈಕ್ಲಿಂಗ್ ಬಿಸಿನೆಸ್ ಆರಂಭಿಸಿದ್ದ ಮಹಿಳೆಯೀಗ 800 ಕೋಟಿ ಆಸ್ತಿಯ ಒಡತಿ!
ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಆಕೆ ಸೂಕ್ತ ಉದ್ಯೋಗ ಪಡೆಯಲು ವಿಫಲವಾದ ಮಹಿಳೆ. ಆದರೆ ಅದರಿಂದ ಹತಾಶೆಗೊಳ್ಳಲ್ಲಿಲ್ಲ. ಕೇವಲ 1 ಲಕ್ಷ ರೂಪಾಯಿಯೊಂದಿಗೆ ಕಂಪನಿಯನ್ನು ಪ್ರಾರಂಭಿಸಿದ ಮಹಿಳೆಯೀಗ ಬರೋಬ್ಬರಿ 800 ಕೋಟಿ ರೂ. ಬಿಸಿನೆಸ್‌ನ ಒಡತಿ.
ಜೀವನದಲ್ಲಿ ಯಶಸ್ಸನ್ನು ಸಾಧಿಸುವುದು ಅಷ್ಟು ಸುಲಭವಲ್ಲ. ಬಹುತೇಕ ಮಂದಿ ಉದ್ಯೋಗ ಸಿಕ್ಕ ಮೇಲೆ ಜೀವನದಲ್ಲಿ ಹಲವು ಸಾಧನೆಗಳನ್ನು ಮಾಡಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಾರೆ. ಅದೇ ರೀತಿ ಸೂಕ್ತ ಉದ್ಯೋಗ ಪಡೆಯಲು ವಿಫಲವಾದ ಮಹಿಳೆ ಈಕೆ. ಆದರೆ ಅದರಿಂದಲೇ ಹತಾಶೆಯಾಗಿ ಅಳುತ್ತಾ ಸೇರಲ್ಲಿಲ್ಲ.
ಬದಲಿಗೆ ಸಾಲ ತೆಗೆದುಕೊಂಡು ಬಿಸಿನೆಸ್ ಆರಂಭಿಸಿ ದೊಡ್ಡ ಉದ್ಯಮವನ್ನೇ ಕಟ್ಟಿದರು. ಕೇವಲ 1 ಲಕ್ಷ ರೂಪಾಯಿಯೊಂದಿಗೆ ಕಂಪನಿಯನ್ನು ಪ್ರಾರಂಭಿಸಿದ ಮಹಿಳೆಯೀಗ ಬರೋಬ್ಬರಿ 800 ಕೋಟಿ ರೂ. ಬಿಸಿನೆಸ್‌ನ ಒಡತಿ.
ಕೇವಲ 1 ಲಕ್ಷ ರೂಪಾಯಿಯಲ್ಲಿ ಪೇಪರ್ ರೀಸೈಕ್ಲಿಂಗ್ ವ್ಯವಹಾರ ಆರಂಭಿಸಿದ ಅನಿವಾಸಿ ಭಾರತೀಯ ಉದ್ಯಮಿ ಪೂನಂ ಗುಪ್ತಾ, ಇದೀಗ 800 ಕೋಟಿ ರೂಪಾಯಿ ಮೌಲ್ಯದ ಬಿಸಿನೆಸ್ ಮುನ್ನಡೆಸುತ್ತಿದ್ದಾರೆ. ಪೂನಂ ಗುಪ್ತಾ ದೆಹಲಿಯಲ್ಲಿ ಜನಿಸಿದರು.
ದೆಹಲಿಯಲ್ಲಿ ಲೇಡಿ ಇರ್ವಿನ್ ಸ್ಕೂಲ್ ಮತ್ತು ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಆರಂಭಿಕ ಶಾಲಾ ವರ್ಷಗಳನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. FORE ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಹಾಲೆಂಡ್‌ನ ಮಾಸ್ಟ್ರಿಚ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಮಾರ್ಕೆಟಿಂಗ್‌ನಲ್ಲಿ MBA ಪಡೆದರು.
2002ರಲ್ಲಿ ಪುನೀತ್ ಗುಪ್ತಾ ಅವರನ್ನು ವಿವಾಹವಾದರು. ನಂತರ ಸ್ಕಾಟ್ಲೆಂಡ್‌ಗೆ ತೆರಳಿದರು,. ಆದರೆ ಅಲ್ಲಿ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಸ್ಕಾಟ್ಲೆಂಡ್‌ನ ಕಿಲ್ಮಾಕೋಲ್ಮ್‌ನಲ್ಲಿರುವ ತನ್ನ ಕುಟುಂಬದ ಮನೆಯಿಂದ 2003 ರಲ್ಲಿ ಪೂನಂ ತನ್ನ ಮೊದಲ ವ್ಯವಹಾರವಾದ PG ಪೇಪರ್ ಕಂಪನಿ ಲಿಮಿಟೆಡ್ ಅನ್ನು ಪ್ರಾರಂಭಿಸಿದರು. ನಂತರ ಸ್ಕಾಟಿಷ್ ಸರ್ಕಾರದ ಯೋಜನೆಯಿಂದ 1 ಲಕ್ಷ ರೂ. ತೆಗೆದುಕೊಂಡರು.
ವ್ಯಾಪಾರವು ಆರಂಭದಲ್ಲಿ ಭೂಕುಸಿತಕ್ಕಾಗಿ ಉದ್ದೇಶಿಸಲಾದ ಉತ್ಪನ್ನಗಳನ್ನು ಉಳಿಸುವಲ್ಲಿ ಮತ್ತು ಮರುಬಳಕೆ ಮಾಡುವಲ್ಲಿ ಪರಿಣತಿ ಹೊಂದಿತ್ತು. PG ಪೇಪರ್ ಪ್ರಪಂಚದಾದ್ಯಂತ 53 ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ರಫ್ತು ಮಾಡುತ್ತದೆ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾಗದದ ಕಂಪನಿಗಳಲ್ಲಿ ಒಂದಾಗಿದೆ. 2003ರಲ್ಲಿ ತಮ್ಮ ಕಂಪನಿಯನ್ನು ಪ್ರಾರಂಭಿಸಿದರು.
ಹಲವಾರು ತಿಂಗಳ ಸಂಶೋಧನೆಯ ನಂತರ, ಸ್ಕ್ರ್ಯಾಪ್ ಪೇಪರ್ ಅನ್ನು ಮರುಬಳಕೆ ಮಾಡುವ ಕಲ್ಪನೆ ಕಂಡುಬಂದಿದೆ. ಪೂನಂ ಗುಪ್ತಾ ಅವರ ಕಂಪನಿಯ ಹೆಸರು ಪಿಜಿ ಪೇಪರ್ ಕಂಪನಿ ಲಿಮಿಟೆಡ್. ಮೊದಲು ಯುರೋಪ್ ಮತ್ತು ಅಮೆರಿಕದ ಕಂಪನಿಗಳಿಂದ ಸ್ಕ್ರ್ಯಾಪ್ ಪೇಪರ್ ಖರೀದಿಸುತ್ತಿತ್ತು. ಈಗ ಇದು ಪ್ರಪಂಚದ ಅನೇಕ ದೇಶಗಳಿಂದ ಸ್ಕ್ರ್ಯಾಪ್ ತೆಗೆದುಕೊಳ್ಳುತ್ತದೆ. ಉತ್ತಮ ಗುಣಮಟ್ಟದ ಪೇಪರ್ ತಯಾರಿಸಿ ಬೇರೆ ದೇಶಗಳಿಗೂ ಕಳುಹಿಸುತ್ತದೆ.
ಪೂನಂ ಗುಪ್ತಾ ಅವರು ಪ್ರಪಂಚದ ಹಲವು ದೇಶಗಳಿಂದ ತ್ಯಾಜ್ಯ ಕಾಗದವನ್ನು ಖರೀದಿಸುತ್ತಾರೆ, ಅದನ್ನು ಮರುಬಳಕೆ ಮಾಡುತ್ತಾರೆ ಮತ್ತು ಉತ್ತಮ ಗುಣಮಟ್ಟದ ಕಾಗದವನ್ನು ಉತ್ಪಾದಿಸುತ್ತಾರೆ ಮತ್ತು ಪ್ರಪಂಚದಾದ್ಯಂತದ ದೇಶಗಳಲ್ಲಿ ಮಾರಾಟ ಮಾಡುತ್ತಾರೆ.
ಪೂನಂ ಗುಪ್ತಾ ಈ ಹಿಂದೆ ಯುರೋಪಿಯನ್ ಮತ್ತು ಅಮೆರಿಕನ್ ಕಂಪನಿಗಳಿಂದ ಪೇಪರ್ ಸ್ಕ್ರ್ಯಾಪ್ ಖರೀದಿಸುತ್ತಿದ್ದರು, ಆದರೆ ಈಗ ಅವರು ವಿಶ್ವದ 21 ದೇಶಗಳಿಂದ ತ್ಯಾಜ್ಯ ಕಾಗದವನ್ನು ಖರೀದಿಸಿಸುತ್ತಿದ್ದಾರೆ. ಇದರೊಂದಿಗೆ ಪೂನಂ ಗುಪ್ತಾ ಅವರ ಮರುಬಳಕೆಯ ಕಾಗದದ ವ್ಯವಹಾರವು ಸ್ವಲ್ಪ ಸಮಯದಿಂದ ವೇಗವನ್ನು ಪಡೆಯುತ್ತಿದೆ ಮತ್ತು ಮುಂದಿನ ಆರ್ಥಿಕ ವರ್ಷದ ವೇಳೆಗೆ ಪೂನಂ ಗುಪ್ತಾ ಅವರ ಪಿಜಿ ಪೇಪರ್ ವಹಿವಾಟು 1000 ರೂ. ದಾಟಲಿದೆ ಎಂದು ತಿಳಿದುಬಂದಿದೆ.