ಈ ನೈಸರ್ಗಿಕ ವಸ್ತು ಬಳಸಿ ಕೂದಲಿಗೆ ಕಲರಿಂಗ್ ಮಾಡಿ...
First Published Dec 28, 2020, 3:58 PM IST
ಕೂದಲಿಗೆ ನೈಸರ್ಗಿಕ ಬಣ್ಣ ಹಚ್ಚಿ ಕೊಡಲು ಇಷ್ಟ ಪಡುವವರು ದುಬಾರಿ ಹಣ ವ್ಯಯಿಸದೇ ಮನೆಯಲ್ಲೇ ತಯಾರಿಸಬಹುದು. ಕೂದಲನ್ನು ರಾಸಾಯನಿಕ ವಸ್ತುಗಳಾದ ಅಮೋನಿಯಾ ಮತ್ತು ಪ್ಯಾರಾಬಿನ್‌ಗಳಂತ ರಾಸಾಯನಿಕ ಬಣ್ಣಗಳನ್ನು ಹೊಂದಿರುವ ಹೇರ್ ಡೈಗಳಿಂದ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ನಮ್ಮ ಮನೆಗಳಲ್ಲಿ ಸಿಗುವ ನೈಸರ್ಗಿಕ ಬಣ್ಣಗಳು ಅಂದರೆ ಅಡುಗೆಮನೆಯಲ್ಲಿ ಸಿಗುವ ವಸ್ತುಗಳಿಂದ ನಾವು ನಮ್ಮ ಕೂದಲಿನ ಆರೈಕೆ ಜೊತೆ ಹೇಗೆ ಕೂದಲಿಗೆ ನೈಸರ್ಗಿಕ ಬಣ್ಣಗಳನ್ನು ಹಚ್ಚುವುದು ಎನ್ನುವ ಬಗ್ಗೆ ತಿಳಿಯೋಣ...

ಕ್ಯಾರೆಟ್ : ಕೇಸರಿ ಬಣ್ಣ ಕೂದಲಿಗೆ ಬರಬೇಕೆಂದರೆ ಕ್ಯಾರೆಟ್ ತೆಗೆದುಕೊಳ್ಳಿ. ಮೊದಲು ನಿಮ್ಮ ಕೂದಲಿನ ಬಣ್ಣ ಯಾವುದು ಇದೆ ಅದರ ಮೇಲೆ ಬರುತ್ತದೆ. ಒಂದು ಕಪ್ ಕ್ಯಾರಟ್ ಜ್ಯೂಸ್ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಪ್ಲಾಸ್ಟಿಕ್ ನಿಂದ ರಾಪ್ ಮಾಡಿ ಒಂದು ಗಂಟೆ ಬಿಟ್ಟು ಆಪಲ್ ಸೈಡರ್ ವಿನಿಗರ್ ಅನ್ನು ನೀರಿಗೆ ಹಾಕಿ ಅದರಿಂದ ತಲೆ ಕೂದಲು ತೊಳೆಯಬೇಕು. ಅವಾಗ ಬಣ್ಣ ನಿಲ್ಲುತ್ತದೆ. ಶ್ಯಾಂಪೂ ಬಳೆಕೆ ಬೇಡ. ಈ ಬಣ್ಣ ಅಷ್ಟಾಗಿ ಬಂದಿರದಿದ್ದರೆ ಪುನಃ ಮಾಡಿ.

ಬೀಟ್ರೂಟ್ : ಕಡು ಕೆಂಬಣ್ಣ ಬರಬೇಕೆಂದರೆ ಒಂದು ಕಪ್ ಬೀಟ್ರೂಟ್ ಜ್ಯೂಸ್ ತೆಗೆದುಕೊಂಡು ಅದಕ್ಕೆ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು, ತಲೆಗೆ ಹಚ್ಚಿ ಪ್ಲಾಸ್ಟಿಕ್ ರಾಪ್ನಿಂದ ಸುತ್ತಿ ಒಂದು ಗಂಟೆ ಕಾಲ ಹಾಗೆ ಬಿಟ್ಟು ಸ್ನಾನ ಮಾಡಿ. ಈ ಬಣ್ಣ ಹೆಚ್ಚೆಂದರೆ ಕೆಲವು ವಾರ ಇರುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?