ನಿಮ್ಮ ಮನೆಯ ಪುಟ್ಟ ಲಕ್ಷ್ಮಿಗಾಗಿ ಲಕ್ಷ್ಮೀ ದೇವಿಯ ಪವರ್ ಫುಲ್ ಹೆಸರುಗಳು
2025 ವರ್ಷವು ಹೊಸ ಭರವಸೆಗಳು ಮತ್ತು ಹೊಸ ಹುರುಪನ್ನು ತಂದಿದೆ ಮತ್ತು ಈ ವರ್ಷ ನಿಮ್ಮ ಮನೆಯಲ್ಲಿ ಹೆಣ್ಣುಮಗುವಾಗಿದ್ದರೆ, ನಿಮ್ಮ ಪುಟ್ಟ ಲಕ್ಷ್ಮೀಗಾಗಿ ಲಕ್ಷ್ಮೀ ದೇವಿಯ ಪವರ್ ಫುಲ್ ಹೆಸರುಗಳು ಇಲ್ಲಿವೆ.
2025 ವರ್ಷವು ಅನೇಕ ರೀತಿಯಲ್ಲಿ ಬಹಳ ವಿಶೇಷವಾಗಿದೆ. ನೀವು ಹೊಸ ವರ್ಷದಲ್ಲಿ ಮಗುವನ್ನು ಹೊಂದಲು ರೆಡಿಯಾಗಿದ್ದರೆ ಮತ್ತು ನೀವು ಅವರಿಗಾಗಿ ಹೆಸರನ್ನು ಹುಡುಕುತ್ತಿದ್ದರೆ, ತಾಯಿ ಲಕ್ಷ್ಮಿಯ ಕೆಲವು ವಿಶೇಷ ಹೆಸರುಗಳನ್ನು ನಾವು ನಿಮಗೆ ಸೂಚಿಸುತ್ತೇವೆ. 2025 ರ ತಾಯಿ ಲಕ್ಷ್ಮಿಯ (Goddess Lakshmi) ಕೆಲವು ಜನಪ್ರಿಯ ಹೆಸರುಗಳ ಲಿಸ್ಟ್ ಇಲ್ಲಿದೆ. ನಿಮಗೆ ಹೆಣ್ಣುಮಗುವಾಗಿದ್ದರೆ, ಲಕ್ಷ್ಮೀ ದೇವಿಯ ಈ ಟ್ರೆಂಡಿ, ಪವರ್ ಫುಲ್ ಹೆಸರುಗಳನ್ನೇ ಅವರಿಗೆ ಇಡಬಹುದು.
ಅಧ್ರಿಕಾ
ನಿಮ್ಮ ಮಗಳಿಗೆ ‘ಅ’ ಅಕ್ಷರದಿಂದ ಹೆಸರಿಡಲು ನೀವು ಬಯಸಿದರೆ ಮತ್ತು ಅದರಲ್ಲೂ ಲಕ್ಷ್ಮೀ ದೇವಿಯ ಹೆಸರಿಡಲು ಇಷ್ಟಪಟ್ಟರೆ, ನೀವು ಅಧ್ರಿಕಾ ಎಂಬ ಹೆಸರನ್ನು ಆಯ್ಕೆ ಮಾಡಬಹುದು. ಈ ಹೆಸರಿನ ಅರ್ಥ ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವವರು. ಇದು ಬಹಳ ವಿಶಿಷ್ಟವಾದ ಹೆಸರು (special name) ಮತ್ತು 2025 ರಲ್ಲಿ ಈ ಹೆಸರು ಖಂಡಿತವಾಗಿಯೂ ಜನರಿಗೆ ಇಷ್ಟವಾಗಬಹುದು.
ಆದಿಶ್ರೀ ಮತ್ತು ಆದ್ರಿಕಾ
ಅ ಅಕ್ಷರದಿಂದ ಪ್ರಾರಂಭವಾಗುವ ತಾಯಿ ಲಕ್ಷ್ಮಿಯ ಹೆಸರುಗಳ ಈ ಪಟ್ಟಿಯಲ್ಲಿ ಆದಿಶ್ರೀ ಮತ್ತು ಆದ್ರಿಕಾ ಎಂಬ ಹೆಸರುಗಳೂ ಸೇರಿವೆ. ಸಂಪತ್ತಿನ ದೇವತೆಯನ್ನು (goddess of wealth) ಆದಿಶ್ರೀ ಎಂದು ಕರೆಯಲಾಗುತ್ತದೆ ಮತ್ತು ಸಂಪತ್ತನ್ನು ನೀಡುವವರನ್ನು ಆದ್ರಿಕಾ ಎಂದು ಕರೆಯಲಾಗುತ್ತದೆ. ಈ ಎರಡೂ ಹೆಸರುಗಳು ತಾಯಿ ಲಕ್ಷ್ಮಿಗೆ ಸಂಬಂಧಿಸಿದ್ದು, ನೀವು ಈ ಎರಡೂ ಹೆಸರುಗಳನ್ನು ನಿಮ್ಮ ಕುಟುಂಬದೊಂದಿಗೆ ಚರ್ಚಿಸಬಹುದು.
ರಮಾ ಮತ್ತು ಶ್ರೀಜಾ
ಲಕ್ಷ್ಮಿ ಮಾತೆಯ ಹೆಸರುಗಳ ಪಟ್ಟಿಯಲ್ಲಿ ರಮಾ ಎನ್ನುವ ಹೆಸರು ಕೂಡ ಇದೆ. ಈ ಹೆಸರಿನ ಅರ್ಥ ಸಂತೋಷವನ್ನು ನೀಡುವವರು, ಆನಂದಮಯ ಮತ್ತು ಶ್ರೀಮಂತ. ಇದಲ್ಲದೆ, ಶ್ರೀಜಾ ಎಂಬ ಹೆಸರೂ ಇದೆ. ವಿಶಿಷ್ಟ ಹೆಸರುಗಳನ್ನು ಇಷ್ಟಪಡುವ ಜನರು ಶ್ರೀಜಾ ಎಂಬ ಹೆಸರನ್ನು ಮಗಳಿಗೆ ಇಡುವ ಬಗ್ಗೆ ಯೋಚನೆ ಮಾಡಬಹುದು. ಈ ಹೆಸರಿನ ಅರ್ಥ ಸಮೃದ್ಧಿಯ ಮಗಳು.
ಲಕ್ಷಿತಾ ಮತ್ತು ಅನ್ವಿತಾ
ಲಕ್ಷಿತಾ ತುಂಬಾ ಸುಂದರ ಮತ್ತು ಮುದ್ದಾದ ಹೆಸರು. ನಿಮ್ಮ ಹೆಣ್ಣು ಮಗುವಿಗೆ ಲಕ್ಷಿತಾ ಎಂದು ಹೆಸರಿಡಬಹುದು. ಈ ಹೆಸರಿನ ಅರ್ಥ ಘನತೆ ಮತ್ತು ಗೌರವಾನ್ವಿತ. ಇದಲ್ಲದೆ, ಅನ್ವಿತಾ ಎಂಬ ಹೆಸರೂ ಇದೆ, ಯಾವುದನ್ನು ಅನುಸರಣೆ ಮಾಡಲಾಗುವುದು ಅದುವೇ ಅನ್ವಿತಾ… ಇದರ ಅರ್ಥ ಲಕ್ಷ್ಮೀ ಎಂದಾಗುತ್ತೆ.
ಮನಸ್ವಿನಿ ಮತ್ತು ನಿತ್ಯಶ್ರೀ
ಮನಸ್ವಿನಿ ಎಂಬುದು ಬಹಳ ಸಾಂಪ್ರದಾಯಿಕ ಹೆಸರು ಮತ್ತು ಅದರ ಅರ್ಥ ಬುದ್ಧಿವಂತಿಕೆ. ಲಕ್ಷ್ಮಿ ದೇವಿಯನ್ನು ಈ ಹೆಸರಿನಿಂದಲೂ ಕರೆಯಲಾಗುತ್ತದೆ. ಇನ್ನು ಶಾಶ್ವತ ಸೌಂದರ್ಯವನ್ನು ಹೊಂದಿರುವ ಮಹಿಳೆಯನ್ನು ನಿತ್ಯಶ್ರೀ ಎಂದು ಕರೆಯಲಾಗುತ್ತದೆ. ಇವೆರಡೂ ಸಹ ತಾಯಿ ಲಕ್ಷ್ಮೀ ದೇವಿಯ ಹೆಸರಾಗಿದೆ.
ಚಾರುಲ್ ಮತ್ತು ಧೃತಿ
ಚಾರುಲ್ ಅನ್ನೋದು ಒಂದು ಅನನ್ಯ ಹೆಸರು ಮತ್ತು ಇದರರ್ಥ ಸುಂದರ ಮತ್ತು ಆಕರ್ಷಕ. ಧೃತಿ ಎಂದರೆ ಧೈರ್ಯ ಮತ್ತು ಪರಿಶ್ರಮ. ನೀವು ಖಂಡಿತವಾಗಿಯೂ ಈ ಎರಡೂ ಹೆಸರುಗಳನ್ನು ಇಷ್ಟಪಡುತ್ತೀರಿ.