Mothers Day 2023: ಅಮ್ಮಂದಿರ ಬಗ್ಗೆ ಅದ್ಭುತ ಸಂದೇಶ ಸಾರಿದ ಸಿನಿಮಾಗಳಿವು
ಅಮ್ಮಂದಿರ ದಿನ ಎಂದರೆ ತುಂಬಾ ಸ್ಪೆಷಲ್. ತಾಯಿಯ ಪ್ರೀತಿ, ತ್ಯಾಗ, ಮಹತ್ವವನ್ನು ಸಾರಿದ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಕೆಲವು ಸಿನಿಮಾದ ಮಾಹಿತಿ ಇಲ್ಲಿದೆ.
ಮಾಮ್
ಇದು ಶ್ರೀದೇವಿ ಅಭಿನಯದ ಅತ್ಯುತ್ತಮ ಮೂವಿಯಾಗಿದೆ. ತಾಯಿ, ತನ್ನ ಮಕ್ಕಳನ್ನು ರಕ್ಷಿಸಿಕೊಳ್ಳಲು ಏನು ಸಹ ಮಾಡಬಲ್ಲಳು ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಅತ್ಯಾಚಾರಕ್ಕೊಳಗಾದ ಮಗಳನ್ನು ಕಾಳಜಿ ವಹಿಸುತ್ತಾ, ಅತ್ಯಾಚಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಕಥೆ ಇದರಲ್ಲಿದೆ.
ಶ್ರೀದೇವಿ, ನವಾಜುದ್ದೀನ್ ಸಿದ್ದಿಕಿ ಮತ್ತು ಅಕ್ಷಯ್ ಖನ್ನಾ ಚಿತ್ರಕ್ಕೆ ಜೀವ ತುಂಬಿದ್ದಾರೆ.
ಬದಾಯಿ ಹೋ
ಅನಿರೀಕ್ಷಿತ ಟ್ವಿಸ್ಟ್‌ನೊಂದಿಗೆ ಬದಾಯಿ ಹೋ ಪರಿಪೂರ್ಣ ಹಾಸ್ಯದ ಭಾವನೆಗಳ ಚಲನಚಿತ್ರವಾಗಿದೆ. ಆಯುಷ್ಮಾನ್ ಖುರಾನಾ, ಸಾನ್ಯಾ ಮಲ್ಹೋತ್ರಾ, ನೀನಾ ಗುಪ್ತಾ, ಶೀಬಾ ಚಡ್ಡಾ ಮತ್ತು ಗಜರಾಜ್ ರಾವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೇಟ್ ಪ್ರೆಗ್ನೆಂಟ್‌ನ್ನು ನಾರ್ಮಲೈಸ್ ಮಾಡುವ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. ತಡವಾಗಿ ತಾಯಿಯಾಗುವುದು ನಾಚಿಕೆಯ ವಿಷಯವಲ್ಲ ಎಂಬ ಸಂದೇಶವನ್ನು ಸಾರಲಾಗಿದೆ.
ಪಾ
ಇದು ಕೆಲಸ ಮತ್ತು ಮನೆಯನ್ನು ನಿಭಾಯಿಸುವ ತಾಯಿಯ ಚಿತ್ರಣ ನೀಡುತ್ತದೆ. ವಿಕಲಾಂಗ ಮಗುವನ್ನು ತಾಯಿ ಎಲ್ಲಾ ಸಮಸ್ಯೆಗಳ ಮಧ್ಯೆ ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತಾಳೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಪಾ ಚಿತ್ರದಲ್ಲಿ ವಿದ್ಯಾ ಬಾಲನ್, ಅಭಿಷೇಕ್ ಬಚ್ಚನ್ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿರುವುದು ಈ ಚಿತ್ರದ ವಿಶೇಷವಾಗಿದೆ.
ಮಿಮಿ
ಹಣಕ್ಕಾಗಿ ಬಾಡಿಗೆ ತಾಯಿಯಾಗಲು ಒಪ್ಪುವವಳು ಆ ಮಗುವನ್ನು ಅವಳೇ ಬೆಳೆಸಬೇಕಾದ ಪರಿಸ್ಥಿತಿ ಬಂದಾಗ ಏನಾಗುತ್ತದೆ ಎಂಬುದು ಮಿಮಿ ಚಿತ್ರದ ಕಥಾಹಂದರ. ಕೃತಿ ಸನೋನ್ ಮತ್ತು ಪಂಕಜ್ ತ್ರಿಪಾಠಿ ಅವರ ಅದ್ಭುತ ಅಭಿನಯವು ಮನಗೆಲ್ಲುತ್ತದೆ. ವಿದೇಶಿ ಜೋಡಿಯೊಂದು ಬಾರ್ ಡ್ಯಾನ್ಸರ್ ಆಗಿರುವ ಯುವತಿ ಬಳಿ ಬಾಡಿಗೆ ತಾಯಿಯಾಗಲು ಕೇಳಿಕೊಂಡು, ಹುಟ್ಟಲಿರುವ ಮಗುವಿಗೆ ಕಾಯಿಲೆಯಿದೆ ಎಂದು ತಿಳಿದು ಬಿಟ್ಟುಹೋಗುತ್ತಾರೆ. ಮಕ್ಕಳನ್ನು ಇಷ್ಟಪಡದ ಯುವತಿಯಲ್ಲಿ ಹೇಗೆ ಮಾತೃಪ್ರೇಮ ಮೂಡುತ್ತದೆ ಎಂಬುದನ್ನು ಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ.
ಡಾರ್ಲಿಂಗ್ಸ್
ಒಬ್ಬ ತಾಯಿಯು ಯಾವುದೇ ಪರಿಸ್ಥಿತಿಯಲ್ಲಿ ತನ್ನ ಮಗಳನ್ನು ರಕ್ಷಿಸಿಕೊಳ್ಳುತ್ತಾಳೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಮದುವೆಯಾಗಿ ಪ್ರತಿನಿತ್ಯ ನರಕ ಅನುಭವಿಸುತ್ತಿರುವ ಮಗಳ ಜೀವನವನ್ನು ತಾಯಿ ಸರಿಮಾಡುವುದು ಈ ಚಿತ್ರದ ಕಥೆಯಾಗಿದೆ. ಆಲಿಯಾ ಭಟ್, ಶೆಫಾಲಿ ಷಾ ಮತ್ತು ವಿಜಯ್ ವರ್ಮಾ ಈ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ.
ಅಮ್ಮಎಂಬ ಒಂದು ಪದವೇ ಅಮೃತ. ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ. ಅಮ್ಮ ಜೊತೆಗಿದ್ದರೆ ನೂರಾನೆಯ ಬಲ ಇದ್ದಂತೆ. ಅಮ್ಮನ ಕುರಿತಾದ ಹಲವು ಪ್ರಸಿದ್ಧ ಸಿನಿಮಾಗಳಿವೆ. ಮದರ್ಸ್ ಡೇ ದಿನ ಇವುಗಳನ್ನು ಮಿಸ್ ಮಾಡ್ದೆ ನೋಡಿ.