MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • Menstrual Hygiene Day 2023: ಮುಟ್ಟಿನ ನೈರ್ಮಲ್ಯ ದಿನ ಆರಂಭವಾಗಿದ್ದು ಯಾಕೆ?

Menstrual Hygiene Day 2023: ಮುಟ್ಟಿನ ನೈರ್ಮಲ್ಯ ದಿನ ಆರಂಭವಾಗಿದ್ದು ಯಾಕೆ?

ಮೇ 28ರಂದು ಜಗತ್ತಿನಾದ್ಯಂತ ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದರೆ, ಈ ದಿನದ ಇತಿಹಾಸವೇನು, ಮಹತ್ವವೇನು ಎಂಬುದನ್ನು ತಿಳಿಯೋಣ.

2 Min read
Vinutha Perla
Published : May 28 2023, 12:59 PM IST| Updated : May 28 2023, 03:02 PM IST
Share this Photo Gallery
  • FB
  • TW
  • Linkdin
  • Whatsapp
110

ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಟ್ಟಿನ ಸಮಯದಲ್ಲಿ ಅನುಸರಿಸಬೇಕಾದ ನೈರ್ಮಲ್ಯದ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲು ಪ್ರತಿ ವರ್ಷ ಮೇ 28 ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. UNICEF ಪ್ರಕಾರ, ಪ್ರಪಂಚದಾದ್ಯಂತ ಸುಮಾರು 1.8 ಶತಕೋಟಿ ಜನರು ಪ್ರತಿ ತಿಂಗಳು ಋತುಮತಿಯಾಗುತ್ತಾರೆ.

210

ಸಾಕಷ್ಟು ಮಹಿಳೆಯರು ಲಿಂಗ ಅಸಮಾನತೆ, ತಾರತಮ್ಯದ ಸಾಮಾಜಿಕ ನಿಯಮಗಳು, ಸಾಂಸ್ಕೃತಿಕ ನಿಷೇಧಗಳು, ಬಡತನ ಮತ್ತು ಶೌಚಾಲಯಗಳು ಮತ್ತು ನೈರ್ಮಲ್ಯ ಉತ್ಪನ್ನಗಳಂತಹ ಮೂಲಭೂತ ಸೇವೆಗಳ ಕೊರತೆಯ ಸಮಸ್ಯೆಗಳನ್ನು ಎದುರಿಸುತ್ತಾರೆ.

310

ಮುಟ್ಟಿನ ನೈರ್ಮಲ್ಯ ದಿನ, ಮೇ 28 ಏಕೆ?
ಜರ್ಮನ್ ಲಾಭರಹಿತ ಸಂಸ್ಥೆ (Non profit Organization) ಮತ್ತು ಮುಟ್ಟಿನ ನೈರ್ಮಲ್ಯ ದಿನದ ಸಂಸ್ಥಾಪಕ ವಾಶ್ ಯುನೈಟೆಡ್ ಪ್ರಕಾರ, ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಋತುಚಕ್ರವು (Peropds) ಸರಾಸರಿ 28 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಸರಾಸರಿಯಾಗಿ, ಮಹಿಳೆಯರು ಮತ್ತು ಹುಡುಗಿಯರು ತಿಂಗಳಿಗೆ 5 ದಿನಗಳ ವರೆಗೆ ಮುಟ್ಟಾಗಿರುತ್ತರೆ. ಆದ್ದರಿಂದ, ಈ ದಿನವನ್ನು ಗುರುತಿಸಲು 28-5 ಅಥವಾ ಮೇ 28 ಅನ್ನು ಆಯ್ಕೆ ಮಾಡಲಾಗಿದೆ.

410

ಇತಿಹಾಸ 
ವಾಶ್ ಯುನೈಟೆಡ್ (WASH United) ಮೇ 2013ರಲ್ಲಿ ಋತುಚಕ್ರದ ನೈರ್ಮಲ್ಯ (Hygiene) ನಿರ್ವಹಣೆಗಾಗಿ ಜಾಗತಿಕ ದಿನದ ಕ್ರಿಯೆಯ ಕಲ್ಪನೆಯೊಂದಿಗೆ ಬಂದಿತು. ಸಂಸ್ಥೆಯು ನೀರನ್ನು ಪರೀಕ್ಷಿಸಲು ಸಾಮಾಜಿಕ ಮಾಧ್ಯಮದಲ್ಲಿ 28-ದಿನಗಳ ಅಭಿಯಾನವನ್ನು ನಡೆಸಿತು. ಹಾಗೂ ಇದರ ಕುರಿತಾಗಿ ಇತರ ಸಂಸ್ಥೆಗಳು ಆಸಕ್ತಿ ಹೊಂದಿದೆಯೇ ಎಂದು ನೋಡಿದರು.

510

ಪ್ರಪಂಚದಾದ್ಯಂತದ ಹಲವಾರು ಸಂಸ್ಥೆಗಳಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆಯು ಜಾಗತಿಕ (Global) ದಿನವನ್ನು ರಚಿಸುವ ಇವರ ಆಲೋಚನೆಯನ್ನು ಪ್ರೇರೇಪಿಸಿತು (Support). ಅದು ಪ್ರಪಂಚದಾದ್ಯಂತ ಮುಟ್ಟಿನ ನೈರ್ಮಲ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತಮ್ಮ ಧ್ವನಿಯನ್ನು ಒಟ್ಟುಗೂಡಿಸಲು ಅನುವು ಮಾಡಿಕೊಡುವ ದಿನವಾಗಿ ಹೊರಹೊಮ್ಮಿತು.

610

ವಾಶ್ ಯುನೈಟೆಡ್ (WASH United) ಮೇ 2013 ರಲ್ಲಿ ಋತುಚಕ್ರದ ನೈರ್ಮಲ್ಯ (Hygiene) ನಿರ್ವಹಣೆಗಾಗಿ ಜಾಗತಿಕ ದಿನದ ಕ್ರಿಯೆಯ ಕಲ್ಪನೆಯೊಂದಿಗೆ ಬಂದಿತು. ಸಂಸ್ಥೆಯು ನೀರನ್ನು ಪರೀಕ್ಷಿಸಲು ಸಾಮಾಜಿಕ ಮಾಧ್ಯಮದಲ್ಲಿ 28-ದಿನಗಳ ಅಭಿಯಾನವನ್ನು ನಡೆಸಿತು. ಪ್ರಪಂಚದಾದ್ಯಂತದ ಹಲವಾರು ಸಂಸ್ಥೆಗಳಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆಯು ಜಾಗತಿಕ (Global) ದಿನವನ್ನು ರಚಿಸುವ ಇವರ ಆಲೋಚನೆಯನ್ನು ಪ್ರೇರೇಪಿಸಿತು 

710

ಮುಟ್ಟಿನ ನೈರ್ಮಲ್ಯ ದಿನ 2023 ರ ಧ್ಯೇಯ:
2030 ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವ ಧ್ಯೇಯವನ್ನು ಹೊಂದಿದೆ.

810

ಮುಟ್ಟಿನ ನೈರ್ಮಲ್ಯಕ್ಕಾಗಿ ಕೆಲವೊಂದು ಸಲಹೆಗಳು
ಋತುಸ್ರಾವದ ಸಮಯದಲ್ಲಿ ನೈಮರ್ಲ್ಯವನ್ನು ಕಾಪಾಡಿಕೊಳ್ಳಲು ಹಲವು ಸಲಹೆಗಳನ್ನು ಪಾಲಿಸಬೇಕು. ಮುಟ್ಟಿನ ಉತ್ಪನ್ನಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಬೇಡಿ. ಬದಲಿಗೆ ಅವುಗಳನ್ನು ಟಾಯ್ಲೆಟ್ ಪೇಪರ್ ಅಥವಾ ಟಿಶ್ಯೂನಿಂದ ಸುತ್ತಿ ಡಸ್ಟ್‌ಬಿನ್‌ನಲ್ಲಿ ಹಾಕಿ. ರಕ್ತಸ್ರಾವ ಕಡಿಮೆ ಇದ್ದರೂ ಕೂಡ ಪ್ರತಿ 3 ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕು.

910

ಋತು ಸ್ರಾವದ ಸಮಯದಲ್ಲಿ ಯೋನಿಯ ಭಾಗಗಳನ್ನು ತೊಳೆದ ನಂತರ ಟಿಶ್ಯೂ ಪೇಪರ್​ನಿಂದ ಸರಿಯಾಗಿ ನಿಮ್ಮ ದೇಹದ ಮುಂಭಾಗದಿಂದ ಹಿಂಭಾಗಕ್ಕೆ ಒರೆಸಿ. ಆ ಪ್ರದೇಶವನ್ನು ಎಂದಿಗೂ ಒದ್ದೆಯಾಗಿ ಇಟ್ಟು ಕೊಳ್ಳಬೇಡಿ. ಋತುಸ್ರಾವದ ಸಮಯದಲ್ಲಿ ದೇಹವನ್ನು ತೇವಾಂಶದಿಂದಿಟ್ಟುಕೊಳ್ಳಲು ಸಾಕಷ್ಟು ನೀರು ಹಾಗೂ ಹಣ್ಣಿನ ರಸವನ್ನು ಕುಡಿಯುವುದು ಅಗತ್ಯ

1010

ನೀವು ಸ್ಯಾನಿಟರಿ ಪ್ಯಾಡ್‌ಗಳ ಬದಲಾಗಿ ಟ್ಯಾಂಪೂನ್​​​​ಗಳನ್ನು ಬಳಸುತ್ತಿದ್ದರೆ, ಪ್ರತಿ 4-8 ಗಂಟೆಗಳಿಗೊಮ್ಮೆ ಬದಲಾಯಿಸಿ. ಮೆನ್‌ಸ್ಟ್ರಲ್ ಕಪ್​​​ಗಳನ್ನು ಬಳಸುತ್ತಿದ್ದರೆ, ಒಂದು ದಿನದ ಬಳಕೆಯ ನಂತರ ಅವುಗಳನ್ನು ಸ್ವಚ್ಛಗೊಳಿಸಿ. ಜೊತೆಗೆ 5 ದಿನಗಳ ನಂತರ ಕೆಲವು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಹಾಕಿ, ಸ್ವಚ್ಛಗೊಳಿಸಿ ಇಡಿ. 

About the Author

VP
Vinutha Perla
ಋತುಚಕ್ರ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved