ಕೇವಲ 2ನೇ ಪ್ರಯತ್ನದಲ್ಲಿ UPSC ಪರೀಕ್ಷೆ ಪಾಸಾಗಿ IAS ಆದ ಸಾಮಾನ್ಯ ಗೃಹಿಣಿ ಇವರು
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಒಮ್ಮೆ ಮದ್ವೆಯಾಯ್ತು ಎಂದ ಮೇಲೆ ಅವರ ಕತೆ ಮುಗಿದೆ ಹೋಯ್ತು. ಇಡೀ ಸಂಸಾರದ ಎಲ್ಲಾ ಜವಾಬ್ದಾರಿಗಳ ಭಾರ ಅವರ ಮೇಲೆ ಬಿದ್ದಾಗಿರುತ್ತದೆ. ಮದುವೆಗೆ ಮೊದಲೇ ಏನಾದರೂ ತಮ್ಮಿಷ್ಟದ ಸಾಧಿಸುವ ಕನಸ್ಸನ್ನು ಈಡೇರಿಸಿಕೊಂಡರೆ ಅವರೇ ಅದೃಷ್ಟವಂತರು. ಆದರೆ ಮದ್ವೆ ನಂತರ ಸಾಧನೆ ಮಾಡುವೆ ಎಂದು ಹೊರಟವರ ದಾರಿಯಲ್ಲಿ ನೂರೆಂಟು ಅಡ್ಡಿ ಆತಂಕಗಳು ಇರುತ್ತವೆ. ಪರಿಸ್ಥಿತಿ ಹೀಗಿದ್ದರೂ ಕೆಲವರು ತಮ್ಮಿಷ್ಟದ ಗುರಿ ಮುಟ್ಟಲು ಸಾಧನೆ ಮಾಡಲು ಸ್ವಲ್ಪವೂ ವಿರಮಿಸದೇ ಅವಿರತವಾಗಿ ಶ್ರಮಿಸುತ್ತಾರೆ. ಅಲ್ಲದೇ ಎಲ್ಲಾ ಅಡ್ಡಿಗಳನ್ನು ದೂರ ತಳ್ಳಿ ತಮ್ಮ ಗುರಿ ಮುಟ್ಟಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂತಹವರ ಸಾಲಿಗೆ ಸೇರ್ತಾರೆ ಈ ಮಹಿಳಾ ಐಎಎಸ್ ಅಧಿಕಾರಿ ಪುಷ್ಪಲತಾ.
Lady IAS Officer Pushpa lata
ಮದ್ವೆ ನಂತರ ಹೆಣ್ಣು ಕೇವಲ ಮನೆ ಕೆಲಸಕ್ಕೆ ಮೀಸಲು ಎಂಬ ಎಂದಿನ ಮೂಢನಂಬಿಕೆಯನ್ನೆಲ್ಲಾ ದೂರ ಅಟ್ಟಿದ ಅವರು ತಮ್ಮ ಐಎಎಸ್ ಆಗುವ ಕನಸನ್ನು ಮದ್ವೆ ನಂತರ ಈಡೇರಿಸಿಕೊಂಡ ಗಟ್ಟಿಗಿತ್ತಿ ಮಹಿಳೆ ಈ ಪುಷ್ಪಲತಾ
Lady IAS Officer Pushpa lata
ಯುಪಿಎಸ್ಸಿ (UPSC) ಪರೀಕ್ಷೆ ಪಾಸ್ ಮಾಡೋದು ಎಂದರೆ ಅದು ಸುಲಭದ ಮಾತಲ್ಲ, ಅದು ಸಾಕಷ್ಟು ಪರಿಶ್ರಮವನ್ನು ತ್ಯಾಗವನ್ನು ಬೇಡುತ್ತದೆ. ಹೀಗಿರುವಾಗ ಮದುವೆಯಾಗಿ ಗೃಹಿಣಿಯ ಕರ್ತವ್ಯವನ್ನು ನಿಭಾಯಿಸುತ್ತಲೇ ಯುಪಿಎಸ್ ಪರೀಕ್ಷೆಯನ್ನು ಕೇವಲ 2ನೇ ಪ್ರಯತ್ನದಲ್ಲೇ ಪಾಸು ಮಾಡಿದ್ದಾರೆ ಹರ್ಯಾಣ ಮೂಲದ ಈ ಪುಷ್ಪಲತಾ.
Lady IAS Officer Pushpa lata
ಹರ್ಯಾಣದ (Haryana) ಪುಟ್ಟ ಊರಾದ ರೇವರಿಯಲ್ಲಿ ಜನಿಸಿದ ಪುಷ್ಪಲತಾ ವಿಜ್ಞಾನ (Science) ವಿಷಯದಲ್ಲಿ ಪದವಿ ಪಡೆದಿದ್ದರು. ನಂತರ ಎಂಬಿಎ ಮಾಡುವ ಮನಸ್ಸಾಗಿ ಅದನ್ನು ಪೂರ್ತಿಗೊಳಿಸಿದರು.
Lady IAS Officer Pushpa lata
ಅದಾದ ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ ಪುಷ್ಪಲತಾ (Pushpa lata) ಅಲ್ಲಿ ಕೆಲವರ್ಷಗಳ ಕಾಲ ಕೆಲಸ ಮಾಡಿದರು. ನಂತರ 2011ರಲ್ಲಿ ಮದ್ವೆಯಾದ ಇವರು ರೇವರಿಯಿಂದ ಮನೆಸರ್‌ಗೆ ಬಂದರು.
Lady IAS Officer Pushpa lata
ಮದುವೆ ಆದ ಮೇಲೆ ಮಕ್ಕಳು ಸಹಜ ಎಂಬಂತೆ ಮೊದಲ ಮಗು ಗ್ರವಿತ್‌ಗೆ ಜನ್ಮ ನೀಡಿದ ಪುಷ್ಪಾ ನಂತರ ಯುಪಿಎಸ್ ಸಿವಿಲ್ ಸರ್ವಿಸ್ ಪರೀಕ್ಷೆಗೆ (Civil Service Exam) ಹಾಜರಾಗಲು ನಿರ್ಧರಿಸಿದರು.
Lady IAS Officer Pushpa lata
ಪುಷ್ಪ ಅವರ ಕನಸಿಗೆ ನೀರೆರೆದು ಪ್ರೋತ್ಸಾಹಿಸಿದ್ದು, ಆಕೆಯ ಅತ್ತೆ ಮನೆಯವರು. ಹೀಗಾಗಿ ಪುಟ್ಟ ಮಗುವಿದ್ದರೂ ಅವರು ಐಎಎಸ್ ಪರೀಕ್ಷೆಗೆ (IAS Exam) ಸಿದ್ಧವಾಗಲು ಸಾಧ್ಯವಾಯ್ತು.
Lady IAS Officer Pushpa lata
ಐಎಎಸ್ ಪರೀಕ್ಷೆಯಲ್ಲಿ ಪಾಸಾಗಬೇಕೆಂದರೆ ದಿನದ ಬಹುತೇಕ ಸಮಯವನ್ನು ಅಧ್ಯಯನದಲ್ಲೇ ಕಳೆಯಬೇಕು ಹೀಗಿರುವಾಗ ಗೃಹಿಣಿ (Home maker) ಹಾಗೂ ಒಂದು ಪುಟ್ಟ ಮಗುವಿರುವ ತಾಯಿಗೆ ಇದು ಅದೆಷ್ಟು ಕಷ್ಟವಾಗಿರಬಹುದು ಎಂದು ಯೋಚನೆ ಮಾಡಿ. ಹಾಗಿದ್ದರೂ ಐಎಎಸ್ ಮಾಡುವ ದೃಢ ಸಂಕಲ್ಪ ಪುಷ್ಪಾ ಅವರನ್ನು ಸುಮ್ಮನೆ ಕೂರಲು ಬಿಡಲಿಲ್ಲ,
Lady IAS Officer Pushpa lata
ಹೀಗಾಗಿ ಸಂಸಾರದ ಜಂಜಡಗಳ ನಡುವೆಯೂ ತನ್ನ ಕನಸಿನ ಗುರಿ ಬೆನ್ನಟ್ಟಿದ ಪುಷ್ಪಾ ಕೆಲಸದ ನಡುವೆಯೂ ನಿರಂತರ ಓದಿ ಅಧ್ಯಯನ ನಡೆಸಿ ಐಎಎಸ್ ಪರೀಕ್ಷೆಗೆ ಹಾಜರಾಗುವಲ್ಲಿ ಯಶಸ್ವಿಯಾದರು.
Lady IAS Officer Pushpa lata
ಆದರೆ ಒಂದೇ ಹಂತದಲ್ಲಿ ಅವರಿಗೆ ಪರೀಕ್ಷೆ ಪಾಸು ಮಾಡಲು ಸಾಧ್ಯವಾಗಲಿಲ್ಲ. ಆದರೆ ಅವರ ಪತಿ ಧೈರ್ಯ ತುಂಬಿ ಮತ್ತೆ ಪ್ರಯತ್ನಿಸುವಂತೆ ಬೆಂಬಲಿಸಿದರು. ಪರಿಣಾಮ 2017ರಲ್ಲಿ ಮತ್ತೆ ಪರೀಕ್ಷೆ ಬರೆದ ಪುಷ್ಪಾ ಯುಪಿಎಸ್‌ಸಿಯಲ್ಲಿ 80ನೇ ಶ್ರೇಣಿ ಪಡೆಯುವಲ್ಲಿ ಯಶಸ್ವಿಯಾದರು.