ಅನಾಥ ಪ್ರಾಣಿಗಳಿಗೆ ಎದೆಹಾಲುಣಿಸುವ ಮಮತಾ ಮೂರ್ತಿ ಈ ಬಿಷ್ಣೋಯಿ ಸಮುದಾಯದ ಮಹಿಳೆಯರು
ಇತ್ತೀಚಿನವರೆಗೂ ರಾಜಸ್ಥಾನದ ಬಿಷ್ಣೋಯಿ ಸಮುದಾಯದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ಕೆಲವರು ಈ ಸಮಾಜದ ಮಹಿಳೆಯರ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು, ಇದನ್ನ ಹಾಕಿದ ಬಳಿಕ ಇವರ ಬಗ್ಗೆ ಚರ್ಚೆ ಆಗಲು ಪ್ರಾರಂಭವಾಯಿತು. ಹಾಗಿದ್ರೆ ವೈರಲ್ ಆಗಿದ್ದ ಈ ಜನಾಂಗದ ಫೋಟೊಗಳು ಯಾವುವು? ಅವರು ಏನು ಮಾಡುತ್ತಿದ್ದರು ನೋಡೋಣ.
ಬಿಷ್ಣೋಯ್ ಸಮಾಜದ (Bishnoi Community) ಮಹಿಳೆಯರನ್ನು ಮಮತಾ ಮೂರ್ತಿಗಳು ಎಂದು ಕರೆದರೆ ಅದು ತಪ್ಪಾಗಲಾರದು. ಯಾಕೆ ಅನ್ನೋದನ್ನು ಅವರ ಫೋಟೋಗಳನ್ನು ನೋಡಿದ್ರೆ ತಿಳಿಯುತ್ತೆ. ಈ ಮಹಿಳೆಯರು ತಮ್ಮ ಎದೆ ಹಾಲನ್ನು ಜಿಂಕೆ ಮರಿಗಳಿಗೆ ಕುಡಿಸುತ್ತಾರೆ. ಅವರಿಗೆ, ಅವರು ಪ್ರಾಣಿಗಳ ಮರಿಗಳು ಮಾತ್ರವಲ್ಲ, ಆ ಮರಿಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ.
ರಾಜಸ್ಥಾನದ (Rajasthan)ಬಿಷ್ಣೋಯಿ ಸಮುದಾಯದ ಜನರು ಸುಮಾರು ಆರು ನೂರು ವರ್ಷಗಳಿಂದ ಪ್ರಕೃತಿಯನ್ನು ಪೂಜಿಸುತ್ತಿದ್ದಾರೆ. ಅವರ ಪ್ರಕಾರ, ಅಲ್ಲಿನ ಜನರು ಪ್ರಕೃತಿಯ ಕಾರಣದಿಂದಾಗಿ ಅಸ್ತಿತ್ವದಲ್ಲಿದ್ದಾರೆ ಎಂದು ನಂಬುತ್ತಾರೆ. ಹಾಗಾಗಿ ಅವರು ಅಲ್ಲಿನ ಪ್ರಾಣಿಗಳನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಾರೆ.
ಈ ಸಮಾಜದ ಮಹಿಳೆಯರ ವಿಶೇಷತೆ ಎಂದರೆ, ಅವರು ಜಿಂಕೆ ಮರಿಗಳಿಗೆ ಹಾಲುಣಿಸುತ್ತಾರೆ. ಅವರ ಪ್ರಕಾರ, ಜಿಂಕೆ ಮರಿಗಳು ತುಂಬಾನೆ ಭಯಭೀತರಾಗಿರ್ತಾರೆ, ಹಾಗಾಗಿ ಅಲ್ಲಿನ ಮಹಿಳೆಯರು ಆ ಮರಿಗಳನ್ನು ತನ್ನ ಸ್ವಂತ ಮಗುವಿನಂತೆ ಬೆಳೆಸುತ್ತಾಳೆ.
ಒಬ್ಬ ಮಹಿಳೆ ಪ್ರಾಣಿಯ ಮರಿಗೆ ಹೇಗೆ ಹಾಲುಣಿಸಬಹುದು ಎಂದು ನೋಡಿ ನಿಮಗೆ ಆಶ್ಚರ್ಯವಾಗಿದ್ದರೂ, ಬಿಷ್ಣೋಯ್ ಸಮಾಜಕ್ಕೆ ಇದರಲ್ಲಿ ವಿಚಿತ್ರವಾದದ್ದೇನೂ ಇಲ್ಲ. ಇದೊಂದು ಸಾಮಾನ್ಯ ಪ್ರತಿಕ್ರಿಯೆ. ಈ ಜನರಿಗೆ, ಪ್ರಾಣಿಗಳು ಅವರ ಕುಟುಂಬದ ಒಂದು ಭಾಗ ಮಾತ್ರ. ಈ ಬಿಷ್ಟೋಯಿ ಮಹಿಳೆಯರು ಅನಾಥ ಅಥವಾ ಗಾಯಗೊಂಡ ಸ್ಥಿತಿಯಲ್ಲಿ ಸೆರೆ ಹಿಡಿಯಲ್ಪಟ್ಟ ಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ.
ಬಿಷ್ಣೋಯಿ ಸಮುದಾಯದಲ್ಲಿ ಸುಮಾರು ಎರಡು ಸಾವಿರ ಮನೆಗಳಿವೆ. ಅವರು ಹಿಂದೂ ಧರ್ಮವನ್ನು (Hindu religion) ನಂಬುತ್ತಾರೆ ಮತ್ತು ಹಿಂದೂ ಗುರು ಶ್ರೀ ಜಂಬೇಶ್ವರ ಭಗವಾನ್ ಅವರ ಬೋಧನೆಗಳನ್ನು ಅನುಸರಿಸುತ್ತಾರೆ.
ಈ ಸಮಾಜದಲ್ಲಿನ ಮಹಿಳೆಯ ಪ್ರಕಾರ, ಈ ಪ್ರಾಣಿಗಳು ಮತ್ತು ಅವರ ಸ್ವಂತ ಮಕ್ಕಳ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲ. ಆ ಮರಿಗಳು ಈ ಜನರ ಜೊತೆ ಇರುವಾಗ, ಮರಿಗಳು ಅನಾಥರಾಗಲು ಸಾಧ್ಯವೇ ಇಲ್ಲ. ಮರಿಗಳನ್ನು ಸಂಪೂರ್ಣವಾಗಿ ತಮ್ಮದೇ ಮಕ್ಕಳಂತೆ ಇವರು ಬೆಳೆಸುತ್ತಾರೆ.
ಈ ಅನಾಥ ಮರಿಗಳಿಗೆ ತಾಯಿ ಇಲ್ಲದ ಕಾರಣ, ಅವರ ದೇಹದಲ್ಲಿ ತಾಯಿಯ ಹಾಲಿನ ಕೊರತೆ ಇರುತ್ತದೆ. ಈ ಕಾರಣದಿಂದಾಗಿ, ಬಿಷ್ಣೋಯ್ ಸಮಾಜದ ಮಹಿಳೆಯರು ತಮ್ಮ ಹಾಲನ್ನು ಅವರಿಗೆ ಕುಡಿಸುತ್ತಾರೆ. ಇದರಿಂದ ಮರಿಗಳು ಸಹ ಆರೋಗ್ಯದಿಂದ ಬೆಳೆಯುತ್ತದೆ.