ಬೇಸಿಗೆಯಲ್ಲಿ ವಾರದವರೆಗೆ ಸೌತೆಕಾಯಿ ಫ್ರೆಶ್ ಆಗಿರಿಸಲು ಸೂಪರ್ ಟಿಪ್ಸ್
ಸೌತೆಕಾಯಿ ಸಂಗ್ರಹಿಸುವ ಟಿಪ್ಸ್ : ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲಿ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿ ಇಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಸೌತೆಕಾಯಿ ಫ್ರೆಶ್ ಆಗಿರಲು ಸೂಪರ್ ಟಿಪ್ಸ್: ಸೌತೆಕಾಯಿ ತಿನ್ನಲು ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಹಸಿಯಾಗಿಯೋ ಅಥವಾ ಸಲಾಡ್ ಆಗಿಯೋ ತಿನ್ನಬಹುದು. ಇದರಲ್ಲಿ ಫೈಬರ್ ಅಂಶ ಇರುವುದರಿಂದ ತೂಕ ಇಳಿಸಿಕೊಳ್ಳಲು ಇದು ಉತ್ತಮ ಆಯ್ಕೆಯಾಗಿದೆ. ಬೇಸಿಗೆಯಲ್ಲಿ ಇದನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಿರುವಾಗ, ಇದನ್ನು ಸರಿಯಾಗಿ ಶೇಖರಿಸಿಡದಿದ್ದರೆ ಬೇಗನೆ ಬಾಡಿ ಹೋಗುತ್ತದೆ. ಆದ್ದರಿಂದ ಸೌತೆಕಾಯಿ ಹಾಳಾಗದಂತೆ ಫ್ರಿಡ್ಜ್‌ನಲ್ಲಿ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿ ಇಡುವುದು ಹೇಗೆ ಎಂದು ಈಗ ತಿಳಿಯೋಣ.
ಫ್ರಿಡ್ಜ್‌ನಲ್ಲಿ ಸೌತೆಕಾಯಿಯನ್ನು ಹೇಗೆ ಶೇಖರಿಸುವುದು?:ಸೌತೆಕಾಯಿ ನೋಡಲು ಗಟ್ಟಿಯಾಗಿ ಕಾಣಿಸಬಹುದು. ಆದರೆ ಅದು ಮೃದುವಾಗಿರುತ್ತದೆ ಮತ್ತು ಬೇಗನೆ ಬಾಡುತ್ತದೆ. ಆದ್ದರಿಂದ ನೀವು ಖರೀದಿಸಿದ ಸೌತೆಕಾಯಿ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರಬೇಕೆಂದರೆ, ಅದನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಕೆಳಗೆ ಕೊಟ್ಟಿರುವ ಕೆಲವು ವಿಧಾನಗಳನ್ನು ಅನುಸರಿಸಿದರೆ ಒಂದು ವಾರದವರೆಗೂ ಫ್ರೆಶ್ ಆಗಿರುತ್ತದೆ. ಆ ವಿಧಾನಗಳೇನು ಅಂತ ಈಗ ನೋಡೋಣ.
ಚೆನ್ನಾಗಿ ಒರೆಸಿ ಫ್ರಿಡ್ಜ್‌ನಲ್ಲಿ ಇಡಿ: ಸೌತೆಕಾಯಿಯನ್ನು ನೀರಿನಿಂದ ಚೆನ್ನಾಗಿ ತೊಳೆದ ನಂತರ ಒಂದು ಬಟ್ಟೆಯಿಂದ ಚೆನ್ನಾಗಿ ಒರೆಸಿದ ನಂತರವೇ ಫ್ರಿಡ್ಜ್‌ನಲ್ಲಿ ಇಡಬೇಕು. ಹಾಗೂ ಒರೆಸಿದ ನಂತರ ಹಾಗೆಯೇ ಇಡದೆ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡಿ. ಹೀಗೆ ಇಡುವುದರಿಂದ ಸೌತೆಕಾಯಿ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರುತ್ತದೆ.
ಪದೇ ಪದೇ ಹೊರಗೆ ತೆಗೀಬೇಡಿ: ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲಿ ಇಟ್ಟ ನಂತರ ಪದೇ ಪದೇ ಹೊರಗೆ ತೆಗೆಯುವುದನ್ನು ತಪ್ಪಿಸಬೇಕು. ಬೇಕೆಂದಾಗ ಮಾತ್ರ ಹೊರಗೆ ತೆಗೆಯಬೇಕು. ಹಾಗೆಯೇ ಹೊರಗೆ ತೆಗೆದ ನಂತರ ಹೆಚ್ಚು ಹೊತ್ತು ಹೊರಗೆ ಇಡುವುದು ಒಳ್ಳೆಯದಲ್ಲ.
ಕತ್ತರಿಸಿದ ಸೌತೆಕಾಯಿಯನ್ನು ಹೇಗೆ ಶೇಖರಿಸುವುದು?: ಕತ್ತರಿಸದ ಸೌತೆಕಾಯಿಗಿಂತ ಕತ್ತರಿಸಿದ ಸೌತೆಕಾಯಿ ಬೇಗನೆ ಹಾಳಾಗುತ್ತದೆ. ಆದ್ದರಿಂದ ಕತ್ತರಿಸಿದ ಸೌತೆಕಾಯಿಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಬೇಕು. ಸಿಪ್ಪೆ ತೆಗೆದ ಸೌತೆಕಾಯಿ ಉಳಿದಿದ್ದರೆ ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸರಿಯಾಗಿ ಸುತ್ತಿ ಫ್ರಿಡ್ಜ್‌ನಲ್ಲಿ ಇಡಲು ಮರೆಯಬೇಡಿ.