ಪಿರಿಯಡ್ಸ್ ಕುರಿತಾದ ಈ ವಿಷಯಗಳು ನಿಮಗೆ ಗೊತ್ತಿದೆ ಅಲ್ವಾ?

First Published Dec 28, 2020, 5:04 PM IST

ಬಹಳ ಕಾಲದ ಹಿ೦ದೆಯೇ ಋತುಮತಿಯಾಗಿದ್ದು, ಇದರ ಬಗ್ಗೆ ತಾಯಿಯಿ೦ದ ಹೆಣ್ಣು ಮಕ್ಕಳು ವಿಚಾರ ತಿಳಿದಿರುತ್ತಾರೆ. ಆದರೆ ಇವತ್ತಿನವರೆಗೂ, ಈ ವಿಚಾರದ ಬಗ್ಗೆ ಇರುವ ಸ೦ದೇಹಗಳನ್ನು ನಿವಾರಿಸಲು ನಾಚಿಕೆ ಪಟ್ಟುಕೊಳ್ಳುತ್ತೀರಿ. ಹೌದಲ್ವಾ? ಇದು ಎಲ್ಲರಿಗೂ ಸಾಮಾನ್ಯ. ನಾವೀಗ ತುಂಬಾನೆ ಮುಂದುವರೆದಿದ್ದರೂ ಈ ವಿಷಯ ಬಂದಾಗ ಇನ್ನು ಹಲವರು ಹಿಂದೆ ಮುಂದೆ ಯೋಚನೆ ಮಾಡುತ್ತಾರೆ.

ಋತುಚಕ್ರದ ಬಗ್ಗೆ  ನಿಮ್ಮ ಅನೇಕ ಸ೦ದೇಹಗಳನ್ನು ದೂರ ಮಾಡುವ ಕೆಲವು ಅ೦ಶಗಳನ್ನು ನೀಡಿದ್ದೇವೆ. ಅವು ಯಾವುವು ಎ೦ದು ತಿಳಿದುಕೊಳ್ಳಲು ಮು೦ದೆ ಓದಿ.

ಒ೦ದು ವಿಚಾರ ಅರ್ಥಮಾಡಿಕೊ೦ಡಿರಬೇಕಾದ್ದು ಏನೆ೦ದರೆ ಋತುಚಕ್ರದ ಸ೦ದರ್ಭದಲ್ಲಿ ಈಜು ಕೊಳಕ್ಕೆ ಧುಮುಕಬಾರದು. ಪಿರಿಯಡ್ಸ್ ಸ೦ದರ್ಭದಲ್ಲಿ ಈಜುವುದೂ ಕೂಡಾ ಅರೋಗ್ಯಕ್ಕೆ ಒಳ್ಳೆಯದಲ್ಲ ಎ೦ದು ಸಲಹೆ ನೀಡಲಾಗಿದೆ. ಆ ನೀರಿನಲ್ಲಿರುವ ಕ್ಲೋರಿನ್ ಇನ್ಫೆಕ್ಷನ್ಗೆ ಕಾರಣವಾಗಬಲ್ಲದು.

ಮುಟ್ಟಾದಾಗ ಮೂಡ್‌ ಆಗಾಗ ಬದಲಾಗುತ್ತದೆ. ಇದಕ್ಕೆ ಕಾರಣ ಪ್ರಿ ಮೆನ್ಸ್ಟ್ರುವಲ್ ಸಿ೦ಡ್ರೋಮ್ (ಪಿಎಮ್ಎಸ್). ಈ ಸ್ಥಿತಿಯಲ್ಲಿ ದೇಹದ ಹಾರ್ಮೋನ್ ಉತ್ಪನ್ನ ಸಮತೋಲನ ಕಳೆದುಕೊಳ್ಳುತ್ತದೆ. ಇದರಿ೦ದ ಸುಸ್ತು, ಟೆನ್ಸ್ ಆಗುವುದು ಹಾಗೂ ಖಿನ್ನತೆಯಿ೦ದ ಬಳಲುತ್ತೀರಿ. ಅಲ್ಲದೇ ತಲೆನೋವು ಹಾಗೂ ವಾ೦ತಿಯೂ ಆಗಬಹುದು.

ಪಿರಿಯಡ್ಸ್  ಸರಿಯಾದ ಸಮಯದಲ್ಲಿ ಆಗುತ್ತಿಲ್ಲವಾದರೆ ಚಿ೦ತೆ ಮಾಡುವ ಅವಶ್ಯಕತೆಯೇ ಇಲ್ಲ. ಹೀಗೆ ಆಗಲು ಕಾರಣ ಬಿಡುವಿಲ್ಲದ ಕೆಲಸ ಹಾಗೂ ಒತ್ತಡ. ಸ೦ಬ೦ಧಗಳ ಬಗ್ಗೆಯೂ , ಹಣದ ಬಗ್ಗೆಯೂ ಚಿ೦ತೆ ಇರುತ್ತದೆ. ಇದರಿ೦ದ ಹಾರ್ಮೋನ್‌ಗಳ ಸಮತೋಲನೆಗೆ ಅಡ್ಡಿಯಾಗಿ ಪಿರಿಯಡ್ಸ್ ಹೆಚ್ಚು ಕಡಿಮೆ ಆಗುತ್ತದೆ.

ನಿಮ್ಮ ಮುಟ್ಟಿನ ಮೊದಲು ಹಾಗೂ ನ೦ತರ ಬಿಳಿ ದ್ರವ ಅಥವಾ ಮ್ಯೂಕಸ್ ಸ್ರವಿಸುವುದು ಸಾಮಾನ್ಯ. ಇದು ಓವುಲೇಶನ್‌ನ ಸ೦ದರ್ಭದಲ್ಲಿ ಬಿಡುಗಡೆಯಾದ ಮ್ಯೂಕಸ್. ಹಾಗಾಗಿ ಚಿಂತಿಸೋ ಅಗತ್ಯವಿಲ್ಲ.

ಈ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಋತುಚಕ್ರದಲ್ಲಿದ್ದಾಗ ಪ್ರೊಸ್ಟಾಗ್ಲಾಂಡಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಆಗ ಗರ್ಭಕೋಶದ ಒಳಪದರವನ್ನು ಹಿಗ್ಗಿಸಿ, ಪೊರೆಯನ್ನು ಹೊರಹಾಕಿಸುತ್ತದೆ. ಇದು ಕಿಬ್ಬೊಟ್ಟೆಯ ಭಾಗ ಮತ್ತು ತೊಡೆಗಳ ಸುತ್ತ  ಸೆಳೆತ ಮತ್ತು ನೋವಿನ ಸೆಳೆತವನ್ನು ಉಂಟುಮಾಡುತ್ತದೆ.

ಚಳಿಗಾಲದಲ್ಲಿ ಮಹಿಳೆಯರಿಗೆ ಪಿರಿಯಡ್ಸ್ ನೋವು ಬೇಸಿಗೆ ಕಾಲಕ್ಕಿಂತ ಹೆಚ್ಚು. ಜೊತೆಗೆ ತುಂಬಾ ಸಮಯದವರೆಗೆ ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಬೇಗ ಕತ್ತಲು ಆವರಿಸುತ್ತದೆ, ದಿನಗಳು ತುಂಬಾ ಡಲ್ ಆಗಿರುತ್ತವೆ. ಆದುದರಿಂದ ಈ ಸಮಯದಲ್ಲಿ ಅದು ಮೂಡ್ ಮೇಲೆ ಪರಿಣಾಮ ಬೀರುತ್ತದೆ.

ಪಿರಿಯಡ್ಸ್ ಆಗುತ್ತಿದ್ದಾಗಲೂ ಪ್ರೆಗ್ನೆಂಟ್ ಆಗುವ ಸಾಧ್ಯತೆ ಇದೆ. ಪಿರಿಯಡ್ಸ್ ಆದಾಗ ಪ್ರೆಗ್ನೆಂಟ್ ಆಗುವ ಸಾಧ್ಯತೆ ಕಡಿಮೆಯಾದರೂ, ಅದು ಅಸಾಧ್ಯವಲ್ಲ. ಏಕೆಂದರೆ ವೀರ್ಯಾಣು ಐದಾರು ದಿನಗಳವರೆಗೆ ದೇಹದಲ್ಲಿ ಉಳಿದುಕೊಳ್ಳಬಹುದು- ಆದ್ದರಿಂದ ನೀವು ತುಲನಾತ್ಮಕವಾಗಿ ಕಡಿಮೆ ಪಿರಿಯಡ್ಸ್ ಹೊಂದಿದ್ದರೆ, ನಿಮ್ಮ ಋತುಚಕ್ರದ ಕೊನೆಯಲ್ಲಿ ಲೈಂಗಿಕ ಕ್ರಿಯೆ ಮಾಡಿದರೆ ಮತ್ತು ನಿಮ್ಮ ಋತುಚಕ್ರ ಮುಗಿದ ನಂತರ ಅಂಡೋತ್ಪತ್ತಿಯನ್ನು ಹೊಂದಿದ್ದರೆ, ನೀವು ಗರ್ಭವತಿಯಾಗಬಹುದು.

1800ರ ರಲ್ಲಿ , ಹುಡುಗಿಯರು ತಮ್ಮ ಹದಿಹರೆಯಕ್ಕೆ ಬರುವವರೆಗೂ ಋತುಮತಿಯಾಗುತ್ತಿರಲಿಲ್ಲ. ಅಂದರೆ ಅವರಿಗೆ 17 ವರ್ಷದಲ್ಲಿ ಪಿರಿಯಡ್ಸ್ ಆಗುತ್ತಿತ್ತು, ಆದರೆ ಈಗ 12 ವರ್ಷ ವಯಸ್ಸಾಗುವ ಹೊತ್ತಿಗೇ ಪಿರಿಯಡ್ಸ್ ಆಗುತ್ತದೆ. ಇದಕ್ಕೆ ಕೆಲವು ಪ್ರಮುಖ ಕಾರಣ ಸುಧಾರಿತ ಪೌಷ್ಟಿಕಾಂಶ. ನಾವು ನಮ್ಮ ಪೂರ್ವಜರಿಗಿಂತ ಚೆನ್ನಾಗಿ ತಿನ್ನುತ್ತಿದ್ದೇವೆ. ಇದರಿಂದರೆ ಬೇಗನೆ ಪಿರಿಯಡ್ಸ್ ಆಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಮೊದಲ ಚಕ್ರದಿಂದ ಋತುಬಂಧದವರೆಗೆ, ಸುಮಾರು 450 ಋತುಚಕ್ರಗಳನ್ನು ಹೊಂದುತ್ತಾರೆ ಎನ್ನಲಾಗಿದೆ. ಅಂದರೆ ಸರಾಸರಿ ಮಹಿಳೆಯ ಜೀವನದ ಸುಮಾರು 10 ವರ್ಷ ಅಥವಾ 3,500 ದಿನಗಳವರೆಗೆ ಸಮವಾಗಿರುತ್ತದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?