ಮಿಸ್ ಟೀನ್ ಅಮೆರಿಕಾ ಕೀರಿಟ ತ್ಯಜಿಸಿದ ಭಾರತೀಯ ಮೂಲದ ಉಮಾ ಸೋಫಿಯಾ ಶ್ರೀವತ್ಸಾ, ಭಾವುಕ ಪೋಸ್ಟ್!
ಭಾರತೀಯ ಮೂಲದ ಉಮಾ ಸೋಫಿಯಾ ಶ್ರೀವತ್ಸಾ ಅಮೆರಿದದಲ್ಲಿ ಮಿಸ್ ಟೀನಾ ಯುಎಸ್ಎ ಕಿರೀಟ ಗೆಲ್ಲುವ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದ್ದರು. ಆದರೆ ದಿಢೀರ್ ಮಿಸ್ ಯುಎಸ್ಎ ಕಿರೀಟ ತ್ಯಜಿಸಿದ್ದಾರೆ. ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಸೌಂದರ್ಯದ ಮೂಲಕ ದೇಶ ವಿದೇಶದಲ್ಲಿ ಕಂಪು ಸಾರಿದ ಭಾರತೀಯ ಮೂಲದ ಉಮಾ ಸೋಫಿಯಾ ಶ್ರೀವತ್ಸಾ ನಿರ್ಧಾರ ಹಲವರನ್ನು ಅಚ್ಚರಿಗೊಳಿಸಿದೆ. ಕಾರಣ ಮಿಸ್ ಟೀನ್ ಯುಎಸ್‌ಎ ಕಿರೀಟ ಗೆದ್ದ ಉಮಾ ಇದೀಗ ಈ ಪಟ್ಟ ತ್ಯಜಿಸಿದ್ದಾರೆ.
2023ರಲ್ಲಿ ಉಮಾ ಸೋಫಿಯಾ ಶ್ರೀವತ್ಸಾ ಮಿಸ್ ಟೀನ್ ಅಮೆರಿಕಾ ಕಿರೀಟ ಗೆದ್ದುಕೊಂಡಿದ್ದರು. ಆದರೆ ಇದೀಗ ಏಕಾಏಕಿ ತಾವು ಮಿಸ್ ಟೀನ್ ಯುಎಸ್‌ಎ ಪಟ್ಟ ತ್ಯಜಿಸುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಮಿಸ್ ಯುಎಸ್‌ಎ ಪಟ್ಟ ಗೆದ್ದ ನೊಯಿಲಿಯಾ ವೊಯಿಗ್ ತಮ್ಮ ಪದವಿ ಕಳಚಿದ್ದರು. ಪದವಿ, ಪಟ್ಟಕ್ಕಿಂತ ನನಗೆ ಮಾನಸಿಕ ಆರೋಗ್ಯ ಮುಖ್ಯ ಎಂದು ಮಿಸ್ ಯುಎಸ್‌ಎ ಕಿರೀಟಕ್ಕೆ ರಾಜೀನಾಮೆ ನೀಡಿ ನೊಯಿಲಿಯಾ ಹೇಳಿದ್ದರು. ಇದರ ಬೆನ್ನಲ್ಲೇ ಶ್ರೀವತ್ಸಾ ನಿರ್ಧಾರ ಅಮೆರಿಕ ಮಿಸ್ ಪಟ್ಟ ಎಲ್ಲವೂ ಸರಿಯಿಲ್ಲ ಅನ್ನೋ ಸಂದೇಶ ರವಾನಿಸಿದೆ.
ಮಿಸ್ ಟೀನ್ ಯುಎಸ್‌ಎ ಪಟ್ಟ ಕೀರಿಟ ತ್ಯಜಿಸಿದ ಕುರಿತು ಸಾಮಾಾಜಿಕ ಮಾಧ್ಯಮದಲ್ಲಿ ಶ್ರೀವತ್ಸಾ ಭಾವುಕ ಪೋಸ್ಟ್ ಮಾಡಿದ್ದಾರೆ. ನನ್ನ ವೈಯುಕ್ತಿಕ ಮೌಲ್ಯಗಳು ಸಂಸ್ಥೆಯ ನಿರ್ದೇಶನದೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದಿದ್ದಾರೆ.
ಹಲವು ಸುತ್ತಿನ ಸಮಾಲೋಚನೆ, ಆತ್ಮಾವಲೋಕನದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಸಂಸ್ಥೆಯೊಂದಿಗೆ ನನ್ನ ಮೌಲ್ಯಗಳು ಸಂಪೂರ್ಣವಾಗಿ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಮಿಲ್ ವರ್ಲ್ಡ್ ಕಿರೀಟಕ್ಕಾಗಿ ಸ್ಪರ್ಧಿಸುವ ಮೊದಲೇ ನನ್ನ ಮೌಲ್ಯಗಳು, ಆಲೋಚನೆಗಳ ಕುರಿತು ಬಹು ಭಾಷಾ ಮಕ್ಕಳ ಪುಸ್ತಕ ದಿ ವೈಟ್ ಜಾಗ್ವಾರ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ. ಶಿಕ್ಷಣ ಹಾಗೂ ಮೌಲ್ಯದಲ್ಲಿ ನಾನು ರಾಜೀಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಭಾರತೀಯ ಮೂಲದ ಉಮಾ ಸೋಫಿಯಾ ಶ್ರೀವತ್ಸವ್ ಅಮೆರಿಕ ಹದಿ ಹರೆಯದ ಮಿಸ್ ವರ್ಲ್ಡ ಪಟ್ಟ ಗೆದ್ದು ಮೈಲಿಗಲ್ಲು ಸ್ಥಾಪಿಸಿದ್ದರು. 17ನೇ ವಯಸ್ಸಿನಲ್ಲಿ ಕೀರಿಟ ಗೆದ್ದು ಅಪಾರ ಜನಮನ್ನಣೆಗೆ ಪಾತ್ರರಾಗಿದ್ದರು.
ಉಮಾ ಶೋಪಿಯಾ ಶ್ರೀವತ್ಸ್ ಮಿಸ್ ಟೀನ್ ಯುಎಸ್ ಪಟ್ಟ ತ್ಯಜಿಸಿರುವುದು ಇದೀಗ ಬಾರಿ ಚರ್ಚೆಗೆ ಕಾರಣವಾಗಿದೆ. ನೊಯಿಲಿಯಾ ರಾಜೀನಾಮೆ ಬಳಿಕ ಶ್ರೀವಾತ್ಸವ ರಾಜೀನಾಮೆ ಯುಎಸ್ ಮಿಸ್ ವರ್ಲ್ಡ್ ಸಂಸ್ಥೆ ವಿರುದ್ಧ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.