33 ವರ್ಷದ ನಂತ್ರ ತಾಯಿಯಾಗೋ ಮಹಿಳೆಯರಿಗೆ ಆಯಸ್ಸು ಹೆಚ್ಚಂತೆ!
Late Childbirth: 33 ವರ್ಷ ವಯಸ್ಸಿನ ನಂತರ ನೈಸರ್ಗಿಕವಾಗಿ ತಾಯಿಯಾಗುವ ಮಹಿಳೆಯರು 95 ವರ್ಷದವರೆಗೆ ಜೀವಿಸುವ ಸಾಧ್ಯತೆ ಹೆಚ್ಚಿರುತ್ತದೆಯೇ? ಬಾಸ್ಟನ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಆಸಕ್ತಿಕರ ಮಾಹಿತಿ ತಿಳಿದು ಬಂದಿದೆ. ಅವುಗಳ ಬಗ್ಗೆ ತಿಳಿಯಿರಿ.

33 ವರ್ಷದ ನಂತರ ತಾಯಿಯಾದರೆ ಆಯುಷ್ಯ ಹೆಚ್ಚು!
ಇತ್ತೀಚಿನ ದಿನಗಳಲ್ಲಿ ಕರಿಯರ್, ಸ್ಥಿರ ಆರ್ಥಿಕತೆ, ಜವಾಬ್ಧಾರಿಗಳಿಂದಾಗಿ ತಡವಾಗಿ ಮದುವೆಯಾಗುವುದು ಮತ್ತು ತಡವಾಗಿ ಮಗುವನ್ನು ಪಡೆಯುವುದು ಸಾಮಾನ್ಯವಾಗಿದೆ.. ಆದರೆ, 33 ವರ್ಷ ವಯಸ್ಸಿನ ನಂತರ ತಾಯಿಯಾಗುವ ಮಹಿಳೆಯರ ಬಗ್ಗೆ ವಿಜ್ಞಾನಿಗಳು ಒಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
95 ವರ್ಷಕ್ಕಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆ
ಬಾಸ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನಡೆಸಿರುವ ಅಧ್ಯಯನದ ಪ್ರಕಾರ, 33 ವರ್ಷದ ನಂತರ ನೈಸರ್ಗಿಕವಾಗಿ ಕೊನೆಯ ಮಗುವಿಗೆ ಜನ್ಮ ನೀಡುವ ಮಹಿಳೆಯರು 95 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ.
ಅಧ್ಯಯನದಲ್ಲಿ ಏನು ಹೇಳಿದೆ?
29 ವರ್ಷಕ್ಕಿಂತ ಮೊದಲು ಕೊನೆಯ ಮಗುವಿಗೆ ಜನ್ಮ ನೀಡಿದ ಮಹಿಳೆಯರಿಗೆ ಹೋಲಿಸಿದರೆ, 33 ವರ್ಷದ ನಂತರ ಕೊನೆಯ ಮಗುವನ್ನು ಪಡೆದ ಮಹಿಳೆಯರು 95 ವರ್ಷದವರೆಗೆ ಜೀವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚಿರುತ್ತದೆ.
ನಿಧಾನಗತಿಯ ವೃದ್ಧಾಪ್ಯ
ವಯಸ್ಸಾದ ಮೇಲೂ ಗರ್ಭಧರಿಸುವ ಸಾಮರ್ಥ್ಯವು ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ದೇಹದ ಇತರ ಅಂಗಾಂಗಗಳು ನಿಧಾನವಾಗಿ ವಯಸ್ಸಾಗುತ್ತಿವೆ ಎಂಬುದರ ಸಂಕೇತವಾಗಿದೆ. ಇದಿಷ್ಟೇ ಅಲ್ಲದೇ ಈ ಅಧ್ಯಯನದ ಪ್ರಕಾರ, ಮಹಿಳೆಯರಲ್ಲಿ ದೀರ್ಘಾಯುಷ್ಯಕ್ಕೆ ಕಾರಣವಾಗುವ ಕೆಲವು ವಿಶೇಷ ಜೀನ್‌ಗಳು ತಡವಾಗಿ ಗರ್ಭಧರಿಸಲು ಸಹಾಯ ಮಾಡುತ್ತವೆ.
ನೈಸರ್ಗಿಕವಾಗಿ ಗರ್ಭಧರಿಸುವ ಮಹಿಳೆ
ಈ ಅಧ್ಯಯನದ ಪ್ರಮುಖ ಲೇಖಕರಾದ ಡಾ. ಥಾಮಸ್ ಪರ್ಲ್ಸ್ ಅವರ ಪ್ರಕಾರ, ತಾವಾಗಿಯೇ ಆಯುಷ್ಯವನ್ನು ಹೆಚ್ಚಿಸಿಕೊಳ್ಳಲು ತಡವಾಗಿ ಮಗು ಪಡೆಯುವುದರಿಂದ ಪ್ರಯೋಜನ ಇಲ್ಲ. ಬದಲಿಗೆ, ನೈಸರ್ಗಿಕವಾಗಿ ಯಾರಿಗೆ ತಡವಾಗಿ ತಾಯಿಯಾಗುವ ಸಾಮರ್ಥ್ಯ ಇರುತ್ತದೆಯೋ ಅವರ ದೇಹದಲ್ಲಿ ವಯಸ್ಸಾಗುವ ಪ್ರಕ್ರಿಯೆಯು ನಿಧಾನವಾಗಿರುತ್ತದೆ ಎಂಬುದನ್ನು ಈ ಸಂಶೋಧನೆ ತಿಳಿಸುತ್ತದೆ.
ತಾಯಂದಿರ ಆರೋಗ್ಯ ಉತ್ತಮವಾಗಿರುತ್ತದೆ
ತಡವಾಗಿ ಮಗುವನ್ನು ಪಡೆಯುವುದು ತಾಯಂದಿರ ಆರೋಗ್ಯ ಮತ್ತು ಜೀವಿತಾವಧಿಯ ಮೇಲೆ ಧನಾತ್ಮಕ ಪ್ರಭಾವ ಬೀರಬಹುದು ಎಂಬುದನ್ನು ಈ ಸಂಶೋಧನೆ ಸ್ಪಷ್ಟಪಡಿಸುತ್ತದೆ. ಸಂತಾನೋತ್ಪತ್ತಿ ವ್ಯವಸ್ಥೆಯು ಆರೋಗ್ಯಕರವಾಗಿದ್ದರೆ, ದೇಹದ ಒಟ್ಟಾರೆ ಆಯುಷ್ಯವೂ ಹೆಚ್ಚಿರುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

